Viral Video: ಶಾಲಾ ಬಸ್ಸಿನಲ್ಲಿ ನೇತಾಡುತ್ತಾ ಹೋಗುತ್ತಿರುವ ವಿದ್ಯಾರ್ಥಿಗಳು; ಡೇಂಜರಸ್ ವಿಡಿಯೋ ವೈರಲ್
ಶಾಲಾ ಬಸ್ಸಿನಲ್ಲಿ ಮಕ್ಕಳು ನೇತಾಡುತ್ತ ಪ್ರಯಾಣಿಸುತ್ತಿರುವ ಭೀಕರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಕ್ಕಳ ಸುರಕ್ಷತೆಯನ್ನು ಲೆಕ್ಕಿಸದೆ ನಿಯಮಗಳನ್ನು ಉಲ್ಲಂಘಿಸಿ ಶಾಲಾ ಬಸ್ಸೊಂದರಲ್ಲಿ ಮಕ್ಕಳು ನೇತಾಡುತ್ತಾ ಪ್ರಯಾಣಿಸುತ್ತಿರುವ ದೃಶ್ಯ ಕಂಡು ಬಂದಿದೆ. ಈ ಘಟನೆ ರಾಜಸ್ಥಾನದ ಸಲೂಂಬರ್‌ನಿಂದ ಧರಿಯಾ ವಾದ್ ಮಾರ್ಗದಲ್ಲಿ ಕಂಡುಬಂದಿದ್ದು ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲಾ ಬಸ್ಸಿನಲ್ಲಿ ವಿದ್ಯಾರ್ಥಿಗಳು ನೇತಾಡುತ್ತಿರುವ ದೃಶ್ಯ -
ಸಲೂಂಬರ್,ಡಿ. 24: ಇಂದು ಎಲ್ಲ ಕಡೆ ರಸ್ತೆ ಕಾಮಗಾರಿ ಎಷ್ಟೇ ಅಭಿವೃದ್ಧಿ ಹೊಂದಿದ್ದರೂ ಗ್ರಾಮೀಣ ಭಾಗದಂತ ಹಲವು ಪ್ರದೇಶದಲ್ಲಿ ಸಂಚಾರ ವ್ಯವಸ್ಥೆ ಇನ್ನು ಸರಿಯಾಗಿಲ್ಲ. ಕೆಲವು ಹಳ್ಳಿ ಪ್ರದೇಶದಲ್ಲಿ ಬಸ್ ವ್ಯವಸ್ಥೆ ಇಲ್ಲದ ಕಾರಣ ಶಾಲಾ ಮಕ್ಕಳು, ಉದ್ಯೋಗಕ್ಕೆ ತೆರಳುವ ಜನರು ಪ್ರತಿದಿನ ಪರದಾಡುತ್ತಿದ್ದಾರೆ. ಅದರಲ್ಲೂ ಕೆಲವೆಡೆ ಅಸುರಕ್ಷಿತ ಸಾರಿಗೆಯನ್ನು ಬಳಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಬಸ್ಸಿನಲ್ಲಿ ಶಾಲಾ ಮಕ್ಕಳು ನೇತಾಡುತ್ತ ಪ್ರಯಾಣಿಸುತ್ತಿರುವ ಭೀಕರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಮಕ್ಕಳ ಸುರಕ್ಷತೆಯನ್ನು ಲೆಕ್ಕಿಸದೆ ನಿಯಮಗಳನ್ನು ಉಲ್ಲಂಘಿಸಿ ಶಾಲಾ ಬಸ್ಸೊಂದರಲ್ಲಿ ಮಕ್ಕಳು ನೇತಾಡುತ್ತಾ ಪ್ರಯಾಣಿಸುತ್ತಿರುವ ದೃಶ್ಯ ಕಂಡು ಬಂದಿದೆ. ಈ ಘಟನೆ ರಾಜಸ್ಥಾನದ ಸಲೂಂಬರ್ ನಿಂದ ಧರಿಯಾ ವಾದ್ ಮಾರ್ಗದಲ್ಲಿ ಕಂಡುಬಂದಿದ್ದು ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನದಲ್ಲಿ ಶಾಲೆಗೆ ತೆರಳುವ ಮಕ್ಕಳು ಚಲಿಸುವ ಶಾಲಾ ಬಸ್ಸಿನಲ್ಲಿ ನೇತಾಡುತ್ತಿರುವ ಆತಂಕಕಾರಿ ವಿಡಿಯೊಗೆ ಪೋಷಕರು ಹಾಗೂ ಸ್ಥಳೀಯರಿಂದ ಸಾಕಷ್ಟು ಆಕ್ರೋಶ ಕೇಳಿಬಂದಿದೆ. ವೇಗವಾಗಿ ಚಲಿಸುತ್ತಿರುವ ಬಸ್ಸು ಮತ್ತು ಹಿಂಭಾಗದ ಸರಳನ್ನು ಹಿಡಿದುಕೊಂಡು ಮಕ್ಕಳು ನೇತಾಡುತ್ತಿರುವ ದೃಶ್ಯ ವಿಡಿಯೋದಲ್ಲಿ ನೋಡಬಹುದು. ಬಸ್ಸಿನ ಒಳಗೆ ಮಿತಿಮೀರಿಯಾಗಿ ಮಕ್ಕಳನ್ನು ತುಂಬಿದ್ದಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ..
ಶಾಲಾ ಬಸ್ಸಿನಲ್ಲಿ ನೇತಾಡುತ್ತಾ ಪ್ರಯಾಣ ಮಾಡಿದ ಮಕ್ಕಳು: ವಿಡಿಯೋ ನೋಡಿ
ಈ ವಿಡಿಯೋವನ್ನು ಅಲ್ಲಿ ಹಾದುಹೋಗುವ ಪ್ರತ್ಯಕ್ಷ ದರ್ಶಿಯೊಬ್ಬರು ರೆಕಾರ್ಡ್ ಮಾಡಿದ್ದಾರೆ. "ಬಸ್ಸನ್ನು ನೋಡುತ್ತಿದ್ದರೆ ಎದೆ ನಡುಗುತ್ತದೆ. ಚಾಲಕರು ಕಾನೂನಿನ ಭಯ ಅಥವಾ ಮಕ್ಕಳ ಸುರಕ್ಷತೆಯ ಬಗ್ಗೆ ಯಾವುದೇ ಕಾಳಜಿಯನ್ನು ತೋರಿಸುವುದಿಲ್ಲ.. ಬಸ್‌ನಲ್ಲಿ ಮಕ್ಕಳನ್ನು ಓವರ್ ಲೋಡ್ ಆಗಿ ತುಂಬಿದ್ದರಿಂದ ಕೆಲವರು ಹಿಂಭಾಗದಿಂದ ನೇತಾಡುತ್ತಿದ್ದರು, ಆದ್ದರಿಂದ ಯಾವುದೇ ಕ್ಷಣದಲ್ಲಿ ಗಂಭೀರ ಅಪಘಾತ ಸಂಭವಿಸಬಹುದು ಎಂದು ಬರೆದುಕೊಂಡಿದ್ದಾರೆ.
ರಾಜ್ಯದಲ್ಲಿ 'ರಸ್ತೆ ಸುರಕ್ಷತಾ ಸಪ್ತಾಹ' ನಡೆಯುತ್ತಿರುವಾಗಲೇ ಇಂತಹ ಬೇಜವಾಬ್ದಾರಿತನದ ಘಟನೆ ನಡೆದಿದೆ. ಇದು ಸ್ಥಳೀಯ ಪೊಲೀಸರು ಮತ್ತು ಸಾರಿಗೆ ಇಲಾಖೆಯ ಸಮಸ್ಯೆಯನ್ನು ಎತ್ತಿ ತೋರಿಸಿದೆ. ಗ್ರಾಮೀಣ ಭಾಗಗಳಲ್ಲಿ ಶಾಲಾ ಬಸ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ, ಖಾಸಗಿ ಬಸ್ ಚಾಲಕರು ಮಕ್ಕಳನ್ನು ಬೇಕಾ ಬಿಟ್ಟಿಯಾಗಿ ತುಂಬಿದ್ದಾರೆ.. ಇದಕ್ಕೆ ಯಾರು ಜವಾಬ್ದಾರರರು ಎಂದು ಪ್ರಶ್ನೆ ಮಾಡಿದ್ದಾರೆ.
Viral Video: ಈ ರೀತಿನೂ ಟ್ಯಾಟೂ ಹಾಕಿಸ್ಕೋಳ್ತಾರಾ..? ಭಾರೀ ವೈರಲಾಗ್ತಿದೆ ಈ ವಿಡಿಯೊ
ಸ್ಥಳೀಯ ನಿವಾಸಿಗಳ ಪ್ರಕಾರ, ಈ ಪ್ರದೇಶದಲ್ಲಿ ಶಾಲಾ ಬಸ್‌ಗಳ ಬಹಳಷ್ಟು ಕೊರತೆಯಿದೆ ಮತ್ತು ಖಾಸಗಿ ಬಸ್ ನಿರ್ವಾಹಕರು ಆಗಾಗ್ಗೆ ಮಕ್ಕಳನ್ನು ಓವರ್‌ಲೋಡ್ ಮಾಡುತ್ತಾರೆ ಎಂದು ಹೇಳಿ ಕೊಂಡಿದ್ದಾರೆ. ಇಂತಹ ಸಣ್ಣ ತಪ್ಪು ಅಥವಾ ಹಠಾತ್ ಬ್ರೇಕ್ ದೊಡ್ಡ ದುರಂತಕ್ಕೆ ಕಾರಣ ವಾಗಬಹುದು. ವೇಗವಾಗಿ ಬಸ್ ಚಲಾಯಿಸುವುದು ಮತ್ತು ಎಮರ್ಜೆನ್ಸಿ ಬ್ರೇಕ್ ಹಾಕುವುದರಿಂದ ನೇತಾಡುತ್ತಿರುವ ಮಕ್ಕಳು ಕೆಳಗೆ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು, ಕೂಡಲೇ ಬಸ್ ಚಾಲಕನ ಲೈಸೆನ್ಸ್ ರದ್ದುಗೊಳಿಸಬೇಕು ಮತ್ತು ಶಾಲಾ ಆಡಳಿತ ಮಂಡಳಿಯ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.