ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಒಂದೇ ಫ್ರೇಮ್‍ನಲ್ಲಿ ಭಾರತದ ರಾಷ್ಟ್ರೀಯ ಪ್ರಾಣಿ-ಪಕ್ಷಿ; ಅಪರೂಪದ ವಿಡಿಯೊ ವೈರಲ್

ಸೋಶಿಯಲ್‌ ಮೀಡಿಯಾದಲ್ಲಿ ಅಪರೂಪದ ವಿಡಿಯೊವೊಂದು ವೈರಲ್ ಆಗಿದ್ದು, ನೆಟ್ಟಿಗರ ಮನಗೆದ್ದಿದೆ. ಭಾರತದ ರಾಷ್ಟ್ರೀಯ ಪ್ರಾಣಿ ಹುಲಿ ಮತ್ತು ರಾಷ್ಟ್ರೀಯ ಪಕ್ಷಿ ನವಿಲು ಕಾಡಿನ ಹಾದಿಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಒಂದೇ ಫ್ರೇಮ್‍ನಲ್ಲಿ ಸೆರೆಹಿಡಿಯಲಾಗಿದೆ. ವೈರಲ್ ವಿಡಿಯೊದಲ್ಲಿ ಹುಲಿ ಮತ್ತು ನವಿಲು ಕಾಡಿನ ಹಾದಿಯಲ್ಲಿ ಸದ್ದಿಲ್ಲದೆ ನಡೆದುಕೊಂಡು ಹೋಗುವುದನ್ನು ಕಾಣಬಹುದು.

ಒಂದೇ ಫ್ರೇಮ್‍ನಲ್ಲಿ ಭಾರತದ ರಾಷ್ಟ್ರೀಯ ಪ್ರಾಣಿ-ಪಕ್ಷಿ; ವಿಡಿಯೊ ನೋಡಿ

Priyanka P Priyanka P Aug 16, 2025 7:02 PM

ದೆಹಲಿ: 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶಾದ್ಯಂತ ಅದ್ಧೂರಿಯಾಗಿ ಕೊಂಡಾಡಲಾಗಿದೆ. ಈ ಸಂದರ್ಭದ ವಿಶೇಷ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ದೃಶ್ಯ ಆಗಿವೆ. ಇದೀಗ ವೈರಲ್ ಆಗಿರುವ ಈ ವಿಡಿಯೊದಲ್ಲಿ, ಭಾರತದ ರಾಷ್ಟ್ರೀಯ ಪ್ರಾಣಿ ಹುಲಿ (National Animal Tiger) ಮತ್ತು ರಾಷ್ಟ್ರೀಯ ಪಕ್ಷಿ ನವಿಲು (National Bird Peacock) ಕಾಡಿನ ಹಾದಿಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಒಂದೇ ಫ್ರೇಮ್‍ನಲ್ಲಿ ಸೆರೆಹಿಡಿಯಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಐಎಫ್‌ಎಸ್ ಅಧಿಕಾರಿಯೊಬ್ಬರು ಪೋಸ್ಟ್ ಮಾಡಿದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ವೈರಲ್ ವಿಡಿಯೊದಲ್ಲಿ ಹುಲಿ ಮತ್ತು ನವಿಲು ಕಾಡಿನ ಹಾದಿಯಲ್ಲಿ ಸದ್ದಿಲ್ಲದೆ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಈ ವಿಡಿಯೊವನ್ನು ರಾಕೇಶ್ ಭಟ್ ಎಂಬುವವರು ಸೆರೆ ಹಿಡಿದಿದ್ದು, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪಿ.ಎಂ. ಧಕಾಟೆ (ಐಎಫ್‌ಎಸ್) ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರು ತಮ್ಮ ಪೋಸ್ಟ್‌ನಲ್ಲಿ, “ನಮ್ಮ ರಾಷ್ಟ್ರೀಯ ಪ್ರಾಣಿ ಮತ್ತು ಪಕ್ಷಿ, ಒಂದೇ ಚೌಕಟ್ಟಿನಲ್ಲಿ ಒಟ್ಟಿಗೆ ಇರುವ ಅದ್ಭುತ ವಿಡಿಯೊವಿದು. ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು” ಎಂದು ಬರೆದಿದ್ದಾರೆ.

ವಿಡಿಯೊ ವೀಕ್ಷಿಸಿ:



ವಿಡಿಯೊಗೆ ಪ್ರತಿಕ್ರಿಯಿಸಿದ ನೆಟ್ಟಿಗರು, ಇದು ರಾಷ್ಟ್ರೀಯತೆಯ ಹಾದಿಯಲ್ಲಿ ನಡೆಯುವ ವೈವಿಧ್ಯತೆ ಎಂದು ಕಾಮೆಂಟ್ ಮಾಡಿದ್ದಾರೆ. ನವಿಲಿನ ಬಳಿ ಹುಲಿ ತುಂಬಾ ಶಾಂತವಾಗಿ ಕಾಣುತ್ತದೆ. ಭಾರತದಲ್ಲಿ ಇದನ್ನು ಎಲ್ಲಿ ಚಿತ್ರೀಕರಿಸಲಾಗಿದೆ? ಎಂದು ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ. ಎಂತಹ ಅಪರೂಪದ ಮತ್ತು ಸುಂದರವಾದ ದೃಶ್ಯ ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಒಂದೇ ಫ್ರೇಮ್‌ನಲ್ಲಿ ಹುಲಿ ಮತ್ತು ನವಿಲಿನ ಸುಂದರ ದೃಶ್ಯ ಬಹಳ ಅದ್ಭುತವಾಗಿದೆ ಎಂದು ಮಗದೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ಸ್ವಾತಂತ್ರ್ಯ ದಿನದಂದು ಆಪರೇಷನ್ ಸಿಂಧೂರ್ ಅನ್ನು ಸ್ಮರಿಸಿದ ಮರಳು ಕಲಾವಿದ

ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಭಾರತೀಯ ಮರಳು ಶಿಲ್ಪಿ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುದರ್ಶನ್ ಪಟ್ನಾಯಕ್ ತಮ್ಮ ಮರಳು ಶಿಲ್ಪದಲ್ಲಿ 'ಆಪರೇಷನ್ ಸಿಂದೂರ್' ಸ್ಮರಿಸಿದ್ದಾರೆ. ಪುರಿ ಕಡಲತೀರದಲ್ಲಿ ಈ ಮರಳಿನಾಕೃತಿಯನ್ನು ಅವರು ಮಾಡಿದ್ದಾರೆ. ಕಲಾವಿದ ತಮ್ಮ ಮರಳು ಶಿಲ್ಪದ ದೃಶ್ಯಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ಕಾರಿನಲ್ಲಿ ಕುಳಿತಿದ್ದ ನಾಯಿಯ ಕೆನ್ನೆಗೆ ಬಾರಿಸಿದ ಮುಸ್ಲಿಂ ವ್ಯಕ್ತಿ; ವಿಡಿಯೋ ನೋಡಿ