ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deepika Padukone: 'ಕಲ್ಕಿ 2898 ಎಡಿʼ ಸಿನಿಮಾದ ಕಲಾವಿದರ ಲಿಸ್ಟ್‌ನಿಂದ ನಟಿ ದೀಪಿಕಾ ಪಡುಕೋಣೆ ಹೆಸರು ಮಾಯ? ನಿಜಕ್ಕೂ ಆಗಿದ್ದೇನು?

ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ 'ಕಲ್ಕಿ 2898 ಎಡಿʼ ಚಿತ್ರದ ಎಂಡ್ ಕ್ರೆಡಿಟ್‌ಗಳ ಪಟ್ಟಿಯಿಂದ ನಟಿ ದೀಪಿಕಾ ಪಡುಕೋಣೆ ಹೆಸರನ್ನು ತೆಗೆದುಹಾಕಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಹೀಗಾಗಿ ದೀಪಿಕಾ ಅವರ ಅಭಿಮಾನಿಗಳು ಸಿನಿಮಾ ತಂಡದ ವಿರುದ್ಧ ಗರಂ ಆಗಿದ್ದಾರೆ. ಅವರ ಅಭಿಮಾನಿಯೊಬ್ಬರು ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.

'ಕಲ್ಕಿʼ ಒಟಿಟಿ ಸ್ಟ್ರೀಮಿಂಗ್ ಕ್ರೆಡಿಟ್‌ನಲ್ಲಿ ದೀಪಿಕಾ ಹೆಸರಿಲ್ಲ?

Deepika Padukone -

Profile Pushpa Kumari Oct 29, 2025 6:07 PM

ನವದೆಹಲಿ: ಬಾಲಿವುಡ್ ಟಾಪ್‌ ನಟಿ, ಕನ್ನಡತಿ ದೀಪಿಕಾ ಪಡುಕೋಣೆ (Deepika Padukone) ಸದ್ಯ ಹಲವು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಕಳೆದ ವರ್ಷ ತೆರೆಕಂಡ 'ಕಲ್ಕಿ 2898 ಎಡಿʼ (Kalki-2 2898 AD) ಸಿನಿಮಾದ ಸೀಕ್ವೆಲ್‌ನಿಂದ ಅವರು ಹೊರ ನಡೆದಿದ್ದಾರೆ ಎನ್ನುವ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಚಿತ್ರ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ (Vyjayanthi Movies) ಈ ಬಗ್ಗೆ ಅಧಿಕೃತವಾಗಿಯೇ ಹೇಳಿಕೆ ನೀಡಿತ್ತು. ಇದೀಗ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ʼಕಲ್ಕಿ 2898 ಎಡಿʼಯ ಎಂಡ್ ಕ್ರೆಡಿಟ್‌ಗಳ ಪಟ್ಟಿಯಿಂದ ನಟಿ ದೀಪಿಕಾ ಅವರ ಹೆಸರನ್ನು ತೆಗೆದು ಹಾಕಲಾಗಿದೆ ಎನ್ನುವ ವಿಚಾರ ಸಾಕಷ್ಟು ಸದ್ದು ಮಅಡುತ್ತಿದೆ. ಹೀಗಾಗಿ ದೀಪಿಕಾ ಅವರ ಅಭಿಮಾನಿಗಳು ʼಕಲ್ಕಿʼ ಸಿನಿಮಾ ತಂಡದ ವಿರುದ್ಧ ಗರಂ ಆಗಿದ್ದಾರೆ. ಅವರ ಅಭಿಮಾನಿಯೊಬ್ಬರು ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ನಿಜಕ್ಕೂ ದೀಪಿಕಾ ಹೆಸರು ಡಿಲೀಟ್‌ ಆಗಿದ್ಯಾ ಎನ್ನುವ ಪ್ರಸ್ನೆಗೆ ಇಲ್ಲಿದೆ ಉತ್ತರ.

'ಕಲ್ಕಿ 2898 ಎಡಿʼ ಸಿನಿಮಾದಲ್ಲಿ ಸುಮತಿ ಎನ್ನುವ ಮುಖ್ಯ ಪಾತ್ರದಲ್ಲಿ ದೀಪಿಕಾ ನಟಿಸಿದ್ದರು. ಹಾಗಿದ್ದರೂ ಅವರ ಹೆಸರನ್ನು ʼಕಲ್ಕಿʼ ತಂಡ ಮರೆತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಚಿತ್ರದ ಕೊನೆಯಲ್ಲಿ ನೀಡಲಾಗುವ ಎಂಡ್ ಕ್ರೆಡಿಟ್‌ನಲ್ಲಿ ಅವರ ಹೆಸರಿಲ್ಲ. ಇದು ನಟಿಯ ಪ್ರತಿಭೆಗೆ ದೊರೆತ ಅಗೌರವ. ʼಕಲ್ಕಿʼ ಚಿತ್ರಕ್ಕೆ ತಿರುವು ನೀಡುವ ಪ್ರಮುಖ ಪಾತ್ರ ನಿರ್ವಹಿಸಿರುವ ದೀಪಿಕಾ ಪಡುಕೋಣೆ ಅವರಿಗೆ ಕ್ರೆಡಿಟ್ ನೀಡದಿರುವುದು ನಿಜಕ್ಕೂ ಬೇಸರದ ವಿಚಾರ ಎಂದು ಅಭಿಮಾನಿಯೊಬ್ಬರು ಪೋಸ್ಟ್‌ನಲ್ಲಿ ಬರೆದಿದ್ದಾರೆ.

ವೈಜಯಂತಿ ಮೂವೀಸ್‌ನ ಎಕ್ಸ್‌ ಪೋಸ್ಟ್‌:



ಪೋಸ್ಟ್ ಹಂಚಿಕೊಂಡ ಕೂಡಲೇ ಇತರ ಬಳಕೆದಾರರು ಇದಕ್ಕೆ ಪ್ರತಿಕ್ರಿಯಿಸಿ ನಿರಾಶೆ ವ್ಯಕ್ತ ಪಡಿಸಿದರು. ಅಭಿಮಾನಿಗಳಲ್ಲಿ ಒಬ್ಬರು ಚಿತ್ರದ ನಿರ್ಮಾಣ ಸಂಸ್ಥೆ ವೈಜಯಂತಿ ಫಿಲ್ಮ್ಸ್ ಅನ್ನು ಟೀಕಿಸಿ ಕಮೆಂಟ್ ಹಾಕಿದ್ದಾರೆ. ದೀಪಿಕಾ ಪಡುಕೋಣೆ ಅವರ ಹೆಸರನ್ನು ʼಕಲ್ಕಿʼ ಭಾಗ 1ರ ಒಟಿಟಿ ಫ್ಲ್ಯಾಟ್‌ಫಾರ್ಮ್‌ಗಳಿಂದ ಎಂಡ್ ಕ್ರೆಡಿಟ್‌ಗಳಿಂದ ತೆಗೆದುಹಾಕಿದ್ದು ನಿರ್ಮಾಣ ಸಂಸ್ಥೆಯು ನಟಿಗೆ ಅಗೌರವ ಸೂಚಿಸಿದಂತಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನು ಓದಿ:Jailer 2 Movie: ರಜನಿಕಾಂತ್‌ ಅಭಿನಯದ ʼಜೈಲರ್‌ 2ʼ ಚಿತ್ರಕ್ಕೆ ಸ್ಟಾರ್‌ ನಟಿ ಎಂಟ್ರಿ

Kalki (1)

ಅಷ್ಟಕ್ಕೂ ಆಗಿದ್ದೇನು?

ಆದರೆ ನಿಜವಾದ ವಿಚಾರ ಬೇರೆಯದೇ ಇದೆ. ದೀಪಿಕಾ ಹೆಸರನ್ನು ಚಿತ್ರತಂಡ ಕೈಬಿಟ್ಟಿಲ್ಲ. ಇನ್ನೂ ಕಲಾವಿದರ ಪಟ್ಟಿಯಲ್ಲಿ ಅವರ ಹೆಸರಿದೆ. ಚಿತ್ರ ನೆಟ್‌ಫ್ಲಿಕ್ಸ್‌ ಮತ್ತು ಅಮೇಜಾನ್‌ ಪ್ರೈಮ್‌ನಲ್ಲಿ ಪ್ರಸಾರವಾಗುತ್ತಿದೆ. ಎರಡೂ ಫ್ಲಾಟ್‌ಫಾರ್ಮ್‌ಗಳಲ್ಲಿಯೂ ದೀಪಿಕಾ ಹೆಸರಿದೆ. ಚಿತ್ರದ ಆರಂಭದಲ್ಲಿ ಮತ್ತು ಕೊನೆಯಲ್ಲಿ ಅವರ ಹೆಸರು ಕಂಡು ಬರುತ್ತಿದೆ.

ದೀಪಿಕಾ ಅವರನ್ನು ಕೈ ಬಿಟ್ಟಿದ್ದೇಕೆ?

ʼಕಲ್ಕಿ 2ʼ ನಿರ್ಮಾಪಕರು ನಟಿ ದೀಪಿಕಾ ಅವರನ್ನು ಕೈಬಿಡಲು ಕೂಡ ಅನೇಕ ಕಾರಣ ಇದೆ ಎಂದು ಕೆಲವು ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಆ ಪ್ರಕಾರ ದೀಪಿಕಾ ಈಗ ಹೆಣ್ಣು ಮಗುವಿನ ತಾಯಿಯಾಗಿದ್ದು ಮಗುವಿನ ಆರೈಕೆಗೆ ಹೆಚ್ಚಿನ ಸಮಯ ಬೇಕು ಎಂದು ಕೇಳಿದ್ದರಂತೆ. 8 ಗಂಟೆಗಳ ಕೆಲಸದ ಶಿಫ್ಟ್ ಜತೆಗೆ ಶೇ. 25ರಷ್ಟು ಹೆಚ್ಚಿನ ಸಂಭಾವನೆಗೆ ಬೇಡಿಕೆ ಇಟ್ಟಿದ್ದರಂತೆ. ಹೀಗಾಗಿ ಅವರನ್ನು ಸಿನಿಮಾ ತಂಡ ಕೈಬಿಟ್ಟಿದೆ ಎಂದು ಹೇಳಲಾಗುತ್ತಿದೆ.

ʼಕಲ್ಕಿʼ ಸಿನಿಮಾದ ಪ್ರೋಡಕ್ಷನ್ ಹೌಸ್ ಹಾಕಿದ್ದ ಪೋಸ್ಟ್‌ನಲ್ಲಿ, ʼಕಲ್ಕಿ 2ʼ ಬಹು ನಿರೀಕ್ಷಿತ ಚಿತ್ರ. ನಾಗ್ ಅಶ್ವಿನ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಮೊದಲ ಭಾಗದಲ್ಲಿ ದೀಪಿಕಾ ಪಡುಕೋಣೆ ಅಭಿನಯಿಸಿದ್ದರು. ಪಾರ್ಟ್ 2ರಲ್ಲಿಯೂ ಅಭಿನಯಿಸಬೇಕಿತ್ತು. ಈ ಚಿತ್ರಕ್ಕೆ ಸಾಕಷ್ಟು ಕಮಿಟ್‌ಮೆಂಟ್ ಬೇಕಾಗುತ್ತದೆ. ಹಾಗಾಗಿಯೇ ದೀಪಿಕಾ ಪಡುಕೋಣೆ ಅವರನ್ನ ಕೈ ಬಿಟ್ಟಿದ್ದೇವೆ...ದೀಪಿಕಾ ಅವರ ಮುಂದಿನ ಸಿನಿಮಾ ಪಯಣ ಚೆನ್ನಾಗಿರಲಿ...ಒಳ್ಳೆಯದಾಗಲಿ ಎಂದು ಬರೆದುಕೊಂಡಿತ್ತು.