Viral News: ಅಮೆರಿಕದಲ್ಲಿ ರಕ್ತ ಪರೀಕ್ಷೆಗೆ 1.9 ಲಕ್ಷ ರುಪಾಯಿ, ಭಾರತದಲ್ಲಿ 2,800 ರುಪಾಯಿ; ಭಾರತೀಯ ವ್ಯಕ್ತಿಯ ಪೋಸ್ಟ್ ವೈರಲ್
ಅಮೆರಿಕದಲ್ಲಿ ವಾಸವಾಗಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬರ ಪೋಸ್ಟ್ ಭಾರಿ ವೈರಲ್ ಆಗುತ್ತಿದೆ. ಅಮೆರಿಕದಲ್ಲಿ ಇರುವ ಆರೋಗ್ಯ ವ್ಯವಸ್ಥೆ ಒಂದು ದೊಡ್ಡ ವಂಚನೆ. ಇಲ್ಲಿ ಆರೋಗ್ಯ ಸೇವೆಗೂ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದಾರೆ.
ಅಮೆರಿಕದ ಆರೋಗ್ಯ ವೆಚ್ಚದ ಬಗ್ಗೆ ಕಿಡಿ -
ನವದೆಹಲಿ, ಜೂ. 15: ಭಾರತದ ಹಲವು ಸೌಕರ್ಯಗಳ ಬಗ್ಗೆ ವಿದೇಶಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಲೇ ಇರುತ್ತಾರೆ. ತಕ್ಷಣಕ್ಕೆ ಸ್ಪಂದಿಸುವ ಆನ್‌ಲೈನ್ ಆ್ಯಪ್‌ಗಳು, ಮೆಟ್ರೋ ಸೌಕರ್ಯ, ವೈದ್ಯಕೀಯ ಚಿಕಿತ್ಸೆ ಬಗ್ಗೆ ಕೊಂಡಾಡಿದವರು ಇದ್ದಾರೆ. ಇದೀಗ ಅಮೆರಿಕದಲ್ಲಿ ವಾಸಿಸುವ ಭಾರತೀಯ ಮೂಲದ ವ್ಯಕ್ತಿಯೊಬ್ಬರ ಪೋಸ್ಟ್ ಇದೀಗ ಭಾರಿ ವೈರಲ್ (Viral News) ಆಗುತ್ತಿದೆ. ʼʼಅಮೆರಿಕದಲ್ಲಿ ಇರುವ ಆರೋಗ್ಯ ವ್ಯವಸ್ಥೆ ಕೂಡ ಒಂದು ದೊಡ್ಡ ವಂಚನೆ. ಇಲ್ಲಿ ಆರೋಗ್ಯ ಸೇವೆಗೂ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆʼʼ ಎಂದು ಕಿಡಿಕಾರಿದ್ದಾರೆ.
ʼʼಭಾರತದಲ್ಲಿ ಕೇವಲ 2,800 ರುಪಾಯಿಗೆ ಆಗುವ ರಕ್ತದ ಪರೀಕ್ಷೆಗೆ ಅಮೆರಿಕದಲ್ಲಿ ಬರೋಬ್ಬರಿ 1.5 ಲಕ್ಷ ರುಪಾಯಿಂದ 1.9 ಲಕ್ಷ ರುಪಾಯಿ ಪಾವತಿಸಬೇಕುʼʼ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಅಮೆರಿಕದ ಆರೋಗ್ಯ ವ್ಯವಸ್ಥೆಯನ್ನು ಹಣ ಎಸಗುವ ಒಂದು ದೊಡ್ಡ ಜಾಲ ಎಂದು ಆರೋಪಿಸಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ:
When I visited India a few years ago, I got my blood work done at 7am by a Healthcare worker who visited me, got the reports by 9am, doctor's appointment at 10am, followup multiple scans at 2pm, scan results came back at 3pm, followup doctor's phone appointment at 4pm, and… https://t.co/MhWIn30nHC
— JM US (@JMUSPatriot) June 13, 2026
ಇತ್ತೀಚೆಗೆ ಅಮೆರಿಕದ ಮಹಿಳೆಯೊಬ್ಬರು ಅಮೆರಿಕದಲ್ಲಿ ಸುಮಾರು 95,000 ರುಪಾಯಿ ಮೊತ್ತದ ಔಷಧ ಭಾರತದಲ್ಲಿ 2,370 ರುಪಾಯಿಗೆ ಸಿಕ್ಕಿತು ಎಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಈ ಭಾರತೀಯ ವ್ಯಕ್ತಿ ಕೂಡ ತಮ್ಮ ಅನುಭವವನ್ನು ವಿವರಿಸಿದ್ದಾರೆ.
ಭಾರತದ ಬಸ್ ಯೂರೋಪ್‌ಗಿಂತ ಬೆಸ್ಟ್ ಎಂದ ಕೆನಡಾ ವ್ಲಾಗರ್
ʼʼಕೆಲವು ವರ್ಷಗಳ ಹಿಂದೆ ನಾನು ಭಾರತಕ್ಕೆ ಭೇಟಿ ನೀಡಿದಾಗ, ಬೆಳಗ್ಗೆ 7 ಗಂಟೆಗೆ ಭೇಟಿಯಾದ ಆರೋಗ್ಯ ಕಾರ್ಯಕರ್ತರಿಂದ ನಾನು ರಕ್ತದ ಪರೀಕ್ಷೆಯನ್ನು ಮಾಡಿಸಿಕೊಂಡೆ. ಬೆಳಗ್ಗೆ 9 ಗಂಟೆಗೆ ವರದಿಗಳನ್ನು ಪಡೆದುಕೊಂಡೆ. 10 ಗಂಟೆಗೆ ವೈದ್ಯರ ಅಪಾಯಿಂಟ್‌ಮೆಂಟ್, ಮಧ್ಯಾಹ್ನ 2 ಗಂಟೆಗೆ ಸ್ಕ್ಯಾನ್‌ಗಳು, ಮಧ್ಯಾಹ್ನ 3 ಗಂಟೆಗೆ ಸ್ಕ್ಯಾನ್ ಫಲಿತಾಂಶ ಬಂತು. ಸಂಜೆ 4 ಗಂಟೆಗೆ ಫಾಲೋಅಪ್ ವೈದ್ಯರ ಫೋನ್ ಅಪಾಯಿಂಟ್‌ಮೆಂಟ್ ಮತ್ತು 5 ಗಂಟೆಗೆ ನನ್ನ ಮನೆ ಬಾಗಿಲಿಗೆ ಔಷಧ ನೀಡಲಾಯಿತು. ಇದೆಲ್ಲದಕ್ಕೂ ನನಗೆ 3,000 ರುಪಾಯಿ ವೆಚ್ಚ ಆಗಿತ್ತುʼʼ ಎಂದು ವಿವರಿಸಿದ್ದಾರೆ.
ʼʼಇದೇ ಪ್ರಕ್ರಿಯೆಯನ್ನು ಅಮೆರಿಕದಲ್ಲಿ ಮಾಡಬೇಕಾದರೆ ಹಲವು ಪಟ್ಟು ಹಣ ಪಾವತಿಸಬೇಕಿತ್ತು. ಇಷ್ಟೆಲ್ಲ ಹಣ ನೀಡಿದರೂ ಭಾರತದಲ್ಲಿ ಒಂದೇ ದಿನದಲ್ಲಿ ಮುಗಿಯುವ ಈ ಹಂತಕ್ಕೆ ಅಮೆರಿಕದಲ್ಲಿ 15 ರಿಂದ 30 ದಿನಗಳು ಕಾಯಬೇಕಾಗುತ್ತದೆʼʼ ಎಂದಿದ್ದಾರೆ.
ಸದ್ಯ ಈ ಪೋಸ್ಟ್ ವೈರಲ್ ಆಗಿದೆ. ನೆಟ್ಟಿಗರೊಬ್ಬರು, ʼʼನಿಜಕ್ಕೂ ಭಾರತದಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಮೆಚ್ಚಲೇಬೇಕುʼʼ ಎಂದು ಬರೆದಿದ್ದಾರೆ. ಮತ್ತೊಬ್ಬರು, ʼʼಇಂಗ್ಲೆಂಡ್, ದುಬೈ ಮತ್ತು ಸಿಂಗಾಪುರದಲ್ಲಿರುವ ಜನರು ವೈದ್ಯಕೀಯ ನೆರವಿಗೆ ಹೆಚ್ಚಾಗಿ ಭಾರತಕ್ಕೆ ಆಗಮಿಸುತ್ತಾರೆʼʼ ಎಂದು ಕಾಮೆಂಟ್ ಮಾಡಿದ್ದಾರೆ.