Viral Video: ಗಣೇಶ ಪೆಂಡಾಲ್‍ನಲ್ಲಿ ಅಹಮದಾಬಾದ್ ವಿಮಾನ ದುರಂತದ ಮರುಸೃಷ್ಟಿ; ವಿಡಿಯೊ ವೈರಲ್, ನೆಟ್ಟಿಗರು ಟೀಕೆ
Social Media Users Slams: ಗಣೇಶ ಚತುರ್ಥಿ ಪೆಂಡಾಲ್‌ಗಳು ಸಾಮಾನ್ಯವಾಗಿ ಸೃಜನಶೀಲತೆಗೆ ಹೆಸರುವಾಸಿಯಾಗಿದೆ. ಆದರೆ ಅಹಮದಾಬಾದ್‌ನ ಬೆಹ್ರಾಂಪುರ ಪ್ರದೇಶದಲ್ಲಿ, ಜೂನ್ 12 ರಂದು ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಬಲಿಯಾದವರು ಮತ್ತು ರಕ್ಷಣಾ ಪ್ರಯತ್ನಗಳನ್ನು ಮುನ್ನಡೆಸುವ ವೀರರನ್ನು ಈ ಪೆಂಡಾಲ್ ಚಿತ್ರಿಸಿದೆ.

-

ಅಹಮದಾಬಾದ್: ಗಣೇಶ ಚತುರ್ಥಿ ಹಬ್ಬವನ್ನು (Ganesh Festival) ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗಿದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಹಬ್ಬದ ಇನ್ನೊಂದು ವಿಶೇಷವೆಂದರೆ ಪೆಂಡಾಲ್‍ಗಳು. ಗಣೇಶ ಚತುರ್ಥಿ ಪೆಂಡಾಲ್‌ಗಳು ಸಾಮಾನ್ಯವಾಗಿ ಸೃಜನಶೀಲತೆಗೆ ಹೆಸರುವಾಸಿಯಾಗಿದೆ. ಆದರೆ ಅಹಮದಾಬಾದ್ (Ahmadabad)ನ ಬೆಹ್ರಾಂಪುರ ಪ್ರದೇಶದಲ್ಲಿನ ಈ ಪೆಂಡಾಲ್ ವಿಭಿನ್ನ ಕಾರಣಕ್ಕಾಗಿ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆಯುತ್ತಿದೆ.
ಆಕರ್ಷಕ ಥೀಮ್ ಅಥವಾ ಅತಿರಂಜಿತ ಅಲಂಕಾರದ ಬದಲಿಗೆ, ಜೂನ್ 12 ರಂದು ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಬಲಿಯಾದವರು ಮತ್ತು ರಕ್ಷಣಾ ಪ್ರಯತ್ನಗಳನ್ನು ಮುನ್ನಡೆಸುವ ವೀರರನ್ನು ಈ ಪೆಂಡಾಲ್ ಚಿತ್ರಿಸಿದೆ. ಆ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದ್ದು, ಬಹುತೇಕರಿಗೆ ಇದು ಇಷ್ಟವಾಗಿಲ್ಲ. ಇದು ಸೂಕ್ಷ್ಮವಲ್ಲದ ನಡೆ ಎಂದು ಟೀಕಿಸಿದ್ದಾರೆ.
ಈ ಬೆಹ್ರಾಂಪುರ ಪೆಂಡಾಲ್ ಅಪಘಾತದ ಸ್ಥಳವನ್ನು ವಿಭಿನ್ನವಾಗಿ ಮರುಸೃಷ್ಟಿಸಿದೆ. ಮರಳು, ಇಟ್ಟಿಗೆಗಳು ಮತ್ತು ಇತರ ಅಗತ್ಯ ಸಲಕರಣೆಗಳಿಂದ ನಿರ್ಮಿಸಲಾದ ಇದು, ಬೆಂಕಿ ಮತ್ತು ಹೊಗೆಯೊಂದಿಗೆ ಅಪಘಾತಕ್ಕೀಡಾದ ವಿಮಾನ, ಭಾಗಶಃ ನಾಶವಾದ ಕಟ್ಟಡ ಮತ್ತು ವೈದ್ಯಕೀಯ ಸಿಬ್ಬಂದಿ ಮೃತದೇಹಗಳನ್ನು ಸಾಗಿಸುವ ದೃಶ್ಯವನ್ನು ಒಳಗೊಂಡಿದೆ.
ವಿಡಿಯೊ ವೀಕ್ಷಿಸಿ:
ಇದು ಮಾನವೀಯತೆ ಮತ್ತು ಧೈರ್ಯಕ್ಕೆ ಗೌರವವಾಗಿದೆ. ಆ ದಿನ ಜೀವಗಳನ್ನು ಉಳಿಸಲು ತಮ್ಮ ಕೈಲಾಗುವಷ್ಟು ಪ್ರಯತ್ನಿಸಿದ ವೈದ್ಯರು, ದಾದಿಯರು, ಪೊಲೀಸರು ಮತ್ತು ಅಗ್ನಿಶಾಮಕ ದಳದವರನ್ನು ಚಿತ್ರಿಸಿದೆ. ಜೊತೆಗೆ ಗಣೇಶನ ಅದ್ಭುತ ಪ್ರತಿಮೆಯು ಕತ್ತಲೆಯಲ್ಲಿಯೂ ಸಹ ಬಹಳ ಸುಂದರವಾಗಿ ಕಂಡಿದೆ. ಜೂನ್ 12 ರಂದು ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಬಲಿಯಾದವರು ಮತ್ತು ರಕ್ಷಣಾ ಕಾರ್ಯಕರ್ತರಿಗೆ ಗೌರವ ಸಲ್ಲಿಸಿದ್ದಕ್ಕೆ, ಕೆಲವರು ಬೆಹ್ರಾಂಪುರ ಪೆಂಡಾಲ್ ಅನ್ನು ಶ್ಲಾಘಿಸಿದರೆ, ಇತರರು ಕಿಡಿಕಾರಿದ್ದಾರೆ.
ಅಪಘಾತದ ಸ್ಥಳವನ್ನು ಮರುಸೃಷ್ಟಿಸುವುದರಿಂದ ದುಃಖಿತ ಕುಟುಂಬಗಳಿಗೆ ಆಗಿರುವ ಗಾಯ ಮತ್ತೆ ಮರುಕಳಿಸುತ್ತವೆ ಎಂದಿದ್ದಾರೆ. ಈ ದುರಂತ ಘಟನೆಯಲ್ಲಿ ಅನೇಕ ಕುಟುಂಬಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡರು. ಇದು ಅವರಿಗೆ ನೋವುಂಟು ಮಾಡಬಹುದು ಎಂದು ಬಳಕೆದಾರರೊಬ್ಬರು ಹೇಳಿದರು. ಇದು ಪುನರ್ನಿರ್ಮಾಣ ಮಾಡುವ ಅಥವಾ ಪ್ರದರ್ಶಿಸುವ ವಿಷಯವಲ್ಲ. ಜನರು ಭಯಾನಕ ರೀತಿಯಲ್ಲಿ ತಮ್ಮ ಜೀವಗಳನ್ನು ಕಳೆದುಕೊಂಡಿದ್ದಾರೆ. ಅನೇಕರು ದುಃಖದ ನೆನಪುಗಳನ್ನು ನೆನಪಿಸಿಕೊಳ್ಳುತ್ತಾರೆ. ಈ ಘಟನೆಯ ಪರಿಣಾಮ ಆಘಾತಕಾರಿ ಮತ್ತು ಭಯಾನಕವಾಗಿತ್ತು ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟ್ ಕಾಮೆಂಟ್ ಮಾಡಿದ್ದಾರೆ. ದುರ್ಘಟನೆಯ ದೃಶ್ಯವನ್ನು ಮರುಸೃಷ್ಟಿ ಮಾಡಿರುವುದು ಸಂತೋಷವಾಗಿಲ್ಲ. ಏಕೆಂದರೆ ಇದು ನನಗೆ ನೋವನ್ನು ನೆನಪಿಸುತ್ತದೆ ಎಂದು ಮಗದೊಬ್ಬ ಬಳಕೆದಾರರು ಬರೆದಿದ್ದಾರೆ.
ಅಹಮದಾಬಾದ್ ವಿಮಾನ ದುರಂತ
ಲಂಡನ್ ಗ್ಯಾಟ್ವಿಕ್‌ಗೆ ಹೋಗುವ ಮಾರ್ಗದಲ್ಲಿ ಬೋಯಿಂಗ್ 787 ಡ್ರೀಮ್‌ಲೈನರ್ ಈ ವರ್ಷದ ಜೂನ್‌ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳ ನಂತರ ಅಪಘಾತಕ್ಕೀಡಾಯಿತು. ಈ ಭೀಕರ ಅಪಘಾತವು ವಿಮಾನದಲ್ಲಿದ್ದ 242 ಜನರ ಪ್ರಾಣವನ್ನು ಬಲಿ ತೆಗೆದುಕೊಂಡಿತು. ವಿಮಾನವು ವೈದ್ಯಕೀಯ ಕಾಲೇಜಿನ ಬಳಿಯ ಹಾಸ್ಟೆಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹಲವಾರು ಮಂದಿ ವಿದ್ಯಾರ್ಥಿಗಳು ಹತರಾದರು. ಈ ದುರಂತವು ಇಡೀ ರಾಷ್ಟ್ರವನ್ನು ದುಃಖಿಸುವಂತೆ ಮಾಡಿತು.