Viral Video: ಫುಲ್ ಮೀಲ್ಸ್‌ಗೆ 50 ಪೈಸೆ, ಇಡ್ಲಿಗೆ 20 ಪೈಸೆ; ಉಡುಪಿ ವಿಹಾರ್ ರೆಸ್ಟೋರೆಂಟ್‍ನ ಮೆನು ವೈರಲ್
ಮುಂಬೈಯ ಗೋರೆಗಾಂವ್‍ನಲ್ಲಿ ಉಡುಪಿ ವಿಹಾರ್ ರೆಸ್ಟೋರೆಂಟ್‍ನ ಮೆನು ನೋಡಿದರೆ ಖಂಡಿತ ಅಚ್ಚರಿಯಾಗುತ್ತದೆ. 1962ರಲ್ಲಿ ಎಷ್ಟಿತ್ತೋ ಅಷ್ಟೇ ಬೆಲೆಗೆ ಆಹಾರ ನೀಡಿದೆ. ಹೌದು, 60ರ ದಶಕದಲ್ಲಿ ಊಟಕ್ಕೆ 50 ಪೈಸೆ ಇತ್ತು. ಅಷ್ಟೇ ಮೊತ್ತಕ್ಕೆ ಉಡುಪಿ ವಿಹಾರ್ ರೆಸ್ಟೋರೆಂಟ್ ಆಹಾರ ನೀಡಿದೆ.


ಮುಂಬೈ: 1960 ಹಾಗೂ 70ರ ದಶಕದಲ್ಲಿ ಹೋಟೆಲ್‍ಗಳಲ್ಲಿ ಬೆಲೆ ಎಷ್ಟಿತ್ತು? ನಮ್ಮ ಕಾಲದಲ್ಲಿ ತುಂಬಾ ಕಡಿಮೆ ಇತ್ತು, ಈಗೆಲ್ಲಾ ಬೆಲೆ ಗಗನಕ್ಕೇರಿದೆ ಎಂದು ನಮ್ಮ ಹಿರಿಯರು ಹೇಳಿದ್ದನ್ನು ನೀವು ಕೇಳಿರಬಹುದು. ಇದೀಗ ಮುಂಬೈಯ (Mumbai) ಗೋರೆಗಾಂವ್‍ನಲ್ಲಿ ಉಡುಪಿ ವಿಹಾರ್ ರೆಸ್ಟೋರೆಂಟ್‍ನಲ್ಲಿ (Udupi Vihar restaurant) ಆಹಾರಕ್ಕೆ ನಿಗದಿ ಪಡಿಸಿದ ದರದ ಬಗ್ಗೆ ಕೇಳಿದರೆ ನಿಮಗೆ ಖಂಡಿತ ಅಚ್ಚರಿಯಾಗುತ್ತದೆ. 1962ರಲ್ಲಿ ಎಷ್ಟಿತ್ತೋ ಅಷ್ಟೇ ಬೆಲೆಗೆ ಆಹಾರ ನೀಡಲಾಗಿದೆ. ಅಂದರೆ ಫುಲ್ ಮೀಲ್ಸ್‌ಗೆ 50 ಪೈಸೆ, ಇಡ್ಲಿಗೆ 20 ಪೈಸೆ ನಿಗದಿಪಡಿಸಲಾಗಿದೆ.
ಹೌದು, ‘ಇದು ನಿಮ್ಮ ಯುಗ, ನಿಮ್ಮ ತಂದೆಯ ಯುಗದ ಬೆಲೆಗಳು’ ಎಂಬ ಟ್ಯಾಗ್‌ಲೈನ್‌ನೊಂದಿಗೆ ದೂರದರ್ಶನದಲ್ಲಿ ಜಾಹೀರಾತು ಕಾಣಿಸಿಕೊಂಡಿದೆ. ಅದು ಮುಂಬೈಯ ಗೋರೆಗಾಂವ್‌ನಲ್ಲಿರುವ ಪ್ರಸಿದ್ಧ ರೆಸ್ಟೋರೆಂಟ್‌ನ ಜಾಹೀರಾತು. ಅಚ್ಚರಿ ಎಂದರೆ, ರೆಸ್ಟೋರೆಂಟ್ ಧ್ವಂಸಗೊಳ್ಳುವ ಒಂದು ದಿನ ಮೊದಲು 1962ರಲ್ಲಿ ಇದ್ದಷ್ಟೇ ದರದ ಆಹಾರವನ್ನು ನೀಡಿತು. ಯೋಜನೆಯ ಲಾಭ ಪಡೆಯಲು ರೆಸ್ಟೋರೆಂಟ್‌ನಲ್ಲಿ ಭಾರಿ ಜನಸಂದಣಿ ಸೇರಿತ್ತು.
ವಿಡಿಯೊ ವೀಕ್ಷಿಸಿ:
Yesterday crowd at Udipi Vihar Goregaon east braving the Rain. As the old hotel is being demolished for new bldg. They served all items in 1962 year rates. Lunch 50 paise, jalebi 12 paise, wada idli 12 paise, pic.twitter.com/M5DSpaHSQ7
— Seraphim (@Seraphim1975) August 20, 2025
ಗೋರೆಗಾಂವ್ ಪೂರ್ವದಲ್ಲಿರುವ ಉಡುಪಿ ವಿಹಾರ್ ರೆಸ್ಟೋರೆಂಟ್‌ನಲ್ಲಿ ಈ ಕೊಡುಗೆಯನ್ನು ಕೇವಲ ಒಂದು ದಿನ ಮಾತ್ರ ನೀಡಲಾಗಿತ್ತು. ಇದರಿಂದಾಗಿ ಭಾರಿ ಮಳೆಯ ಹೊರತಾಗಿಯೂ ಹೋಟೆಲ್ ಹೊರಗೆ ದೊಡ್ಡ ಜನಸಮೂಹ ಸಾಲುಗಟ್ಟಿ ನಿಂತಿತ್ತು. ಹೊಸ ಕಟ್ಟಡ ನಿರ್ಮಾಣ ಮಾಡುವ ಸಲುವಾಗಿ ಈ ಹಳೆಯ ರೆಸ್ಟೋರೆಂಟ್ ಕೆಡವಲು ಸಜ್ಜಾಗಿದೆ. ಹೀಗಾಗಿ ಈ ರೆಸ್ಟೋರೆಂಟ್ ತನ್ನ ಗ್ರಾಹಕರಿಗೆ ರುಚಿ ಮತ್ತು ಅನುಭವವನ್ನು ನೀಡಲು ನಿರ್ಧರಿಸಿತು. ಸೋಮವಾರ (ಆಗಸ್ಟ್ 18) ಅಗ್ಗದ ಊಟವನ್ನು ನೀಡಿತು.
ರೆಸ್ಟೋರೆಂಟ್ ತನ್ನ ಎಲ್ಲ ಜನಪ್ರಿಯ ಭಕ್ಷ್ಯಗಳನ್ನು 1962ರಲ್ಲಿ ಮಾರಾಟವಾಗುತ್ತಿದ್ದ ಬೆಲೆಯಲ್ಲೇ ಬಡಿಸಿತು. ಗ್ರಾಹಕರು 50 ಪೈಸೆ ಕೊಟ್ಟು ಹೊಟ್ಟೆ ತುಂಬಾ ಊಟ ಮಾಡಿದ್ದಾರೆ. ಜಿಲೇಬಿ, ವಡಾ ಮತ್ತು ಇಡ್ಲಿಯಂತಹ ಇತರ ತಿಂಡಿಗಳಿಗೆ ಕೇವಲ 12 ಪೈಸೆ ನಿಗದಿಪಡಿಸಲಾಗಿತ್ತು. ರೆಸ್ಟೋರೆಂಟ್‍ನ ಈ ನಡೆ ಆಹಾರ ಪ್ರಿಯರನ್ನು ಆಕರ್ಷಿಸಿತು. ಹೀಗಾಗಿ ಭಾರಿ ಜನಸಂದಣಿ ಸೇರಿತು. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ಹೊಸ ಕಟ್ಟಡ ನಿರ್ಮಾಣ ಮಾಡುವ ಸಲುವಾಗಿ ಈ ಹಳೆಯ ರೆಸ್ಟೋರೆಂಟ್ ಕೆಡವಲು ಸಜ್ಜಾಗಿದೆ. ಹೀಗಾಗಿ ಈ ರೆಸ್ಟೋರೆಂಟ್ ತನ್ನ ಗ್ರಾಹಕರಿಗೆ ರುಚಿ ಮತ್ತು ಅನುಭವವನ್ನು ನೀಡಲು ನಿರ್ಧರಿಸಿತು. ಸೋಮವಾರ (ಆಗಸ್ಟ್ 18) ಅಗ್ಗದ ಊಟವನ್ನು ನೀಡಿತು.
ಪೂರ್ತಿ ಮೆನು ಇಲ್ಲಿದೆ
ಉಡುಪಿ ವಿಹಾರ್ (1962ರ ಮೆನು)
ಫುಲ್ ಮೀಲ್ಸ್ (ಊಟ) - 0.50 ಪೈಸೆ
ಕೇಸರಿಬಾತ್ - 0.12 ಪೈಸೆ
ಉಪ್ಪಿಟ್ಟು - 0.12 ಪೈಸೆ
ಇಡ್ಲಿ - 0.20 ಪೈಸೆ
ಮೆದು ವಡೆ - 0.20 ಪೈಸೆ
ದೋಸೆ (ಸಾದಾ / ಮಸಾಲಾ) - 0.20 ಪೈಸೆ
ಆಲೂಗಡ್ಡೆ ಬೋಂಡಾ - 0.12 ಪೈಸೆ
ಉಸಲ್ ಪಾವ್ - 0.12 ಪೈಸೆ
ಬಟಾಟ ವಡಾ ಉಸಲ್ - 0.12 ಪೈಸೆ
ಪುರಿ ಭಾಜಿ - 0.12 ಪೈಸೆ
ವೆಜ್ ಪಕೋಡ (ಈರುಳ್ಳಿ / ಮೇಥಿ / ಬಟಾಟಾ) - 0.07 ಪೈಸೆ
ಚಹಾ - 0.12 ಪೈಸೆ
ಜಿಲೇಬಿ – 0.12 ಪೈಸೆ