ಸ್ವಿಗ್ಗಿ ಡೆಲಿವರಿ ಬಾಯ್‌ಯಿಂದ ಯಶಸ್ವಿ ಉದ್ಯಮಿ: ಗೆಳೆಯರ ಅಪಹಾಸ್ಯದಿಂದ ಮುಖ ಮುಚ್ಚಿಕೊಳ್ಳುತ್ತಿದ್ದ ಕೌಶಿಕ್ ಖಾರ್ವಿ ಹೇಳಿದ್ದೇನು?
Viral News: ಶ್ರಮ ಪಟ್ಟರೆ ಯಶಸ್ಸು ಅನ್ನೋದು ಸಿಕ್ಕೇ ಸಿಗುತ್ತದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಯಾರಾದರೂ ಅಪಹಾಸ್ಯ ಮಾಡುತ್ತಾರೆ ಎನ್ನುವ ಕಾರಣಕ್ಕೆ ಮುಖ ಮುಚ್ಚಿಕೊಂಡು ಸ್ವಿಗ್ಗಿ ಡೆಲಿವರಿ ಮಾಡುತ್ತಿದ್ದ ಬೆಂಗಳೂರಿನ ವ್ಯಕ್ತಿ ಇಂದು ಯಶಸ್ವಿ ಸೀಫುಡ್ ಉದ್ಯಮಿಯಾಗಿ ಹೊರ ಹೊಮ್ಮಿದ್ದಾರೆ.
ಸ್ವಿಗ್ಗಿ ಡೆಲಿವರಿ ಬಾಯ್‌ನಿಂದ ಉದ್ಯಮಿಯಾದ ಕೌಶಿಕ್ ಖಾರ್ವಿ -
ಬೆಂಗಳೂರು, ಸೆ. 25: ಶ್ರಮ ಪಟ್ಟರೆ ಯಶಸ್ಸು ಅನ್ನೋದು ಸಿಕ್ಕೇ ಸಿಗುತ್ತದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಯಾರಾದರೂ ಅಪಹಾಸ್ಯ ಮಾಡುತ್ತಾರೆ ಎನ್ನುವ ಕಾರಣಕ್ಕೆ ಮುಖ ಮುಚ್ಚಿಕೊಂಡು ಸ್ವಿಗ್ಗಿ ಡೆಲಿವರಿ ಮಾಡುತ್ತಿದ್ದ ಬೆಂಗಳೂರಿನ ವ್ಯಕ್ತಿಯೊಬ್ಬರು ಇಂದು ಯಶಸ್ವಿ ಸೀಫುಡ್ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಅವರು ಯಾರು ಎನ್ನುವ ಕುತೂಹಲ ನಿಮಗೆ ಇರಬಹುದು. ಅವರೇ ಯಶಸ್ವಿ ಉದ್ಯಮಿ ಕೌಶಿಕ್ ಖಾರ್ವಿ. ಇವರ ಸ್ಪೂರ್ತಿ ದಾಯಕ ಕಥೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ.
9 ವರ್ಷಗಳ ಹಿಂದೆ ಕಷ್ಟದ ದಿನಗಳಲ್ಲಿ ಕೌಶಿಕ್ ಸ್ವಿಗ್ಗಿ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡಿದ್ದರು. ಆ ದಿನಗಳಲ್ಲಿ ಹಣ ಗಳಿಸುವುದಕ್ಕಿಂತಲೂ ಹೆಚ್ಚಾಗಿ ಗೆಳೆಯರು ತನ್ನನ್ನು ಡೆಲಿವರಿ ಬಾಯ್ ಎಂದು ಕೀಳಾಗಿ ಕಾಣಬಹುದು ಎಂಬ ಭಯವೇ ಹೆಚ್ಚಾಗಿ ಕಾಡುತ್ತಿತ್ತು ಎಂದು ಹೇಳಿಕೊಂಡಿದ್ದು, ಅವರ ಈ ಯಶಸ್ಸಿನ ಪಯಣವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೊ ನೋಡಿ:
ಅವರಿಗೆ ಡೆಲಿವರಿ ಮಾಡುವುದು ಅಥವಾ ದೀರ್ಘಕಾಲ ಕೆಲಸ ಮಾಡುವುದು ಕಷ್ಟದ ವಿಷಯವಾಗಿರಲಿಲ್ಲ. ಬದಲಾಗಿ, ಈ ಕೆಲಸ ಮಾಡುತ್ತಿರುವುದನ್ನು ನೋಡಿದರೆ ಸ್ನೇಹಿತರು ಏನಂದುಕೊಳ್ಳುತ್ತಾರೆ ಎಂಬ ಬಗ್ಗೆಯೇ ಅವರು ಹೆಚ್ಚು ಚಿಂತಿತರಾಗಿದ್ದರು. ಬೆಂಗಳೂರಿನ ಪ್ರಸಿದ್ಧ ಸೀಫುಡ್ ಹೋಟೆಲ್‌ಗಳ ಮುಂದೆ ಆರ್ಡರ್‌ಗಾಗಿ ಕಾಯುತ್ತಿದ್ದ ಕೌಶಿಕ್, ಇಂದು ತಾವೇ ಸ್ವತಃ ಮಂಗಳೂರು ಶೈಲಿಯ ಖ್ಯಾತ ಸೀಫುಡ್ ಉದ್ಯಮವನ್ನು ಕಟ್ಟಿದ್ದಾರೆ.
20 ಅಡಿ ಎತ್ತರದ ಫ್ಲೈಓವರ್ ನಡುವೆ ಸಿಲುಕಿದ ಕಾರ್! ಚಾಲಕ ಪಾರು
ಸೀಫುಡ್ ಉದ್ಯಮಕ್ಕೆ ಸಂಬಂಧಿಸಿದ ಸಲಹೆಗಾರರಾಗಿಯೂ ಕೆಲಸ ಮಾಡುತ್ತಿದ್ದಾರೆ. "ನನ್ನ ಕಷ್ಟದ ದಿನಗಳಲ್ಲಿ ಅವಕಾಶ ನೀಡಿದ ಸ್ವಿಗ್ಗಿಗೆ ನಾನು ಸದಾ ಋಣಿ" ಎಂದು ಹೇಳಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಕೌಶಿಕ್ ಅವರ ಶ್ರಮವನ್ನು ಮೆಚ್ಚಿಕೊಂಡಿದ್ದಾರೆ.