Viral Video: ಅಬ್ಬಬ್ಬಾ..! ಇವನ ಬಂಗಾರದ ಮೋಹ ನೋಡಿದ್ರೆ ನೀವು ಕೂಡ ಶಾಕ್ ಆಗ್ತೀರಿ
ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಸಾವರ್ಕುಂಡ್ಲಾ ಪಟ್ಟಣದ ನಿವಾಸಿ ಮನ್ಭಾಯ್ ಬೋರಿಚಾಗೆ ಬಾಲ್ಯದಿಂದಲೂ ಚಿನ್ನದ ಮೇಲಿನ ಆಸೆಯಂತೆ. ಹಾಗಾಗಿ ಕಳೆದ 45 ವರ್ಷಗಳಿಂದ, ತನ್ನ ಎಂಟು ಬೆರಳುಗಳಿಗೆ ನಿರಂತರವಾಗಿ ಚಿನ್ನದ ಉಂಗುರಗಳನ್ನು ಧರಿಸುವುದಲ್ಲದೇ ಅವುಗಳನ್ನು ಎಂದಿಗೂ ತೆಗೆಯುವುದಿಲ್ಲವಂತೆ. ಇದು ಅವನ ವೈಯಕ್ತಿಕ ಹವ್ಯಾಸವಲ್ಲ, ಬದಲಾಗಿ ತಲೆಮಾರುಗಳ ಮೂಲಕ ಬಂದ ಸಂಪ್ರದಾಯವೂ ಆಗಿದೆಯಂತೆ. ಈ ಸುದ್ದಿ ಈಗ ವೈರಲ್(Viral News) ಆಗಿದೆ.


ಗಾಂಧಿನಗರ: ಚಿನ್ನ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ! ಈಗಂತೂ ಬಂಗಾರದ ಬೆಲೆ ಗಗನ ಕುಸುಮವಾಗಿದೆ. ಇನ್ನೂ ಚಿನ್ನವಿದೆಯಂದು ಮೈ ತುಂಬಾ ಹಾಕಿಕೊಳ್ಳೋದಕ್ಕೂ ಕಳ್ಳಕಾಕರ ಭಯ!ಹೀಗಿರುವಾಗ ಗುಜರಾತ್‌ನ ಅಮ್ರೇಲಿ ಜಿಲ್ಲೆಯ ಸಾವರ್ಕುಂಡ್ಲಾ ಪಟ್ಟಣದ ನಿವಾಸಿ ಮನ್ಭಾಯ್ ಬೋರಿಚಾ ಎಂಬ ವ್ಯಕ್ತಿ ತಮ್ಮ ಎಂಟು ಬೆರಳುಗಳಿಗೆ ನಿರಂತರವಾಗಿ ಚಿನ್ನದ ಉಂಗುರಗಳನ್ನು ಧರಿಸುತ್ತಿದ್ದಾರಂತೆ.ಇನ್ನೂ ಈ ಉಂಗುರಗಳನ್ನೂ ಅವರೂ ಕಳಚಿ ಇಡುವುದು ಕೂಡ ಇಲ್ಲವಂತೆ. ಇವರ ಬಂಗಾರದ ಮೇಲಿನ ಮೋಹದ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.
ಮನ್ಭಾಯ್ ಬೋರಿಚಾಗೆ ಬಾಲ್ಯದಿಂದಲೂ ಚಿನ್ನದ ಆಭರಣಗಳೆಂದರೆ ತುಂಬಾ ಪ್ರೀತಿಯಂತೆ! ಹೀಗಾಗಿ ಕಳೆದ 45 ವರ್ಷಗಳಿಂದ, ಮನ್ಭಾಯ್ ತನ್ನ ಎಂಟು ಬೆರಳುಗಳಿಗೆ ನಿರಂತರವಾಗಿ ಚಿನ್ನದ ಉಂಗುರಗಳನ್ನು ಧರಿಸುವುದಲ್ಲದೇ ಅವುಗಳನ್ನು ಒಂದು ದಿನ ಕೂಡ ಕಳಚಿ ಸಹ ಇಡುವುದಿಲ್ಲವಂತೆ. ಈ ಉಂಗುರಗಳ ಜೊತೆಗೆ, ಅವನು ದಪ್ಪ ಚಿನ್ನದ ಬಳೆಯನ್ನು ಕೂಡ ಹಾಕಿಕೊಳ್ಳುತ್ತಾನಂತೆ.
ವಿಡಿಯೊ ಇಲ್ಲಿದೆ
Manbhai wears around 300 grams of gold daily. He had these rings made more than four decades ago, at a time when gold cost just Rs 2,500 per tola#ManBhai #Gold https://t.co/9UG1Be6OV2
— News18 (@CNNnews18) May 26, 2025
ಇಂದಿಗೂ, ಮನ್ಭಾಯ್ ಪ್ರತಿದಿನ ಸುಮಾರು 300 ಗ್ರಾಂ ಚಿನ್ನವನ್ನು ಧರಿಸುತ್ತಾನಂತೆ. ನಾಲ್ಕು ದಶಕಗಳ ಹಿಂದೆ ಅವನು ಈ ಉಂಗುರಗಳನ್ನು ತಯಾರಿಸುತ್ತಿದ್ದನಂತೆ. ಈಗ ನಿವೃತ್ತಿ ಜೀವನವನ್ನು ನಡೆಸುತ್ತಿರುವ ಮನ್ಭಾಯ್ ಭೂಮಿ ಮತ್ತು ಆಸ್ತಿಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾನಂತೆ. ಆದರೆ ಚಿನ್ನದ ಮೇಲಿನ ಅವನ ಪ್ರೀತಿ ಇನ್ನು ಕಡಿಮೆಯಾಗಿಲ್ಲವಂತೆ.
ಈ ಸುದ್ದಿಯನ್ನೂ ಓದಿ:Viral Video: ವಿಮಾನದಲ್ಲಿ ತಾಂತ್ರಿಕ ದೋಷ; ಸಿಟ್ಟಾದ ಪ್ರಯಾಣಿಕರು ಮಾಡಿದ್ದೇನು ಗೊತ್ತಾ?
ಸೌರಾಷ್ಟ್ರದಲ್ಲಿ ಚಿನ್ನ ಧರಿಸುವ ಪ್ರವೃತ್ತಿ ಬಹಳ ಹಿಂದಿನಿಂದಲೂ ಇದೆಯಂತೆ.ಇಲ್ಲಿನ ಅನೇಕ ಮಂದಿ 100 ರಿಂದ 500 ಗ್ರಾಂ ಚಿನ್ನವನ್ನು ಧರಿಸುತ್ತಾರಂತೆ. ಅವರಿಗೆ, ಇದು ಕೇವಲ ವೈಯಕ್ತಿಕ ಹವ್ಯಾಸವಲ್ಲ, ಬದಲಾಗಿ ತಲೆಮಾರುಗಳ ಮೂಲಕ ಬಂದ ಸಂಪ್ರದಾಯವೂ ಆಗಿದೆಯಂತೆ. ಸೌರಾಷ್ಟ್ರದಲ್ಲಿ ಚಿನ್ನದ ಆಭರಣಗಳನ್ನು ಧರಿಸುವುದು ಸಾಮಾನ್ಯವಾಗಿದೆಯಂತೆ. ಇಲ್ಲಿನ ಜನರು ವಿಶೇಷವಾಗಿ ಉಂಗುರಗಳು, ಬಳೆಗಳು ಮತ್ತು ಸರಗಳನ್ನು ಧರಿಸಲು ಇಷ್ಟಪಡುತ್ತಾರಂತೆ.