ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

"ಭಾರತದಲ್ಲೇ ನೆಮ್ಮದಿ": ಅಮೆರಿಕದ ಮೈಕ್ರೋಸಾಫ್ಟ್ ಕಂಪನಿ ಕೆಲಸ ತೊರೆದು ತಾಯ್ನಾಡಿಗೆ ಮರಳಿದ ಟೆಕ್ಕಿ ಹೇಳಿದ್ದೇನು?

Viral News: ಅಮೆರಿಕಾದಲ್ಲಿ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊರ್ವರು ಲಕ್ಷ ಲಕ್ಷ ಸಂಬಳ ತೊರೆದು ಭಾರತಕ್ಕೆ ಮರಳಿದ್ದಾರೆ. ಈ ನಿರ್ಧಾರವು ಸಂಬಳಕ್ಕಿಂತ ಹೆಚ್ಚಿನದನ್ನು ನೀಡಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಅಮೆರಿಕವನ್ನು ತೊರೆದ ನಂತರ ತಮ್ಮ ಜೀವನದಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಮಾತನಾಡುತ್ತಾ, ಈಗ ಕಡಿಮೆ ಸಂಪಾದಿಸಬಹುದಾದರೂ, ಹೆಚ್ಚಿನ ಸ್ವಾತಂತ್ರ್ಯ, ಕುಟುಂಬದೊಂದಿಗೆ ಸಮಯ ಮತ್ತು ಹಲವರ ಜೊತೆ ವೈಯಕ್ತಿಕ ಸಂಪರ್ಕಗಳನ್ನು ಪಡೆದುಕೊಂಡಿದ್ದು ಸಂತಸ ತಂದಿದೆ ಎಂದು ಹಂಚಿಕೊಂಡಿದ್ದಾರೆ.

ಮೈಕ್ರೋಸಾಫ್ಟ್ ಕೆಲಸ ತೊರೆದು ಭಾರತಕ್ಕೆ ಮರಳಿದ  ಟೆಕ್ಕಿ: ಕಾರಣವೇನು?

ಸಂಗ್ರಹ ಚಿತ್ರ -

Profile
Pushpa Kumari Sep 4, 2026 2:50 PM

ನವದೆಹಲಿ,ಸೆ.4: ವಿದೇಶದಲ್ಲಿ ಉದ್ಯೋಗ ಮಾಡುವ ಜನರಿಗೆ ಉತ್ತಮ ಪ್ಯಾಕೇಜ್ ಇದ್ದರೂ ವೈಯಕ್ತಿಕ ಕಾರಣದಿಂದ ಕೆಲಸ ತೊರೆದವರು ಅನೇಕರು ಇದ್ದಾರೆ. ಇದೀಗ ಅಮೆರಿಕಾದಲ್ಲಿ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊರ್ವರು ಲಕ್ಷ ಲಕ್ಷ ಸಂಬಳ ತೊರೆದು ಭಾರತಕ್ಕೆ ಮರಳಿದ್ದಾರೆ. ಈ ನಿರ್ಧಾರವು ಸಂಬಳಕ್ಕಿಂತ ಹೆಚ್ಚಿನದನ್ನು ನೀಡಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಅಮೆರಿಕವನ್ನು ತೊರೆದ ನಂತರ ತಮ್ಮ ಜೀವನದಲ್ಲಿ ಆಗಿರುವ ಬದಲಾವಣೆ ಗಳ ಬಗ್ಗೆ ಮಾತನಾಡುತ್ತಾ, ಈಗ ಕಡಿಮೆ ಸಂಪಾದಿಸಬಹುದಾದರೂ, ಹೆಚ್ಚಿನ ಸ್ವಾತಂತ್ರ್ಯ, ಕುಟುಂಬದೊಂದಿಗೆ ಸಮಯ ಮತ್ತು ಹಲವರ ಜೊತೆ ವೈಯಕ್ತಿಕ ಸಂಪರ್ಕಗಳನ್ನು ಪಡೆದುಕೊಂಡಿದ್ದು ಸಂತಸ ತಂದಿದೆ ಎಂದು (Viral News) ಹಂಚಿಕೊಂಡಿದ್ದಾರೆ.

ವಿದೇಶದಲ್ಲಿ ಹೆಚ್ಚಿನ ವೇತನ, ಗುಣಮಟ್ಟದ ಜೀವನ ಶೈಲಿ ಇದ್ದರೂ ಹೆತ್ತವರ ಜೊತೆ ಸಮಯ ಕಳೆಯಲು, ಭಾರತದ ಸಂಸ್ಕೃತಿ, ಆಚರಣೆಗಾಗಿ ಇಲ್ಲಿಯೇ ಬದುಕು ಕಟ್ಟಿಕೊಳ್ಳಲು ಬಯಸುವವರು ಅನೇಕರು ಇದ್ದಾರೆ. ಇದೀಗ ಅಮೆರಿಕದಲ್ಲಿ ಮೈಕ್ರೋಸಾಫ್ಟ್‌ನಲ್ಲಿ ಉತ್ತಮ ಪ್ಯಾಕೇಜ್ ಕೆಲಸ ಮಾಡುತ್ತಿದ್ದ ಉಜ್ವಲ್ ಚಡ್ಡಾ ಎಂಬುವವರು, ತಮ್ಮ ಕೆಲಸ ತೊರೆದು ಮೂರು ವರ್ಷಗಳ ಹಿಂದೆ ಭಾರತಕ್ಕೆ ವಾಪಸ್ಸು ಮರಳಿದ್ದಾರೆ.



ಅಮೆರಿಕದಲ್ಲಿದ್ದಾಗ ವೀಸಾ, ಗ್ರೀನ್ ಕಾರ್ಡ್ ಮತ್ತು ಕೆಲಸದ ಅಭದ್ರತೆಯ ಬಗ್ಗೆಯೇ ಯೋಚನೆ ಮಾಡಬೇಕಿತ್ತು. ಆದರೆ ಭಾರತಕ್ಕೆ ಮರಳಿರುವುದು ಅವರಿಗೆ ವೃತ್ತಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಸ್ವಂತ ಆಲೋಚನೆಗಳ ಮೇಲೆ ಕೆಲಸ ಮಾಡಲು ಹೆಚ್ಚಿನ ಸ್ವಾತಂತ್ರ್ಯವನ್ನು ನೀಡಿತು. ಅಮೆರಿಕದಲ್ಲಿದ್ದರೆ ವರ್ಷಕ್ಕೆ ಕೇವಲ ಒಂದು ವಾರ ಮಾತ್ರ ಹೆತ್ತವರನ್ನು ನೋಡಲು ಸಾಧ್ಯ ಇರುತ್ತಿತ್ತು. ಹಣವನ್ನು ಆಮೇಲೆ ಬೇಕಾದರೂ ಗಳಿಸಬಹುದು, ಆದರೆ ಸಮಯವನ್ನು ಮರು ಪಡೆಯಲು ಸಾಧ್ಯವಿಲ್ಲ ಅಂದಿದ್ದಾರೆ.

Viral Video: ಪೊಲೀಸ್ ಬೈಕ್‌ನಲ್ಲಿ ರ‍್ಯಾಪಿಡೋ ಸೇವೆ? ಸರ್ಕಾರಿ ವಾಹನ ದುರುಪಯೋಗ ಪಡಿಸಿಕೊಂಡ ಸಬ್ ಇನ್ಸ್‌ಪೆಕ್ಟರ್‌ ವಿರುದ್ಧ ಕ್ರಮ

ಅಮೆರಿಕದಲ್ಲಿದ್ದಾಗ "ಆಮೇಲೆ ಮಾಡೋಣ" ಎಂದು ಕಾಯುತ್ತಿದ್ದ ಜೀವನದ ಪ್ರಮುಖ ನಿರ್ಧಾರಗಳನ್ನು ಈಗ ತಕ್ಷಣವೇ ಕೈಗೊಳ್ಳಲು ಸಾಧ್ಯವಾಗುತ್ತಿದೆ. ಇಲ್ಲಿ ತಾನು ಅಂದುಕೊಂಡಿದ್ದನ್ನು ಸುಲಭವಾಗಿ ಪೂರ್ಣಗೊಳಿಸಲು ಸಿದ್ದನಾಗಿದ್ದೇನೆ. ಕಡಿಮೆ ಸಂಬಳ ಇದ್ದರೂ ನೆಮ್ಮದಿ ಮುಖ್ಯ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದು ಕೊಂಡಿದ್ದಾರೆ. ​ಉಜ್ವಲ್ ಅವರ ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಅವರ ನಿರ್ಧಾರವನ್ನು ಬೆಂಬಲಿಸಿದ್ದು ಹೆತ್ತವರ ಜೊತೆಗಿರುವ ಸಯಮ ಲಕ್ಷ- ಲಕ್ಷ ಮೌಲ್ಯಕ್ಕಿಂತ ದೊಡ್ಡದು ಎಂದು ಬರೆದುಕೊಂಡಿದ್ದಾರೆ.