ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಆಧ್ಯಾತ್ಮಿಕ ಕೋರ್ಸ್‌ಗೆ ಸೇರಿದ್ದ ಮಹಿಳೆ ಕಳೆದುಕೊಂಡಿದ್ದು ಬರೋಬ್ಬರಿ 3 ಕೋಟಿ ರೂ.!

Spiritual Course: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹಿಳೆಯು ಆಧ್ಯಾತ್ಮಿಕ ಕೋರ್ಸ್ ಅನ್ನು ಪಡೆಯಲು ಮುಂದಾದ್ರು. ಇದು ಅವರ ಕುಟುಂಬದಿಂದ $ 13 ಮಿಲಿಯನ್ (ರೂ. 3 ಕೋಟಿಗೂ ಹೆಚ್ಚು) ಹಣವನ್ನು ಕಳೆದುಕೊಳ್ಳುವಂತೆ ಮಾಡಿದೆ. ಆಧ್ಯಾತ್ಮಿಕತೆಗೆ ಒಲವು ತೋರಿದ್ದ ಈ ಮಹಿಳೆ ಮನೆಯನ್ನೇ ಕಳೆದುಕೊಳ್ಳುವಂತಾಯಿತು. ಈ ಬಗ್ಗೆ ಇನ್ನಷ್ಟು ಸ್ಟೋರಿ ಇಲ್ಲಿದೆ.

ಆಧ್ಯಾತ್ಮಿಕತೆಗೆ ಒಲವು ತೋರಿದ್ದ ಮಹಿಳೆ ಕಳೆದುಕೊಂಡಿದ್ದು 3 ಕೋಟಿ ರೂ.!

-

Priyanka P Priyanka P Oct 20, 2025 3:14 PM

ತೈವಾನ್‌: ಮಾರಕ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಊಹಿಸಲೂ ಸಾಧ್ಯವಾಗದ ದುಃಸ್ವಪ್ನವನ್ನು ಎದುರಿಸಿದ್ದಾರೆ. ಕ್ಯಾನ್ಸರ್‌ನಿಂದ (cancer) ಬಳಲುತ್ತಿದ್ದ ಮಹಿಳೆಯು ಆಧ್ಯಾತ್ಮಿಕ ಕೋರ್ಸ್ ಅನ್ನು ಪಡೆಯಲು ಮುಂದಾದ್ರು. ಇದು ಅವರ ಕುಟುಂಬದಿಂದ $ 13 ಮಿಲಿಯನ್ (ರೂ. 3 ಕೋಟಿಗೂ ಹೆಚ್ಚು) ಹಣವನ್ನು ಕಳೆದುಕೊಳ್ಳುವಂತೆ ಮಾಡಿದೆ. ವೆಚ್ಚವನ್ನು ನಿಭಾಯಿಸಲು ಅವರು ತಮ್ಮ ಮನೆಯನ್ನು ಸಹ ಮಾರಾಟ ಮಾಡಬೇಕಾಯಿತು. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ (Viral News).

ಆಗಸ್ಟ್ 2013 ರಲ್ಲಿ ವಾಂಗ್ ಎಂಬ ಮಹಿಳೆಯು ಜಾಂಗ್ ಮತ್ತು ಚೆನ್ ಎಂಬ ಇಬ್ಬರು ಮಹಿಳೆಯರು ನಡೆಸುವ ಆಧ್ಯಾತ್ಮಿಕ ಕೋರ್ಸ್‌ಗೆ (Spiritual Course) ಸೇರಿಕೊಂಡ ಬಳಿಕ ಈ ಸಮಸ್ಯೆ ಪ್ರಾರಂಭವಾಯಿತು. ಆಧ್ಯಾತ್ಮಿಕತೆಗೆ ಒಲವು ವ್ಯಕ್ತವಾಗಿದ್ದರಿಂದ ಮಹಿಳೆಯು ಈ ಕೋರ್ಸ್‍ಗೆ ಸೇರಿದರು. ಆದರೆ, ನಡೆದದ್ದು ಮಾತ್ರ ಬೇರೆಯದ್ದೇ ಆಗಿತ್ತು. ವಾಂಗ್ ಅವರ ಮಗ ಕೂಡ ಹಲವು ವರ್ಷಗಳ ನಂತರ ಅಂದರೆ ಏಪ್ರಿಲ್ 2021ಕ್ಕೆ ಈ ಕೋರ್ಸ್‌ಗೆ ಸೇರಿದರು.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ಪ್ರಕಾರ, ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರನ್ನು ತೀವ್ರ ಮತ್ತು ಅವಮಾನಕರ ಅಭ್ಯಾಸಗಳಿಗೆ ಒಳಪಡಿಸಲಾಯಿತು. ಅವರನ್ನು ರಸ್ತೆಬದಿಯಲ್ಲಿ ಮಂಡಿಯೂರಿ, ಪರಸ್ಪರ ಅವಮಾನಿಸುವಂತೆ ಮತ್ತು ಇತರರ ಕಾಲ್ಬೆರಳುಗಳನ್ನು ನೆಕ್ಕುವಂತಹ ವಿಲಕ್ಷಣ ಕೃತ್ಯಗಳನ್ನು ಮಾಡುವಂತೆ ಒತ್ತಾಯಿಸಲಾಯಿತು. ಈ ಕೋರ್ಸ್‍ನಲ್ಲಿದ್ದ ನಿಯಮಗಳು ಬಹಳ ಕಟ್ಟುನಿಟ್ಟಾಗಿದ್ದವು. ಭಾಗವಹಿಸುವವರು ಭಯದಿಂದ ಅವುಗಳನ್ನು ಅನುಸರಿಸಬೇಕಾಗಿತ್ತು.

ಇದನ್ನೂ ಓದಿ: Viral News: 48 ವರ್ಷಗಳ ಹಿಂದೆ ಗೆಳತಿಗೆ ಚಾಕುವಿನಿಂದ ಇರಿದಿದ್ದ ವ್ಯಕ್ತಿಗೆ ಜಾಮೀನು; ವಿಚಾರಣೆ ಎದುರಿಸಲಿರುವ 81ರ ವೃದ್ಧ

ಇದಕ್ಕಿಂತಲೂ ಭಯಾನಕ ಘಟನೆಯೆಂದರೆ, ವಾಂಗ್ ಮತ್ತು ಅವಳ ಮಗನನ್ನು 2021 ರಲ್ಲಿ ಸಲಿಂಗ ವಿವಾಹಕ್ಕೆ ಒತ್ತಾಯಿಸಲಾಯಿತು. ಅಷ್ಟೇ ಅಲ್ಲ ಮುಂದಿನ ವರ್ಷವೇ ವಿಚ್ಛೇದನ ಪಡೆಯುವಂತೆ ಮಾಡಲಾಯಿತು. ಒಬ್ಬ ಮಹಿಳೆ ತನ್ನ ಪತಿಗೆ ವಿಚ್ಛೇದನ ನೀಡಲು ಒಪ್ಪುವವರೆಗೂ ತನ್ನನ್ನು ಥಳಿಸಲಾಯಿತು. ನಂತರ ಆಕೆ ವಾಂಗ್‌ನನ್ನು ಮದುವೆಯಾದಳು ಎಂದು ಹೇಳಿದರು.

ಮೊದಲಿಗೆ ಮಹಿಳೆಯ ಆರೋಗ್ಯದ ಬಗ್ಗೆ ಬೆದರಿಕೆ ಹಾಕುವ ಮೂಲಕ ಭಯವನ್ನು ಹುಟ್ಟುಹಾಕಿದರು. ನೀನು ಸಾಯಲಿದ್ದೀಯ, ದೇವರುಗಳು ಸಹ ನಿನ್ನನ್ನು ಉಳಿಸಲು ಸಾಧ್ಯವಿಲ್ಲ. ನಿನ್ನ ಕುಟುಂಬವು ಛಿದ್ರವಾಗುತ್ತದೆ. ನಿನ್ನ ಸಾವು ಘೋರವಾಗಿರುತ್ತದೆ. ಕಣ್ಣು ಮುಚ್ಚಲು ಸಾಧ್ಯವಾಗದೆ, ಪುನರ್ಜನ್ಮ ಪಡೆಯಲು ಸಾಧ್ಯವಾಗದೆ ಸಾಯುತ್ತೀಯ ಎಂದು ಮಹಿಳೆ ಹೇಳಿದ್ದಾಗಿ ವರದಿಯಾಗಿದೆ.

ಈ ಕಾರ್ಯಕ್ರಮವು ಅತ್ಯಂತ ದುಬಾರಿಯಾಗಿತ್ತು. ಎನರ್ಜಿ ಪ್ಯೂರಿಫಿಕೇಶನ್ ಮಾಸ್ಟರ್ ಎಂಬ ಬಿರುದನ್ನು ಪಡೆಯಬೇಕಾರದೆ $2 ಮಿಲಿಯನ್ (ಸುಮಾರು ರೂ. 57 ಲಕ್ಷ) ಪಾವತಿಸಬೇಕಾಗಿತ್ತಂತೆ. ತನ್ನ ಕ್ಯಾನ್ಸರ್ ಉಲ್ಬಣಗೊಳ್ಳುವ ಭಯದಿಂದ, ವಾಂಗ್ ಮಾರ್ಚ್ 2023ರ ವರೆಗೆ ತನ್ನ ಮಗನೊಂದಿಗೆ ತರಗತಿಗಳಿಗೆ ಹಾಜರಾಗುವುದನ್ನು ಮುಂದುವರೆಸಿದರು. ಕೋರ್ಸ್‌ಗಳಿಗೆ ಹಣ ಪಾವತಿಸುವುದನ್ನು ಮುಂದುವರಿಸಲು ಮಗನು ಕುಟುಂಬದ ಮನೆಯನ್ನು ಮಾರಾಟ ಮಾಡಬೇಕಾಯಿತು.

ಕಳೆದ ವರ್ಷ ಏಪ್ರಿಲ್‌ನಲ್ಲಿ ವಾಂಗ್ ಮತ್ತು ಅವರ ಮಗ ಕಾನೂನು ಸಲಹೆ ಪಡೆದ ನಂತರ ತಾವು ವಂಚನೆಗೊಳಗಾಗಿರುವುದು ಅರಿವಾಯಿತು. ಅವರು ಜಾಂಗ್ ಮತ್ತು ಚೆನ್ ವಿರುದ್ಧ ಮೊಕದ್ದಮೆ ಹೂಡಿ ಪರಿಹಾರವನ್ನು ಕೋರಿದರು. ಕೋರ್ಸ್‌ಗಳು 10 ವರ್ಷಗಳ ಕಾಲ ನಡೆದಿದ್ದರಿಂದ ಮತ್ತು ವೈಜ್ಞಾನಿಕವಾಗಿ ಪರಿಶೀಲಿಸಲಾಗದ ಕಾರಣ ಹೆಚ್ಚಿನ ಶುಲ್ಕಗಳು ಸಮರ್ಥನೀಯ ಎಂದು ಪಂಥದ ನಾಯಕರು ವಾದಿಸಿದರು. ಇಬ್ಬರು ಮಹಿಳೆಯರು ತಮ್ಮ ಕೃತ್ಯಗಳಿಗಾಗಿ ಯಾವುದೇ ಕ್ರಿಮಿನಲ್ ಆರೋಪಗಳನ್ನು ಎದುರಿಸಿದ್ದಾರೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ.