Viral Video: ರೈಲಿನೊಳಗೆ ನಡೆಯಿತು ಮಹಾಭಾರತ! ಮಹಿಳೆಯ ಕೂದಲು ಹಿಡಿದೆಳೆದ ಪಾಪಿ- ಇಲ್ಲಿದೆ ನೋಡಿ ವಿಡಿಯೊ
Man Pulls Woman Passenger’s Hair: ದೀಪಾವಳಿ ಹಬ್ಬದ ಸಮಯದಲ್ಲಿ ರೈಲು, ಬಸ್‌ಗಳು ಪ್ರಯಾಣಿಕರಿಂದ ತುಂಬಿದ್ದವು. ಇಲ್ಲೊಂದೆಡೆ ಪ್ರಯಾಣಿಕರಿಂದ ರಶ್ ಆಗಿದ್ದ ರೈಲು ಕೋಚಿನಲ್ಲಿ ಜಗಳ ನಡೆದಿದೆ. ವ್ಯಕ್ತಿಯೊಬ್ಬ ಮಹಿಳೆಯ ತಲೆಗೂದಲು ಹಿಡಿದು ಎಳೆದಾಡಿದ್ದಾನೆ. ಇದರ ವಿಡಿಯೊ ವೈರಲ್ ಆಗಿದೆ.

-

ನವದೆಹಲಿ: ದೀಪಾವಳಿ (Deepavali) ಹಬ್ಬ ಮುಗಿದಿದ್ದರೂ, ಭಾರತದಾದ್ಯಂತ ಹಬ್ಬದ ಜನದಟ್ಟಣೆ ಕಡಿಮೆಯಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಹಬ್ಬದ ಸಮಯದಲ್ಲಿ ಭಾರತದಾದ್ಯಂತ ಕಿಕ್ಕಿರಿದ ಸಾರ್ವಜನಿಕ ಸ್ಥಳಗಳು, ದೇವಾಲಯಗಳಿಗೆ ಪ್ರವೇಶಿಸಲು ಭಕ್ತರು ನೂಕಾಡುವುದು, ಜುಟ್ಟು ಹಿಡಿದು ಎಳೆದಾಡುವುದು ಮತ್ತು ಕಿಕ್ಕಿರಿದ ರೈಲುಗಳ ಒಳಗೆ ಅವ್ಯವಸ್ಥೆಯ ದೃಶ್ಯಗಳು ಸಾಮಾನ್ಯವಾಗಿದೆ. ಇದರ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ದೆಹಲಿಯಿಂದ ಬಿಹಾರಕ್ಕೆ ಹೋಗುವ ರೈಲಿನಲ್ಲಿ ಚಿತ್ರೀಕರಿಸಲಾಗಿದೆ ಎನ್ನಲಾದ ಇತ್ತೀಚಿನ ವಿಡಿಯೊವೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕಿಕ್ಕಿರಿದ ಬೋಗಿಯೊಳಗೆ ಉಂಟಾದ ಕೋಲಾಹಲವನ್ನು ವಿಡಿಯೊದಲ್ಲಿ ಸೆರೆಹಿಡಿಯಲಾಗಿದೆ. ದಿನನಿತ್ಯದ ಪ್ರಯಾಣದಂತೆ ಕಾಣುತ್ತಿದ್ದ ಪ್ರಯಾಣವು ಅಸ್ತವ್ಯಸ್ತವಾಯಿತು. ಪ್ರಯಾಣಿಕರ ನಡುವೆ ಜಗಳ ನಡೆದಿದ್ದು, ಈ ವೇಳೆ ಜುಟ್ಟು ಹಿಡಿದು ಎಳೆದಾಡಿದ್ದಾರೆ. ಇದನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು ಹಂಚಿಕೊಂಡ ಬಳಕೆದಾರರು ಮಹಾಭಾರತ ಎಂದು ಬಣ್ಣಿಸಿದ್ದಾರೆ.
ವೈರಲ್ ಆಗಿರುವ ಈ ವಿಡಿಯೊದಲ್ಲಿ, ಇಬ್ಬರು ಮಹಿಳೆಯರು ಬರ್ತ್‌ನಲ್ಲಿ ಅಕ್ಕಪಕ್ಕದಲ್ಲಿ ಕುಳಿತಿದ್ದು, ಪ್ರಯಾಣಿಕರ ನಡುವೆ ಸಿಲುಕಿಕೊಂಡಿರುವುದನ್ನು ತೋರಿಸಲಾಗಿದೆ. ಕೆಳಗಿನಿಂದ ಕೆಲವು ಮಂದಿ ಕೈ ಚಾಚಿ ಅವರ ಕೂದಲನ್ನು ಎಳೆಯುತ್ತಿದ್ದಾರೆ. ಒಬ್ಬ ಮಹಿಳೆಯ ಪಕ್ಕದಲ್ಲಿ, ಒಬ್ಬ ಪುರುಷ ಮಗುವನ್ನು ತನ್ನ ಮಡಿಲಲ್ಲಿ ಹಿಡಿದುಕೊಂಡು ಕುಳಿತಿರುವುದನ್ನು ಕಾಣಬಹುದು. ಗದ್ದಲದ ನಡುವೆಯೂ ಅವನು ಕೂಡ ಒಬ್ಬ ಮಹಿಳೆಯನ್ನು ತಳ್ಳುತ್ತಿರುವಂತೆ ಕಾಣುತ್ತದೆ. ಇಬ್ಬರು ಮಹಿಳೆಯರ ಜುಟ್ಟನ್ನು ಒಬ್ಬಾತ ಹಿಡಿದು ಎಳೆಯುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ.
ವಿಡಿಯೊ ವೀಕ್ಷಿಸಿ:
ये लो ट्रेन में ही महाभारत शुरू हो गया अब,,
— Adv.Nazneen Akhtar (@NazneenAkhtar23) October 20, 2025
देख लीजिए बिहार के लोगों के हालात,, pic.twitter.com/LiMlFG7xE5
ಪ್ರಯಾಣಿಕರಿಂದ ಸಂಪೂರ್ಣವಾಗಿ ಕಿಕ್ಕಿರಿದು ತುಂಬಿರುವ ಕೋಚ್‌ನಲ್ಲಿ ಸ್ಥಳಕ್ಕಾಗಿ ಹೋರಾಡುತ್ತಿರುವಾಗ ಕೂಗಾಟ, ಕಿರುಚಾಟ ಮತ್ತು ಅವ್ಯವಸ್ಥೆಯ ಶಬ್ದದಿಂದ ಪ್ರತಿಧ್ವನಿಸುತ್ತದೆ. ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಮಹಾಭಾರತ ಈಗ ರೈಲಿನಲ್ಲಿಯೇ ಪ್ರಾರಂಭವಾಗಿದೆ. ಬಿಹಾರದ ಜನರ ಸ್ಥಿತಿಯನ್ನೊಮ್ಮೆ ನೋಡಿ ಎಂದು ಶೀರ್ಷಿಕೆ ನೀಡಲಾಗಿದೆ.
ಇದನ್ನೂ ಓದಿ: Viral Video: ದೀಪಾವಳಿಗೆ 1.5 ಕೆ.ಜಿ ಚಿನ್ನದ ಶಾಪಿಂಗ್ ಮಾಡಿದ ಭೂಪ! ವಿಡಿಯೊ ವೈರಲ್
ಈ ವಿಡಿಯೊಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಕಾಮೆಂಟ್‌ಗಳಲ್ಲಿ ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕರ ವರ್ತನೆಯನ್ನು ಹಲವರು ಟೀಕಿಸಿದರು. ಇದು ಸ್ವೀಕಾರಾರ್ಹವಲ್ಲ ಎಂದು ಹೇಳಿದರು. ಆಕ್ರಮಣಶೀಲವಾಗಿ ವರ್ತಿಸಿದ್ದನ್ನು ಕೆಲವರು ಖಂಡಿಸಿದರು. ಈ ಜನರು ಬದಲಾಗುವುದಿಲ್ಲ. ಇಷ್ಟೊಂದು ಜಗಳ ಮತ್ತು ಹೊಡೆತದ ಅಗತ್ಯವೇನು? ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.
ಮಹಿಳೆಯ ಕೂದಲನ್ನು ಎಳೆಯುತ್ತಿರುವುದನ್ನು ಖಂಡಿಸುತ್ತಾ, ಸೀಟು ಪಡೆಯಲು ಮಹಿಳೆಯರ ಕೂದಲನ್ನು ಎಳೆಯುತ್ತಿರುವ ಈ ಪ್ರಾಣಿ ಯಾರು? ಎಂದು ಕೋಪದಿಂದ ಮತ್ತೊಬ್ಬ ವ್ಯಕ್ತಿ ಪ್ರಶ್ನಿಸಿದರು. ಇನ್ನು ಕೆಲವರು ವಿಡಿಯೊದಲ್ಲಿರುವ ಮಗುವಿನ ಬಗ್ಗೆ ಸಹಾನುಭೂತಿ ತೋರಿಸಿದರು. ಗಂಭೀರ ಪ್ರತಿಕ್ರಿಯೆಗಳ ಮಧ್ಯೆ, ಒಬ್ಬ ಬಳಕೆದಾರರು ತಮಾಷೆ ಮಾಡುತ್ತಾ, ಅದು ನಿಜವಾದ ಕೂದಲೇ ಎಂದು ಪರೀಕ್ಷಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.