ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Crime News: ಪತ್ನಿ ವಿಡಿಯೊ ಕಾಲ್‌ ಮಾಡಿ ನಂತರ ಸೌದಿಯಲ್ಲಿ ಪತಿ ಆತ್ಮಹತ್ಯೆ

Husband dies by self Harming: ಪತ್ನಿಯೊಂದಿಗೆ ವಿಡಿಯೊ ಕಾಲ್ ಮೂಲಕ ಮಾತನಾಡಿದ 24 ವರ್ಷದ ಪತಿಯು, ನಂತರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಬ್ಬರ ನಡುವೆ ತೀವ್ರ ವಾಗ್ವಾದ ಉಂಟಾಗಿತ್ತು ಎನ್ನಲಾಗಿದ್ದು, ನಂತರ ಪತಿಯು ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾನೆ.

ಪತ್ನಿಗೆ ವಿಡಿಯೊ ಕರೆ ಮಾಡಿದ ನಂತರ ಪತಿ ಆತ್ಮಹತ್ಯೆ

-

Priyanka P Priyanka P Oct 29, 2025 4:15 PM

ಲಖನೌ: 24 ವರ್ಷದ ಯುವಕನೊಬ್ಬ ತನ್ನ ನವವಿವಾಹಿತ ಪತ್ನಿಯೊಂದಿಗೆ ವಿಡಿಯೊ ಕಾಲ್ ಮೂಲಕ ಮಾತನಾಡಿ ಜಗಳವಾಡಿದ್ದಾನೆ. ನಂತರ ಆತ್ಮಹತ್ಯೆ (suicide) ಮಾಡಿಕೊಂಡ ಆಘಾತಕಾರಿ ಘಟನೆ ಸೌದಿ ಅರೇಬಿಯಾದಲ್ಲಿ (Saudi Arabia) ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕ ಮೂಲತಃ ಉತ್ತರ ಪ್ರದೇಶದ ಮುಜಫರ್‌ನಗರ ಜಿಲ್ಲೆಯನು ಎಂದು ತಿಳಿದುಬಂದಿದೆ (Crime News).

ಅಕ್ಟೋಬರ್ 26 ರಂದು ರಿಯಾದ್‌ನಲ್ಲಿರುವ ತನ್ನ ನಿವಾಸದಲ್ಲಿ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೊಹಮ್ಮದ್ ಅನ್ಸಾರಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ವಿಡಿಯೊ ಕರೆಯ ಸಮಯದಲ್ಲಿ ಆತನ ಪತ್ನಿ 21 ವರ್ಷದ ಸಾನಿಯಾ ಜೊತೆ ಮಾತನಾಡುವಾಗ ತೀವ್ರ ವಾಗ್ವಾದ ನಡೆದಿದೆ. ನಂತರ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ಘಟನೆಯ ನಂತರ, ಅವರ ಪತ್ನಿ ಸೌದಿ ಅರೇಬಿಯಾದಲ್ಲಿ ವಾಸಿಸುವ ಸಂಬಂಧಿಕರಿಗೆ ಮಾಹಿತಿ ನೀಡಿದ್ದು, ಅವರು ಆತನ ನಿವಾಸಕ್ಕೆ ಧಾವಿಸಿ ನೋಡಿದಾಗ ಅನ್ಸಾರಿ ಮೃತಪಟ್ಟಿರುವುದು ಕಂಡುಬಂದಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ. ಮೃತದೇಹವನ್ನು ಮುಜಫರ್‌ನಗರಕ್ಕೆ ತಂದು ಅಂತ್ಯಕ್ರಿಯೆ ನಡೆಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಸಂಬಂಧಿ ಅಮ್ಜದ್ ಅಲಿ ಹೇಳಿದ್ದಾರೆ.

ಇದನ್ನೂ ಓದಿ: Crime News: ಚರಂಡಿಯಲ್ಲಿ ಪತ್ತೆಯಾಯ್ತು ಇನ್ಶೂರೆನ್ಸ್ ಏಜೆಂಟ್ ಶವ; ಬ್ಲ್ಯಾಕ್‌ಮೇಲ್‌ ಕಾರಣಕ್ಕೆ ನಡೀತಾ ಬರ್ಬರ ಕೊಲೆ?

ಈ ವರ್ಷದ ಆರಂಭದಲ್ಲಿ ಏಪ್ರಿಲ್ 7 ರಂದು ಭೋಪಾ ಗ್ರಾಮದಲ್ಲಿ ದಂಪತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಎಂದು ಕುಟುಂಬ ಸದಸ್ಯರು ಬುಧವಾರ ತಿಳಿಸಿದ್ದಾರೆ. ಅನ್ಸಾರಿಯು ಸುಮಾರು ಎರಡೂವರೆ ತಿಂಗಳ ಹಿಂದೆ ಕೆಲಸದ ನಿಮಿತ್ತ ಸೌದಿ ಅರೇಬಿಯಾಕ್ಕೆ ಪ್ರಯಾಣ ಬೆಳೆಸಿದ್ದರು. ಇದೀಗ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದು, ಕುಟುಂಬವು ಶೋಕ ಸಾಗರದಲ್ಲಿ ಮುಳುಗಿದೆ.

ಇನ್ನು ಘಟನೆ ಸಂಬಂಧ ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಲಾಗಿದ್ದು, ಮೃತದೇಹಗಳನ್ನು ಸ್ವದೇಶಕ್ಕೆ ಕಳುಹಿಸಲು ಅಗತ್ಯ ದಾಖಲೆಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ದಂಪತಿಗಳ ನಡುವೆ ಯಾವ ವಿಷಯದ ಬಗ್ಗೆ ವಾಗ್ವಾದ ನಡೆದಿದೆ ಎಂಬುದೂ ಸೇರಿದಂತೆ, ಪ್ರಕರಣದ ವಿವರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಶ್ಲೀಲ ಚಿತ್ರ ತೋರಿಸಿ ಬ್ಲ್ಯಾಕ್‍ಮೇಲ್; ಸಹೋದರ ಆತ್ಮಹತ್ಯೆ

ತನ್ನ ಮೂವರು ಸಹೋದರಿಯರ (AI) ಕೃತಕ ಬುದ್ಧಿಮತ್ತೆಯಿಂದ ರಚಿಸಲಾದ ಅಶ್ಲೀಲ ಚಿತ್ರಗಳನ್ನು ಮುಂದಿಟ್ಟು ವ್ಯಕ್ತಿಯೊಬ್ಬ ಬ್ಲಾಕ್‌ಮೇಲ್‌ ಮಾಡಿದ್ದ ಎಂದು ಆರೋಪಿಸಿ 19 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಹರಿಯಾಣದ ಫರಿಯಾದಾಬಾದ್‌ನಲ್ಲಿ ನಡೆದಿದೆ. ಡಿಎವಿ ಕಾಲೇಜಿನ ಎರಡನೇ ವರ್ಷದ ವಿದ್ಯಾರ್ಥಿ ರಾಹುಲ್ ಭಾರ್ತಿ ಆತ್ಮಹತ್ಯೆ ಮಾಡಿಕೊಂಡ ಯುವಕ. ಕಳೆದ ವಾರ ರಾಹುಲ್‌ ಮೊಬೈಲನ್ನು ಯಾರೋ ಹ್ಯಾಕ್‌ ಮಾಡಿದ್ದರು. ಆತನ ಮೂವರ ಸಹೋದರಿಯ ಫೋಟೋವನ್ನು ಎಡಿಟ್‌ ಮಾಡಿ, ಲಕ್ಷಗಟ್ಟಲೆ ಹಣಕ್ಕಾಗಿ ವ್ಯಕ್ತಿಯೊಬ್ಬ ಪೀಡಿಸುತ್ತಿದ್ದ ಎಂದು ರಾಹುಲ್‌ ತಂದೆ ಹೇಳಿದ್ದಾರೆ.