ಮುಂಬೈ ಬಿಸಿಲಿನ ಬೇಗೆಗೆ ಜನ ಹೈರಾಣ; ಕಡಲತೀರಕ್ಕೆ ಬಂದು ಮಲಗಿದ ವಿಡಿಯೋ ವೈರಲ್
Viral Video: ಮುಂಬೈ ನಲ್ಲಿ ಬಿಸಿಲಿನ ಪರಿಣಾಮ ಹೆಚ್ಚಾಗಿದೆ. ಮಳೆ ಬರುವ ಮುನ್ಸೂಚನೆಯೂ ಕಡಿಮೆಯಾಗಿದ್ದು ತೀವ್ರ ಶಾಖದ ನಡುವೆಯೂ, ಬಿಸಿಲನ್ನು ತಡೆದುಕೊಳ್ಳಲು ಜನರು ವರ್ಸೋವಾ ಬೀಚ್‌ನ ತೀರದಲ್ಲಿ ನಿದ್ರಿಸುತ್ತಿರುವುದು ಕಂಡುಬಂದಿದೆ. ಈ ಕಡಲ ತೀರವೇ ಇದೀಗ ಅವರ ತಾತ್ಕಾಲಿಕ ವಿಶ್ರಾಂತಿ ಧಾಮವಾಗಿದೆ.
ಕಡಲತೀರದಲ್ಲೇ ವಿಶ್ರಾಂತಿ ಪಡೆಯುತ್ತಿರುವ ಜನ -
ಮುಂಬೈ,ಜೂ.19: ಜೂನ್ ತಿಂಗಳು ಮುಗಿಯುತ್ತಾ ಬಂದರೂ ಮಳೆಯ ಆಗಮನವಂತೂ ಇನ್ನು ಆಗಿಲ್ಲ. ಬಿಸಿಲಿನ ಬೇಗೆಗೆ ಜನ ತತ್ತರಿಸಿ ಹೋಗಿದ್ದು ತಂಪಾದ ವಾತಾವರಣ ಹುಡುಕುತ್ತಾ ಹೋಗು ತ್ತಿದ್ದಾರೆ. ಇದೀಗ ಈ ಸೆಕೆಯಿಂದ ದಣಿವಾರಿಸಿಕೊಳ್ಳಲು ನೂರಾರು ಜನರು ಮುಂಬೈನ್ ವರ್ಸೋವಾ ಬೀಚ್‌ನಲ್ಲಿ ಮಲಗಿರುವ ವಿಡಿಯೊವೊಂದು ವೈರಲ್ (Viral News) ಆಗಿದೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನೂರಾರು ಜನರು ಬೀಚ್ ಪ್ರದೇಶದಾದ್ಯಂತ ಹಾಕಿರುವ ಚಾಪೆಗಳ ಮೇಲೆ ವಿಶ್ರಾಂತಿ ಪಡೆಯುತ್ತಿರುವುದು ಕಂಡು ಬಂದಿದೆ.
ಮುಂಬೈನಲ್ಲಿ ಬಿಸಿಲಿನ ಪರಿಣಾಮ ಹೆಚ್ಚಾಗಿದೆ. ಮಳೆ ಬರುವ ಮುನ್ಸೂಚನೆಯೂ ಕಡಿಮೆಯಾಗಿದ್ದು ತೀವ್ರ ಶಾಖದ ನಡುವೆಯೂ, ಬಿಸಿಲನ್ನು ತಡೆದುಕೊಳ್ಳಲು ಜನರು ವರ್ಸೋವಾ ಬೀಚ್‌ನ ತೀರದಲ್ಲಿ ನಿದ್ರಿಸುತ್ತಿರುವುದು ಕಂಡುಬಂದಿದೆ. ಈ ಕಡಲ ತೀರವೇ ಇದೀಗ ಅವರ ತಾತ್ಕಾಲಿಕ ವಿಶ್ರಾಂತಿ ಧಾಮವಾಗಿದೆ.
ವಿಡಿಯೋ ನೋಡಿ:
ತೀವ್ರವಾದ ಶಾಖದಿಂದ ತಪ್ಪಿಸಿಕೊಳ್ಳಲು ನಾವು ಪ್ರತಿದಿನ ಬೀಚ್‌ನಲ್ಲಿ ಮಲಗುತ್ತೇವೆ ಎಂದು ಕೊಳೆಗೇರಿ ನಿವಾಸಿಯೊಬ್ಬರು ಹಂಚಿಕೊಂಡಿದ್ದಾರೆ. ಛಾವಣಿಯ ಮನೆಗಳೊಳಗಿನ ಶಾಖವು ಹೆಚ್ಚಾಗಿರುವುದರಿಂದ ಇಲ್ಲಿನ ಜನರು ಬೀಚ್ ನಲ್ಲಿ ಮಲಗುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ವಿವರಿಸಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ಮಕ್ಕಳು, ಹಿರಿಯರು, ಮಹಿಳೆಯರು ಸೇರಿದಂತೆ ವಿಶ್ರಾಂತಿ ಪಡೆಯುತ್ತಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಮುಂಬೈ ಸನಿಹದ ಭಯಂದರ್ ಈಸ್ಟ್‌ನ ಆನಂದ್ ದಿಘೆ ಮೈದಾನದಲ್ಲೂ ವಲಸೆ ಕಾರ್ಮಿಕರು ಇದೇ ರೀತಿ ಆಕಾಶದಡಿ ಮಲಗಿರುವುದು ವರದಿಯಾಗಿತ್ತು. ಈ ಬಗ್ಗೆ ನಗರಾಧ್ಯಕ್ಷ ಸಂದೀಪ್ ರಾಣೆ ನೇತೃತ್ವದ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಪದಾಧಿಕಾರಿಗಳು, ಜನರು ಅಲ್ಲಿ ರಾತ್ರಿ ಕಳೆಯುತ್ತಿರುವುದನ್ನು ಗಮನಿಸಿದ ನಂತರ ಮೈದಾನದಲ್ಲಿ ಪರಿಶೀಲನೆ ನಡೆಸಿದ್ದರು. ಇದರಲ್ಲಿ ಹೆಚ್ಚಿನವರು ಹತ್ತಿರದ ಇಂದಿರಾ ನಗರ ಪ್ರದೇಶದ ನಿವಾಸಿಗಳು ಎಂದು ತಿಳಿದು ಬಂದಿದೆ.
ಬೀಚ್ ಮತ್ತು ಮೈದಾನಗಳಲ್ಲಿ ಜನರು ಈ ರೀತಿ ಮಲಗುತ್ತಿರುವುದರ ನಡುವೆ, ಸುರಕ್ಷತೆಯ ಪ್ರಶ್ನೆಯೂ ಎದ್ದಿದೆ. ಸಾಮಾನ್ಯ ಜನರ ಸೋಗಿನಲ್ಲಿ ಯಾವುದೇ ಅಪರಾಧ ಹಿನ್ನೆಲೆಯುಳ್ಳವರು ಇಲ್ಲಿ ಆಶ್ರಯ ಪಡೆದರೆ ಎನ್ನುವ ದೂರುಗಳು ಕೇಳಿಬರುತ್ತಿದೆ.