ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: ಬರೋಬ್ಬರಿ 7 ವರ್ಷಗಳ ನಂತರ ಹಳೆಯ ದೋಸ್ತ್‌ಗಳ ಭೇಟಿ? ಹೃದಯಸ್ಪರ್ಶಿ ವಿಡಿಯೊ ಫುಲ್‌ ವೈರಲ್

ಇತ್ತೀಚೆಗೆ ಸ್ಥಳೀಯ ಉಪಾಹಾರ ಗೃಹವೊಂದರಲ್ಲಿ ಏಳು ವರ್ಷಗಳ ಹಿಂದಿನ ಸ್ನೇಹಿತರಿಬ್ಬರು ಅನಿರೀಕ್ಷಿತವಾಗಿ ಪರಸ್ಪರ ಭೇಟಿಯಾಗಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಅವರ ಅನಿರೀಕ್ಷಿತವಾದ ಭೇಟಿಯನ್ನು ಕಂಡು ನೆಟ್ಟಿಗರು ಶಾಕ್‌ ಆಗಿದ್ದಾರೆ.

ಹಳೆಯ ದೋಸ್ತ್‌ಗಳ ರೀ ಯ್ಯೂನಿಯನ್‌ ಹೇಗಿತ್ತು ಗೊತ್ತಾ? ವಿಡಿಯೊ ಇದೆ

Profile pavithra Apr 21, 2025 4:28 PM

ನಮ್ಮ ಹಳೆಯ ಸ್ನೇಹಿತರು ಎಲ್ಲಿಯಾದರೂ ಸಿಕ್ಕಾಗ ಆಗುವ ಸಂತೋಷ ಅಷ್ಟಿಷ್ಟಲ್ಲ. ಅವರ ಜೊತೆ ಮಾತನಾಡುತ್ತಾ ಕುಳಿತರೆ ಸಮಯ ಕಳೆದದ್ದೇ ತಿಳಿಯುವುದಿಲ್ಲ. ಅದೇರೀತಿ ಇತ್ತೀಚೆಗೆ ಸ್ಥಳೀಯ ಉಪಾಹಾರ ಗೃಹವೊಂದರಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಏಳು ವರ್ಷಗಳ ಹಿಂದಿನ ಇಬ್ಬರು ಸ್ನೇಹಿತರು ಅನಿರೀಕ್ಷಿತವಾಗಿ ಪರಸ್ಪರ ಭೇಟಿಯಾಗಿದ್ದಾರೆ. ಅವನಲ್ಲಿ ಒಬ್ಬನು ಇನ್ನೊಬ್ಬ ವ್ಯಕ್ತಿಯನ್ನು ಕಂಡು ನಿಮ್ಮನ್ನು ಎಲ್ಲಿಯೋ ನೋಡಿದ ಹಾಗಿದೆ ಎಂದು ಕೇಳಿದಾಗ ಕೊನೆಗೆ ಇಬ್ಬರೂ ಹಳೆಯ ಸ್ನೇಹಿತರು ಎಂಬುದು ಗೊತ್ತಾಗಿದೆ. ಈ ಅನಿರೀಕ್ಷಿತ ಭೇಟಿಯಿಂದ ಇಬ್ಬರೂ ಸಖತ್‌ ಖುಷಿಯಾಗಿದ್ದಾರಂತೆ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

ವೈರಲ್ ವಿಡಿಯೊದಲ್ಲಿ ಸ್ನೇಹಿತನೊಬ್ಬ ಹೆಲ್ಮೆಟ್ ಧರಿಸಿದ ವ್ಯಕ್ತಿಯ ಕಡೆಗೆ ನಡೆದುಬಂದು ಹೆಸರು ಮತ್ತು ಕೆಲಸದ ಬಗ್ಗೆ ಕೇಳುವುದು ಸೆರೆಯಾಗಿದೆ. ಆಗ ಆ ವ್ಯಕ್ತಿ ಆತ ತನ್ನ ಸ್ನೇಹಿತ ಎಂದು ತಿಳಿಯದೆ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ. ನಂತರ ಹೆಸರನ್ನು ಕೇಳಿದಾಗ ಆ ಸೇನಾಧಿಕಾರಿ ಬೇರೆ ಯಾರೂ ಅಲ್ಲ, ತನ್ನ ಹಳೆಯ ಸ್ನೇಹಿತ ಎಂದು ಕಂಡುಕೊಂಡಿದ್ದಾನೆ. ಕೊನೆಗೆ ಇಬ್ಬರೂ ಆನಂದಬಾಷ್ಪ ಸುರಿಸುತ್ತಾ ಪ್ರೀತಿಯಿಂದ ಪರಸ್ಪರ ತಬ್ಬಿಕೊಂಡಿದ್ದಾರೆ.

ಸ್ನೇಹಿತರ ಪುನರ್ಮಿಲನದ ವಿಡಿಯೊ ಇಲ್ಲಿದೆ ನೋಡಿ...

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೊವನ್ನು ಪೋಸ್ಟ್ ಮಾಡಲಾಗಿದ್ದು, ಇದು ವೈರಲ್ ಆಗಿದೆ. ಮತ್ತು ಇದು 2.7 ಮಿಲಿಯನ್ ವ್ಯೂವ್ಸ್ ಪಡೆದಿದೆ. ನೆಟ್ಟಿಗರು ಅವರ ಪುನರ್ಮಿಲನ ಕಂಡು ಶಾಕ್‌ ಆಗಿದ್ದಾರೆ. ಅನೇಕರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ವ್ಯಕ್ತಪಡಿಸಿದ್ದಾರೆ. "ನಾನು ನಿಮ್ಮ ಅನುಭವವನ್ನು ಅನುಭವಿಸಬಲ್ಲೆ ಬ್ರೋ", ಎಂದು ಹೇಳಿದ್ದಾರೆ. "ಇದು ನನ್ನ ಕಣ್ಣುಗಳಲ್ಲಿ ಕಣ್ಣೀರು ತರಿಸುತ್ತದೆ. ಅಂತಹ ಸುಂದರವಾದ ಭೇಟಿ" ಎಂದು ಇನ್ನೊಬ್ಬರು ಹೇಳಿದ್ದಾರೆ.

ಈ ರೀತಿ ಹಳೆಯ ಸ್ನೇಹಿತರು ಅನಿರೀಕ್ಷಿತವಾಗಿ ಭೇಟಿಯಾದ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಪ್ರಯಾಗ್‍ರಾಜ್‍ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ಅಗ್ನಿಶಾಮಕ ಅಧಿಕಾರಿ ಸಂಜೀವ್ ಕುಮಾರ್ ಸಿಂಗ್ ಅವರು 37 ವರ್ಷಗಳ ನಂತರ ತಮ್ಮ ಕಾಲೇಜು ಸ್ನೇಹಿತೆ ರಶ್ಮಿ ಗುಪ್ತಾ ಅವರನ್ನು ಭೇಟಿ ಮಾಡಿದ ಹೃದಯಸ್ಪರ್ಶಿ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿತ್ತು . ಇಬ್ಬರೂ 1988 ರ ಬ್ಯಾಚ್‍ನ ಸಹಪಾಠಿಗಳಾಗಿದ್ದರು ಮತ್ತು ಅನೇಕ ವರ್ಷಗಳ ನಂತರ ಪರಸ್ಪರ ನೋಡಿ ತುಂಬಾ ಭಾವುಕರಾಗಿದ್ದಾರೆ. ಈ ವಿಶೇಷ ಕ್ಷಣದ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಕೂಡಲೇ ವೈರಲ್ ಆಗಿತ್ತು ಮತ್ತು ನೆಟ್ಟಿಗರು ಅದನ್ನು ತುಂಬಾ ಇಷ್ಟಪಟ್ಟಿದ್ದಾರೆ.