ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

2025ರ ಬೆಂಗಳೂರಿನ ಟಾಪ್ ಸ್ಟಾರ್ಟಪ್‌ ಗಳ ಪಟ್ಟಿ ಬಿಡುಗಡೆ ಮಾಡಿದ ಲಿಂಕ್ಡ್‌ ಇನ್‌

ಹೊಂಡಾ 0 α ಅನ್ನು ನಗರ ಮತ್ತತು ನೈಸರ್ಗಿಕ ಪರಿಸರಗಳನ್ನು ಸುಂದರವಾಗಿ ಸಂಯೋಜಿಸುವ ಎಸ್.ಯು.ವಿ. ಆಗಿ ಅಭಿವೃದ್ಧಿಪಡಿಸಿದ್ದು ಪ್ರತಿ ಸನ್ನಿವೇಶಕ್ಕೂ ಜನರ ಜೀವನಗಳಿಗೆ ಬೆಂಬಲಿಸುತ್ತದೆ. ಈ ವರ್ಷದ ಜನವರಿಯಲ್ಲಿ ಸಿ.ಇ.ಎಸ್. 2025ರಲ್ಲಿ ಹೊಂಡಾ 0 ಸಲೂನ್ ಮತ್ತು ಹೊಂಡಾ 0 ಎಸ್.ಯು.ವಿ. ಬಿಡುಗಡೆ ಮಾಡಿದ ನಂತರ ಹೊಂಡಾ 0 α ಈ ಶ್ರೇಣಿಗೆ ಹೊಡಾ 0 ಸರಣಿಯ`ಗೇಟ್ ವೇ ಮಾದರಿ’ಯಾಗಿ ಸೇರಿಸಲಾಗಿದ್ದು ಇದು ಪರಿಷ್ಕರಿಸಿದ ವಿನ್ಯಾಸ ಮತ್ತು ವಿಶಾಲ ಕ್ಯಾಬಿನ್ ಹೊಂದಿದ್ದು ಒಳಗಿರುವವರಿಗೆ ಅಸಾಧಾರಣ ಸೌಖ್ಯ ನೀಡುತ್ತದೆ.

ಬೆಂಗಳೂರಿನ ಟಾಪ್ ಸ್ಟಾರ್ಟಪ್‌ ಗಳ ಪಟ್ಟಿ ಬಿಡುಗಡೆ ಮಾಡಿದ ಲಿಂಕ್ಡ್‌ ಇನ್‌

-

Ashok Nayak Ashok Nayak Oct 29, 2025 6:06 PM

ಬೆಂಗಳೂರಿನ ಸ್ಟಾರ್ಟಪ್‌ ಗಳ ಜಗತ್ತಿನಲ್ಲಿ ಡಿ2ಸಿ ಬ್ರ್ಯಾಂಡ್‌ ಗಳು ಮತ್ತು ಕ್ವಿಕ್-ಕಾಮರ್ಸ್ ಪ್ಲಾಟ್‌ ಫಾರ್ಮ್‌ ಗಳು ಮುಂಚೂಣಿಯಲ್ಲಿವೆ

ಬೆಂಗಳೂರು: ಜಗತ್ತಿನ ಅತಿದೊಡ್ಡ ವೃತ್ತಿಪರ ನೆಟ್‌ವರ್ಕ್ ಆಗಿರುವ ಲಿಂಕ್ಡ್‌ ಇನ್ ಉದಯೋ ನ್ಮುಖ ಸಂಸ್ಥೆಗಳಿಗೆ ವಾರ್ಷಿಕವಾಗಿ ರ‍್ಯಾಂಕ್ ನೀಡುವ ಪದ್ಧತಿ ಹೊಂದಿದ್ದು, ಇದೀಗ 2025ನೇ ಸಾಲಿನ ಬೆಂಗಳೂರಿನ ಟಾಪ್ ಸ್ಟಾರ್ಟಪ್‌ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ವೃತ್ತಿ ಬೆಳವಣಿಗೆ ಕಂಡುಕೊಳ್ಳಲು ನೆರವಾಗುವ ಹೊಸ ಕಂಪನಿಗಳ ಪಟ್ಟಿ ಇದಾಗಿದ್ದು, ಉದ್ಯೋಗಿ ಬೆಳವಣಿಗೆ, ತೊಡಗಿಸಿಕೊಳ್ಳುವಿಕೆ, ಉದ್ಯೋಗ ಆಸಕ್ತಿ ಮತ್ತು ಉನ್ನತ ಪ್ರತಿಭೆಗಳ ಆಸಕ್ತಿ ಇತ್ಯಾದಿ ಅಂಶಗಳುಳ್ಳ ಲಿಂಕ್ಡ್‌ ಇನ್ ಡೇಟಾದ ಆಧಾರದ ಮೇಲೆ ಈ ಪಟ್ಟಿ ತಯಾರಾಗಿದೆ. ಸ್ಥಳೀಯವಾಗಿ ಉದ್ಯೋಗ ಹುಡುಕುವವರಿಗೆ ಈ ನಗರದಲ್ಲಿರುವ ಹೊಸ ಅವಕಾಶಗಳನ್ನು ಗುರುತಿಸಲು ಈ ಪಟ್ಟಿ ಸಹಾಯ ಮಾಡುತ್ತದೆ.

2025ನೇ ಸಾಲಿನ ಟಾಪ್ ಸ್ಟಾರ್ಟಪ್ ಇಂಡಿಯಾ ಪಟ್ಟಿಯಲ್ಲೂ ಮೊದಲ ಸ್ಥಾನದಲ್ಲಿರುವ ಕ್ವಿಕ್-ಕಾಮರ್ಸ್ ಯೂನಿಕಾರ್ನ್ ಝೆಪ್ಟೋ (#1) ಬೆಂಗಳೂರು ಪಟ್ಟಿಯಲ್ಲಿಯೂ ಮುಂಚೂಣಿಯಲ್ಲಿದೆ. ನಂತರದ ಸ್ಥಾನಗಳನ್ನು ಸೆಕ್ಯುರಿಟಿ ಕಂಪ್ಲಯನ್ಸ್ ಆಟೋಮೇಷನ್ ಪ್ಲಾಟ್‌ ಫಾರ್ಮ್ ಸ್ಪ್ರಿಂಟೋ (#2) ಮತ್ತು ನಗರದ ಸ್ವಂತ 10 ಮಿನಿಟ್ ಫುಡ್ ಡೆಲಿವರಿ ಸರ್ವೀಸ್ ಸ್ವಿಶ್ (#3) ಸಂಸ್ಥೆಗಳು ಪಡೆದು ಕೊಂಡಿವೆ.

ಇದನ್ನೂ ಓದಿ: Bangalore News: ಚೀನಾ ಫ್ರೆಂಡ್ ಶಿಪ್ ಅಸೋಸಿಯೇಷನ್ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿ ಭಾಗಿ

ವಿಭಿನ್ನ ವಿಭಾಗಗಳ ಈ ಮೂರು ಕಂಪನಿಗಳೂ ತ್ವರಿತವಾಗಿ ಬೆಳೆಯುತ್ತಿದ್ದು, ಹೊಸ ಮಾರುಕಟ್ಟೆ ಗಳಿಗೆ ವಿಸ್ತರಣೆ ಹೊಂದುತ್ತಿವೆ. ಇವುಗಳ ಯಶಸ್ಸು ಬೆಂಗಳೂರಿನ ಉನ್ನತ ಸ್ಟಾರ್ಟಪ್‌ ಗಳ ಅತ್ಯುತ್ತಮ ಕಾರ್ಯನಿರ್ವಹಣೆ, ಆಧುನಿಕ ತಂತ್ರಜ್ಞಾನ ಮತ್ತು ಗ್ರಾಹಕ ಕೇಂದ್ರಿತ ನಾವೀನ್ಯತೆಗೆ ಅತ್ಯುತ್ತಮ ಪುರಾವೆಯಾಗಿದೆ.

‘ಕ್ವಿಕ್ ಎಕಾನಮಿ’ ವಿಭಾಗವು ಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸಿದ್ದು, ಅಗ್ರ ಮೂರು ಸ್ಥಾನಗಳಲ್ಲಿ ಝೆಪ್ಟೋ (#1) ಮತ್ತು ಸ್ವಿಶ್ (#3) ಎರಡೂ ಸ್ಥಾನ ಗಿಟ್ಟಿಸಿಕೊಂಡಿವೆ. ನಗರದ ಎಂಟರ್‌ ಪ್ರೈಸ್ ಟೆಕ್ ವಿಭಾಗ ಕೂಡ ಪ್ರಾಬಲ್ಯ ಸಾಧಿಸಿದ್ದು, ಕ್ಲೌಡ್ ಸ್ಟೋರೇಜ್‌ ವಿಭಾಗದ ಲ್ಯೂಸಿಡಿಟಿ (#5) ಮತ್ತು ಎಐ ಆಧಾರಿತ ಮಾರ್ಕೆಟಿಂಗ್ ಪರಿಹಾರಗಳನ್ನು ನೀಡುವ ಬೈಟ್‌ಸ್ಪೀಡ್ (#10) ಉತ್ತಮ ಸ್ಥಾನ ಗಳಿಸಿದೆ. ಗ್ರಾಹಕ ಬ್ರ್ಯಾಂಡ್‌ ಗಳೂ ಉತ್ತಮವಾಗಿ ಬೆಳೆಯುತ್ತಿದ್ದು, ಆಭರಣ ತಯಾರಕ ಗಿವಾ (#8) ಮತ್ತು ಕೂದಲು ಆರೈಕೆ ಬ್ರ್ಯಾಂಡ್ ತ್ರಯಾ (#9) ಕೂಡ ಉತ್ತಮ ಸ್ಥಾನ ಹೊಂದಿವೆ.

ಫಿನ್‌ಟೆಕ್ ಸ್ಟಾರ್ಟಪ್‌ ಗಳಾದ ಕ್ರೆಡ್ (#4) ಮತ್ತು ಜ್ಯುಪಿಟರ್ (#7) ಹಣ ನಿರ್ವಹಣಾ ವಿಭಾಗದಲ್ಲಿ ಸ್ಮಾರ್ಟ್ ಪರಿಹಾರಗಳ ಅಗತ್ಯತೆ ಕಡೆಗಿನ ಭಾರತದ ಹಸಿವನ್ನು ಪ್ರತಿಬಿಂಬಿಸುತ್ತವೆ. ಮೊದಲ ಐದರಲ್ಲಿ ಮೂರು ಕಂಪನಿಗಳು ಭಾರತದ ಟಾಪ್ ಸ್ಟಾರ್ಟಪ್ ಪಟ್ಟಿಯಲ್ಲೂ ಇದ್ದು, ಬೆಂಗಳೂರು ದೇಶದ ಸ್ಟಾರ್ಟಪ್ ರಾಜಧಾನಿ ಎಂಬ ಸ್ಥಾನವನ್ನು ಮತ್ತೊಮ್ಮೆ ದೃಢಪಡಿಸಿವೆ. ಆದರೆ ಅರ್ಧದಷ್ಟು ಕಂಪನಿಗಳು ಹೊಸಬರಾಗಿದ್ದು, ಹೊಸ ಆಲೋಚನೆಗಳು ಮತ್ತು ವಿಸ್ತಾರವಾದ ಅವಕಾಶಗಳಿಂದ ಪರಿಸ್ಥಿತಿ ಬದಲಾಗುವುದನ್ನು ತೋರಿಸಿ ಕೊಟ್ಟಿವೆ.

ಈ ವರ್ಷದ ಪಟ್ಟಿ ಕುರಿತು ಮಾತನಾಡಿರುವ ಲಿಂಕ್ಡ್‌ ಇನ್ ಕರಿಯರ್ ಎಕ್ಸ್‌ ಪರ್ಟ್ ಮತ್ತು ಲಿಂಕ್ಡ್‌ ಇನ್ ಇಂಡಿಯಾ ನ್ಯೂಸ್ ನ ಸೀನಿಯರ್ ಮ್ಯಾನೇಜಿಂಗ್ ಎಡಿಟರ್ ನಿರಾಜಿತಾ ಬ್ಯಾನರ್ಜಿ ಅವರು, “ಬೆಂಗಳೂರಿನ ಸ್ಟಾರ್ಟಪ್ ಕ್ಷೇತ್ರವು ಭಾರತದ ಸ್ಟಾರ್ಟಪ್ ವಿಭಾಗಕ್ಕೆ ಭಾರಿ ಬಲ ತುಂಬುವುದನ್ನು ಮುಂದುವರಿಸಿದ್ದು, ಗ್ರಾಹಕ ತಂತ್ರಜ್ಞಾನ ಮತ್ತು ಎಂಟರ್‌ ಪ್ರೈಸ್ ಪರಿಹಾರಗಳಲ್ಲಿ ಮುಂಚೂಣಿ ಯಲ್ಲಿದೆ.

ಎಂಟರ್‌ ಪ್ರೈಸ್ ಟೆಕ್, ಫಿನ್‌ ಟೆಕ್ ಮತ್ತು ಡಿಜಿಟಲ್-ಫಸ್ಟ್ ಗ್ರಾಹಕ ಬ್ರ್ಯಾಂಡ್‌ ಗಳ ಮಿಶ್ರಣವು ಸ್ಟಾರ್ಟಪ್ ಗಳ ವೈವಿಧ್ಯತೆಯನ್ನು ತೋರಿಸುತ್ತದೆ. ವೃತ್ತಿಪರರಿಗೆ ವಿಪುಲ ಅವಕಾಶ ಎದುರಾಗು ತ್ತಿದ್ದು, ತಂತ್ರಜ್ಞಾನ ಮತ್ತು ಸೃಜನಶೀಲತೆಯ ಮಿಶ್ರಣ ಹೊಂದಿರುವವರಿಗೆ ಹೆಚ್ಚಿನ ಅವಕಾಶ ಲಭ್ಯವಾಗುತ್ತಿದೆ” ಎಂದು ಹೇಳಿದರು.

ಇಲ್ಲಿದೆ 2025ನೇ ಬೆಂಗಳೂರಿನ ಲಿಂಕ್ಡ್‌ ಇನ್ ಟಾಪ್ ಸ್ಟಾರ್ಟ ಪ್‌ ಗಳ ಪಟ್ಟಿ:

  1. ಝೆಪ್ಟೋ
  2. ಸ್ಪ್ರಿಂಟೋ
  3. ಸ್ವಿಶ್
  4. ಕ್ರೆಡ್
  5. ಲ್ಯೂಸಿಡಿಟಿ
  6. ಪಾಕೆಟ್ ಎಫ್‌ಎಂ
  7. ಜ್ಯುಪಿಟರ್
  8. ಗಿವಾ
  9. ತ್ರಯಾ
  10. ಬೈಟ್‌ಸ್ಪೀಡ್

ಲಿಂಕ್ಡ್‌ ಇನ್ ಟಾಪ್ ಸ್ಟಾರ್ಟಪ್‌ ಗಳಲ್ಲಿ ಉದ್ಯೋಗ ಪಡೆಯಲು ನಿರಾಜಿತಾ ಬ್ಯಾನರ್ಜಿ ನೀಡಿರುವ ಕೆಲವು ಸಲಹೆಗಳು:

ಯಾರು ನೇಮಕ ಮಾಡುತ್ತಾರೆ ಎಂಬುದರ ಬದಲಾಗಿ ಸ್ಟಾರ್ಟಪ್‌ ಗಳು ಎಲ್ಲಿ ಬೆಳವಣಿಗೆ ಹೊಂದುತ್ತಿವೆ ಎಂಬುದನ್ನು ಗಮನಿಸಿ: 14 ಹೊಸಬರು ಎರಡು ವರ್ಷಗಳಲ್ಲಿ ಸಣ್ಣ ಸಂಸ್ಥೆ ಯನ್ನು ರಾಷ್ಟ್ರೀಯ ಮಟ್ಟಕ್ಕೆ ಏರಿಸಿದ್ದಾರೆ. ಅದು ಉದ್ಯೋಗ ಅವಕಾಶಗಳಲ್ಲಿ ಕಾಣಿಸುವುದಿಲ್ಲ. ಹಾಗಾಗಿ ಹೂಡಿಕೆ, ಉತ್ಪನ್ನ ಬಿಡುಗಡೆ ಮತ್ತು ಮಾರುಕಟ್ಟೆ ವಿಸ್ತರಣೆ ಮುಂತಾದುವುದರ ಕಡೆಗೆ ಗಮನ ಇರಲಿ, ಬೆಳವಣಿಗೆಯ ಗತಿ ಗುರುತಿಸಿಕೊಳ್ಳಿ.

ಸಂಸ್ಥಾಪಕರನ್ನು ಭವಿಷ್ಯದ ಮ್ಯಾನೇಜರ್‌ಗಳಂತೆ ಮೌಲ್ಯಮಾಪನ ಮಾಡಿ: ಭಾರಿ ಅಭಿವೃದ್ಧಿಶೀಲ ಸ್ಟಾರ್ಟಪ್‌ ಗಳಲ್ಲಿನ ನಾಯಕತ್ವವು ಹುದ್ದೆಗಿಂತ ಹೆಚ್ಚಾಗಿ ನಿಮ್ಮ ಬೆಳವಣಿಗೆ ಯನ್ನು ನಿರ್ಧರಿಸುತ್ತದೆ. ಲಿಂಕ್ಡ್‌ ಇನ್‌ ನಲ್ಲಿ ಸಂಸ್ಥಾಪಕರು ಹೇಗೆ ತಂಡ ಕಟ್ಟುತ್ತಾರೆ, ಸಂವಹನ ಮಾಡುತ್ತಾರೆ ಮತ್ತು ಪ್ರತಿಭೆಗಳನ್ನು ಉಳಿಸಿಕೊಳ್ಳುತ್ತಾರೆ ಎಂಬುದನ್ನು ನೋಡಿ. ವಿಶ್ವಾಸ ಮತ್ತು ಸ್ಪಷ್ಟತೆಯು ಪ್ರಚಾರಕ್ಕಿಂತ ಮುಖ್ಯ.

ಕೇವಲ ನಾವೀನ್ಯತೆ ಮಾತ್ರವಲ್ಲ, ಶಿಸ್ತು ಉಳ್ಳ ಉದ್ಯಮ ಮಾದರಿಗಳನ್ನು ಹುಡುಕಿ: ಈ ವರ್ಷದ ಟಾಪ್ ಸ್ಟಾರ್ಟಪ್‌ ಗಳು ನಾವೀನ್ಯತೆಯೊಂದಿಗೆ ಕಾರ್ಯಗತಗೊಳಿಸುವಿಕೆಯನ್ನು ಕೂಡ ಜೋಡಿಸಿ ಗೆದ್ದಿವೆ. ಕ್ವಿಕ್ ಕಾಮರ್ಸ್ ಹೊಸ ವಿಭಾಗಗಳಿಗೆ ಪ್ರವೇಶಿಸಿವೆ, ಎಐ ಮೂಲಸೌಕರ್ಯ ನಿರ್ಮಿಸುತ್ತಿದೆ, ಫಿನ್‌ಟೆಕ್ ಗಾಢ ಸಮಸ್ಯೆಗಳನ್ನು ಪರಿಹರಿಸುತ್ತಿದೆ. ಹಾಗಾಗಿ ಮಹತ್ವಾಕಾಂಕ್ಷೆ ಮತ್ತು ಕಾರ್ಯನಿರ್ವಹಣೆ ಒಂದೇ ಕಡೆ ಇರುವ ಜಾಗವನ್ನು ಹುಡುಕಿ.

ಪರಿಹರಿಸಲು ಯೋಗ್ಯವಾಗಿರುವ ಸಮಸ್ಯೆಗಳ ಬೆನ್ನತ್ತಿ: ಈ ವರ್ಷದ ಟಾಪ್ ಸ್ಟಾರ್ಟಪ್‌ ಗಳು ಸಮಸ್ಯೆಗಳನ್ನು ನಿವಾರಿಸಿ, ವಿಶ್ವಾಸ ಗಳಿಸುವ ಕಡೆಗೆ ಗಮನಹರಿಸಿವೆ. ಜಗತ್ತಲ್ಲಿ ಸಾಧನಗಳು ಬದಲಾಗಬಹುದು, ಆದರೆ ಸಮಸ್ಯೆ ಪರಿಹಾರ ಶಕ್ತಿಯು ಶಾಶ್ವತವಾಗಿದೆ. ಕಂಪನಿಯು ಯಾವ ಸಮಸ್ಯೆಯ ಹಿಂದೆ ಬಿದ್ದಿದೆ ಎಂದು ಅರ್ಥಮಾಡಿಕೊಂಡರೆ ನೀವು ಯಾವಾಗಲೂ ಪ್ರಸ್ತುತ ರಾಗಿರುತ್ತೀರಿ.