Self Harming: ಸೋದರಳಿಯನೊಂದಿಗೆ ಲವ್ವಿ ಡವ್ವಿ; ಗಂಡನಿಗೆ ತಿಳಿಯುತ್ತಲೇ ಈಕೆ ಮಾಡಿದ್ದು ಏನು ಗೊತ್ತಾ?
ಸೋದರಳಿಯನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ಮಣಿಕಟ್ಟು ಸೀಳಿ ಆತ್ಮಹತ್ಯೆ ಯತ್ನ ಮಾಡಿರುವ ಘಟನೆ ಮಹಿಳೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದೆ. ತನ್ನ ಮತ್ತು ಪ್ರಿಯಕರನ ನಡುವಿನ ಸಂಬಂಧ ಕೊನೆಗೊಂಡಿದ್ದರಿಂದ ಮಹಿಳೆ ಈ ರೀತಿ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

-

ಉತ್ತರಪ್ರದೇಶ: ಸೋದರಳಿಯನೊಂದಿಗೆ ಅನೈತಿಕ ಸಂಬಂಧ ಕೊನೆಗೊಂಡ ಬಳಿಕ ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ (Police station) ಮಣಿಕಟ್ಟು ಸೀಳಿಕೊಂಡು ಆತ್ಮಹತ್ಯೆ (Self Harming) ಯತ್ನ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ (Uttar Pradesh) ಸೀತಾಪುರದಲ್ಲಿ (sitapur) ನಡೆದಿದೆ. ಪತಿಯ ಸೋದರಳಿಯ, ತನಗಿಂತ 15 ವರ್ಷ ಕಿರಿಯವನಾದ ಅಲೋಕ್ ಮಿಶ್ರಾ ಜೊತೆ ಮಹಿಳೆ ಸಂಬಂಧ ಹೊಂದಿದ್ದಳು. ಆದರೆ ಆತ ಸಂಬಂಧ ಮುರಿದುಕೊಂಡ ಬಳಿಕ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಅವಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ದೆಹಲಿಯ ಪೂಜಾ ಮಿಶ್ರಾ ಎಂಬ ಮಹಿಳೆ ವಿವಾಹಿತಳಾಗಿದ್ದು ಏಳು ಮತ್ತು ಆರು ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಈಕೆ ತನ್ನ ಪತಿಯ ಸೋದರಳಿಯ, ತನಗಿಂತ 15 ವರ್ಷ ಕಿರಿಯವನಾದ ಅಲೋಕ್ ಮಿಶ್ರಾ ಜೊತೆ ಪ್ರಣಯ ಸಂಬಂಧ ಬೆಳೆಸಿಕೊಂಡಿದ್ದಳು. ಪೂಜಾಳ ಕುಟುಂಬ ಆತನನ್ನು ಮನೆಯಲ್ಲಿ ಕೆಲಸ ಮಾಡಲು ಆಹ್ವಾನಿಸಿದ ಬಳಿಕ ಅವರಿಬ್ಬರ ನಡುವೆ ಸಂಬಂಧ ಬೆಳೆದಿದೆ ಎನ್ನಲಾಗಿದೆ.
ಇವರಿಬ್ಬರ ಸಂಬಂಧದ ಬಗ್ಗೆ ಪತಿಗೆ ತಿಳಿದಾಗ ಅವರು ಅಲೋಕ್‌ನನ್ನು ದೂರ ಕಳುಹಿಸಿದರು. ಇದರಿಂದ ಹಿಂಜರಿಯದ ಪೂಜಾ ತನ್ನ ಮಕ್ಕಳನ್ನು ಬಿಟ್ಟು ಬರೇಲಿಗೆ ತೆರಳಿದ್ದಳು. ಅಲ್ಲಿ ಅಲೋಕ್ ಜೊತೆ ಸುಮಾರು ಏಳು ತಿಂಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದಳು. ಬಳಿಕ ಇಬ್ಬರ ನಡುವೆ ಗಲಾಟೆಗಳು ಪ್ರಾರಂಭವಾಗಿದೆ. ಅಲೋಕ್ ಬಳಿಕ ಸೀತಾಪುರದಲ್ಲಿರುವ ತನ್ನ ಸ್ವಂತ ಹಳ್ಳಿಗೆ ಮರಳಿದ್ದನು.
ಆತನನ್ನು ಹುಡುಕಿಕೊಂಡು ಪೂಜಾ ಗ್ರಾಮಕ್ಕೆ ಬಂದಾಗ ಪೊಲೀಸರು ಆಕೆ ಮತ್ತು ಅಲೋಕ್ ಇಬ್ಬರನ್ನೂ ಠಾಣೆಗೆ ಕರೆಸಿ ವಿವಾದವನ್ನು ಪರಿಹರಿಸಲು ಸಹಾಯ ಮಾಡಿದರು. ಈ ನಡುವೆ ಪೂಜಾ ತಾನು ಇನ್ನು ಪ್ರಿಯಕರನೊಂದಿಗೆ ಸಂಬಂಧವನ್ನು ಮುಂದುವರಿಸಲು ಬಯಸುವುದಿಲ್ಲ ಎಂದು ಹೇಳಿ ಠಾಣೆಯೊಳಗೆ ಬ್ಲೇಡ್ ತೆಗೆದುಕೊಂಡು ತನ್ನ ಮಣಿಕಟ್ಟನ್ನು ಸೀಳಿಕೊಂಡಿದ್ದಾಳೆ. ಕೂಡಲೇ ಪೊಲೀಸರು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆಕೆಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಜಿಟಿ ಮಾಲ್‌ನ ಮೂರನೇ ಮಹಡಿಯಿಂದ ಕೆಳಬಿದ್ದು ಯುವಕ ಸಾವು
ಗರ್ಭಿಣಿ, ಪ್ರಿಯಕರನ ಹತ್ಯೆ
ಅನೈತಿಕ ಸಂಬಂಧಕ್ಕೆ ದೆಹಲಿಯಲ್ಲಿ ಇಬ್ಬರು ಬಲಿಯಾಗಿರುವ ಘಟನೆ ನಡೆದಿದೆ. ಗರ್ಭಿಣಿ ಸೇರಿ ಇಬ್ಬರು ಅಸುನೀಗಿದರೆ ವ್ಯಕ್ತಿಯೊಬ್ಬ ಗಂಭೀರ ಗಾಯಗೊಂಡು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾನೆ. ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಪರಪುರುಷನ ಜತೆ ಅನೈತಿಕ ಸಂಬಂಧ ನಡೆಸಿದ್ದು ಈ ಘಟನೆಗೆ ಕಾರಣ ಎನ್ನಲಾಗಿದೆ.
ಮಧ್ಯ ದೆಹಲಿಯ ರಾಮ ನಗರದಲ್ಲಿ ಗರ್ಭಿಣಿಯನ್ನು ಆಕೆಯ ಪ್ರಿಯಕರ ಕೊಲೆ ಮಾಡಿದ್ದು ಆತನನ್ನು ಆಕೆಯ ಪತಿ ಕೊಂದಿದ್ದಾನೆ. ಘಟನೆಯಲ್ಲಿ ಪತಿಗೆ ಗಂಭೀರ ಗಾಯವಾಗಿದೆ. ಮೃತರನ್ನು ಶಾಲಿನಿ (22) ಮತ್ತು ಆಕೆಯ ಪ್ರಿಯಕರ, ರೌಡಿ ಶೀಟರ್ ಆಶು ಆಲಿಯಾಸ್ ಶೈಲೇಂದ್ರ (34) ಎಂದು ಗುರುತಿಸಲಾಗಿದೆ. ಶಾಲಿನಿ ಪತಿ ಆಕಾಶ್ (23) ಗಲಾಟೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ.
ಕೆಲವು ವರ್ಷಗಳ ಹಿಂದೆ ಆಟೋ ಚಾಲಕ ಆಕಾಶ್ ಜತೆ ಶಾಲಿನಿ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಮಕ್ಕಳೂ ಜನಿಸಿದ್ದರು. ಆದರೆ ಬಳಿಕ ಶಾಲಿನಿ ಸ್ಥಳೀಯ ಗೂಂಡಾ ಆಶು ಜತೆ ಅನೈತಿಕ ಸಂಬಂಧ ಬೆಳೆಸಿದಳು. ಜತೆಗೆ ಗರ್ಭಿಣಿಯೂ ಆದಳು. ಕೆಲವು ದಿನಗಳಿಂದ ಮತ್ತೆ ಆಕೆ ಪತಿಯ ಜತೆಗೆ ವಾಸಿಸಲು ಆರಂಭಿಸಿದಳು. ಇದರಿಂದ ಕುಪಿತನಾದ ಆಶು ಆಕೆ ಗರ್ಭಿಣಿ ಎಂಬುದನ್ನೂ ನೋಡದೆ ಕೊಲೆ ಮಾಡಿದ್ದಾನೆ.
ಈ ವೇಳೆ ಪತ್ನಿಯನ್ನು ಕಾಪಾಡಲು ಆಕಾಶ್ ಆಶು ಕೈಲಿದ್ದ ಚಾಕು ತೆಗೆದು ಆತನಿಗೆ ಚುಚ್ಚಿದ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಾಲಿನಿ ಮತ್ತು ಆಶು ಮೃತಪಟ್ಟಿರುವುದಾಗಿ ಆಸ್ಪತ್ರೆಯಲ್ಲಿ ಘೋಷಿಸಲಾಗಿದೆ. ಗಂಭೀರ ಗಾಯಗೊಂಡಿರುವ ಆಕಾಶ್ ಇದೀಗ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೊಲೀಸರು ಕೊಲೆ ಮತ್ತು ಕೊಲೆಗೆ ಯತ್ನ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.