ದುಬಾರಿ ಮನೆಯ ಇಎಂಐ ಕಟ್ಟಲು ರಾಪಿಡೋ ಕೆಲಸ : 40 ಲಕ್ಷ ಸಂಬಳವಿದ್ದ ಟೆಕ್ಕಿ ಬದುಕು ಈಗ ಬೀದಿಗೆ!
Viral Video: ಐಟಿ ವಲಯದ ಉದ್ಯೋಗಿಯೊಬ್ಬರು ಕೆಲಸವನ್ನು ಕಳೆದುಕೊಂಡು ಇದೀಗ ಬೈಕ್ ಟ್ಯಾಕ್ಸಿ ಚಾಲಕರಾಗಿದ್ದಾರೆ. ಸದ್ಯ ಸಾಲದ ಮೇಲೆ ಖರೀದಿಸಿದ 1.4 ಕೋಟಿ ರೂಪಾಯಿ ಮನೆಯನ್ನು ಉಳಿಸಲು ಅವರು ಹೆಣಗಾಡುತ್ತಿದ್ದಾರೆ. ಈಗ ತನ್ನ ಫ್ಲಾಟ್‌ಗೆ 95,000 ರೂಪಾಯಿ EMI ಪಾವತಿಸಲು ಬೈಕ್ ಟ್ಯಾಕ್ಸಿ ಓಡಿಸುತ್ತಿದ್ದಾರೆ
ಸಾಲ ತೀರಿಸಲು ರಾಪಿಡೋ ಕೆಲಸ ಮಾಡುವ ಟೆಕ್ಕಿ -
ದೆಹಲಿ,ಎ.11: ಕೆಲವೊಮ್ಮೆ ನಾವು ಆಯ್ಕೆ ಮಾಡುವ ನಿರ್ಧಾರ ನಮ್ಮ ಬದುಕನ್ನು ಹೇಗೆ ಬದಲಾಯಿಸುತ್ತವೆ ಅನ್ನೋದಕ್ಕೆ ಈ ಘಟನೆಯೇ (Viral News) ಸಾಕ್ಷಿಯಾಗಿದೆ. ಐಟಿ ವಲಯದ ಉದ್ಯೋಗಿ ಯೊಬ್ಬರು ಕೆಲಸವನ್ನು ಕಳೆದುಕೊಂಡು ಇದೀಗ ಬೈಕ್ ಟ್ಯಾಕ್ಸಿ ಚಾಲಕರಾಗಿದ್ದಾರೆ. ಸದ್ಯ ಸಾಲದ ಮೇಲೆ ಖರೀದಿಸಿದ 1.4 ಕೋಟಿ ರೂಪಾಯಿ ಮನೆಯನ್ನು ಉಳಿಸಲು ಅವರು ಹೆಣಗಾಡುತ್ತಿದ್ದಾರೆ.
40 ಲಕ್ಷ ರೂಪಾಯಿ ಸಂಬಳಗಳಿಸುತ್ತಿದ್ದ ಐಟಿ ಉದ್ಯೋಗಿಯೊಬ್ಬರು ಕೆಲಸದಿಂದ ವಜಾ ಗೊಂಡಿದ್ದಾರೆ. ಈಗ ತನ್ನ 1.4 ಕೋಟಿ ರೂಪಾಯಿ ಫ್ಲಾಟ್‌ಗೆ 95,000 ರೂಪಾಯಿ EMI ಪಾವತಿಸಲು ಬೈಕ್ ಟ್ಯಾಕ್ಸಿ ಓಡಿಸುತ್ತಿದ್ದಾರೆ. ಇದು ಕೆಲಸದ ಅಭದ್ರತೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕುವಂತೆ ಮಾಡಿದೆ.
ವಿಡಿಯೋ ನೋಡಿ:
1.4 करोड़ का 3BHK लिया जब Salary 40 LPA थी लेकिन अब jobless है 20 साल तक 95 हजार EMI कैसे manage करेगा
— Vivek (@Vivek_4580ji) April 9, 2026
अभी मैं अपने दोस्त से मिलकर आ रहा था Prateek Grand City से उसने 2024 में 3BHK flat लिया था करीब 1.4 करोड़ का
उस समय उसका salary package 40 LPA था पहले तो excitement में ले… pic.twitter.com/kDBdYuYTQa
ದೆಹಲಿಯ ಸಮೀಪ ವಾಸವಿರುವ ಟೆಕ್ಕಿಯೊಬ್ಬರು ಉತ್ತಮ ಉದ್ಯೋಗದಲ್ಲಿದ್ದರು. ಆಗ ಬರುವ ಸಂಬಳದ ಆಯ್ಕೆಯ ಮೇರೆಗೆ ಗಾಜಿಯಾಬಾದ್ ನ "ಪ್ರತೀಕ್ ಗ್ರ್ಯಾಂಡ್ ಸಿಟಿ" ಎಂಬ ಸ್ಥಳದಲ್ಲಿ 1.4 ಕೋಟಿ ರೂಪಾಯಿ ಬೆಲೆಯ 3BHK ಫ್ಲಾಟ್ ಖರೀದಿ ಮಾಡಿದ್ದರು. ಇದಕ್ಕಾಗಿ ಅವರು ದೊಡ್ಡ ಮೊತ್ತದ ಸಾಲವನ್ನು ಕೂಡ ಪಡೆದಿದ್ದರು.ಆದರೆ ಅವರು ಸಾಲ ಪಡೆದ ಕೆಲವೇ ದಿನದಲ್ಲಿ ಮನೆಯನ್ನು ಕಳೆದುಕೊಂಡಿದ್ದಾರೆ.
ತಿಂಗಳಿಗೆ 95,000 ರೂಪಾಯಿ ಇ ಎಂ ಐ ಕಟ್ಟಲಿದ್ದು ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಬಳ ಬರುತ್ತಿದ್ದಾಗ ಈ ಇಎಂಐ ಅವರಿಗೆ ಹೊರೆಯಾಗುತ್ತಿರಲಿಲ್ಲ. ಆದರೆ ಐಟಿ ವಲಯದಲ್ಲಿ ನಡೆದ ದಿಢೀರ್ ಉದ್ಯೋಗ ಕಡಿತದಿಂದಾಗಿ ಅವರು ಕೆಲಸ ಕಳೆದುಕೊಂಡರು. ಕಳೆದ ಮೂರು ತಿಂಗಳಿನಿಂದ ಯಾವುದೇ ಆದಾಯವಿಲ್ಲದೆ ಅವರು ಕಂಗಾಲಾಗಿದ್ದಾರೆ.
ಹೆಚ್ಚುತ್ತಿರುವ ಆರ್ಥಿಕ ಒತ್ತಡವನ್ನು ನಿಭಾಯಿಸಲು, ಅವರು ರಾಪಿಡೋ ರೈಡರ್ ಆಗಿ ಕೆಲಸ ಮಾಡಲು ಮುಂದಾಗಿದ್ದಾರೆ. ಪ್ರತಿ ರೈಡ್ ಅವರ ದೊಡ್ಡ ಮಾಸಿಕ ಬಾಕಿಗಳನ್ನು ಪೂರೈಸಲು ಸಣ್ಣ ಮೊತ್ತವನ್ನು ಕೊಡುಗೆ ನೀಡುತ್ತದೆ. ಸದ್ಯ ಈ ಸುದ್ದಿಯೂ ಹೆಚ್ಚಿನ ಸಂಬಳವಿದೆ ಎಂಬ ಕಾರಣಕ್ಕೆ ಅತಿಯಾದ ಸಾಲ ಮಾಡುವುದು ಎಷ್ಟು ಅಪಾಯ ಎನ್ನುವುದನ್ನು ಸ್ಪಷ್ಟ ಪಡಿಸುತ್ತದೆ.