ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Viral Video: ನೆರೆಮನೆಯ ಯುವಕನಿಂದನೇ ಕಿರುಕುಳ; ವಿಡಿಯೊ ಮಾಡಿ ಕಣ್ಣೀರು ಹಾಕಿದ ಅಪ್ರಾಪ್ತ ಬಾಲಕಿ

ಕಾನ್ಪುರದ ಬಾರ್ರಾ-2 ಪ್ರದೇಶದಲ್ಲಿ ನೆರೆಮನೆಯ ಯುವಕ ನಿರಂತರವಾಗಿ ಲೈಂಗಿಕ ಕಿರುಕುಳ ಹಾಗೂ ಬೆದರಿಕೆ ಹಾಕಿರುವ ಬಗ್ಗೆ ಬಾಲಕಿ ಆರೋಪಿಸಿದ್ದಾಳೆ. ವೈರಲ್ ಆದ ವೀಡಿಯೊದಲ್ಲಿ, ಬಾಲಕಿ ತನ್ನನ್ನು ಬರ್ರಾ-2 ನಿವಾಸಿ ಭೂಮಿ ಸಿಂಗ್ ರಾಥೋಡ್ ಎಂದು ಗುರುತಿಸಿಕೊಂಡಿದ್ದು ತಾನು ದಿನ ನಿತ್ಯವೂ ನಿರಂತರ ಭಯದಲ್ಲಿ ಬದುಕುವಂತೆ ಮಾಡಿದ ಹಲವಾರು ಘಟನೆಗಳನ್ನು ವಿವರಿಸಿದ್ದಾಳೆ..

ಅಪ್ರಾಪ್ತ ಬಾಲಕಿಗೆ ಕಿರುಕುಳ: ಕ್ರಮ ಕೈಗೊಳ್ಳಲು ನೆಟ್ಟಿಗರ ಆಗ್ರಹ

ವಿಡಿಯೊ ಮೂಲಕ ತನಗಾದ ಕಿರುಕುಳ ಬಗ್ಗೆ ವಿವರಿಸಿದ ಅಪ್ರಾಪ್ತ ಬಾಲಕಿ ಮತ್ತು ಅಪರಾಧಿ -

Profile
Pushpa Kumari Jul 8, 2026 3:40 PM

ಲಖನೌ, ಜು. 8: ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುವ ಪ್ರಕರಣ ಇತ್ತೀಚೆಗೆ ವರದಿಯಾಗುತ್ತಲೇ ಇದೆ. ಇದೀಗ ಉತ್ತರ ಪ್ರದೇಶದ ಕಾನ್ಪುರದ ಬಾರ್ರಾ-2 ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಗೆ ನೆರೆಮನೆಯ ಯುವಕ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಅಲ್ಲದೆ ಬೆದರಿಕೆ ಕೂಡ ಹಾಕಿದ್ದಾನೆ. ವೈರಲ್ ಆದ ವಿಡಿಯೊದಲ್ಲಿ (Viral News) ಬಾಲಕಿ ತನ್ನನ್ನು ಬರ್ರಾ-2 ನಿವಾಸಿ ಎಂದು ಹೇಳಿದ್ದು, ದಿನ ನಿತ್ಯವೂ ನಿರಂತರ ಭಯದಲ್ಲಿ ಬದುಕುವಂತೆ ಮಾಡಿದ ಹಲವು ಘಟನೆಗಳನ್ನು ವಿವರಿಸಿದ್ದಾಳೆ.

ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದ ಬರುಯಿಪುರ್‌ನಲ್ಲಿ 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಪ್ರಕರಣದ ಮುಖ್ಯ ಆರೋಪಿ ಪ್ರಭಾಶ್ ಮಂಡಲ್‌ನನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಗುಂಡಿಕ್ಕಿ ಕೊಂದಿದ್ದಾರೆ. ಈ ನಡುವೆ ದಿನ ನಿತ್ಯ ಒಂದಾದರೂ ಲೈಂಗಿಕ ದೌರ್ಜನ್ಯ ಪ್ರಕರಣ ಕೇಳಿಬರುತ್ತಲೇ ಇದೆ.

ವಿಡಿಯೊ ನೋಡಿ:



ಇದೀಗ ಬಾರ್ರಾ-2 ಪ್ರದೇಶದಲ್ಲಿ ನೆರೆಮನೆಯ ಯುವಕನೊಬ್ಬ ತನಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಬಾಲಕಿಯೊಬ್ಬಳು ಕಣ್ಣೀರು ಹಾಕಿದ್ದಾಳೆ. ʼʼಅಪರಾಧಿ ನೈತಿಕ್ ಕಟಿಯಾರ್ ತನ್ನ ನೆರೆಮನೆಯವರಾದ ಸುಶೀಲ್ ಕುಮಾರ್ ಕಟಿಯಾರ್‌ನ ಮಗ‌‌‌‌. ಆತನ ವರ್ತನೆಯಿಂದ ಹತಾಶಳಾಗಿದ್ದು, ಕಿರಿಕಿರಿಗೊಂಡಿದ್ದೇನೆ. ನಾನು ಮನೆಯ ಟೆರೇಸ್ ಮೇಲಿದ್ದಾಗ ಆತ ಅಸಭ್ಯವಾಗಿ ವರ್ತಿಸುತ್ತಾನೆ ಮತ್ತು ಅಶ್ಲೀಲ ಸನ್ನೆ ಮಾಡುತ್ತಾನೆʼʼ ಎಂದು ಬಾಲಕಿ ಹೇಳಿದ್ದಾಳೆ.

ಯುವಕರಿಗೆ ಕಿರುಕುಳ ನೀಡಿ ತಾವೇ ಬಟ್ಟೆ ಹರಿದುಕೊಂಡ ಕಿʼಲೇಡಿʼಗಳು: ಮಹಿಳೆಯರ ಕಳ್ಳಾಟ ಕ್ಯಾಮರಾದಲ್ಲಿ ಸೆರೆ

ಆಕೆ ಸೈಕಲ್ ಸವಾರಿಗೆ ಹೋದಾಗಲೆಲ್ಲ ಆರೋಪಿಯು ಬೈಕ್‌ನಲ್ಲಿ ಹಿಂಬಾಲಿಸಿ ಹಲವು ಬಾರಿ ಅಡ್ಡಗಟ್ಟಿ ನಿಲ್ಲಿಸಲು ಪ್ರಯತ್ನಿಸಿದ್ದಾನೆ. ಈ ಕುರಿತು ಬಾಲಕಿ ಮತ್ತು ಆಕೆಯ ತಾಯಿ ಆರೋಪಿಯ ಪೋಷಕರಿಗೆ ದೂರು ನೀಡಲು ಹೋದಾಗ, ಅವರು ಸರಿಪಡಿಸುವ ಬದಲು ಬಾಲಕಿಯ ಕುಟುಂಬದವರಿಗೇ ಬೈದು ಕಳುಹಿಸಿದ್ದಾರೆ ಎನ್ನಲಾಗಿದೆ.

ʼʼಆತನ ವಿರುದ್ಧವಾಗಿ ಮನೆಯವರಿಗೆ ದೂರು ನೀಡಿದರೂ ನಡವಳಿಕೆಯನ್ನು ಬದಲಾಯಿಸಿಲ್ಲ ಹಾಗಾಗಿ ಸಾರ್ವಜನಿಕವಾಗಿ ಹಂಚಿಕೊಳ್ಳಲು ಬಯಸಿದ್ದೇನೆʼʼ ಎಂದು ಬಾಲಕಿ ದೂರಿದ್ದಾಳೆ. ಸೋಷಿಯಲ್ ಮೀಡಿಯಾ ಬಳಕೆದಾರರು ಮಧ್ಯ ಪ್ರವೇಶಿಸಿ ಹುಡುಗಿಯ ಸುರಕ್ಷತೆಯನ್ನು ಖಚಿತ ಪಡಿಸಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.​ ವಿಡಿಯೊ ವೈರಲ್ ಆದ ಬೆನ್ನಲ್ಲೇ ಕಾನ್ಪುರ ನಗರ ಪೊಲೀಸ್ ಕಮಿಷನರ್ ಎಚ್ಚೆತ್ತುಕೊಂಡಿದ್ದು ಬರ್ರಾ ಪೊಲೀಸ್ ಠಾಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಸಾಕ್ಷ್ಯಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.