ಐಫೋನ್ 18 ಪ್ರೊ ಹಾಗೂ ಪ್ರೊ ಮ್ಯಾಕ್ಸ್‌ಗೆ ಭಾರತದಲ್ಲಿ ಭಾರೀ ಕ್ರೇಜ್: ಆ್ಯಪಲ್ ಸ್ಟೋರ್‌ಗಳ ಮುಂದೆ ಖರೀದಿಗೆ ಮುಗಿಬಿದ್ದ ಗ್ರಾಹಕರು!
Viral News: ಐಫೋನ್ 18 ಪ್ರೊ ಹಾಗೂ ಪ್ರೊ ಮ್ಯಾಕ್ಸ್ ಖರೀದಿಸುವ ಬಗ್ಗೆ ಭಾರತೀಯ ಗ್ರಾಹಕರಲ್ಲಿ ಅಪಾರ ಉತ್ಸಾಹವಿದೆ. ಈ ಮೊಬೈಲ್‌ಗಳು ಇಂದು ಮಾರಾಟಕ್ಕೆ ಲಭ್ಯವಿದ್ದು ಇದೀಗ ಮೊಬೈಲ್ ಖರೀದಿ ಮಾಡಲು ದೆಹಲಿ, ನೋಯ್ಡಾ, ಮುಂಬೈ ಮತ್ತು ಬೆಂಗಳೂರಿನಲ್ಲಿರುವ ಆ್ಯಪಲ್ ಮಳಿಗೆಗಳ ಹೊರಗೆ ಗ್ರಾಹಕರು ಸಾಲುಗಟ್ಟಿ ನಿಂತಿರುವ ವಿಡಿಯೊವೊಂದು ವೈರಲ್ ಆಗುತ್ತಿದೆ.
ಇಂಟರ್ ನೆಟ್ ಚಿತ್ರ -
ಬೆಂಗಳೂರು,ಸೆ.18: ಆ್ಯಪಲ್ ಸಂಸ್ಥೆಯೂ ಇತ್ತೀಚೆಗೆ ಹೊಸ ಸರಣಿಯನ್ನು ಬಿಡುಗಡೆ ಮಾಡಿದೆ. ಐಫೋನ್ 18 ಪ್ರೊ ಹಾಗೂ ಪ್ರೊ ಮ್ಯಾಕ್ಸ್ ಖರೀದಿಸುವ ಬಗ್ಗೆ ಭಾರತೀಯ ಗ್ರಾಹಕರಲ್ಲಿ ಅಪಾರ ಉತ್ಸಾಹವಿದೆ. ಈ ಮೊಬೈಲ್‌ಗಳು ಇಂದು ಮಾರಾಟಕ್ಕೆ ಲಭ್ಯವಿದ್ದು ಇದೀಗ ಮೊಬೈಲ್ ಖರೀದಿ ಮಾಡಲು ದೆಹಲಿ, ನೋಯ್ಡಾ, ಮುಂಬೈ ಮತ್ತು ಬೆಂಗಳೂರಿನಲ್ಲಿರುವ ಆಪಲ್ ಮಳಿಗೆಗಳ ಹೊರಗೆ ಗ್ರಾಹಕರು ಸಾಲುಗಟ್ಟಿ ನಿಂತಿರುವ ವಿಡಿಯೊವೊಂದು ವೈರಲ್ (Viral News) ಆಗುತ್ತಿದೆ.
ಅನೇಕ ಗ್ರಾಹಕರು ಈಗಾಗಲೇ ಫೋನ್‌ಗಳನ್ನು ಮೊದಲೇ ಬುಕ್ ಮಾಡಿದ್ದು ತಮ್ಮ ಹೊಸ ಡಿವೈಸ್‌ಗಳನ್ನು ತೆಗೆದುಕೊಳ್ಳಲು ಶಾಪ್ ಗೆ ಆಗಮಿಸುತ್ತಿದ್ದಾರೆ. ಹೊಸ iPhone 18 Pro ಮತ್ತು Pro Max ನ ಮಾರಾಟವು ಶುಕ್ರವಾರ ಬೆಳಿಗ್ಗೆ ಇಂದು 8:00 ಗಂಟೆಗೆ ಮಳಿಗೆಗಳಲ್ಲಿನ ನೇರ ಖರೀದಿ ಮತ್ತು ಮುಂಗಡ ಬುಕ್ಕಿಂಗ್ ವಿತರಣೆ ಪ್ರಾರಂಭವಾಗಿದೆ.
ವಿಡಿಯೋ ನೋಡಿ:
#WATCH | Noida, UP: Apple begins the official sale of the iPhone 18 Pro and iPhone 18 Pro Max in India. Customers throng the Apple Store at DLF Mall to get their hands on the latest devices. pic.twitter.com/EYQhM6ufXN
— ANI (@ANI) September 18, 2026
ಗ್ರಾಹಕರಲ್ಲಿ ಈ ಖರೀದಿಯ ಕ್ರೇಜ್ ಹೆಚ್ಚಾಗಿದ್ದು ಫೋನ್ ಕೊಳ್ಳಲು ದೆಹಲಿ, ನೋಯ್ಡಾ, ಗುರು ಗ್ರಾಮ್, ಮುಂಬೈ, ಬೆಂಗಳೂರು ಸೇರಿದಂತೆ ಹಲವು ಮಹಾನಗರಗಳ ಆ್ಯಪಲ್ ಸ್ಟೋರ್‌ಗಳ ಮುಂದೆ ಗ್ರಾಹಕರು ಬೆಳಗಿನ ಜಾವದಿಂದಲೇ ಕಾಯುತ್ತಿರುವ ದೃಶ್ಯ ಕಂಡು ಬಂದಿದೆ. ಕೆಲವರು ಫೋನ್ ಖರೀದಿ ಮಾಡಲು ಬೇರೆ ರಾಜ್ಯಗಳಿಂದಲೂ ಪ್ರಯಾಣಿಸಿ ಬಂದಿದ್ದರು. ಪಂಜಾಬ್‌ನ ಗ್ರಾಹಕರೊಬ್ಬರು ಬೆಳಿಗ್ಗೆ 6 ಗಂಟೆಯಿಂದಲೇ ನೋಯ್ಡಾದ ಆ್ಯಪಲ್ ಸ್ಟೋರ್ ಬಳಿ ಕಾದು ಕ್ಯೂನಲ್ಲಿ ನಿಂತು ಮೊದಲ ಫೋನ್ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.
Viral Video: ಮರೆಯಾದ ಮಾನವೀಯತೆ; ನೇಪಾಳ ಪ್ರವಾಹದಲ್ಲಿ ಮೃತಪಟ್ಟ ಮಹಿಳೆಯ ಚಿನ್ನದ ಓಲೆ ಕದ್ದ ಕಿಡೀಗೆಡಿಗಳು!
ನಾನು ಎರಡು iPhone 18 Pro Max ಫೋನ್‌ಗಳನ್ನು ಖರೀದಿಸಿದೆ. ಪಂಜಾಬ್‌ನಿಂದ ಬಂದಿದ್ದು ಬೆಳಿಗ್ಗೆ 6 ಗಂಟೆಯಿಂದ ಸಾಲಿನಲ್ಲಿ ನಿಂತಿದ್ದೇನೆ. ನನ್ನದೇ ಮೊದಲ ಬುಕಿಂಗ್ ಆಗಿತ್ತು. ಫೋನ್ ಪಡೆದವರಲ್ಲಿ ನಾನೇ ಮೊದಲಿಗ, ಈ ಸಾಧನವನ್ನು ಖರೀದಿಸಲೆಂದೇ ವಿಶೇಷವಾಗಿ ಬಂದಿದ್ದಾಗಿ ಅವರು ತಿಳಿಸಿದ್ದಾರೆ. ಸದ್ಯ ಐಫೋನ್ ಕ್ರೇಜ್ ಮಾರುಕಟ್ಟೆಯಲ್ಲಿ ಭಾರೀ ಹವಾ ಸೃಷ್ಟಿ ಮಾಡಿದೆ.