ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಸೀಟಿಗಾಗಿ ನಡೀತು ಮಾರಾಮಾರಿ- ಗರ್ಭಿಣಿಗೆ ಒದ್ದು ಕಿಡಿಗೇಡಿಗಳ ಅಟ್ಟಹಾಸ; ವಿಡಿಯೊ ನೋಡಿ

Pregnant Lies Unconscious: ರೈಲಿನಲ್ಲಿ ಸೀಟಿಗಾಗಿ ಶುರುವಾದ ಮಾತಿನ ಚಕಮಕಿಯು ನಂತರ ದೈಹಿಕ ಹಲ್ಲೆಯಾಗಿ ಮಾರ್ಪಟ್ಟಿದೆ. ಕೊನೆಗೆ ಗರ್ಭಿಣಿಯೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದಿದ್ದು, ಇದರ ವಿಡಿಯೊ ವೈರಲ್ ಆಗಿದೆ. ನೆಟ್ಟಿಗರು ಘಟನೆಯನ್ನು ಖಂಡಿಸಿದ್ದಾರೆ.

ಸೀಟಿಗಾಗಿ ಜಗಳ; ಏಟು ಬಿದ್ದು ಪ್ರಜ್ಞಾಹೀನಳಾದ ಗರ್ಭಿಣಿ

-

Priyanka P Priyanka P Oct 24, 2025 8:49 PM

ನವದೆಹಲಿ: ರೈಲಿನಲ್ಲಿ ಪ್ರಯಾಣಿಕರ ಮಧ್ಯೆ ಆಗಾಗ ಜಗಳವಾಡುವ ದೃಶ್ಯದ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗುತ್ತಿರುತ್ತವೆ. ಇದೀಗ ರೈಲಿನಲ್ಲಿ ನಡೆದ ದೈಹಿಕ ಹಲ್ಲೆಯ ವಿಡಿಯೊವೊಂದು X (ಹಿಂದೆ ಟ್ವಿಟರ್) ನಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರು ಆಘಾತಕ್ಕೊಳಗಾಗಿದ್ದಾರೆ ಮತ್ತು ಆಕ್ರೋಶಗೊಂಡಿದ್ದಾರೆ. ಪ್ರಯಾಣಿಕರ ಮಧ್ಯ ಸೀಟಿಗಾಗಿ ಜಗಳವಾಗಿದೆ. ಜಗಳ ತೀವ್ರರೂಪ ಪಡೆದುಕೊಳ್ಳುತ್ತಿದ್ದಂತೆ ಗರ್ಭಿಣಿಯೊಬ್ಬರು (pregnant) ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾರೆ.

ವೈರಲ್ ಆಗಿರುವ ವಿಡಿಯೊದಲ್ಲಿ, ಇಬ್ಬರು ಪುರುಷರು ಪರಸ್ಪರ ಜಗಳವಾಡಿದ್ದಾರೆ. ಸಹ ಪ್ರಯಾಣಿಕರು ಅವರನ್ನು ಬೇರ್ಪಡಿಸಲು ಪ್ರಯತ್ನಿಸುತ್ತಿದ್ದಾರೆ. ಈ ಗಲಾಟೆಯ ನಡುವೆ, ಗರ್ಭಿಣಿ ಮಹಿಳೆಯೊಬ್ಬರು ಕೆಳಗಿನ ಬರ್ತ್‌ನಲ್ಲಿ ಕುಸಿದುಬಿದ್ದಿರುವುದು ಕಂಡುಬಂದಿದೆ. ಇನ್ನೊಬ್ಬ ಮಹಿಳೆ ಆಕೆಯ ಸಹಾಯಕ್ಕೆ ಧಾವಿಸಿ ನೀರು ನೀಡುತ್ತಿದ್ದಾರೆ. ಆದರೂ, ಜಗಳ ಮಾತ್ರ ಮುಂದುವರೆದಿದೆ.

ಪೋಸ್ಟ್ ಪ್ರಕಾರ, ಸೀಟಿಗಾಗಿ ಶುರುವಾದ ಜಗಳವು ಒಬ್ಬ ಪ್ರಯಾಣಿಕನು ಗರ್ಭಿಣಿ ಮಹಿಳೆಯನ್ನು ಒದೆಯುವ ಹಂತಕ್ಕೆ ತಲುಪಿತು. ಮೊದಲಿಗೆ ಮಾತಿನಲ್ಲೇ ವಾಕ್ಪ್ರಹಾರ ನಡೆಸಲಾಗಿದೆ. ನಂತರ ಈ ಜಗಳವು ತೀವ್ರ ರೂಪವನ್ನು ಪಡೆದುಕೊಂಡಿದ್ದು, ಗರ್ಭಿಣಿ ಮಹಿಳೆಯ ಜೀವವನ್ನೇ ಪಣಕ್ಕಿಡುವ ಕೃತ್ಯವಾಗಿ ಮಾರ್ಪಟ್ಟಿತು. ಗರ್ಭಿಣಿಯು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವ ದೃಶ್ಯವು ನೋಡುಗರಿಗೆ ಕರುಳು ಹಿಂಡಿದಂತಾಗಿದೆ.

ವಿಡಿಯೊ ವೀಕ್ಷಿಸಿ:



ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಎಷ್ಟೇ ಕೋಪಗೊಂಡರೂ ಈ ರೀತಿ ಜನರು ಜಗಳವಾಡುವುದು ಸರಿಯಲ್ಲ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಗರ್ಭಿಣಿ ಮಹಿಳೆಯನ್ನು ಒದೆಯುವುದು, ಅದು ಯಾವ ರೀತಿಯ ಮಾನವೀಯತೆ? ಎಂದು ಮತ್ತೊಬ್ಬ ಬಳಕೆದಾರರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Viral Video: ದೀಪ ಬೆಳಗಿಸಿ, ರಸ್ತೆ ಗುಂಡಿಗಳಿಗೆ ಹೂವಿನ ಅಲಂಕಾರ ; ವಿನೂತನ ಪ್ರತಿಭಟನೆಯ ವಿಡಿಯೋ ವೈರಲ್‌

ಇತ್ತೀಚೆಗೆ ಜನರು ತಮ್ಮ ಮಾನವೀಯತೆಯನ್ನು ಕಳೆದುಕೊಂಡಿದ್ದಾರೆ. ಕೇವಲ ಸೀಟಿಗಾಗಿ ಗರ್ಭಿಣಿ ಮಹಿಳೆಯನ್ನು ಹೊಡೆಯುವುದು ಸರಿಯೇ? ಎಂದು ವ್ಯಕ್ತಿಯೊಬ್ಬರು ಪ್ರಶ್ನಿಸಿದ್ದಾರೆ. ಆಕ್ರೋಶದ ಜೊತೆಗೆ, ಈ ವಿಡಿಯೊ ಪ್ರಯಾಣಿಕರ ಜವಾಬ್ದಾರಿಯ ಬಗ್ಗೆ ಮತ್ತು ಸಣ್ಣ ವಿವಾದಗಳು ಹೇಗೆ ಬೇಗನೆ ಹಿಂಸಾಚಾರಕ್ಕೆ ತಿರುಗುತ್ತವೆ ಎಂಬುದರ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಇನ್ನು ಘಟನೆಯಲ್ಲಿ ಪಾಲ್ಗೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅನೇಕರು ಒತ್ತಾಯಿಸಿದರು. ಇಂತಹ ಘಟನೆಗಳು ಮತ್ತೆ ಸಂಭವಿಸದಂತೆ ರೈಲ್ವೆ ಇಲಾಖೆಯು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಹಾನುಭೂತಿಯ ಅಗತ್ಯದ ಬಗ್ಗೆ ನೆಟ್ಟಿಗರು ಮಾತನಾಡಿದರು. ವಿಶೇಷವಾಗಿ ಗರ್ಭಿಣಿಯರು, ವೃದ್ಧರು ಮತ್ತು ವಿಶೇಷಚೇತನ ಪ್ರಯಾಣಿಕರಂತಹ ದುರ್ಬಲರಿಗೆ ಸಹಾನುಭೂತಿ ತೋರಿಸಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.