Anand Deverakonda: ರಶ್ಮಿಕಾ-ವಿಜಯ್ ಜೊತೆ ಭರ್ಜರಿ ಡ್ಯಾನ್ಸ್ ಮಾಡಿದ ಆನಂದ್ ದೇವರಕೊಂಡ
Anand Deverakonda: ನಟ ಆನಂದ್ ದೇವರಕೊಂಡ ಬುಧವಾರ ತಮ್ಮ ಸಹೋದರ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಮತ್ತು ಹಲವಾರು ಸ್ನೇಹಿತರ ಜೊತೆಗೂಡಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ. ಮಾರ್ಚ್ 11 ರಂದು ಪೋಸ್ಟ್ ಮಾಡಲಾದ ಈ ವೀಡಿಯೊದಲ್ಲಿ ವಿಜಯ್ ಮತ್ತು ರಶ್ಮಿಕಾ ಅವರ ವಿವಾಹ ಸಂಭ್ರಮದ ನಡುವೆ ನೃತ್ಯ ಮಾಡುವುದನ್ನು ಕಾಣಬಹುದು.
ಆನಂದ್ ದೇವರಕೊಂಡ -
ನಟ ಆನಂದ್ ದೇವರಕೊಂಡ (Anand Deverakonda ) ಬುಧವಾರ ತಮ್ಮ ಸಹೋದರ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ಹಲವಾರು ಸ್ನೇಹಿತರ ಜೊತೆಗೂಡಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ. ಮಾರ್ಚ್ 11 ರಂದು ಪೋಸ್ಟ್ ಮಾಡಲಾದ ಈ ವೀಡಿಯೊದಲ್ಲಿ ವಿಜಯ್ ಮತ್ತು ರಶ್ಮಿಕಾ ಅವರ ವಿವಾಹ (Marriage) ಸಂಭ್ರಮದ ನಡುವೆ ನೃತ್ಯ ಮಾಡುವುದನ್ನು ಕಾಣಬಹುದು.
ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಸಹೋದರ ಆನಂದ್ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಆನಂದ್ ಜೊತೆ ರಶ್ಮಿಕಾ ಅವರು ಆಗಾಗ ಪೋಸ್ ಕೊಡುತ್ತಾ ಇರುತ್ತಾರೆ. ಈಗ ಅವರ ಹೊಸ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ. ರಶ್ಮಿಕಾ-ವಿಜಯ್ ಜೋಡಿ ಫೆಬ್ರವರಿ 26 ರಂದು ಉದಯಪುರದಲ್ಲಿ ನಡೆದ ಆತ್ಮೀಯ ಸಮಾರಂಭದಲ್ಲಿ ವಿವಾಹವಾದರು.ಆಪ್ತ ಸ್ನೇಹಿತರು ಮತ್ತು ಅವರ ಕುಟುಂಬಗಳು ಭಾಗವಹಿಸಿದ್ದರು.
ಇದನ್ನೂ ಓದಿ: Amruthadhaare Serial: ಕೇಡು ಬಯಸೋ ಕೇಡಿ ಜೇಡಿಗೆ, ಪಾಠ ಕಲಿಸೋಕೆ ರೆಡಿಯಾದ್ರು ಭೂಮಿ ಟೀಚರ್!
ಡ್ಯಾನ್ಸ್ ವಿಡಿಯೋ ವೈರಲ್
ವಿಡಿಯೋದಲ್ಲಿ ವಿಜಯ್ ಶರ್ಟ್ ಮತ್ತು ಬಿಳಿ ಪ್ಯಾಂಟ್ ಧರಿಸಿದ್ದರೆ, ರಶ್ಮಿಕಾ ಶಾರ್ಟ್ಸ್ ಮತ್ತು ಶರ್ಟ್ ಧರಿಸಿದ್ದಾರೆ. ಆನಂದ್ ಅವರ ಮುಂಬರುವ ಚಿತ್ರ ಎಪಿಕ್‌ನ ಸಂಚಾರೆ ಹಾಡಿಗೆ ನೃತ್ಯ ಮಾಡಿದ್ದಾರೆ . ಈ ವಿಡಿಯೋ ಹಂಚಿಕೊಂಡು ಸಖತ್ ಖುಷ್ ಆಗಿದ್ದಾರೆ ಆನಂದ್.
ಮದುವೆ ಸಂದರ್ಭದಲ್ಲಿಯೂ ವಿಜಯ್ ಸಹೋದರ ಸಂತೋಷ ವ್ಯಕ್ತಪಡಿಸಿದ್ದರು. ಮದುವೆ ಅಧಿಕೃತವಾಗುವ ಮೊದಲೇ ಅಭಿಮಾನಿಗಳು "ಅತ್ತಿಗೆ, ಹೇಗಿದ್ದೀರಾ?" ಎಂದು ಕೂಗುತ್ತಿದ್ದ ಹಲವು ಸಂದರ್ಭಗಳಿದ್ದವು. ಆಗ ನನಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿದಿರಲಿಲ್ಲ" ಎಂದು ಅವರು ಬರೆದಿದ್ದರು. "ಇಂದು ನನ್ನ ಸಹೋದರ ಮದುವೆ ಆಗಿದ್ದಾನೆ, ನಾನು ನನ್ನ ಅತ್ತಿಗೆಯಂತಹ ಅತ್ಯಂತ ಸಕಾರಾತ್ಮಕ ಮತ್ತು ಸಹಾನುಭೂತಿಯ ವ್ಯಕ್ತಿಯನ್ನು ಪಡೆದುಕೊಂಡಿದ್ದೇನೆ. ಅವರ ಜೀವನದುದ್ದಕ್ಕೂ, ಅವರು ಹೀಗೆಯೇ ನಗುತ್ತಲೇ ಇರಬೇಕೆಂದು ನಾನು ಪ್ರಾರ್ಥಿಸುತ್ತೇನೆ. ಇಬ್ಬರೂ ಒಟ್ಟಿಗೆ ಜೀವಮಾನವಿಡೀ" ಎಂದು ಆನಂದ್ ದೇವರಕೊಂಡ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು.
ಮಾರ್ಚ್ 1 ರಂದು, ದಂಪತಿ ಹೈದರಾಬಾದ್, ಮುಂಬೈ, ದೆಹಲಿ, ಚೆನ್ನೈ, ಬೆಂಗಳೂರು ಮತ್ತು ಅಹಮದಾಬಾದ್ ಸೇರಿದಂತೆ ಭಾರತದಾದ್ಯಂತದ ಪ್ರಮುಖ ನಗರಗಳಿಗೆ ಸಿಹಿ ತಿಂಡಿಗಳನ್ನು ನೀಡಿದ್ದರು. ದೇಶಾದ್ಯಂತ 16 ದೇವಾಲಯಗಳಲ್ಲಿ ಅನ್ನದಾನವನ್ನು ಸಹ ಆಯೋಜಿಸಿದರು.
ಎಪಿಕ್ ರಿಲೀಸ್ ಯಾವಾಗ?
ಉದಯಪುರದಿಂದ ಹಿಂದಿರುಗಿದ ನಂತರ, ವಿಜಯ್ ಮತ್ತು ರಶ್ಮಿಕಾ ಹೈದರಾಬಾದ್‌ನಲ್ಲಿ ಅದ್ಧೂರಿ ಆರತಕ್ಷತೆಯನ್ನು ಆಯೋಜಿಸಿದ್ದರು. ಅಲ್ಲು ಅರ್ಜುನ್, ರಾಮ್ ಚರಣ್, ಕೃತಿ ಸನೋನ್ ಮತ್ತು ಕರಣ್ ಜೋಹರ್ ಸೇರಿದಂತೆ ಹಲವಾರು ಪ್ರಮುಖ ಚಲನಚಿತ್ರೋದ್ಯಮದ ವ್ಯಕ್ತಿಗಳು ಆರತಕ್ಷತೆಗೆ ಹಾಜರಿದ್ದರು. ಸಿನಿಮಾ ವಿಚಾರಕ್ಕೆ ಬರೋದಾದರೆ, ಈ ಜೋಡಿ ಶೀಘ್ರದಲ್ಲೇ ರಣಬಾಲಿಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದೆ .
ಇದನ್ನೂ ಓದಿ: Agnisakshi Serial: 'ಅಗ್ನಿಸಾಕ್ಷಿ' ಧಾರಾವಾಹಿ ಮತ್ತೆ ಪ್ರಸಾರಕ್ಕೆ ಸಿದ್ಧ; ನಾಯಕ ಯಾರು?
ಏತನ್ಮಧ್ಯೆ, ಆನಂದ್ ಅವರ ' ಎಪಿಕ್' ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ.