Viral Video: ಬಾ ರೇಪ್ ಮಾಡು...ಕುಡಿದ ಮತ್ತಿನಲ್ಲಿ ಯುವತಿಯ ರಂಪಾಟ! ಈ ವಿಡಿಯೊ ನೋಡಿ
Video Of Drunk College Students Goes Viral: ಇಬ್ಬರು ಯುವತಿಯರು ಮತ್ತು ಒಬ್ಬ ಯುವಕ ಕುಡಿದು ರಸ್ತೆಯಲ್ಲಿ ಅವ್ಯವಸ್ಥೆ ಉಂಟುಮಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಘಟನೆ ಎಲ್ಲಿ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಮದ್ಯ ಸೇವಿಸಿ ತಡರಾತ್ರಿ ರಂಪಾಟ ನಡೆಸಿದೆ.
-
Priyanka P
Oct 24, 2025 8:56 PM
ನವದೆಹಲಿ: ತಡರಾತ್ರಿ ಕಾಲೇಜು ವಿದ್ಯಾರ್ಥಿಗಳ ಗುಂಪೊಂದು ಮದ್ಯ ಸೇವಿಸಿ ಬೀದಿಯಲ್ಲಿ ರಂಪಾಟ ನಡೆಸಿರುವ ಘಟನೆಯ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಇಬ್ಬರು ಯುವತಿಯರು ಮತ್ತು ಒಬ್ಬ ಯುವಕ ಕುಡಿದು (Drunk) ರಸ್ತೆಯಲ್ಲಿ ಅವ್ಯವಸ್ಥೆ ಉಂಟುಮಾಡುವುದನ್ನು ವಿಡಿಯೊದಲ್ಲಿ ತೋರಿಸಲಾಗಿದೆ. ಪರಿಸ್ಥಿತಿಯು ಜೋರಾದ ವಾಗ್ವಾದಗಳಿಂದ ಶುರುವಾಗಿ ಬೀದಿ ಪ್ರದರ್ಶನವಾಗಿ ಮಾರ್ಪಟ್ಟಿತು. ಈ ಘಟನೆ ಎಲ್ಲಿ ನಡೆದಿದೆ ಎಂಬುದು ತಿಳಿದುಬಂದಿಲ್ಲ.
X (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ, ಮಹಿಳೆ ಕುಡಿದ ಅಮಲಿನಲ್ಲಿದ್ದಳು. ಆಕೆಯ ಸ್ನೇಹಿತರು ಅವಳನ್ನು ಶಾಂತಗೊಳಿಸಲು ಪ್ರಯತ್ನಿಸಿದಾಗ ಗದ್ದಲ ಮತ್ತು ಜಗಳವಾಯಿತು ಎಂದು ಹೇಳಲಾಗಿದೆ. ವಿಡಿಯೊದಲ್ಲಿ ಕಂಡುಬರುವಂತೆ, ಸ್ಥಳದಲ್ಲಿದ್ದ ಜನರು ಸುತ್ತಲೂ ಒಟ್ಟುಗೂಡಿದರು, ಕೆಲವರು ಮಧ್ಯಪ್ರವೇಶಿಸಲು ಪ್ರಯತ್ನಿಸಿದರೆ, ಇತರರು ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಆಕೆಯ ಸ್ನೇಹಿತರು ಪಕ್ಕಕ್ಕೆ ಸರಿಯುವಂತೆ ಪದೇ ಪದೇ ಮನವಿ ಮಾಡಿದರೂ, ಅವಳು ಕೂಗುತ್ತಾ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತಾಳೆ. ಒಂದು ಹಂತದಲ್ಲಿ, ಅವಳು ತನ್ನ ಮೇಲೆ ಅತ್ಯಾಚಾರ ಮಾಡು ಎಂದು ಹೇಳುತ್ತಾ ಕಿರುಚಿದ್ದಾಳೆ.
ವಿಡಿಯೊ ವೀಕ್ಷಿಸಿ:
"R@pe Karo Mera"
— ShoneeKapoor (@ShoneeKapoor) October 23, 2025
These girls are college students and were creating a ruckus on the road at night after drinking alcohol.
When some local people objected, one of the girls started shouting.pic.twitter.com/qGehEstwKu
ಸ್ಥಳದಲ್ಲಿ ಜಮಾಯಿಸಿದ್ದ ಜನರು ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಇತರರು ಗುಂಪನ್ನು ಚದುರಿಸಲು ಪ್ರಯತ್ನಿಸುತ್ತಿರುವಾಗ ಸ್ನೇಹಿತರು ಆಕೆಯನ್ನು ರಸ್ತೆಯಿಂದ ದೂರ ಕರೆದೊಯ್ದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ, ಈ ದೃಶ್ಯಗಳು ಭಾರಿ ವೈರಲ್ ಆಗಿದೆ. ಇದು ಬಳಕೆದಾರರಲ್ಲಿ ಸಿಟ್ಟನ್ನು ತರಿಸಿದೆ, ಈ ಅಜಾಗರೂಕ ವರ್ತನೆಯನ್ನು ಟೀಕಿಸುತ್ತಾ, ಆಕೆ ಅತ್ಯಾಚಾರ ಮಾಡಿ ಎಂದು ಕೂಗುತ್ತಿರುವುದು ನಿಜಕ್ಕೂ ಅಹಿತಕರವಾಗಿದೆ ಎಂದು ಒಬ್ಬ ಬಳಕೆದಾರರು ಹೇಳಿದ್ದಾರೆ. ಈ ದೇಶದಲ್ಲಿ ಮದ್ಯಪಾನವನ್ನು ನಿಷೇಧಿಸಬೇಕು ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Viral Video: ರಸ್ತೆಬದಿಯಲ್ಲಿ ಮಕ್ಕಳೊಂದಿಗೆ ಪಟಾಕಿ ಸಿಡಿಸಿ ದೀಪಾವಳಿ ಆಚರಿಸಿದ ಮುಸ್ಲಿಂ ಕುಟುಂಬ; ಹೃದಯಸ್ಪರ್ಶಿ ವಿಡಿಯೊ ವೈರಲ್
ರೇಪ್ ಎಂಬ ಪದವು ತಮಾಷೆಯಲ್ಲ. ಅವಳು ಯಾಕೆ ಹಾಗೆ ಹೇಳಿದ್ದಾಳೆ? ಅದು ತನಗೆ ಆಘಾತ ತಂದಿದೆ ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ. ಆಧುನಿಕ ಪೀಳಿಗೆ ಎಂದು ಕರೆಯಲ್ಪಡುವವರು ಮಾತನಾಡುತ್ತಿದ್ದ ಸ್ವಾತಂತ್ರ್ಯ ಇದೇನಾ? ಅವರಿಗೆ ಏನಾದರೂ ಆದರೆ ಯಾರು ಹೊಣೆ? ಹಾಗೆ ಮಾಡಿದವರೋ ಅಥವಾ ಈ ಸ್ವತಂತ್ರ ಹುಡುಗಿಯರದ್ದು ತಪ್ಪೋ? ಕೊನೆಗೆ ಸಮಾಜವನ್ನು ದೂಷಿಸುತ್ತಾರೆ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.
ದಯವಿಟ್ಟು, ಅತ್ಯಾಚಾರ ಮಾಡಿ ಅಂತಾ ಎಂದಿಗೂ ಹೇಳಬೇಡಿ ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ. ಇನ್ನು ಘಟನೆಯು ನಿಖರವಾಗಿ ಏನಾಯಿತು ಅಥವಾ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯೇ ಎಂಬುದರ ವಿವರಗಳು ಇನ್ನೂ ಸ್ಪಷ್ಟವಾಗಿಲ್ಲ.