ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಡೆಂಗ್ಯೂ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗೆ ಪ್ಲೇಟ್‌ಲೆಟ್ ಕೌಂಟ್ ಆಧರಿಸಿ ಇನ್ಶೂರೆನ್ಸ್ ಕ್ಲೇಮ್ ತಿರಸ್ಕರಿಸಿದ ವಿಮೆ ಸಂಸ್ಥೆ

Viral News: ಇಲ್ಲೊಬ್ಬರು ​ಡೆಂಗ್ಯೂ ಜ್ವರದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದು ಬಹಳ ದಿನದವರೆಗೆ ಆಡ್ಮಿಟ್ ಆಗಿದ್ದರು. ಹೆಲ್ತ್ ಇನ್ಶೂರೆನ್ಸ್ ಕ್ಲೇಮ್ ಆಗಬಹುದು ಎನ್ನುವ ನಂಬಿಕೆಯೂ ಇವರಲ್ಲಿತ್ತು. ಆದರೆ ಡಿಸ್‌ಚಾರ್ಚ್‌ ಆಗುವ ಕೊನೆಯ ಕ್ಷಣದಲ್ಲಿ, ಅವರ ಹೆಲ್ತ್ ಇನ್ಶೂರೆನ್ಸ್ ಕ್ಲೇಮ್ ಅನ್ನು ವಿಮೆ ಕಂಪನಿ ತಿರಸ್ಕರಿಸಿದೆ. ಈ ಘಟನೆ ಆರೋಗ್ಯ ವಿಮಾ ರಕ್ಷಣೆಯ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

ರೋಗಿಯ ಇನ್ಶೂರೆನ್ಸ್ ಕ್ಲೇಮ್ ರಿಜೆಕ್ಟ್ ಮಾಡಿದ ವಿಮೆ ಸಂಸ್ಥೆ: ಕಾರಣವೇನು?

ಇನ್ಶೂರೆನ್ಸ್ ಕ್ಲೇಮ್ ರಿಜೆಕ್ಟ್ ಮಾಡಿದ ವಿಮೆ ಸಂಸ್ಥೆಯ ಬಗ್ಗೆ ವಿವರಿಸಿದ ಚಿರಾಗ್ ಕೊಠಾರಿ -

Profile
Pushpa Kumari Sep 6, 2026 5:43 PM

ನವದೆಹಲಿ, ಸೆ. 6: ಆರೋಗ್ಯದ ದೃಷ್ಟಿಯಿಂದ ಹೆಚ್ಚಿನ ಜನರು ಇಂದು ಹೆಲ್ತ್‌ ಇನ್ಶೂರೆನ್ಸ್‌ಗೆ ಆದ್ಯತೆ ನೀಡುತ್ತಾರೆ. ಏನೇ ಎಮರ್ಜೆನ್ಸಿ ಇದ್ದರೂ ಕೊನೆ ಕ್ಷಣದಲ್ಲಿ ಈ ವಿಮೆಯ ಸಹಾಯವಾದರೂ ಪಡೆಯಬಹುದು ಎನ್ನುವ ಯೋಚನೆ ಹಲವರಲ್ಲಿದೆ. ಆದರೆ ಇಲ್ಲೊಬ್ಬರು ​ಡೆಂಗ್ಯೂ ಜ್ವರದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದು ಬಹಳ ದಿನದವರೆಗೆ ಆಡ್ಮಿಟ್ ಆಗಿದ್ದರು. ಹೆಲ್ತ್ ಇನ್ಶೂರೆನ್ಸ್ ಕ್ಲೇಮ್ ಆಗಬಹುದು ಎನ್ನುವ ನಂಬಿಕೆಯೂ ಇವರಲ್ಲಿತ್ತು. ಆದರೆ ಡಿಸ್‌ಚಾರ್ಜ್‌ ಆಗುವ ಕೊನೆಯ ಕ್ಷಣದಲ್ಲಿ ಅವರ ಹೆಲ್ತ್ ಇನ್ಶೂರೆನ್ಸ್ ಕ್ಲೇಮ್ ಅನ್ನು ವಿಮೆ ಕಂಪನಿ ತಿರಸ್ಕರಿಸಿದೆ. ಈ ಘಟನೆ ಆರೋಗ್ಯ ವಿಮಾ ರಕ್ಷಣೆಯ ಕುರಿತು ಸೋಷಿಯಲ್ ಮೀಡಿಯಾದಲ್ಲಿ (Viral News) ಚರ್ಚೆಗೆ ಕಾರಣವಾಗಿದೆ.

ಚಿರಾಗ್ ಕೊಠಾರಿ ಆಸ್ಪತ್ರೆಯಲ್ಲಿ ಡೆಂಗ್ಯೂ ಕಾರಣದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಗುಣಮುಖರಾಗಿ ಡಿಸ್‌ಚಾರ್ಜ್‌ ಆಗುವ ಸಮಯದಲ್ಲಿ ಅವರ ವೈದ್ಯಕೀಯ ಕ್ಲೇಮ್ ತಿರಸ್ಕರಿಸಲ್ಪಟ್ಟಿದೆ. ಅವರು ಇನ್ಶೂರೆನ್ಸ್ ಕಂಪನಿಯನ್ನು ಸಂಪರ್ಕಿಸಿದಾಗ "ನಿಮ್ಮ ರಕ್ತದಲ್ಲಿ ಪ್ಲೇಟ್‌ಲೆಟ್ ಸಂಖ್ಯೆ ಸುಮಾರು 1 ಲಕ್ಷ ಇದೆ. ಪ್ಲೇಟ್‌ಲೆಟ್ ಸಂಖ್ಯೆ 70,000ಕ್ಕಿಂತ ಕಡಿಮೆಯಾಗದ ಹೊರತು ಆಸ್ಪತ್ರೆಗೆ ದಾಖಲಾಗುವಷ್ಟು ಗಂಭೀರವಲ್ಲ" ಎಂದು ಕಾರಣ ನೀಡಿದೆ.

ವಿಡಿಯೊ ನೋಡಿ:

ಈ ಬಗ್ಗೆ ಹತಾಶೆಯನ್ನು ವ್ಯಕ್ತಪಡಿಸಿದ ಚಿರಾಗ್ ಕೊಠಾರಿ, ʼʼʼಸಮಯಕ್ಕೆ ಸರಿಯಾಗಿ ಆರೋಗ್ಯ ವಿಮಾ ಕಂತನ್ನು ಪಾವತಿ ಮಾಡಿದ್ದೇನೆ‌. ನಾನೀಗ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿ ಹೊರಡುವ ಹಂತದಲ್ಲಿದ್ದೆ. ಆದರೆ ನನ್ನ ವೈದ್ಯಕೀಯ ಕ್ಲೇಮ್ ತಿರಸ್ಕರಿಸಲ್ಪಟ್ಟಿದೆ ಎಂದು ಹೇಳುತ್ತಿದ್ದಾರೆ. ಕೊನೆ ಕ್ಷಣದಲ್ಲಿ ಕ್ಲೇಮ್ ರಿಜೆಕ್ಟ್ ಮಾಡುತ್ತಿರುವುದು ಸಾರ್ವಜನಿಕರಿಗೆ ಮಾಡುವ ಮೋಸʼʼ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಸರ್ಕಾರಿ ವಾಹನ ದುರುಪಯೋಗ ಪಡಿಸಿಕೊಂಡ ಸಬ್ ಇನ್ಸ್‌ಪೆಕ್ಟರ್‌ ವಿರುದ್ಧ ಕ್ರಮ

ಈ ಘಟನೆಯು ವೈರಲ್ ಆದ ಬಳಿಕ ಹಲವು ಬಳಕೆದಾರರು ಆರೋಗ್ಯ ವಿಮಾ ಕ್ಲೈಮ್‌ಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಒಬ್ಬರು, ʼʼವಿಮಾ ಕಂಪನಿಯಿಂದ ಯಾವಾಗಲೂ ನಿರಾಶೆಯಾಗುತ್ತದೆ. ಕೊನೆಯ ಕ್ಷಣದಲ್ಲಿ ನಮ್ಮ ಕ್ಲೈಮ್ ಅನ್ನು ತಿರಸ್ಕರಿಸಲು ಇಷ್ಟೊಂದು ಹಣವನ್ನು ಪಾವತಿಸಬೇಕೆ?ʼʼ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, ʼʼ​ಖಾಸಗಿ ಇನ್ಶೂರೆನ್ಸ್ ಕಂಪನಿಗಳು ಪಾಲಿಸಿ ಮಾರಾಟ ಮಾಡುವಾಗ ಹಲವು ಆಫರ್ ನೀಡುತ್ತವೆ. ಆದರೆ ಅಗತ್ಯವಿದ್ದಾಗ ಹಣ ನೀಡಲು ಹಿಂಜರಿಯುತ್ತವೆʼʼ ಎಂದು ಬರೆದುಕೊಂಡಿದ್ದಾರೆ.

ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ, ಸಂಬಂಧಪಟ್ಟ ಹೆಲ್ತ್ ಇನ್ಶೂರೆನ್ಸ್ ಕಂಪನಿ ಈ ಬಗ್ಗೆ ಸ್ಪಂದಿಸಿದೆ. ಪಾಲಿಸಿ ಹಾಗೂ ಕ್ಲೇಮ್ ಸಂಖ್ಯೆಯನ್ನು ಡೈರೆಕ್ಟ್ ಮೆಸೇಜ್ ಮೂಲಕ ಕಳುಹಿಸಿ. ನಿಮ್ಮ ಪ್ರಕರಣವನ್ನು ಪರಿಶೀಲನೆ ಮಾಡುತ್ತೇವೆ ಎಂದು ತಿಳಿಸಿದೆ.