ಬ್ಲಿಂಕ್‌ಇಟ್ ಮೂಲಕ ಕೆಲವೇ ನಿಮಿಷದಲ್ಲಿ ಮನೆ ಬಾಗಿಲಿಗೆ ಬಂತು ಫೋಟೊ ಪ್ರಿಂಟ್: ಭಾರತದ ತಂತ್ರಜ್ಞಾನಕ್ಕೆ ಮನಸೋತ ಪೋಲೆಂಡ್ ಯುವತಿ
Viral News: ಆನ್‌ಲೈನ್ ಅಪ್ಲಿಕೇಷನ್ ಮೂಲಕ ಮನೆ ಬಾಗಿಲಿಗೆ ತಲುಪುವ ವಸ್ತುಗಳು, ಸುಲಭವಾಗಿ ಸಿಗುವ ಆರೋಗ್ಯ ಸೇವೆಗಳಿಗೆ ವಿದೇಶಿಗರು ಅಚ್ಚರಿ ಪಟ್ಟಿದ್ದು ಇದೆ. ಇದೀಗ ಭಾರತದಲ್ಲಿ ನೆಲೆಸಿರುವ ಪೋಲೆಂಡ್ ಪ್ರಜೆ ಡೊಮಿನಿಕಾ ಪಟಾಲಾಸ್-ಕಲ್ರಾ ಭಾರತದ ಕ್ವಿಕ್-ಕಾಮರ್ಸ್ ತಂತ್ರಜ್ಞಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರಲ್ಲೂ ಬ್ಲಿಂಕ್‌ಇಟ್‌ನಲ್ಲಿ ಫೋಟೊ ಪ್ರಿಂಟ್ ಮಾಡುವ ಆಯ್ಕೆಯನ್ನು ನೋಡಿ ಅಚ್ಚರಿಗೊಳಗಾಗಿದ್ದಾಗಿ ಹೇಳಿದ್ದಾರೆ.
ಬ್ಲಿಂಕ್‌ಇಟ್‌ನ ಫೀಚರ್ ನೋಡಿ ಅಚ್ಚರಿಗೆ ಒಳಗಾದ ಪೋಲೆಂಡ್ ಯುವತಿ -
ನವದೆಹಲಿ, ಅ. 9: ಭಾರತದಲ್ಲಿ ಕೆಲವೊಂದು ಸೇವೆಗಳು ಸುಲಭವಾಗಿ ಮತ್ತು ಕೈಗೆಟುಕುವ ದರದಲ್ಲಿ ಲಭ್ಯವಾಗುವ ಬಗ್ಗೆ ಅನೇಕ ವಿದೇಶಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆ್ಯಪ್‌ಗಳ ಮೂಲಕ ಮನೆ ಬಾಗಿಲಿಗೆ ತಲುಪುವ ವಸ್ತುಗಳು, ಸುಲಭವಾಗಿ ಸಿಗುವ ಆರೋಗ್ಯ ಸೇವೆಗಳಿಗೆ ವಿದೇಶಿಗರು ಅಚ್ಚರಿ ಪಟ್ಟಿದ್ದೂ ಇದೆ. ಇದೀಗ ಭಾರತದಲ್ಲಿ ನೆಲೆಸಿರುವ ಪೋಲೆಂಡ್ ಪ್ರಜೆ ಡೊಮಿನಿಕಾ ಪಟಾಲಾಸ್-ಕಲ್ರಾ ಎಂಬ ಯುವತಿ ಭಾರತದಲ್ಲಿನ ಕ್ವಿಕ್-ಕಾಮರ್ಸ್ ತಂತ್ರಜ್ಞಾನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರಲ್ಲೂ ಬ್ಲಿಂಕ್‌ಇಟ್‌ನಲ್ಲಿ ಫೋಟೊ ಪ್ರಿಂಟ್ ಮಾಡುವ ಆಯ್ಕೆಯನ್ನು ನೋಡಿ ನಿಜಕ್ಕೂ ಅಚ್ಚರಿಗೆ ಒಳಗಾಗಿದ್ದಾಗಿ ವಿಡಿಯೊದಲ್ಲಿ (Viral News) ಹೇಳಿದ್ದಾರೆ.
ಭಾರತದಲ್ಲಿನ ಕ್ವಿಕ್-ಕಾಮರ್ಸ್ ವೇದಿಕೆಗಳು ಜನರು ಶಾಪಿಂಗ್ ಮಾಡುವ ವಿಧಾನವನ್ನೇ ಬದಲಾಯಿಸಿವೆ. ದಿನಸಿ ವಸ್ತುಗಳು, ಔಷಧಗಳಿಂದ ಹಿಡಿದು ದುಬಾರಿ ಎಲೆಕ್ಟ್ರಾನಿಕ್ ವಸ್ತುಗಳವರೆಗೆ ಎಲ್ಲವೂ ಈಗ ಮೊಬೈಲ್‌ನಲ್ಲಿ ಒಂದೇ ಕ್ಲಿಕ್‌ನಲ್ಲಿ ಪಡೆಯ ಬಹುದು. ಅದರಲ್ಲೂ ಬ್ಲಿಂಕ್‌ಇಟ್ ಮೂಲಕ ಪ್ರಿಂಟ್ ಔಟ್ ಫೋಟೊಗಳನ್ನು ಮನೆಗೆ ತರಿಸಿಕೊಳ್ಳಬಹುದು ಎಂದು ತಿಳಿದು ಈ ಡಿಜಿಟಲ್ ವ್ಯವಸ್ಥೆಯ ಅನುಕೂಲತೆಯನ್ನು ಪೋಲಿಷ್ ಯುವತಿ ಶ್ಲಾಘಿಸಿದ್ದಾರೆ.
ವಿಡಿಯೊ ನೋಡಿ:
ಬ್ಲಿಂಕ್‌ಇಟ್ ಆ್ಯಪ್‌ನಲ್ಲಿ ಪ್ರಿಂಟಿಂಗ್ ಆಯ್ಕೆ ಇದೆ ಅನ್ನುವುದನ್ನು ಗಮನಿಸಿದ ಡೊಮಿನಿಕಾ ಹೇಗೆ ಬರಲಿದೆ ಎಂದು ವೀಕ್ಷಿಸಲು 100 ರೂಪಾಯಿ ಪಾವತಿಸಿ 3 ವಿಭಿನ್ನ ಶೈಲಿಯ ಫೋಟೊಗಳನ್ನು ಆರ್ಡರ್ ಮಾಡಿದರು. ಕೇವಲ 21 ನಿಮಿಷಗಳಲ್ಲಿ ಫೋಟೊ ಅವರ ಮನೆ ಬಾಗಿಲಿಗೆ ತಲುಪಿದವು. ಅದರಲ್ಲೂ ಅವುಗಳ ಗುಣಮಟ್ಟವನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದು, "ಇದು ತುಂಬಾ ಉತ್ತಮ ಗುಣಮಟ್ಟದ್ದಾಗಿದೆ. ನನಗೆ ನಿಜವಾಗಿಯೂ ಬೆರಗಾಯಿತು" ಎಂದು ಅವರು ಹೇಳಿದ್ದಾರೆ.
ನೋಯ್ಡಾದ ಅಪಾರ್ಟ್‌ಮೆಂಟ್ ಸ್ವಿಮ್ಮಿಂಗ್ ಪೂಲ್ ಬಳಿ ಪ್ರವಾಸಿಗರಿಂದ ಗಾಂಜಾ ಸೇವನೆ
ಈ ವಿಡಿಯೊ ವೈರಲ್ ಆಗಿದ್ದು, ಅನೇಕ ಭಾರತೀಯರು ಬ್ಲಿಂಕ್‌ಇಟ್ ಫೋಟೊ ಪ್ರಿಂಟ್ ಮಾಡುವ ಸೌಲಭ್ಯವಿರುವುದು ಈಗ ತಿಳಿದಿದೆ ಎಂದು ಧನ್ಯವಾದ ತಿಳಿಸಿದ್ದಾರೆ. ಕಾಲೇಜು ವಿದ್ಯಾರ್ಥಿಯೊಬ್ಬ ಅಸೈನ್‌ಮೆಂಟ್ ಪ್ರಿಂಟ್‌ಔಟ್‌ಗಳಿಗಾಗಿ ಯಾವಾಗಲೂ ಬ್ಲಿಂಕ್‌ಇಟ್ ಬಳಸುವುದಾಗಿ ತಿಳಿಸಿದ್ದಾರೆ.