Viral Video: ಫ್ಯಾಷನ್ ಲೋಕಕ್ಕೆ ಲಗ್ಗೆ ಇಟ್ಟ ಪಟಾಪಟಿ ಚಡ್ಡಿ! ಬಹಳ ಟ್ರೆಂಡಿಂಗ್‌ನಲ್ಲಿದೆ ಈ ವಿಡಿಯೊ
Grandpa’s Striped Nada Underwear: ನಮ್ಮ ಅಜ್ಜಂದಿರು ಧರಿಸುತ್ತಿದ್ದ ಸಾಂಪ್ರದಾಯಿಕ ಪಟಾಪಟಿ ಚಡ್ಡಿ (ಒಳ ಉಡುಪು) ಹೊಸ ಲುಕ್‍ನೊಂದಿಗೆ ಫ್ಯಾಶನ್ ಲೋಕಕ್ಕೆ ಮರಳಿದೆ. ಹಳೆಯ ಕಾಲದ ಚಡ್ಡಿ ಎಂದು ತಿರಸ್ಕಾರಕ್ಕೆ ಒಳಗಾಗಿದ್ದ ಈ ಒಳಉಡುಪು ಇದೀಗ ಅಂತಾರಾಷ್ಟ್ರೀಯ ಬ್ರ್ಯಾಂಡ್ ಆಗಿದೆ.
-
Priyanka P
Oct 24, 2025 6:03 PM
ನವದೆಹಲಿ: ನಮ್ಮ ಅಜ್ಜಂದಿರು ಧರಿಸುತ್ತಿದ್ದ ಸಾಂಪ್ರದಾಯಿಕ ಪಟಾಪಟಿ ಚಡ್ಡಿ (ಒಳ ಉಡುಪು) ನೆನಪಿದೆಯೇ? ಅಜ್ಜನ ಕಾಲದ ಈ ಚಡ್ಡಿ ಅಳಿವಿನಂಚಿಗೆ ಹೋಗಿತ್ತು. ಆದರೀಗ ಹೊಸ ಲುಕ್‍ನೊಂದಿಗೆ ಫ್ಯಾಶನ್ ಲೋಕಕ್ಕೆ ಮರಳಿದೆ. ಒಂದು ಕಾಲದಲ್ಲಿ ಹಳೆಯದು ಎಂದು ಪರಿಗಣಿಸಿ ತಿರಸ್ಕಾರಕ್ಕೊಳಪಟ್ಟ ಪಟಾಪಟಿ ಚಡ್ಡಿ (Striped Nada Underwear) ಇದೀಗ ಅಂತಾರಾಷ್ಟ್ರೀಯ ಬ್ರ್ಯಾಂಡ್ ಆಗಿದ್ದು, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್‌ಗಳು ಇದನ್ನು ಹೆಮ್ಮೆಯಿಂದ ಧರಿಸುತ್ತಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ, ಈ ವಿಂಟೇಜ್ ವಿನ್ಯಾಸವನ್ನು ಪ್ರದರ್ಶಿಸುತ್ತಿರುವ ಜನರ ಗುಂಪೊಂದು ಕಂಡುಬಂದಿದೆ. ಈ ವಿಡಿಯೊದಲ್ಲಿ, ವಿಮಾನ ನಿಲ್ದಾಣದ ಆವರಣದಲ್ಲಿ ಯುವಕರು ಮತ್ತು ಯುವತಿಯರು ವಿವಿಧ ಬಣ್ಣಗಳಲ್ಲಿ ಕ್ಲಾಸಿಕ್ ಪಟಾಪಟಿ ಚಡ್ಡಿ (ಒಳ ಉಡುಪು) ಗಳನ್ನು ಧರಿಸಿ ಸ್ಟೈಲ್ ಆಗಿ ನಡೆಯುವುದನ್ನು ತೋರಿಸುತ್ತದೆ.
ಒಂದು ಕಾಲದಲ್ಲಿ ಕೇವಲ 50 ರಿಂದ 100 ರೂ.ಗೆ ಮಾರಾಟವಾಗುತ್ತಿದ್ದ ಪಟ್ಟೆ ಒಳ ಉಡುಪುಗಳ ಬೆಲೆ ಇದೀಗ 2,500 ರಿಂದ 11,000 ರೂ.ಗಳವರೆಗೆ ಇದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಪಟಾಪಟಿ ಚಡ್ಡಿ (ಒಳ ಉಡುಪು) ಗಳು ಮತ್ತೆ ಮಾರುಕಟ್ಟೆಗೆ ಬಂದ ಬಗ್ಗೆ ಬಹಳಷ್ಟು ಹೇಳಿದ್ದರು. ಪ್ರತಿಯೊಬ್ಬ ಭಾರತೀಯ ಅಜ್ಜಂದಿರು ಹೊಂದಿದ್ದ ಕಾಲಾತೀತ ಉಡುಪನ್ನು ಹಲವರು ನೆನಪಿಸಿಕೊಂಡರು. ಇದಕ್ಕಿಟ್ಟ ವಿಭಿನ್ನ ಹೆಸರುಗಳ ಬಗ್ಗೆ ಕೆಲವರು ಹಂಚಿಕೊಂಡರು.
ವಿಡಿಯೊ ವೀಕ್ಷಿಸಿ:
The striped underwear that our grandfather and great-grandfather wore is now internationally branded and priced between 2,500 and 11,000 rupees.🤔🤔🤨🤨 pic.twitter.com/V2Cs1DYEd9
— Aviator Anil Chopra (@Chopsyturvey) October 23, 2025
ತಮಿಳಿನಲ್ಲಿ, ನಾವು ಇದನ್ನು ಕೋಡ್ (ಪಟ್ಟೆ) ಪೊಟ್ಟ ಚಡ್ಡಿ ಎಂದು ಕರೆಯುತ್ತಿದ್ದೆವು. ನನಗೆ ನೆನಪಿದೆ, ಹಲವಾರು ವರ್ಷಗಳ ಹಿಂದೆ, ಭಾರತೀಯ ಪಟ್ಟೆ ಜನಪ್ರಿಯವಾಗಿದ್ದವು. ನಂತರ ಲುಂಗಿಗಳ ದಿನ ಬಂದಿತು ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಅಜ್ಜಂದಿರು ತಮ್ಮ ಸಮಯಕ್ಕಿಂತ ಮುಂದಿದ್ದಾರೆಂದು ನನಗೆ ತಿಳಿದಿತ್ತು ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ.
ಇದನ್ನೂ ಓದಿ: Viral Video: ರಸ್ತೆಬದಿಯಲ್ಲಿ ಮಕ್ಕಳೊಂದಿಗೆ ಪಟಾಕಿ ಸಿಡಿಸಿ ದೀಪಾವಳಿ ಆಚರಿಸಿದ ಮುಸ್ಲಿಂ ಕುಟುಂಬ; ಹೃದಯಸ್ಪರ್ಶಿ ವಿಡಿಯೊ ವೈರಲ್
ನನ್ನ ಊರಿನಲ್ಲಿ ಇವುಗಳನ್ನು ಪಾತಾಳ ವಾಲಿ ನಿಕ್ಕರ್‌ಗಳು ಎಂದು ಕರೆಯಲಾಗುತ್ತಿತ್ತು. ಸಾಮಾನ್ಯವಾಗಿ 50 ರೂ.ಗೆ ಸಿಗುತ್ತಿತ್ತು ಎಂದು ಒಬ್ಬ ಬಳಕೆದಾರರು ಹಂಚಿಕೊಂಡಿದ್ದಾರೆ. ಆ ಪಟ್ಟೆಗಳಿರುವ UW ಫ್ಯಾಷನ್ ಎಲ್ಲಿಂದ ಬಂದಿತೆಂದು ನಾನು ಯಾವಾಗಲೂ ಆಶ್ಚರ್ಯಪಡುವೆನು, ಫ್ಯಾಷನ್‌ಗೂ ಚಕ್ರಗಳಿರುತ್ತವೆ ಅನಿಸುತ್ತಿದೆ ಎಂದು ವ್ಯಕ್ತಿಯೊಬ್ಬರು ಹೇಳಿದರು.
ಶಕ್ತಿ ಕಪೂರ್ ಸಿನಿಮಾಗಳಲ್ಲಿ ಯಾವಾಗಲೂ ಇದನ್ನು ಧರಿಸುತ್ತಿದ್ದರು. ಅದು ಒಂದು ಟ್ರೆಂಡ್ ಆಗಿ ಮಾರ್ಪಟ್ಟಿದೆ ಎಂದು ಮತ್ತೊಬ್ಬ ಬಳಕೆದಾರರು ಹೇಳಿದರು. ಇದು 30 ಅಥವಾ 40 ವರ್ಷಗಳ ಹಿಂದಿನ ಸಾರ್ವತ್ರಿಕ ಒಳ ಉಡುಪು! ಅದೇ ಪಟ್ಟೆ ವಿನ್ಯಾಸದ ಪೈಜಾಮಾಗಳು 40 ವರ್ಷಗಳ ಹಿಂದೆ ಜನಪ್ರಿಯವಾಗಿದ್ದವು. ನಮ್ಮ ತಂದೆ ಮತ್ತು ಅಜ್ಜ ಅಲ್ಟ್ರಾ-ಮಾಡರ್ನ್ ಆಗಿದ್ದರು! ಎಂದು ಮಗದೊಬ್ಬರು ಹೇಳಿದರು.
H&M ಬ್ರ್ಯಾಂಡೆಡ್ ಶಾಪ್‍ನಲ್ಲಿ ಅಜ್ಜನ ಹಳೆಯ ಒಳ ಉಡುಪುಗಳು
H&M ಒಂದು ಜನಪ್ರಿಯ ಬ್ರ್ಯಾಂಡ್ ಆಗಿದ್ದು, ಅಜ್ಜಂದಿರು ಧರಿಸುತ್ತಿದ್ದ ಪಟಾಪಟಿ ಚಡ್ಡಿಯಂತೆಯೇ ತೋರುವ ಶಾರ್ಟ್ಸ್ ಅನ್ನು ವಿಡಿಯೊ ಮಾಡಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಪಟ್ಟೆ ಮತ್ತು ತಿಳಿ ಬಣ್ಣದ ಈ ಶಾರ್ಟ್ಸ್ ತಕ್ಷಣವೇ ದೇಸಿಗಳ ಗಮನ ಸೆಳೆಯಿತು. ಇನ್‌ಸ್ಟಾಗ್ರಾಮ್ ವಿಡಿಯೊದಲ್ಲಿ, ಆ ವ್ಯಕ್ತಿ ಪಟ್ಟೆ ಇರುವ ಶಾರ್ಟ್ಸ್ ಅನ್ನು ಹಿಡಿದುಕೊಂಡು, ನನ್ನ ಅಜ್ಜ ಪ್ರತಿದಿನ ಒಳ ಉಡುಪುಗಳಾಗಿ ಧರಿಸುತ್ತಿದ್ದದ್ದು ಇಲ್ಲಿದೆ. ಈಗ ಅದನ್ನು H&M ನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಇದರ ಬೆಲೆ 1,499 ರೂ. ಗಳಿವೆ ಎಂದು ಆ ವ್ಯಕ್ತಿ ಹೇಳಿದರು.