ಇಂಧನ ಬೆಲೆ ಏರಿಕೆ ಬಿಸಿ ತಪ್ಪಿಸಲು ಹೊಸ ತಂತ್ರ: ಬೈಕ್ ಬಿಟ್ಟು ಕುದುರೆ ಏರಿದ ಶಿಕ್ಷಕ; ಇಲ್ಲಿದೆ ವಿಡಿಯೊ
Teacher Rides Horse: ಸಾಮಾಜಿಕ ಮಾಧ್ಯಮದಲ್ಲಿ ದಿನನಿತ್ಯ ಹಲವು ವಿಡಿಯೊಗಳು ವೈರಲ್ ಆಗುತ್ತವೆ. ಯಾವ ವಿಡಿಯೊ ಯಾವ ಕಾರಣಕ್ಕಾಗಿ ವೈರಲ್ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇದೀಗ ವೈರಲ್ ಆಗಿರುವ ವಿಡಿಯೊವೊಂದು ಖಂಡಿತಾ ನಿಮಗೆ ಅಚ್ಚರಿ ತರಿಸಬಹುದು. ಇಂಧನ ಬೆಲೆ ಗಗನಕ್ಕೇರುತ್ತಿರುವ ಸಂದರ್ಭದಲ್ಲಿ ಶಿಕ್ಷಕರೊಬ್ಬರು ಬೈಕ್ ಬಿಟ್ಟು ಕುದುರೆ ಏರಿದ್ದಾರೆ.
ವಾಹನ ಬದಲು ಕುದುರೆಯೇರಿದ ಶಿಕ್ಷಕ -
ರಾಂಚಿ, ಮೇ 18: ಸಾಮಾಜಿಕ ಮಾಧ್ಯಮದಲ್ಲಿ ದಿನನಿತ್ಯ ಹಲವು ವಿಡಿಯೊಗಳು ವೈರಲ್ ಆಗುತ್ತವೆ. ಯಾವ ವಿಡಿಯೊಗಳು ಯಾವ ಕಾರಣಕ್ಕಾಗಿ ವೈರಲ್ ಆಗುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಇದೀಗ ವೈರಲ್ ಆಗಿರುವ ವಿಡಿಯೊವೊಂದು ಖಂಡಿತಾ ನಿಮಗೆ ಅಚ್ಚರಿ ತರಿಸಬಹುದು. ವೈರಲ್ ಆಗಿರುವ ವಿಡಿಯೊದಲ್ಲಿ ಶಿಕ್ಷಕರೊಬ್ಬರು ಬೈಕ್ ಬಿಟ್ಟು ಕುದುರೆ ಸವಾರಿ ಮಾಡುತ್ತಿರುವುದು ಕಂಡುಬಂದಿದೆ (viral video).
ಜಾರ್ಖಂಡ್‌ನ ತಟಿದಿರಿಯಲ್ಲಿರುವ ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಹಾಯಕ ಶಿಕ್ಷಕ ಮುನ್ನಾ ಪ್ರಸಾದ್ ಗುಪ್ತ ಅವರಿಗೆ ಭಾರತ ಸರ್ಕಾರದಿಂದ ಮನೆ ಪಟ್ಟಿ ಮತ್ತು ಜನಗಣತಿ ಕೆಲಸ ವಹಿಸಲಾಗಿದೆ. ಇದಕ್ಕಾಗಿ ಬೈಕ್ ಅಥವಾ ಕಾರನ್ನು ಬಳಸುವ ಬದಲು ತಮಗೆ ನಿಗದಿಪಡಿಸಿದ ಪ್ರದೇಶವನ್ನು ತಲುಪಲು ಕುದುರೆ ಸವಾರಿ ಮಾಡುತ್ತಿದ್ದಾರೆ. ಜನಗಣತಿ ಕಾರ್ಯಕ್ಕಾಗಿ ಕುದುರೆಯ ಮೇಲೆ ಪ್ರಯಾಣಿಸುತ್ತಿರುವ ವಿಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಇಲ್ಲಿದೆ ವಿಡಿಯೊ:
Rising Fuel Costs Push Jharkhand Teacher To Swap Bike For Horse pic.twitter.com/QfQqm2wv05
— NDTV (@ndtv) May 18, 2026
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನಿರಂತರವಾಗಿ ಏರುತ್ತಿರುವುದರಿಂದ ಸಾಮಾನ್ಯ ಜನರ ಜೇಬಿನ ಮೇಲೆ ಕತ್ತರಿ ಬಿದ್ದಂತಾಗಿದೆ. ಈ ಕಾರಣದಿಂದಾಗಿ ಅವರು ಕುದುರೆಯ ಮೇಲೆ ಪ್ರಯಾಣಿಸಲು ನಿರ್ಧರಿಸಿದರು. ಇಂಧನ ಬೆಲೆಗಳು ಗಗನಕ್ಕೇರುತ್ತಿರುವಾಗ ಕುದುರೆ ಸವಾರಿ ಮಾಡುವುದು ಉತ್ತಮ ಎಂದು ಅವರು ಹೇಳಿದ್ದಾರೆ. ಇದಕ್ಕೆ ಬಳಕೆದಾರರು ತರಹೇವಾರಿ ಪ್ರತಿಕ್ರಿಯೆ ನೀಡಿದ್ದಾರೆ. ಹಲವರು ಶಿಕ್ಷಕರ ಸರಳತೆ ಮತ್ತು ವಿಶಿಷ್ಟ ವಿಧಾನಕ್ಕಾಗಿ ಅವರನ್ನು ಶ್ಲಾಘಿಸಿದ್ದಾರೆ.
ಬಂಧಿತ ವಿವಾಹಿತ ಪ್ರೇಮಿಯ ಬಿಡುಗಡೆ ಆಗ್ರಹಿಸಿ ಮೊಬೈಲ್ ಟವರ್ ಏರಿ ಯುವತಿಯ ಹೈಡ್ರಾಮ
ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಇಂಧನ ಮಿತವ್ಯಯಕ್ಕೆ ಸಲಹೆ ನೀಡಿದ್ದರು. ಸ್ವತಃ ಪ್ರಧಾನಿ ತಮ್ಮ ಬೆಂಗಾವಲು ವಾಹನಗಳನ್ನು ಕಡಿತಗೊಳಿಸಿದ್ದರು. ಇವಿ ವಾಹನಗಳಿಗೆ ಹೆಚ್ಚು ಒತ್ತು ನೀಡುವಂತೆ ಅವರು ತಿಳಿಸಿದ್ದರು. ಪ್ರಧಾನಿ ಕರೆಗೆ ಓಗೊಟ್ಟ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಗಳು ಕೂಡ ಇದೇ ನಿಯಮವನ್ನು ಜಾರಿಗೆ ತಂದಿತು. ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಾರ್ವಜನಿಕ ಸಾರಿಗೆ ಮೆಟ್ರೋದಲ್ಲಿ ಪ್ರಯಾಣಿಸುವ ಮೂಲಕ ಪ್ರಧಾನಿ ಕರೆಗೆ ಬೆಂಬಲ ವ್ಯಕ್ತಪಡಿಸಿದ್ದರು.
ರಸ್ತೆಯಲ್ಲಿ ದುಸ್ಸಾಹಸ
ರಸ್ತೆಯಲ್ಲಿ ವಾಹನ ಚಲಾಯಿಸುವಾಗ, ಅಪಾಯಕಾರಿ ಸಾಹಸಗಳನ್ನು ಮಾಡುವ ಜನರನ್ನು ನೀವು ನೋಡಿರಬಹುದು. ಪ್ರಸ್ತುತ ವೈರಲ್ ಆಗಿರುವ ವಿಡಿಯೊ ಕೂಡ ಇಂಥದ್ದೇ. ವ್ಯಕ್ತಿಯೊಬ್ಬ ಸ್ಕೂಟರ್ ಸವಾರಿ ಮಾಡಿರುವ ವಿಡಿಯೊ ವೈರಲ್ ಆಗಿದೆ. ಈತ ಕಾಲುಗಳನ್ನು ಮಡಚಿ, ಕೈಗಳನ್ನು ತೊಡೆ ಮೇಲೆ ಇಟ್ಟು ಸ್ಕೂಟರ್ ಚಲಾಯಿಸಿದ್ದಾನೆ. ಸ್ಕೂಟರ್ ಚಲಾಯಿಸಬೇಕೆಂದರೆ ಕೈಯಲ್ಲಿ ಎಕ್ಸಲೇಟರ್ ಕೊಡಲೇಬೇಕು. ಆದರೆ ಈತ ಯಾವುದೇ ಭಯವಿಲ್ಲದೆ ರಸ್ತೆಯಲ್ಲಿ ಈ ರೀತಿ ದುಸ್ಸಾಹಸ ಮಾಡಿದ್ದಾನೆ. ಸ್ವಲ್ಪ ಸಮತೋಲನ ತಪ್ಪಿದರೂ ಸಹ ಇದು ಆತನ ಜೀವಕ್ಕೆ ಮಾರಕವಾಗಬಹುದು. ಈ ವಿಡಿಯೊಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.