Viral Video: ಇಸ್ಕಾನ್‌ನಲ್ಲಿ KFC ಚಿಕನ್ ತಿಂದ ಕಿಡಿಗೇಡಿ- ಹೀನ ಕೃತ್ಯ ವಿಡಿಯೊದಲ್ಲಿ ಸೆರೆ
ಇಸ್ಕಾನ್ ರೆಸ್ಟೋರೆಂಟ್‌ನಲ್ಲಿ (ISKCON restaurant) ವ್ಯಕ್ತಿಯೊಬ್ಬ ಕೋಳಿ ಮಾಂಸ (chicken) ತಿಂದಿರುವ ವಿಡಿಯೊ (viral Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ. ಲಂಡನ್‌ನಲ್ಲಿರುವ (London) ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್‌ನೆಸ್ (International Society for Krishna Consciousness) ಗೋವಿಂದ ರೆಸ್ಟೋರೆಂಟ್ ಸಂಪೂರ್ಣವಾಗಿ ಸಸ್ಯಾಹಾರಿಯಾಗಿದ್ದು, ಇದರ ಒಳಗೆ ವ್ಯಕ್ತಿಯೊಬ್ಬ ಕುಳಿತು ಹುರಿದ ಕೋಳಿ ಮಾಂಸ ತಿಂದಿದ್ದಾನೆ.


ಲಂಡನ್: ಇಸ್ಕಾನ್ ರೆಸ್ಟೋರೆಂಟ್‌ನಲ್ಲಿ (ISKCON restaurant) ವ್ಯಕ್ತಿಯೊಬ್ಬ ಕೋಳಿ ಮಾಂಸ (chicken) ತಿಂದಿರುವ ವಿಡಿಯೊ (viral Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ. ಲಂಡನ್‌ನಲ್ಲಿರುವ (London) ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್‌ನೆಸ್ (International Society for Krishna Consciousness) ಗೋವಿಂದ ರೆಸ್ಟೋರೆಂಟ್ ಸಂಪೂರ್ಣವಾಗಿ ಸಸ್ಯಾಹಾರಿಯಾಗಿದ್ದು, ಇದರ ಒಳಗೆ ವ್ಯಕ್ತಿಯೊಬ್ಬ ಕುಳಿತು ಹುರಿದ ಕೋಳಿ ಮಾಂಸ ತಿಂದಿದ್ದಾನೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಅನೇಕರು ಕಾಮೆಂಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಫ್ರಿಕನ್ - ಬ್ರಿಟಿಷ್ ಮೂಲದ ವ್ಯಕ್ತಿಯೊಬ್ಬ ಇಸ್ಕಾನ್‌ನ ಪ್ರಸಿದ್ಧ ಸಸ್ಯಾಹಾರಿ ರೆಸ್ಟೋರೆಂಟ್ ಗೋವಿಂದದಕ್ಕೆ ಆಗಮಿಸಿ ಮಾಂಸ ಬಡಿಸುತ್ತೀರಾ ಎಂದು ಕೇಳಿದ್ದಾನೆ. ಆಗ ರೆಸ್ಟೋರೆಂಟ್ ಸಿಬ್ಬಂದಿ ಇಲ್ಲಿ ಯಾವುದೇ ಮಾಂಸ, ಈರುಳ್ಳಿ ಅಥವಾ ಬೆಳ್ಳುಳ್ಳಿ ಲಭ್ಯವಿಲ್ಲ ಎಂದು ಹೇಳಿದ್ದಾರೆ. ಬಳಿಕ ಆತ ಕೆಎಫ್‌ಸಿ ಚಿಕನ್ ಬಕೆಟ್ ತೆಗೆದುಕೊಂಡು ಬಂದು ರೆಸ್ಟೋರೆಂಟ್ ಒಳಗೆ ತಿನ್ನಲು ಪ್ರಾರಂಭಿಸಿದ್ದಾನೆ.
ಆತ ರೆಸ್ಟೋರೆಂಟ್ ಗೆ ಬಂದು ಹಾಯ್, ಇದು ಸಸ್ಯಾಹಾರಿ ರೆಸ್ಟೋರೆಂಟ್ ? ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ರೆಸ್ಟೋರೆಂಟ್ ಸಿಬ್ಬಂದಿಯೊಬ್ಬರು ಹೌದು ಎಂದು ಹೇಳಿದ್ದಾನೆ. ಅದಕ್ಕೆ ಆತ ಹಾಗಾದರೆ ಇಲ್ಲಿ ಮಾಂಸ ಸಿಗುವುದಿಲ್ಲವೇ ? ಎಂದು ಕೇಳಿದ್ದಾನೆ. ಅದಕ್ಕೆ ಸಿಬ್ಬಂದಿ ಮಾಂಸವಿಲ್ಲ. ಈರುಳ್ಳಿ. ಬೆಳ್ಳುಳ್ಳಿ ಇಲ್ಲ ಎಂದು ಹೇಳಿದ್ದಾನೆ. ಬಳಿಕ ಸ್ವಲ್ಪ ಹೊತ್ತಿನಲ್ಲಿ ಆತ ಕೆಎಫ್‌ಸಿ ಚಿಕನ್ ಬಕೆಟ್ ತೆರೆದು ಒಳಗೆ ಕುಳಿತು ತಿನ್ನಲು ಪ್ರಾರಂಭಿಸುತ್ತಾನೆ. ಬಳಿಕ ಸಿಬ್ಬಂದಿ ಮತ್ತು ಗ್ರಾಹಕರಿಗೆ ನೀವು ತೆಗೆದುಕೊಳ್ಳಿ ಎಂದು ಹೇಳುತ್ತಾನೆ.
ಆಗ ಒಬ್ಬ ಗ್ರಾಹಕ ಆತನಿಗೆ ಕ್ಷಮಿಸಿ ನೀವು ಮಾಡುತ್ತಿರುವುದು ಈ ಸ್ಥಳದ ನಿಯಮಗಳನ್ನು ಉಲ್ಲಂಘಿಸುತ್ತಿದೆ. ಇದು ನ್ಯಾಯಯುತವಲ್ಲ ಎಂದು ಹೇಳಿದ್ದಾನೆ. ಆದರೂ ಆತ ಕೋಳಿ ಮಾಂಸ ತಿನ್ನುವುದನ್ನು ಮುಂದುವರಿಸುತ್ತಾನೆ.
ಕೊನೆಗೆ ಹೊಟೇಲ್ ಸಿಬ್ಬಂದಿ ಭದ್ರತಾ ಸಿಬ್ಬಂದಿಯನ್ನು ಕರೆದು ಆತನನ್ನು ಹೊಟೇಲ್ ಆವರಣದಿಂದ ಹೊರಹಾಕುತ್ತಾರೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶವನ್ನು ಉಂಟು ಮಾಡಿದೆ.
ಅನೇಕರು ಇದು ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.
ಒಬ್ಬರು ಪ್ರತಿಕ್ರಿಯಿಸಿ ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಕೊಂಡಿದ್ದೇನೆ. ಇದು ಹಿಂದೂಗಳ ಮೇಲಿನ ಶುದ್ಧ ದ್ವೇಷ. ಹಿಂದೂಗಳು ಪ್ರತೀಕಾರ ತೀರಿಸಿಕೊಳ್ಳುವುದಿಲ್ಲ ಎಂದು ಅವನಿಗೆ ತಿಳಿದಿದೆ. ಅದಕ್ಕಾಗಿಯೇ ಅವನು ಈ ರೀತಿ ಮಾರುವ ಧೈರ್ಯ ಮಾಡಿದ್ದಾನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral Video: ಕನ್ವಾರ್ ಯಾತ್ರೆ ವೇಳೆ ಏಕಾಏಕಿ ನುಗ್ಗಿದ ಗಜಪಡೆ; ಕೊನೆಗೆ ಆಗಿದ್ದೇನು? ವಿಡಿಯೊ ನೋಡಿ
ಇನ್ನೊಬ್ಬ ಬಳಕೆದಾರರು, ಯಾವುದೇ ರೆಸ್ಟೋರೆಂಟ್‌ಗೆ ಹೊರಗಿನ ಆಹಾರವನ್ನು ತರುವುದನ್ನು ನಿಷೇಧಿಸಲಾಗಿದೆ. ಇಸ್ಕಾನ್‌ಗೆ ಮಾಂಸವನ್ನು ತರುವುದು ಕೇವಲ ಅಗೌರವವಲ್ಲ. ನಮ್ಮ ತತ್ತ್ವ ಗಳ ಮೇಲಿನ ದಾಳಿ. ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು ಆತನ ಮೇಲೆ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ತಿಳಿಸಿದ್ದಾರೆ. ಇನ್ನೊಬ್ಬರು ಇದು ಯಾವುದೇ ಸಮಾಜದಲ್ಲಿ ಸಹಿಸಲಾಗದ ಕಾರ್ಯವಾಗಿದೆ ಎಂದು ಹೇಳಿದ್ದಾರೆ.