ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಈ ಐಸ್‍ಕ್ರೀಂ ಕೋನ್‍ನಲ್ಲಿ ಹಲ್ಲಿಯ ಬಾಲ ಪತ್ತೆ; ವಿಡಿಯೊ ವೈರಲ್

ಅಹಮದಾಬಾದ್‌ನ ಮಣಿನಗರ ಪ್ರದೇಶದ ಮಹಿಳೆಯೊಬ್ಬಳು ಐಸ್ ಕ್ರೀಮ್ ಕೋನ್ ಅನ್ನು ತಂದು ತಿನ್ನುವಾಗ ಅದರೊಳಗೆ ಹಲ್ಲಿಯ ಬಾಲ ಸಿಕ್ಕಿದೆಯಂತೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಅಂಗಡಿಯನ್ನು ಸೀಲ್ ಮಾಡಿ ಹವ್ಮೋರ್ ಐಸ್‍ಕ್ರೀಂ ಕಂಪೆನಿಗೆ ದಂಡ ವಿಧಿಸಿದೆಯಂತೆ. ಈ ಸುದ್ದಿ ಈಗ ವೈರಲ್‌(Viral News) ಆಗಿದೆ.

ಐಸ್‌ಕ್ರೀಂ ತಿನ್ನುವಾಗ ಹುಷಾರು; ಶಾಕಿಂಗ್‌ ವಿಡಿಯೊ ವೈರಲ್!

Profile pavithra May 17, 2025 3:06 PM

ಗಾಂಧಿನಗರ: ಬಿರು ಬೇಸಿಗೆಯ ಸಮಯದಲ್ಲಿ ತಣ್ಣನೆಯ ಐಸ್‌ಕ್ರೀಂ ಬಾಯಲ್ಲಿಟ್ಟರೆ ಸಿಗುವ ಖುಷಿಯೇ ಬೇರೆ! ಆದರೆ ಇತ್ತೀಚೆಗೆ ಐಸ್‌ಕ್ರೀಂನಲ್ಲಿ ಕೈ ಬೆರಳು, ಹಾವು ಸಿಕ್ಕಿರುವಂತಹ ಸುದ್ದಿ ಕೂಡ ವೈರಲ್‌ ಆಗಿತ್ತು. ಇದೀಗ ಅಹಮದಾಬಾದ್‌ನ ಮಣಿನಗರ ಪ್ರದೇಶದ ಮಹಿಳೆಯೊಬ್ಬಳಿಗೆ ಹವ್ಮೋರ್ ಐಸ್ ಕ್ರೀಮ್ ಕೋನ್ ಅನ್ನು ತಿನ್ನುವಾಗ ಅದರೊಳಗೆ ಹಲ್ಲಿಯ ಬಾಲ ಸಿಕ್ಕಿದೆಯಂತೆ. ಈ ಆಘಾತಕಾರಿ ದೃಶ್ಯವನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಳೆ. ಇದೀಗ ವೈರಲ್ ಆಗಿದೆ. ಘಟನೆಯ ನಂತರ ಮಹಿಳೆ ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾಳೆ. ಹಾಗೂ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಅಂಗಡಿ ಮಾಲೀಕ ಹಾಗೂ ಐಸ್‍ಕ್ರೀಂ ಕಂಪೆನಿಯ ವಿರುದ್ಧ ಕ್ರಮ ಕೈಗೊಂಡಿದೆ.

ಮಹಿಳೆ ಕೋನ್ ಅನ್ನು ತೋರಿಸುವ ಎರಡು ವಿಡಿಯೊಗಳನ್ನು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಒಂದು ವಿಡಿಯೊದಲ್ಲಿ ಅವಳು ಕೋನ್ ಐಸ್ ಕ್ರೀಂ ಅನ್ನು ಮತ್ತು ಅದರಲ್ಲಿ ಸಿಕ್ಕಿದ ಹಲ್ಲಿಯ ಬಾಲವನ್ನು ಕೈಯಲ್ಲಿ ಹಿಡಿದುಕೊಂಡು, ಇದನ್ನು ನೋಡಿ. ಇದು ಹವ್ಮೋರ್. ನಾನು ನಿನ್ನೆ 4 ಕೋನ್‌ಗಳನ್ನು ಖರೀದಿಸಿದೆ” ಎಂದು ಹೇಳುತ್ತಾಳೆ.

ವಿಡಿಯೊ ಇಲ್ಲಿದೆ ನೋಡಿ...



ಇನ್ನೊಂದು ವಿಡಿಯೊದಲ್ಲಿ, ಐಸ್ ಕ್ರೀಮ್ ಸ್ವಲ್ಪ ತಿಂದಾಗ ಅನುಭವಿಸಿದ ಕಷ್ಟವನ್ನು ವಿವರಿಸಿದ್ದಾಳೆ. ತನ್ನ ಆರೋಗ್ಯ ಹದಗೆಟ್ಟಿದೆ. ಪದೇ ಪದೇ ವಾಂತಿ ಮಾಡಿರುವುದಾಗಿ ಆ ಮಹಿಳೆ ಈಗ ವೈರಲ್ ಆಗಿರುವ ವಿಡಿಯೊದಲ್ಲಿ ಹೇಳಿಕೊಂಡಿದ್ದಾಳೆ. ಇದಲ್ಲದೆ, ಬ್ರ್ಯಾಂಡ್‌ನ ಬಗ್ಗೆ ಕೋಪವನ್ನು ವ್ಯಕ್ತಪಡಿಸಿದ್ದ ಆಕೆ ಹಣಕ್ಕಾಗಿ ಹೀಗೆ ಮಾರಾಟ ಮಾಡುವುದೇ? ಮಕ್ಕಳನ್ನು ಕೊಲ್ಲುವ ಉದ್ದೇಶವೇ? ಎಂದು ಅವರ ನಿರ್ಲಕ್ಷ್ಯದ ಬಗ್ಗೆ ಪ್ರಶ್ನಿಸಿದ್ದಾಳೆ.

ವರದಿ ಪ್ರಕಾರ, ಸ್ಥಳೀಯ ಹವ್ಮೋರ್ ಔಟ್ಲೆಟ್ ಮಹಾಲಕ್ಷ್ಮಿ ಕಾರ್ನರ್‌ನಿಂದ ಮಹಿಳೆ ತನಗಾಗಿ ಮತ್ತು ತನ್ನ ಮಕ್ಕಳಿಗಾಗಿ ಕೋನ್ ಅನ್ನು ಖರೀದಿಸಿದ್ದಳು. ಆದರೆ ಅವಳು ಅದನ್ನು ತಿಂದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಆದರೆ ಆಕೆಯ ಮಕ್ಕಳು ಇದನ್ನು ತಿಂದಿರಲಿಲ್ಲ ಎನ್ನಲಾಗಿದೆ. ಆದರೆ ಐಸ್ ಕ್ರೀಂ ತಿಂದ ಮಹಿಳೆ ಪದೇ ಪದೇ ವಾಂತಿ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ನಂತರ ಈ ಘಟನೆ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ವಿಚಾರಣೆ ಮಾಡಿದ್ದಾಗ ಆ ಅಂಗಡಿ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ ಎಂದು ಕಂಡುಹಿಡಿದಿದ್ದಾರೆ. ಹೀಗಾಗಿ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (AMC) ಅಂದಿನಿಂದ ಅಂಗಡಿಯನ್ನು ಸೀಲ್ ಮಾಡಿ ಹವ್ಮೋರ್‌ಗೆ ರೂ50,000 ದಂಡ ವಿಧಿಸಿದೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:‌Viral Video: ನಡು ರಸ್ತೆಯಲ್ಲಿ ಹಣದ ಸುರಿಮಳೆ; 500ರ ನೋಟು ಹೆಕ್ಕಲು ಜನ ಸಾಗರ! ವಿಡಿಯೊ ಇದೆ

ಐಸ್‍ಕ್ರೀಂನಲ್ಲಿ ಇಂತಹ ವಿಚಿತ್ರ ವಸ್ತುಗಳು ಕಂಡುಬಂದಿದ್ದು ಇದೇ ಮೊದಲಲ್ಲ. ಈ ಹಿಂದೆ ಮುಂಬೈ ವೈದ್ಯರೊಬ್ಬರಿಗೆ ಆನ್‍ಲೈನ್‍ನಲ್ಲಿ ಆರ್ಡರ್‌ ಮಾಡಿದ ಯುಮೋ ಐಸ್‍ಕ್ರೀಂನಲ್ಲಿ ಮಾನವ ಬೆರಳು ಪತ್ತೆಯಾಗಿತ್ತು. ಇದನ್ನು ಅವರು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದು, ಇದು ವೈರಲ್ ಆಗಿತ್ತು. ಈ ಬಗ್ಗೆ ವೈದ್ಯ ಪೊಲೀಸ್ ಠಾಣೆಯಲ್ಲಿ ಸಂಬಂಧಪಟ್ಟ ಐಸ್‍ಕ್ರೀಂ ಕಂಪೆನಿ ವಿರುದ್ಧ ದೂರು ದಾಖಲಿಸಿದ್ದರು.