ಬಲೂನ್, ಹೂವುಗಳಿಂದ ರೈಲು ಬೋಗಿಯ ಅಲಂಕಾರ; ಹನಿಮೂನ್ ಸ್ಪಾಟ್‌ನಂತೆ ಬದಲಾದ ಎಸಿ ಕ್ಯಾಬಿನ್
Viral Video: ರೈಲಿನ ಎಸಿ ಕೋಚ್ ಅನ್ನು ದಂಪತಿ ಐಷಾರಾಮಿ ಹನಿಮೂನ್ ಸೆಟ್ ಅಪ್‌ನಂತೆ ಆಲಂಕರಿಸಿದ ದೃಶ್ಯವೊಂದು ವೈರಲ್ ಆಗಿದೆ. ವಿವಿಧ ಬಣ್ಣದ ಬಲೂನ್, ಹೂವಿನ ಹ್ಯಾಂಗಿಂಗ್, ಮೇಣದ ಬತ್ತಿ, ಗುಲಾಬಿ ದಳಗಳಿಂದ ಕೋಚ್ ಅನ್ನು ಅಲಂಕರಿಸಲಾಗಿದೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.
ಹನಿಮೂನ್ ಸ್ಪಾಟ್ ಆಗಿ ಅಲಂಕೃತಗೊಂಡ ರೈಲ್ವೇ ಫಸ್ಟ್ ಎಸಿ ಕ್ಯಾಬಿನ್ -
ನವದೆಹಲಿ, ಜು. 8: ರೈಲು ಸಂಚಾರ ಸದ್ಯ ದೇಶದಲ್ಲಿ ಇನ್ನಷ್ಟು ಜನಪ್ರಿಯವಾಗುತ್ತಿದೆ. ಇದೀಗ ರೈಲಿನ ಎಸಿ ಕೋಚ್ ಅನ್ನು ದಂಪತಿ ಐಷಾರಾಮಿ ಹನಿಮೂನ್ ಸೆಟ್‌ಅಪ್‌ನಂತೆ ಅಲಂಕರಿಸಿದ ದೃಶ್ಯವೊಂದು ವೈರಲ್ (Viral News) ಆಗಿದೆ. ವಿವಿಧ ಬಣ್ಣದ ಬಲೂನ್, ಹೂವಿನ ಹ್ಯಾಂಗಿಂಗ್, ಮೇಣದ ಬತ್ತಿ, ಸಾವಿರಾರು ಗುಲಾಬಿ ದಳಗಳಿಂದ ಕೋಚ್ ಅನ್ನು ಅಲಂಕರಿಸಲಾಗಿದೆ. ಈ ದೃಶ್ಯ ನೋಡಿದ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದೆ ಇನ್ನೂ ಕೆಲವರು ಟೀಕಿಸಿದ್ದಾರೆ. ಒಟ್ಟಿನಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.
ಭಾರತೀಯ ರೈಲ್ವೆಯ ಫಸ್ಟ್ ಕ್ಲಾಸ್ ಎಸಿ ಕ್ಯಾಬಿನ್ ಅನ್ನು ಐಷಾರಾಮಿ ಹನಿಮೂನ್ ಸ್ಥಳದಂತೆ ಸಿದ್ದ ಪಡಿಸಲಾಗಿದೆ. ಪೋಸ್ಟ್‌ನ ಪ್ರಕಾರ ಪ್ರಯಾಣಿಕರೊಬ್ಬರು ವಿವಾಹ ವಾರ್ಷಿಕೋತ್ಸವದಂದು ಸಂಗಾತಿಗೆ ಸರ್‌ಪ್ರೈಸ್ ನೀಡಲು ಈ ಅಲಂಕಾರವನ್ನು ಸಿದ್ದಪಡಿಸಿದ್ದರು ಎನ್ನಲಾಗಿದೆ. ಕ್ಯಾಬಿನ್ ಒಳಗೆ ಪ್ರದರ್ಶಿಸಲಾದ ʼಐ ಲವ್ ಯುʼ ಸಂದೇಶವು ಮತ್ತಷ್ಟು ರೋಮ್ಯಾಂಟಿಕ್ ವಾತಾವರಣ ಉಂಟು ಮಾಡಿತು. ಈ ಕ್ಯಾಬಿನ್ ರೈಲು ಅನ್ನುವುದಕ್ಕಿಂತಲೂ ಹೆಚ್ಚಾಗಿ ಹೋಟೆಲ್‌ನಲ್ಲಿ ಹನಿಮೂನ್ ಸ್ಪಾಟ್‌ನಂತೆ ಕಂಡು ಬಂತು.
ವಿಡಿಯೊ ನೋಡಿ:
ವೈರಲ್ ಆದ ಈ ಕ್ಲಿಪ್‌ನಲ್ಲಿ ಬಲೂನ್‌ನಿಂದ ಮಾಡಿದ ಆಲಂಕಾರಗಳು, ಹೂವಿನ ಹ್ಯಾಂಗಿಂಗ್, ಸಾವಿರಾರು ಗುಲಾಬಿ ದಳಗಳಿಂದ ಮಾಡಿದ ಡೆಕೋರೆಷನ್ ಹಾಗೂ ಕ್ಯಾಬಿನ್ ಒಳಗೆ ಪ್ರದರ್ಶಿಸಲಾದ ʼಐ ಲವ್ ಯುʼ ಸಂದೇಶವು ಆಕರ್ಷಕವಾಗಿ ಕಾಣಿಸಿತು. ಈ ದೃಶ್ಯವು ತ್ವರಿತವಾಗಿ ಇಂಟರ್‌ನೆಟ್ ಬಳಕೆದಾರರ ಗಮನ ಸೆಳೆಯಿತು.
ನೂರಾರು ಕೋತಿಗಳ ಆರೈಕೆ ಮಾಡುತ್ತಿರುವ 77ರ ವೃದ್ಧ ತಾಯಿ
ಇದರ ಹಿಂದಿನ ಪ್ರಯತ್ನವನ್ನು ಅನೇಕರು ಮೆಚ್ಚಿದ್ದು ಕ್ರಿಯಾತ್ಮಕ ಮತ್ತು ಸ್ಮರಣೀಯ ಎಂದು ಹೇಳಿದ್ದಾರೆ. ಕೆಲವರು ಇದನ್ನು ಅತ್ಯಂತ ವಿಶಿಷ್ಟ ಪ್ರಯಾಣದ ಅಚ್ಚರಿಗಳಲ್ಲಿ ಒಂದು ಎಂದರು. ಇನ್ನು ಕೆಲವರು, ರೈಲ್ವೆ ನಿಲ್ದಾಣ ಮತ್ತು ಬೋಗಿಗಳನ್ನು ಹೀಗೆ ಆಲಂಕಾರ ಮಾಡಲು ಅನುಮತಿ ಇದೆಯೇ? ರೈಲ್ವೆ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯಲಾಗಿದೆಯೇ? ಎಂದು ಕೇಳಿದ್ದಾರೆ. ಚಲಿಸುವ ರೈಲಿನೊಳಗೆ ಮೇಣದ ಬತ್ತಿ ಮತ್ತು ಬಲೂನ್‌ಗಳಂತಹ ಅಲಂಕಾರಿಕ ವಸ್ತುಗಳನ್ನು ಬಳಸುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಅವು ರೈಲ್ವೆ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸುತ್ತವೆಯೇ? ಎಂದು ಪ್ರಶ್ನಿಸಿದ್ದಾರೆ.