Viral News: ಬೆಳಗ್ಗೆ 6:30ಕ್ಕೆ ಆಫೀಸ್‌ಗೆ ಹಾಜರಾಗಬೇಕು ಎಂಬ ಆದೇಶಕ್ಕೆ ಜೆನ್ ಝೀ ಉದ್ಯೋಗಿಯ ಖಡಕ್ ರೆಸ್ಪಾನ್ಸ್
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಬಾಸ್ ಮತ್ತು ಉದ್ಯೋಗಿಯ ನಡುವಿನ ಸಂಘರ್ಷದ ಪೋಸ್ಟ್ ಭಾರಿ ವೈರಲ್ ಆಗುತ್ತಿದೆ. ಬೆಳಗ್ಗೆ 6:30ಕ್ಕೆ ಕಚೇರಿಯಲ್ಲಿ ಇರಬೇಕು ಎಂಬ ಆದೇಶಕ್ಕೆ ಜೆನ್ ಝೀ ಉದ್ಯೋಗಿ ನೀಡಿದ ಉತ್ತರಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಯುವ ಉದ್ಯೋಗಿಯೊಬ್ಬರು ನೀಡಿದ ಜಾಣತನದ ಪ್ರತಿಕ್ರಿಯೆ ಈಗ ಹೊಸ ಚರ್ಚೆ ಹುಟ್ಟುಹಾಕಿದೆ.
ಸಾಂದರ್ಭಿಕ ಚಿತ್ರ. -
ನವದೆಹಲಿ, ಫೆ. 5: ಇತ್ತೀಚೆಗೆ ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಾಗಿದೆ. ವೈಯಕ್ತಿಕ ಕೆಲಸಕ್ಕೂ ಸಮಯ ಇಲ್ಲದೆ ಹೆಚ್ಚಿನವರು ಉದ್ಯೋಗ ಕಳೆದುಕೊಂಡವರೂ ಇದ್ದಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಬಾಸ್ ಮತ್ತು ಉದ್ಯೋಗಿಯ ನಡುವಿನ ಸಂಘರ್ಷದ ಪೋಸ್ಟ್ ಭಾರಿ ವೈರಲ್ (Viral News) ಆಗುತ್ತಿದೆ. ಬೆಳಗ್ಗೆ 6:30ಕ್ಕೆ ಕಚೇರಿಯಲ್ಲಿ ಇರಬೇಕು ಎಂಬ ಆದೇಶಕ್ಕೆ ಜೆನ್ ಝೀ (ಯುವ ಸಮುದಾಯ) ಉದ್ಯೋಗಿ ನೀಡಿದ ಉತ್ತರಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಯುವ ಉದ್ಯೋಗಿಯೊಬ್ಬರು ನೀಡಿದ ಜಾಣತನದ ಪ್ರತಿಕ್ರಿಯೆ ಬಗ್ಗೆ ಈಗ ಹೊಸ ಚರ್ಚೆ ಹುಟ್ಟು ಹಾಕಿದೆ.
ಬೆಳಗಿನ ಜಾವ ಕಚೇರಿ ನಿರ್ದೇಶನಕ್ಕೆ ಜೆನ್ ಝೀ ಉದ್ಯೋಗಿಯೊಬ್ಬರು ನೀಡಿದ ದೃಢವಾದ ಪ್ರತಿಕ್ರಿಯೆ ಸೋಶಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ. ಕಠಿಣ ಕೆಲಸದ ನಿಯಮಗಳು, ಒತ್ತಡದ ಕೆಲಸ ಮತ್ತು ಬಗ್ಗೆ ಚರ್ಚೆಗಳನ್ನು ಮತ್ತೆ ಹುಟ್ಟುಹಾಕಿದೆ. ಮ್ಯಾನೇಜರ್ ಒಬ್ಬರು ತಮ್ಮ ಉದ್ಯೋಗಿಗೆ ಬೆಳಗ್ಗೆ 7ಕ್ಕೆ ನಡೆಯಲಿರುವ ವರ್ಚುವಲ್ ಮೀಟಿಂಗ್‌ಗಾಗಿ 6:30ಕ್ಕೆ ಆಫೀಸ್‌ನಲ್ಲಿ ಇರಬೇಕು ಎಂದು ಆದೇಶ ನೀಡಿದ್ದರು. ಒಂದು ವೇಳೆ ಈ ಸಮಯಕ್ಕೆ ಬಾರದೇ ಇದ್ದಲ್ಲಿ ಅದನ್ನು ಶಿಸ್ತು ಉಲ್ಲಂಘನೆ ಅಂತ ಪರಿಗಣಿಸಿ ಅಮಾನತು ಮಾಡಲಾಗುವುದು ಎಂದು ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದರು.
Gen Z employees. Not the heroes we deserved, but the heroes we needed. pic.twitter.com/XNewTYuATE
— Lexis (@niilexis) February 2, 2026
ಇದಕ್ಕೆ ಗಮನಿಸಲಾಗಿದೆ ಎಂದು ಸರಳವಾಗಿ ಪ್ರಾರಂಭವಾಗುವ ಉದ್ಯೋಗಿಯ ಉತ್ತರವು ಹೀಗಿತ್ತು. ʼʼನಾನು ವರ್ಚುವಲ್ ಮೀಟಿಂಗ್‌ಗಾಗಿ ಖುದ್ದಾಗಿ ಕಚೇರಿಗೆ ಹಾಜರಾಗುವುದಿಲ್ಲ. ಕೆಲಸದಿಂದ ಅಮಾನತುಗೊಳಿಸುವ ಬೆದರಿಕೆ ಪವರ್‌ಪಾಯಿಂಟ್ ದುರುಪಯೋಗದಂತೆ ಕಾಣುತ್ತದೆ. ನಾನು ಆನ್‌ಲೈನ್‌ನಲ್ಲಿದ್ದೇನೆʼʼ ಎಂದು ಉತ್ತರಿಸಿದ್ದಾರೆ.
ಮಧ್ಯಾಹ್ನದ ಬಿಸಿಯೂಟದಲ್ಲಿ ಸತ್ತ ಕಪ್ಪೆ ಪತ್ತೆ; ಶಾಲೆ ವಿರುದ್ಧ ತನಿಖೆಗೆ ಆದೇಶ
ಸದ್ಯ ಈ ಪೋಸ್ಟ್ ಏಳು ಮಿಲಿಯನ್ ವೀಕ್ಷಣೆಗಳನ್ನು ದಾಟಿದ್ದು ಸಾವಿರಾರು ಕಮೆಂಟ್‌ಗಳು ಬಂದಿವೆ. ಅನೇಕ ಬಳಕೆದಾರರು ಉದ್ಯೋಗಿಯ ವಿಶ್ವಾಸವನ್ನು ಶ್ಲಾಘಿಸಿದ್ದಾರೆ. ಹೆಚ್ಚಿನವರು ಕೆಲಸದ ಸ್ಥಳದ ಅಧಿಕಾರ ಮತ್ತು ಶಿಸ್ತಿನ ಬಗ್ಗೆ ಚರ್ಚಿಸಿದರು. ಒಬ್ಬರು, "ನನಗೆ ಇದು ಅರ್ಥವಾಗುತ್ತಿಲ್ಲ. ಸಭೆ ವರ್ಚುವಲ್ ಆಗಿದ್ದರೆ ಅವರು ವೈಯಕ್ತಿಕವಾಗಿ ಏಕೆ ಭೇಟಿಯಾಗಬೇಕು?ʼʼ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಜೆನ್ ಝೀ (Gen Z) ತಲೆಮಾರಿನವರು ಬಾಸ್‌ಗಳನ್ನು ಪ್ರಶ್ನಿಸುವ ಧೈರ್ಯ ತೋರುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.