Viral Video: 15 ಸಾವಿರಕ್ಕೂ ಹೆಚ್ಚು ರಾಖಿ ಕಟ್ಟಿಸಿಕೊಂಡ ಪಾಟ್ನಾದ ಖಾನ್ ಸರ್
ಪಾಟ್ನಾದ ಖಾನ್ ಸರ್ ಕೇವಲ ಶಿಕ್ಷಕನಲ್ಲ. ಸಾವಿರಾರು ವಿದ್ಯಾರ್ಥಿನಿಯರ ಪಾಲಿನ ಸಹೋದರ. ಪ್ರತಿ ವರ್ಷದಂತೆ ಈ ಬಾರಿಯೂ ಇವರಿಗೆ ಸಾವಿರಾರು ವಿದ್ಯಾರ್ಥಿಗಳು ದೂರದ ಊರುಗಳಿಂದ ಬಂದು ರಾಖಿಯನ್ನು ಕಟ್ಟಿದರು. ಇದರ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಅವರು ಹಂಚಿಕೊಂಡಿದ್ದಾರೆ. ಇದು ಲಕ್ಷಾಂತರ ಮೆಚ್ಚುಗೆಯನ್ನೂ ಪಡೆದಿದೆ.


ಪಾಟ್ನಾ: ಪ್ರತಿ ವರ್ಷದಂತೆ ಈ ಬಾರಿಯೂ ಪಾಟ್ನಾದ (Patna) ಖಾನ್ ಸರ್ (Patna khan sir) ಅವರಿಗೆ 15 ಸಾವಿರಕ್ಕೂ ಹೆಚ್ಚು ರಾಖಿಗಳು (Rakhi) ಬಂದಿದ್ದವು. ಸಾಮಾಜಿಕ ಮಾಧ್ಯಮದ (Viral Video) ಮೂಲಕ ಸಾವಿರಾರು ವಿದ್ಯಾರ್ಥಿಗಳಿಂದ ರಕ್ಷಾ ಬಂಧನ (Raksha bandhan) ಕಟ್ಟಿಸಿಕೊಂಡು ಎಲ್ಲರ ಗಮನ ಸೆಳೆಯುವ ಖಾನ್ ಸರ್ ಅವರಿಗೆ ಈ ಬಾರಿ ರಕ್ಷಾ ಬಂಧನ ದಿನವಾದ ಶನಿವಾರ 15 ಸಾವಿರಕ್ಕೂ ಹೆಚ್ಚು ಯುವತಿಯರು ರಾಖಿಯನ್ನು ಕಟ್ಟಿದರು. ಇವರ ಈ ಹೃದಯಸ್ಪರ್ಶಿ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 24 ಗಂಟೆಗಳಲ್ಲಿ 8 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.
ಪಾಟ್ನಾದ ಜನಪ್ರಿಯ ಆನ್‌ಲೈನ್ ಬೋಧಕರಾದ ಖಾನ್ ಸರ್ ಅವರಿಗೆ ಎಂದಿನಂತೆ ಈ ಬಾರಿಯ ರಕ್ಷಾ ಬಂಧನವೂ ವಿಶೇಷವಾಗಿತ್ತು. ಅವರು ತಮ್ಮ ವಿದ್ಯಾರ್ಥಿಗಳೊಂದಿಗೆ ರಕ್ಷಾ ಬಂಧನ ಅತ್ಯಂತ ಸಂಭ್ರಮದಿಂದ ಆಚರಿಸಿಕೊಂಡರು. ಆಗಸ್ಟ್ 9 ರಂದು ಇನ್‌ಸ್ಟಾಗ್ರಾಮ್ ಹಂಚಿಕೊಂಡಿರುವ ವಿಡಿಯೊದಲ್ಲಿ ಅವರು ತಮ್ಮ ವಿದ್ಯಾರ್ಥಿಗಳು ಮತ್ತು ಅವರ ನಡುವಿನ ಬಲವಾದ ಬಾಂಧವ್ಯವನ್ನು ಪ್ರದರ್ಶಿಸಿದೆ. ತಮಗೆ ರಾಖಿ ಕಟ್ಟಲು ಬಂದಿದ್ದ ಅಪಾರ ವಿದ್ಯಾರ್ಥಿಗಳನ್ನು ಅವರು ವಿಡಿಯೊದಲ್ಲಿ ತೋರಿಸಿದ್ದಾರೆ.
ಖಾನ್ ಸರ್ ಅವರಿಗೆ ಈ ಬಾರಿ 15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಖಿಗಳನ್ನು ಕಟ್ಟಿದರು. ಅವರ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, 24 ಗಂಟೆಗಳಲ್ಲಿ 8 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಯನ್ನು ಗಳಿಸಿದೆ.
ಈ ವಿಡಿಯೊದಲ್ಲಿ ಖಾನ್ ಸರ್ ತಮ್ಮ ವಿದ್ಯಾರ್ಥಿಗಳನ್ನು ಸಹೋದರಿಯರಂತೆ ಪರಿಗಣಿಸುವುದಾಗಿ ಹೇಳಿದ್ದಾರೆ. ಅಲ್ಲದೇ ಅವರ ಪ್ರೀತಿ ರಕ್ತ ಸಂಬಂಧಗಳನ್ನು ಮೀರಿದ್ದು. ಇದು ಸೌಹಾರ್ದತೆಯ ನಿಜವಾದ ರೂಪ ಎಂದು ಹೇಳಿದ್ದಾರೆ. ಇವತ್ತು 15,000 ಕ್ಕೂ ಹೆಚ್ಚು ಮಂದಿ ನನಗೆ ರಾಖಿಯನ್ನು ಕಟ್ಟಿದ್ದಾರೆ. ಇದು ತುಂಬಾ ಭಾರವಾಗಿದ್ದು, ನಾನು ನನ್ನ ಕೈ ಎತ್ತಲು ಸಹ ಸಾಧ್ಯವಾಗುತ್ತಿಲ್ಲ. ಇಂದಿನ ಯುಗದಲ್ಲಿ ಇಂತಹ ಅನುಭವ ಪಡೆಯಲು ಸಿಕ್ಕಿರುವುದರಿಂದ ನಾನು ತುಂಬಾ ಅದೃಷ್ಟಶಾಲಿ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Namma Metro: ಮೆಟ್ರೋಗೆ ರಾಜ್ಯ ಸರ್ಕಾರ ಶೇ. 87.37 ಹಣ ನೀಡುತ್ತಿದೆ, ಕೇಂದ್ರದ ಪಾಲು ಶೇ.12.63 ಮಾತ್ರ: ಸಿಎಂ
ಖಾನ್ ಸರ್ ತಮ್ಮ ವಿದ್ಯಾರ್ಥಿಗಳಿಗೆ ಶಿಕ್ಷಕರಾಗಿ ಮಾತ್ರವಲ್ಲ ಶೈಕ್ಷಣಿಕವಾಗಿಯೂ ವಿದ್ಯಾರ್ಥಿಗಳಿಗೆ ಸಾಕಷ್ಟು ಬೆಂಬಲ, ಮಾರ್ಗದರ್ಶನವನ್ನು ನೀಡುತ್ತಿದ್ದಾರೆ. ಹೀಗಾಗಿಯೇ ಹೆಚ್ಚಿನ ವಿದ್ಯಾರ್ಥಿಗಳು ಜಾತಿ, ಧರ್ಮವನ್ನು ಬದಿಗಿಟ್ಟು ದೂರದೂರಿನಿಂದಲೂ ಅವರಿಗೆ ರಾಖಿ ಕಟ್ಟಲು ಬರುತ್ತಾರೆ.