Viral Video: ಯುವಕರಿಗೆ ಕಿರುಕುಳ ನೀಡಿ ತಾವೇ ಬಟ್ಟೆ ಹರಿದುಕೊಂಡ ಕಿʼಲೇಡಿʼಗಳು: ಮಹಿಳೆಯರ ಕಳ್ಳಾಟ ಕ್ಯಾಮರಾದಲ್ಲಿ ಸೆರೆ
Viral News: ಮಹಿಳೆಯರ ಗುಂಪೊಂದು ಯುವಕರಿಗೆ ಕಿರುಕುಳ ನೀಡಿ ಅವರ ಮೇಲೆಯೇ ಆರೋಪ ಹೊರಿಸಿದೆ. ಈ ಬಗ್ಗೆ ಮಹಿಳೆಯರನ್ನು ವ್ಯಕ್ತಿಯೊಬ್ಬ ಪ್ರಶ್ನಿಸಿದಾಗ ತಮ್ಮ ಬಟ್ಟೆಗಳನ್ನು ತಾವೇ ಹರಿದುಕೊಂಡು ಕಳ್ಳಾಟ ಆಡಿದ್ದಾರೆ. ಕಿರುಕುಳದ ಆರೋಪದ ಬೆನ್ನಲ್ಲೇ ಮಹಿಳೆಯರು ತಮ್ಮ ಬಟ್ಟೆಗಳನ್ನು ಹರಿದುಕೊಳ್ಳಲು ಪ್ರಾರಂಭಿಸಿದ್ದಾರೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಟ್ಟೆ ಹರಿದುಕೊಂಡು ರಂಪಾಟ ಮಾಡಿದ ಮಹಿಳೆಯರು -
ದೆಹಲಿ, ಜೂ. 16: ಮಹಿಳೆಯರ ಮೇಲೆ ಪುರುಷರು ಕಿರುಕುಳ ಎಸಗುವ ಅನೇಕ ಘಟನೆಗಳು ವರದಿಯಾಗುತ್ತಿವೆ. ಇದೀಗ ಇದಕ್ಕೆ ವಿರುದ್ಧವಾಗಿ ಮಹಿಳೆಯರ ಗುಂಪೊಂದು ಯುವಕರಿಗೆ ಕಿರುಕುಳ ನೀಡಿದೆ. ಈ ಬಗ್ಗೆ ಮಹಿಳೆಯರನ್ನು ವ್ಯಕ್ತಿಯೊಬ್ಬ ಪ್ರಶ್ನಿದಾಗ ತಮ್ಮ ಬಟ್ಟೆಯನ್ನು ತಾವೇ ಹರಿದುಕೊಂಡು ಕಳ್ಳಾಟವಾಡಿದ್ದಾರೆ. ಕಿರುಕುಳದ ಆರೋಪ ಬೆನ್ನಲ್ಲೇ ಮಹಿಳೆಯರು ತಮ್ಮ ಬಟ್ಟೆಗಳನ್ನು ಹರಿದುಕೊಳ್ಳಲು ಪ್ರಾರಂಭಿಸಿದ್ದಾರೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಮಹಿಳೆಯರ ನಡೆಗೆ ಕಿಡಿಕಾರಿದ್ದಾರೆ.
ಮಹಿಳೆಯರು ಯುವಕರ ಗುಂಪಿನ ಮೇಲೆ ದೌರ್ಜನ್ಯ ಎಸಗುತ್ತಿದ್ದರು ಎಂದು ಆರೋಪಿಸಲಾಗಿದೆ. ಆದಾಗ್ಯೂ ಒಬ್ಬ ವ್ಯಕ್ತಿ ಅವರ ಕೃತ್ಯಗಳ ಬಗ್ಗೆ ಪ್ರಶ್ನಿಸಿದಾಗ ಪರಿಸ್ಥಿತಿ ಅನಿರೀಕ್ಷಿತ ತಿರುವು ಪಡೆದುಕೊಂಡಿತು. ಕೆಲವು ಕ್ಷಣಗಳ ನಂತರ, ಮಹಿಳೆಯರು ತಮ್ಮ ಬಟ್ಟೆಗಳನ್ನು ಹರಿದುಕೊಳ್ಳುತ್ತಿರುವುದು ಕಂಡುಬಂದಿದೆ. ಮಹಿಳೆಯರು ತನ್ನ ತಪ್ಪುಗಳನ್ನು ಒಪ್ಪಿಕೊಳ್ಳುವ ಬದಲಿಗೆ ಯುವಕರ ಮೇಲೆಯೇ ಸುಳ್ಳು ನೆಪ ಹೇಳಲು ಈ ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ವಿಡಿಯೊ ನೋಡಿ:
It is highly shameful that such women create a nuisance.
— The Forgotten ‘Man’ 👨⚖️ (@SamSiff) June 15, 2026
First, they abuse and harass men. The moment they are questioned, they start playing the victim card.
And they don’t stop there. They even go to the extent of tearing their own clothes to manufacture evidence and misuse… pic.twitter.com/gsKbvr9VWW
ಸ್ಯಾಮ್ ಸಿಫ್ ಎಂಬ ಎಕ್ಸ್ ಬಳಕೆದಾರರು ಈ ವಿಡಿಯೊ ಶೇರ್ ಮಾಡಿಕೊಂಡಿದ್ದಾರೆ. ಈಗಾಗಲೇ 1.44 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಈ ವಿಡಿಯೊ ಪಡೆದಿದೆ. ʼʼಇಂತಹ ಮಹಿಳೆಯರು ಇರುವುದ, ʼʼಅತ್ಯಂತ ನಾಚಿಕೆಗೇಡಿನ ಸಂಗತಿ. ಮೊದಲು ಅವರು ಪುರುಷರನ್ನು ನಿಂದಿಸಿ ಅವರನ್ನೇ ತಪ್ಪಿತಸ್ಥರನ್ನಾಗಿ ಮಾಡಿದ್ದಾರೆ. ತಾವು ದೌರ್ಜನ್ಯಕ್ಕೊಳಗಾಗಿದ್ದೇವೆ ಎಂದು ಬಿಂಬಿಸಲು ಮಹಿಳೆಯರು ಈ ರೀತಿ ʼವಿಕ್ಟಿಮ್ ಕಾರ್ಡ್ʼ ಬಳಸಿದ್ದಾರೆʼʼ ಎಂದು ಬರೆದುಕೊಂಡಿದ್ದಾರೆ.
ವಿಡಿಯೊ ಮಾಡುತ್ತ ಮೈಮರೆತು ಚರಂಡಿಗೆ ಬಿದ್ದ ಯುವತಿ
ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಒಬ್ಬರು, ʼʼಕಾನೂನನ್ನು ದುರುಪಯೋಗಪಡಿಸಿಕೊಳ್ಳುವ ಮಹಿಳೆಯರುʼʼ ಎಂದು ಕಿಡಿಕಾರಿದ್ದಾರೆ. ಮತ್ತೊಬ್ಬರು, ʼʼಮಹಿಳೆಯರಿಗೆ ರಕ್ಷಣೆ ಹೆಚ್ಚಾಗಿದೆʼʼ ಎಂದಿದ್ದಾರೆ. ಇನ್ನೊಬ್ಬರು, ʼʼಅವರು ಸಾಕ್ಷ್ಯಗಳನ್ನು ತಯಾರಿಸಲು ತಮ್ಮ ಬಟ್ಟೆಗಳನ್ನು ಹರಿದುಕೊಳ್ಳುವ ಮಟ್ಟಕ್ಕೆ ಹೋಗುತ್ತಾರೆʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.