ರೈಲಿನ ಎಸಿ ಕೋಚನ್ನೇ ಪರ್ಸನಲ್ ಬಾರ್ ಮಾಡಿಕೊಂಡ ಯುವಕರು: ಕಿಡಿಗೇಡಿಗಳ ವಿಡಿಯೋ ವೈರಲ್
Viral Video: ಪ್ರಯಾಣ ಮಾಡುವ ಸಂದರ್ಭದಲ್ಲಿಯೂ ಬಸ್, ರೈಲ್ವೆಯ ಕೋಚ್‌ಗಳಲ್ಲಿ ಜನದಟ್ಟಣೆ, ಅಶಿಸ್ತಿನ ವರ್ತನೆ ಕುರಿತು ದೂರುಗಳು ಕೇಳಿಬರುತ್ತಲೇ ಇವೆ. ಇದೀಗ ಯುವಕರ ಗುಂಪೊಂದು ಎಸಿ ಕೋಚ್ ವೊಂದನ್ನು ಪರ್ಸನಲ್ ಬಾರ್ ಆಗಿ ಪರಿವರ್ತಿಸಿದ ವಿಡಿಯೊವೊಂದು ವೈರಲ್ ಆಗಿದೆ.
ಎಸಿ ಕೋಚ್ ನಲ್ಲಿ ಎಣ್ಣೆ ಪಾರ್ಟಿ ಮಾಡಿದ ಯುವಕರು -
ನವದೆಹಲಿ,ಜು.10: ಇತ್ತೀಚಿನ ದಿನದಲ್ಲಿ "ನಾಗರಿಕ ಪ್ರಜ್ಞೆ ಕೊರತೆ" ಬಗ್ಗೆ ಬಹಳಷ್ಟು ಚರ್ಚೆಯಾಗುತ್ತಿದೆ. ಜನ ಹೋದಲ್ಲೆಲ್ಲಾ ಸಾರ್ವಜನಿಕ ಸ್ಥಳದಲ್ಲೂ ಅಶಿಸ್ತಿನಿಂದ ವರ್ತಿಸುತ್ತಿದ್ದಾರೆ. ಅದೇ ರೀತಿ ಪ್ರಯಾಣ ಮಾಡುವ ಸಂದರ್ಭದಲ್ಲಿಯೂ ಬಸ್, ರೈಲ್ವೆಯ ಕೋಚ್‌ಗಳಲ್ಲಿ ಜನದಟ್ಟಣೆ, ಅಶಿಸ್ತಿನ ವರ್ತನೆ ಕುರಿತು ದೂರುಗಳು ಕೇಳಿಬರುತ್ತಲೇ ಇವೆ. ಇದೀಗ ಯುವಕರ ಗುಂಪೊಂದು ಎಸಿ ಕೋಚ್ ವೊಂದನ್ನು ಪರ್ಸನಲ್ ಬಾರ್ ಆಗಿ ಪರಿವರ್ತಿಸಿದ ವಿಡಿಯೊವೊಂದು ವೈರಲ್ (Viral News) ಆಗಿದೆ.
ಯುವಕರು ಎಸಿ ಕೋಚ್ ಅನ್ನು ವೈಯಕ್ತಿಕ ಬಾರ್ ಆಗಿ ಪರಿವರ್ತಿಸಿ, ಅದರೊಳಗೆ ಮದ್ಯವನ್ನು ತಯಾರಿಸುತ್ತಿದ್ದಾರೆ. ಸದ್ಯ ಈ ವೀಡಿಯೊ ಪ್ರಯಾಣಿಕರ ಸುರಕ್ಷತಾ ಬಗ್ಗೆ ಕಳವಳಗಳನ್ನು ಹುಟ್ಟುಹಾಕಿದೆ. ಇಂತಹ ಜನರ ನಡವಳಿಕೆ ಬಗ್ಗೆ ಏನು ಹೇಳಬೇಕು? ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಡಿಯೋ ನೋಡಿ:
When Trains Turn Into Bars: Is Anyone Watching? 🍸🚆
— Jharkhand Rail Users (@JharkhandRail) July 9, 2026
Pintu Kumar alongwith a few boys on boarded an AC coach, openly mixing cocktails, making reels, and behaving as if rules don't apply.
If this is happening in reserved coaches, what message does it send to genuine passengers… pic.twitter.com/YadjGkDcsZ
ವೈರಲ್ ಆದ ವಿಡಿಯೋವೊಂದರಲ್ಲಿ, ಚಲಿಸುವ ರೈಲಿನ ಎಸಿ ಕೋಚ್ ಒಳಗೆ ಯುವಕರ ಗುಂಪೊಂದು ಮದ್ಯ ತಯಾರು ಮಾಡುತ್ತಿದೆ. ಇತರ ಪ್ರಯಾಣಿಕರು ತಮ್ಮ ಸೀಟುಗಳಲ್ಲಿ ಕುಳಿತಿದ್ದಾರೆ. ಒಬ್ಬ ಯುವಕ ಪರದೆಯ ಹಿಂದೆ ಅಡಗಿ ಕುಳಿತು, ಇತರರಿಗೆ ಕಾಣದಂತೆ ಮದ್ಯವನ್ನು ಒಂದು ಬಾಟಲಿಯಿಂದ ಮತ್ತೊಂದು ಬಾಟಲಿಗೆ ಹಾಕಿ ಮಿಶ್ರಣ ಮಾಡುತ್ತಿದ್ದ. ಇನ್ನುಳಿದ ಯುವಕರು ವಿಡಿಯೊ ರೆಕಾರ್ಡ್ ಮಾಡುತ್ತಾ ಹರಟೆ ಹೊಡೆಯುತ್ತಿದ್ದರು.
"ನಿಯಮಗಳು ನೈತಿಕತೆಗಳು ಈಗ ಪುಸ್ತಕಗಳಲ್ಲಿ ಮಾತ್ರ ಅಸ್ತಿತ್ವದಲ್ಲಿವೆ, ಭಾರತೀಯರಲ್ಲಿ ಬೇರೂರಿಲ್ಲ," ಎಂದು ಕೆಲವರು ಟೀಕೆ ಮಾಡಿದ್ದಾರೆ. ರೈಲು ಪ್ರಯಾಣದಲ್ಲಿ ಕಠಿಣ ನಿಯಮ ಗಳುದ್ದರೂ ಇಂತಹ ವರ್ತನೆ ತೋರಲು ಹೇಗೆ ಸಾಧ್ಯ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಕನಿಷ್ಠ ಪಕ್ಷ ಸಾರ್ವಜನಿಕ ಸ್ಥಳದಲ್ಲಿ ಹೇಗೆ ವರ್ತಿಸಬೇಕೆಂದು ತಿಳಿದಿಲ್ಲ ಎಂದು ಬಳಕೆದಾರರು ಕಿಡಿಕಾರಿದ್ದಾರೆ.
ಒಬ್ಬ ಬಳಕೆದಾರರು ದಯವಿಟ್ಟು ಈ ವ್ಯಕ್ತಿಗಳು ಇನ್ನು ಮುಂದೆ ಟಿಕೆಟ್ ಬುಕ್ ಮಾಡುವುದನ್ನು ನಿಷೇಧಿಸಿ. ಅವರ ಆಧಾರ್ ಅನ್ನು ನಿರ್ಬಂಧಿಸಿ ಎಂದು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ರೈಲ್ವೆ ಸೇವಾ ಖಾತೆಯು ತಕ್ಷಣವೇ ಪ್ರತಿಕ್ರಿಯೆ ನೀಡಿದೆ. ಈ ಘಟನೆಯ ಕುರಿತು ಸೂಕ್ತ ತನಿಖೆ ಮತ್ತು ಕ್ರಮ ಕೈಗೊಳ್ಳಲು ಪ್ರಮುಖ ವಿವರಗಳನ್ನು ಕೇಳಿದೆ.