ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇಡೀ ದೇಶಕ್ಕೆ ಮಾದರಿ ಈ ಗ್ರಾಮ- ಉದ್ಯಮಿ ಆನಂದ್ ಮಹೀಂದ್ರಾ ಶೇರ್ ಮಾಡಿದ ವಿಡಿಯೊದಲ್ಲಿ ಏನಿದೆ?

ಮಹಾರಾಷ್ಟ್ರದ ತಡೋಬೊ ರಾಷ್ಟ್ರೀಯ ಉದ್ಯಾನವನದ ಬಳಿಯಿರುವ ಸತಾರ ನೆವಾರ್ ಎಂಬ ಹಳ್ಳಿಯಲ್ಲಿ ವಿವಿಧ ಸೌಲಭ್ಯಗಳನ್ನು ಪಡೆದ ಗ್ರಾಮಸ್ಥರು ಸ್ಫೂರ್ತಿದಾಯಕ ಬದುಕನ್ನು ಸಾಗಿಸುತ್ತಿದ್ದು ಈ ಕುರಿತಾದ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಇದೇ ವೈರಲ್ ಕ್ಲಿಪ್ ಅನ್ನು ಉದ್ಯಮಿ ಆನಂದ್ ಮಹೀಂದ್ರಾ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿ ಕೊಂಡಿದ್ದಾರೆ. ಸದ್ಯ ಹಳ್ಳಿ ಜನರ ಜೀವನ ಶೈಲಿ, ಸುಸ್ಥಿರ ಅಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಇರುವ ಪರಿಯು ನೆಟ್ಟಿಗರ ಗಮನ ಸೆಳೆಯುತ್ತಿದೆ.

ದೇಶಕ್ಕೆ ಮಾದರಿಯಾದ ಗ್ರಾಮದ ಬಗ್ಗೆ ಆನಂದ್ ಮಹೀಂದ್ರಾ ಹೇಳಿದ್ದೇನು?

ಇಡೀ ದೇಶಕ್ಕೆ ಮಾದರಿ ಸತಾರ ನೆವಾರ್ ಗ್ರಾಮ -

Profile
Pushpa Kumari Dec 2, 2025 4:58 PM

ಮುಂಬೈ, ಡಿ. 2: ಭಾರತದಲ್ಲಿನ ಐತಿಹಾಸಿಕ ಪ್ರವಾಸಿ ಸ್ಥಳಗಳ ಬಗ್ಗೆ ತಿಳಿದುಕೊಂಡು ಇಲ್ಲಿಗೆ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಅನೇಕ ಪ್ರವಾಸಿಗರು ನಮ್ಮ ದೇಶದ ಕಲೆ, ಸಾಂಸ್ಕೃತಿಯನ್ನು ವಿಡಿಯೊ ಮೂಲಕ ಕೊಂಡಾಡಿದ್ದಾರೆ. ಜತೆಗೆ ಇಲ್ಲಿನ ಜನರ ಜೀವನ ಶೈಲಿ, ನೈರ್ಮಲ್ಯ ಸಮಸ್ಯೆ ಬಗ್ಗೆ ಮಾತನಾಡಿವರೂ ಇದ್ದಾರೆ. ಈ ಮಧ್ಯೆ ಮಹಾರಾಷ್ಟ್ರದ ತಡೋಬೊ ರಾಷ್ಟ್ರೀಯ ಉದ್ಯಾನವನದ ಬಳಿಯಿರುವ ಸತಾರ ನೆವಾರ್ ಎಂಬ ಹಳ್ಳಿ ಪ್ರವಾಸಿಗರ ಗಮನ ಸೆಳೆಯುತ್ತಿದೆ. ವಿವಿಧ ಸೌಲಭ್ಯಗಳನ್ನು ಪಡೆದ ಗ್ರಾಮಸ್ಥರು ಸ್ಫೂರ್ತಿದಾಯಕ ಬದುಕನ್ನು ಸಾಗಿಸುತ್ತಿದ್ದು ಈ ಕುರಿತಾದ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ. ಇದೇ ವೈರಲ್ ಕ್ಲಿಪ್ ಅನ್ನು ಉದ್ಯಮಿ ಆನಂದ್ ಮಹೀಂದ್ರಾ (Anand Mahindra) ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಹಳ್ಳಿ ಜನರ ಜೀವನ ಶೈಲಿ, ಸುಸ್ಥಿರ ಅಭಿವೃದ್ಧಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಇರುವ ಪರಿಯು ನೆಟ್ಟಿಗರ ಗಮನ ಸೆಳೆಯುತ್ತಿದೆ.

ವೈರಲ್ ಆದ ವಿಡಿಯೊದಲ್ಲಿ ಸತಾರ ನೆವಾರ್ ಎಂಬ ಗ್ರಾಮದ ಸಂಪೂರ್ಣ ಚಿತ್ರಣವೇ ಬದಲಾಗಿದ್ದನ್ನು ಕಾಣಬಹುದು. ಇಲ್ಲಿನ ಜನರ ಸುಸ್ಥಿರ ಜೀವನ ಮತ್ತು ಸಮುದಾಯ ಶಿಸ್ತಿಗೆ ಮಾದರಿ ಎಂದು ವಿಡಿಯೊದಲ್ಲಿ ತಿಳಿಸಲಾಗಿದೆ. ಸೌರ ವಿದ್ಯುತ್, ಶುದ್ಧ ಕುಡಿಯುವ ನೀರಿನ ಸೌಲಭ್ಯ, ಬೀದಿ ಸ್ವಚ್ಛತೆ, ವಿವಿಧ ಸುಧಾರಣೆಗಳನ್ನು ಗ್ರಾಮಗಳಲ್ಲಿ ತರಲಾಗಿದೆ‌.

ವಿಡಿಯೊ ಇಲ್ಲಿದೆ:



ಸತಾರ ನೇವಾರ್‌ನಲ್ಲಿನ ಸ್ವಚ್ಛತೆ, ಸಂಪನ್ಮೂಲ ನಿರ್ವಹಣೆ ಮತ್ತು ನಾಗರಿಕ ಜವಾಬ್ದಾರಿಗಳು ಮಾದರಿ. ಸತಾರ ನೇವಾರ್‌ನ ರೂಪಾಂತರ ಈ ಮಟ್ಟಿಗೆ ಆಗಲು ಇಲ್ಲಿನ ಸ್ಥಳೀಯ ನಾಯಕ ಗಜಾನನ್‌ ಮುಖ್ಯ ಕಾರಣ. ಅವರು ಕಳೆದ ಐದು ವರ್ಷಗಳ ಕಾಲ ಇಲ್ಲಿ ಅನೇಕ ಯೋಜನೆ ರೂಪಿ ಸುವ ಸಲುವಾಗಿ ಗ್ರಾಮಸ್ಥರ ಮನವೊಲಿಸಿದ್ದಾರೆ. ಅವರೊಂದಿಗ ಗ್ರಾಮಸ್ಥರನ್ನು ಕೂಡ ಒಗ್ಗೂಡಿಸಿಕೊಂಡು ಅನೇಕ ಪ್ರಾಯೋಗಿಕ ಸುಧಾರಣೆಗಳನ್ನು ಜಾರಿಗೆ ತಂದಿದ್ದಾರೆ.

ಗ್ರಾಮದಲ್ಲಿ ಉಚಿತ ಸೌರಶಕ್ತಿ, ಸೋಲಾರ್ ಬಿಸಿನೀರಿನ ವ್ಯವಸ್ಥೆ, ಸೌರ ಬೀದಿ ದೀಪಗಳು, ವಾಟರ್ ಎಟಿಎಂ ಕಾರ್ಡ್ ಮೂಲಕ ಕುಡಿಯುವ ನೀರು ಪಡೆಯುವ ವ್ಯವಸ್ಥೆ ಇದೆ. ಇಲ್ಲಿನ ಬೀದಿಗಳನ್ನು ಸ್ವಚ್ಛವಾಗಿಡಲು ಮಕ್ಕಳು, ಮಹಿಳೆಯರು ಪ್ರತಿದಿನ ಸಂಜೆ ಕಸ ಸಂಗ್ರಹಿಸುವ ವ್ಯವಸ್ಥೆ ಮಾಡಿದ್ದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು. ಗ್ರಾಮಸ್ಥರು ಇಡೀ ಗ್ರಾಮವನ್ನು ಸ್ವಚ್ಛಗೊಳಿಸುವ ಜವಬ್ದಾರಿ ತೆಗೆದುಕೊಳ್ಳುತ್ತಾರೆ. ಇಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದರೆ 500 ರೂ. ದಂಡ ವಿಧಿಸಲಾಗುತ್ತದೆ ಎಂಬ ನಿಯಮ ಕೂಡ ಜಾರಿಯಲ್ಲಿದೆ ಎನ್ನುವುದು ವಿಶೇಷ.

ಏರ್‌ಪೋರ್ಟ್‌ ರೋಡ್‌ನಲ್ಲಿ ಮಚ್ಚು ಹಿಡಿದು ವಿಲೀಂಗ್‌; ಯುವಕರ ಹುಚ್ಚಾಟ ಕ್ಯಾಮರಾದಲ್ಲಿ ಸೆರೆ

ಗ್ರಾಮದಲ್ಲಿ ತೆರೆದ ಚರಂಡಿಗಳಿಲ್ಲ, ಕಸದ ರಾಶಿಗಳಿಲ್ಲ ಅಷ್ಟರ ಮಟ್ಟಿಗೆ ಸುಸಜ್ಜಿತ ವ್ಯವಸ್ಥೆ ಇಲ್ಲಿದ್ದು, ಎಲ್ಲರಿಗೂ ಸ್ಫೂರ್ತಿದಾಯಕ. ಇಲ್ಲಿನ ಮಕ್ಕಳಿಗಾಗಿ ಒಂದು ಸಣ್ಣ ಗ್ರಂಥಾಲಯವಿದೆ. ಅಲ್ಲಿಯೇ ಹಿರಿಯ ನಾಗರಿಕರು ವಿಶ್ರಾಂತಿ ಪಡೆಯಲು ಮತ್ತು ಟಿವಿ ವೀಕ್ಷಿಸಲು ಒಂದು ಸ್ಥಳವೂ ಕೂಡ ಮಾಡಲಾಗಿದೆ. ಇಲ್ಲಿನ ಗ್ರಾಮದ ಮಹಿಳೆಯರು ತಡೋಬೊ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಾರೆ. ಇಷ್ಟೆಲ್ಲ ಸೌಕರ್ಯಗಳನ್ನು ನಿರ್ವಹಿಸಲು ಗ್ರಾಮಸ್ಥರೇ ತಮ್ಮ ಹಣ, ಶ್ರಮ ಮತ್ತು ಸಮಯವನ್ನು ಮುಡಿಪಾಗಿಟ್ಟಿದ್ದಾರೆ.

ಈ ವೈರಲ್ ವಿಡಿಯೊವನ್ನು ಉದ್ಯಮಿ ಆನಂದ್ ಮಹೀಂದ್ರಾ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು, ಪರಿವರ್ತನಾತ್ಮಕ ಬದಲಾವಣೆಗೆ ಈ ಹಳ್ಳಿ ಅತ್ಯುತ್ತಮ ಉದಾಹರಣೆ. ಯಾವುದೇ ಸ್ಥಳ ಸುಂದರವಾಗಿ ಕಾಣ ಬೇಕೆಂದರೆ ಬೃಹತ್ ಬಂಡವಾಳ, ಅತ್ಯಾಧುನಿಕ ಮೂಲಸೌಕರ್ಯ, ಹೊಳೆಯುವ ಕಟ್ಟಡಗಳೇ ಬೇಕೆಂಬ ಅಗತ್ಯವಿಲ್ಲ. ಉತ್ತಮ ನಾಯಕತ್ವದಿಂದ ಒಂದು ಸ್ಥಳವನ್ನೇ ಪರಿವರ್ತಿಸಬಹುದು. ಇದಕ್ಕೆ ಸತಾರಾ ಗ್ರಾಮದ ಜನರು ನಮಗೆ ಸ್ಫೂರ್ತಿ ನೀಡುತ್ತಾರೆ ಎಂದು ಬರೆದುಕೊಂಡಿದ್ದಾರೆ.