ರಾಮ, ಸೀತೆ, ಕೃಷ್ಣನಿಗೆ ಅವಮಾನ: ವಿಡಿಯೋ ತೆಗೆದುಹಾಕಲು ಧ್ರುವ ರಥೀಗೆ 15 ದಿನಗಳ ಗಡುವು
ಹಿಂದೂ ದೇವರಾದ ಶ್ರೀರಾಮ, ಸೀತೆ, ಶ್ರೀಕೃಷ್ಣ ಮಾಂಸಾಹಾರ, ಮದ್ಯ ಸೇವಿಸಿದ್ದಾರೆ ಎನ್ನುವ ವೀಡಿಯೊವನ್ನು ಯೂಟ್ಯೂಬರ್ ಧ್ರುವ ರಥೀ ಹಂಚಿಕೊಂಡಿದ್ದು, ಇದನ್ನು ತೆಗೆದು ಹಾಕಲು ನ್ಯಾಯಾಲಯ ಆದೇಶಿಸಿದೆ. ಈ ಕುರಿತು ಸಲ್ಲಿಸಲಾದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್ ಶುಕ್ರವಾರ 15 ದಿನಗಳಲ್ಲಿ ವೀಡಿಯೊ ತೆಗೆದು ಹಾಕಲು ಆದೇಶಿಸಿದೆ.
ಸಂಗ್ರಹ ಚಿತ್ರ -
ನವದೆಹಲಿ: ಕಳೆದ ಮಾರ್ಚ್ ತಿಂಗಳಲ್ಲಿ ಯೂಟ್ಯೂಬರ್ ಧ್ರುವ ರಥೀ (YouTuber Dhruv Rathee) ಹಂಚಿಕೊಂಡಿರುವ ವಿಡಿಯೋವೊಂದನ್ನು (Viral Video) 15 ದಿನಗಳ ಒಳಗೆ ತೆಗೆದು ಹಾಕುವಂತೆ ದೆಹಲಿ ಹೈಕೋರ್ಟ್ (Delhi High Court) ಆದೇಶಿಸಿದೆ. ಧ್ರುವ ರಥೀ ಹಂಚಿಕೊಂಡಿದ್ದ ವಿಡಿಯೋದಲ್ಲಿ ಹಿಂದೂ ದೇವರುಗಳಾದ (Hindu god) ಶ್ರೀರಾಮ, ಸೀತಾ ಮತ್ತು ಶ್ರೀಕೃಷ್ಣರು ಮಾಂಸ ಮತ್ತು ಮದ್ಯ ಸೇವಿಸಿದ್ದಾರೆ ಎಂದು ಹೇಳಲಾಗಿತ್ತು. ಇದಕ್ಕೆ ಸಂಬಂಧಿಸಿ ಸಾಕಷ್ಟು ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ವಕೀಲೆ ಅಮಿತಾ ಸಚ್‌ದೇವ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶವನ್ನು ನೀಡಿದೆ.
ಧ್ರುವ ರಥೀ ಅವರು ಹಿಂದೂ ದೇವರುಗಳಾದ ಶ್ರೀರಾಮ, ಸೀತಾ ಮತ್ತು ಶ್ರೀಕೃಷ್ಣ ಮಾಂಸ ಮತ್ತು ಮದ್ಯ ಸೇವಿಸಿದ್ದಾರೆ ಎಂದು ಹೇಳಿರುವ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದು ಇದನ್ನು 15 ದಿನಗಳಲ್ಲಿ ತೆಗೆದು ಹಾಕುವಂತೆ ದೆಹಲಿ ಹೈಕೋರ್ಟ್ ಶುಕ್ರವಾರ ಸರ್ಕಾರದ ಕುಂದುಕೊರತೆ ಮೇಲ್ಮನವಿ ಸಮಿತಿ (ಜಿಎಸಿ)ಗೆ ನಿರ್ದೇಶನ ನೀಡಿದೆ.
ರಸ್ತೆ ಮಧ್ಯೆ ನೀರಿನಿಂದ ತುಂಬಿಹೋಗಿದ್ದ ಗುಂಡಿಗೆ ಬಿದ್ದ ಬೈಕ್; ದಂಪತಿಗೆ ಗಂಭೀರ ಗಾಯ!
ಆನ್‌ಲೈನ್ ವಿಷಯ ಅಥವಾ ಖಾತೆಗಳಿಗೆ ಸಂಬಂಧಿಸಿದ ದೂರುಗಳ ಕುರಿತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ತೆಗೆದುಕೊಳ್ಳುವ ನಿರ್ಧಾರಗಳ ವಿರುದ್ಧದ ಮೇಲ್ಮನವಿಗಳನ್ನು ಪರಿಶೀಲನೆ ನಡೆಸುವ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕುಂದುಕೊರತೆ ಮೇಲ್ಮನವಿ ಸಮಿತಿಯು ತನ್ನ ಆದೇಶವನ್ನು ಪಾಲಿಸದೇ ಇದ್ದರೆ ಇದನ್ನು ಗಂಭೀರವಾಗಿ ಪರಿಗಣಿಸುವುದಾಗಿ ನ್ಯಾಯಾಲಯ ಎಚ್ಚರಿಕೆಯನ್ನು ನೀಡಿದೆ.
ಪ್ರಕರಣದ ವಿಚಾರಣೆ ವೇಳೆ ಕೇಂದ್ರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಚೇತನ್ ಶರ್ಮಾ ಅವರು ಯೂಟ್ಯೂಬ್ ಎಚ್ಚರಿಕೆಯನ್ನು ವಹಿಸಬೇಕು. ಆಕ್ಷೇಪಾರ್ಹ ಮತ್ತು ದ್ವೇಷ ಪ್ರಚೋದಕ ವಿಷಯವನ್ನು ತಕ್ಷಣವೇ ತೆಗೆದುಹಾಕಬೇಕಾಗಿತ್ತು ಎಂದು ವಾದಿಸಿದರು.
32.4 ಮಿಲಿಯನ್ ಚಂದಾದಾರರನ್ನು ಹೊಂದಿರುವ ಜನಪ್ರಿಯ ಯೂಟ್ಯೂಬರ್ ರಥೀ ಅವರು 'ಹಿಂದೂಗಳು ಗೋಮಾಂಸ ತಿನ್ನಬಹುದೇ? ಕೇರಳ ಕಥೆ 2 ಬಹಿರಂಗಪಡಿಸಲಾಗಿದೆ' ಎಂಬ ಶೀರ್ಷಿಕೆಯ ವೀಡಿಯೊದಲ್ಲಿ ಶ್ರೀರಾಮ, ಸೀತೆ ಮತ್ತು ಶ್ರೀಕೃಷ್ಣ ಮಾಂಸ ಮತ್ತು ಮದ್ಯ ಸೇವಿಸಿದ್ದಾರೆ ಎಂದು ಹೇಳಿದ್ದರು.
ಜರ್ಮನಿಯಲ್ಲಿ 10 ವರ್ಷ ಕಳೆದು ಭಾರತಕ್ಕೆ ಮರಳಿದ ಕುಟುಂಬ: ಈ ನಡೆಗೆ ಕಾರಣ ಏನೆಂದು ಸತ್ಯ ಬಿಚ್ಚಿಟ್ಟ ವ್ಯಕ್ತಿ!
ಈ ಕುರಿತು ಚೇತನ್ ಶರ್ಮಾ ಅವರು ಗೂಗಲ್ ಇಂತಹ ವಿಷಯವನ್ನು ತೆಗೆದುಹಾಕಲು, ಸಾಮಾಜಿಕ ಭಿನ್ನಾಭಿಪ್ರಾಯವನ್ನು ಸೃಷ್ಟಿಸುವ ಮತ್ತು ಬಹುಸಂಖ್ಯಾತ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡುವ ವಿಷಯವನ್ನು ವೇದಿಕೆಯಲ್ಲಿ ಅನುಮತಿಸದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಇದಕ್ಕೆ ಸಂಬಂಧಿಸಿ ಗೂಗಲ್‌ನ ವಕೀಲರು ಈಗಾಗಲೇ ಹೈಕೋರ್ಟ್‌ಗೆ ಕಂಪೆನಿಯ ಪ್ರತಿಕ್ರಿಯೆಯನ್ನು ನೀಡಿದೆ ಎಂದು ತಿಳಿಸಿದರು.