ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಭಾರತದ ಬಸ್ ಯೂರೋಪ್‌ಗಿಂತ ಬೆಸ್ಟ್ ಎಂದ ಕೆನಡಾ ವ್ಲಾಗರ್‌

ಪಶ್ಚಿಮ ಬಂಗಾಳದ ಕೋಲ್ಕತ್ತಾದಿಂದ ರಾತ್ರಿಯ ಬಸ್ ಪ್ರಯಾಣ ಮಾಡಿದ ಕೆನಡಾದ ಪ್ರವಾಸಿಗರೊಬ್ಬರು ಇಲ್ಲಿನ ವ್ಯವಸ್ಥೆಯನ್ನು ಹಾಡಿ ಹೊಗಳಿದ್ದಾರೆ. ಸ್ಲೀಪರ್ ಬಸ್‌ಗಳಲ್ಲಿ ಕೊಡುವ ವಿವಿಧ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತೀಯ ಬಸ್‌ನಲ್ಲಿ ಇರುವ ಸೌಲಭ್ಯಗಳು ಯುರೋಪಿಯನ್ ಬಸ್‌ಗಳಿಗಿಂತಲೂ ಮೇಲ್ಮಟ್ಟದಲ್ಲಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಭಾರತದಲ್ಲಿನ ಬಸ್‌ಗಳ ಸೌಕರ್ಯಕ್ಕೆ ಮನ ಸೋತ ಕೆನಡಾ ಪ್ರವಾಸಿಗ

ಕೆನಡಾ ಬ್ಲಾಗರ್ ಜಸ್ಟಿನ್ -

Profile
Pushpa Kumari Dec 13, 2025 7:42 PM

ಕೋಲ್ಕತ್ತಾ, ಡಿ. 13: ದೂರದ ಊರುಗಳಿಗೆ ಪ್ರಯಾಣ ಮಾಡುವ ಬಹುತೇಕರು ಬಸ್, ಟ್ರೈನ್ ಮೊರೆ ಹೋಗುತ್ತಾರೆ. ಅದರಲ್ಲಿಯೂ ವಿದೇಶದಿಂದ ಬಂದ ಪ್ರವಾಸಿಗರಿಗೆ ವಿವಿಧ ಸ್ಥಳಗಳಿಗೆ ತೆರಳಲು ಬಸ್ ಒಂದು ಉತ್ತಮ ಸಾರಿಗೆ ವ್ಯವಸ್ಥೆ ಎನಿಸಿಕೊಂಡಿದೆ. ಹೆಚ್ಚಾಗಿ ದೂರದ ಪ್ರಯಾಣವನ್ನು ರಾತ್ರಿ ಮಾಡಲು ಬಯಸುವವರಿಗೆ ಸ್ಲೀಪರ್ ಬಸ್‌ ಬಳಸುತ್ತಾರೆ. ಪ್ರಯಾಣಿಕರಿಗೆ ಅನುಕೂಲಕ್ಕಾಗಿ ಇಂತಹ ಸ್ಲೀಪರ್ ಬಸ್‌ನಲ್ಲಿ ಅತ್ಯುನ್ನತ ವ್ಯವಸ್ಥೆ ಇರುತ್ತದೆ. ಕೋಲ್ಕತ್ತಾದಿಂದ ರಾತ್ರಿಯ ಬಸ್ ಪ್ರಯಾಣ ಮಾಡಿದ ಕೆನಡಾ ಪ್ರವಾಸಿಗರೊಬ್ಬರು ಇಲ್ಲಿನ ಸ್ಲೀಪರ್ ಬಸ್‌ಗಳಲ್ಲಿ ಕೊಡುವ ವಿವಿಧ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಭಾರತೀಯ ಬಸ್‌ನಲ್ಲಿ ಇರುವ ಸೌಲಭ್ಯಗಳು ಯುರೋಪಿಯನ್ ಬಸ್‌ಗಳಿಗಿಂತಲೂ ಮೇಲ್ಮಟ್ಟದಲ್ಲಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಿಡಿಯೊ ಒಂದನ್ನು ಮಾಡಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಸದ್ಯ ಈ ವಿಡಿಯೊ ವೈರಲ್ (Viral Video) ಆಗಿ ನೆಟ್ಟಿಗರ ಗಮನ ಸೆಳೆಯುತ್ತಿದೆ.

ವೈರಲ್ ಆದ ವಿಡಿಯೊದಲ್ಲಿ ಕೆನಡಾ ಮೂಲದ ಜಸ್ಟಿನ್ ಎಂಬ ಹೆಸರಿನ ವ್ಲಾಗರ್‌ ಕೋಲ್ಕತ್ತಾ ಸುತ್ತಮುತ್ತಲಿನ ಸ್ಥಳಕ್ಕೆ ಭೇಟಿ ನೀಡಿ ಬಳಿಕ ಅಲ್ಲಿಂದ ರಾತ್ರಿ ಪ್ರೈವೇಟ್ ಬಸ್‌ನಲ್ಲಿ ಪ್ರಯಾಣಿಸಿದ್ದನ್ನು ಕಾಣಬಹುದು. ಭಾರತದ ಸ್ಲೀಪರ್ ಬಸ್‌ಗಳಿಗೆ ರಾತ್ರಿಯ ಪ್ರಯಾಣದ ಸಮಯದಲ್ಲಿ ನೀಡಲಾಗುವ ಸೇವೆಗಳು ಮತ್ತು ಸೌಕರ್ಯವನ್ನು ಅವರು ಮನಸಾರೆ ಮೆಚ್ಚಿಕೊಂಡಿದ್ದಾರೆ. ವಿಡಿಯೊ ಆರಂಭದಲ್ಲಿಯೇ ಅವರು ಭಾರತೀಯ ಸ್ಲೀಪರ್ ಬಸ್‌ಗಳು ಯುರೋಪಿಯನ್ ಬಸ್‌ಗಳಿಗಿಂತ ಏನೂ ಕಮ್ಮಿ ಇಲ್ಲ, ಇಲ್ಲಿರುವ ಸೇವಾ ಸೌಲಭ್ಯಗಳು ನಮ್ಮ ದೇಶದಲ್ಲಿ ಇಲ್ಲ ಎಂದು ಹೇಳಿದ್ದಾರೆ‌.

ವಿಡಿಯೊ ನೋಡಿ:

ಅನಂತರ ವಿಡಿಯೊ ಮೂಲಕವೇ ಯಾವೆಲ್ಲ ಸೌಲಭ್ಯಗಳು ಸ್ಲೀಪರ್ ಬಸ್‌ನಲ್ಲಿದೆ ಎಂದು ಅವರು ತಿಳಿಸಿ ಕೊಟ್ಟಿದ್ದಾರೆ. ರಾತ್ರಿ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರತ್ಯೇಕ ಹಾಸಿಗೆಗಳಿವೆ, ನೀರಿನ ಬಾಟಲಿಗಳಿದೆ, ಹಸಿವಾದರೆ ತಿನ್ನಲು ಸ್ನ್ಯಾಕ್ಸ್ ಇವೆ, ಅಷ್ಟು ಮಾತ್ರವಲ್ಲದೆ ಡಬಲ್ ಸೀಟ್ ಬುಕ್ ಮಾಡಿದರೂ ಪ್ರತ್ಯೇಕವಾಗಿರಲು ಮಧ್ಯ ಕರ್ಟನ್ ಇದೆ ಎಂದು ಒಂದೊಂದಾಗಿ ವಿವರಿಸುವುದನ್ನು ವಿಡಿಯೊದಲ್ಲಿ ಕಾಣಬಹುದು.

ಪಾಕಿಸ್ತಾನಿ ಮದುವೆಯಲ್ಲಿ ಧುರಂಧರ್ ಸಿನಿಮಾದ ಹವಾ; ಸಾಂಗ್‌ಗೆ ಸೆಪ್ಟ್ ಹಾಕಿದ ಯುವಕರು

ದೀರ್ಘಾವಧಿಯ ಪ್ರಯಾಣಕ್ಕೆ ಇಂತಹ ಬಸ್‌ಗಳು ಪ್ರಯಾಣಿಕರಿಗೆ ಬಹಳ ಅನುಕೂಲ ಒದಗಿಸುತ್ತವೆ. ಆದರೆ ಯುರೋಪಿಯನ್ ಬಸ್‌ಗಳು ನನ್ನನ್ನು ಈ ಮಟ್ಟಿಗೆ ಎಂದಿಗೂ ಆಕರ್ಷಿಸಿಲ್ಲ. ಅವುಗಳಲ್ಲಿ ಅಷ್ಟಾಗಿ ಸೇವೆ ಕೂಡ ಇಲ್ಲ ಎಂದು ಜಸ್ಟಿನ್ ತಮ್ಮ ವ್ಲಾಗ್‌ ಕೊನೆಯಲ್ಲಿ ಹೇಳಿದ್ದಾರೆ. ಯಾರೇ ಹೊಸ ಸ್ಥಳಕ್ಕೆ ಪ್ರವಾಸ ಹೋಗುವಾಗ ಇಂತಹ ಸೌಕರ್ಯ ಸಿಗುತ್ತದಾ ಎಂದು ಪರಿಶೀಲಿಸಿಕೊಳ್ಳಿ. ಮುಂದಿನ ಬಾರಿ ನೀವು ಕೂಡ ಭಾರತಕ್ಕೆ ಬಂದಾಗ ಕೇವಲ 15 ಡಾಲರ್ (ಸುಮಾರು 1,400 ರೂ.) ಪಾವತಿಸಿ ನೆಮ್ಮದಿಯ ಪ್ರಯಾಣ ನಿಮ್ಮದಾಗಿಸಿ ಎಂದು ಅವರು ಸಲಹೆ ನೀಡಿದ್ದಾರೆ.

ವಿಡಿಯೊ ವೈರಲ್ ಆದ ಕೆಲವೇ ಕ್ಚಣದಲ್ಲಿ ಲಕ್ಷಾಂತರ ವೀವ್ಸ್ ಪಡೆದಿದೆ. ಈ ಬಗ್ಗೆ ಬಳಕೆದಾರರು ನಾನಾತರನಾಗಿ ಕಾಮೆಂಟ್‌ ಹಾಕಿದ್ದಾರೆ‌. ಅಗ್ಗದ ಪ್ರಯಾಣವನ್ನು ಆಯ್ಕೆ ಮಾಡುವ ಬದಲು ಗುಣ ಮಟ್ಟದ ಪ್ರಯಾಣ ಆಯ್ಕೆ ಮಾಡಬೇಕು... ಎಲ್ಲ ಬಸ್ ನಲ್ಲಿ ಇದೇ ಸೌಕರ್ಯ ಇರಲು ಸಾಧ್ಯವಿಲ್ಲ ಹಾಗಾಗಿ ಮೊದಲೆ ತಿಳಿದು ಪ್ರಯಾಣಿಸಬೇಕು ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಹಾಕಿದ್ದಾರೆ. ಹಳೆಯ ಮತ್ತು ತುಕ್ಕು ಹಿಡಿದ ಬಸ್ ಬದಲಿಗೆ ಪ್ರಯಾಣಿಸಲು ಉತ್ತಮ ಬಸ್ ಅನ್ನು ಆಯ್ಕೆ ಮಾಡಿದ್ದೀರಿ, ಈ ಬಗ್ಗೆ ಭಾರತವನ್ನು ಹೊಗಳಿದ್ದೀರಿ ನಿಮಗೆ ಒಳಿತಾಗಲಿ ಎಂದು ಬಳಕೆದಾರ ರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.