ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯ ತಲೆಗೆ ಬಂದು ಗುದ್ದಿದ ವ್ಯಕ್ತಿ; ವಿಡಿಯೊ ವೈರಲ್

44 ವರ್ಷದ ಕಿಂದ್ರಾ ಹಾಲ್ ಎಂಬ ಮಹಿಳೆ ನಡೆದುಕೊಂಡು ಹೋಗುವಾಗ ಇದ್ದಕ್ಕಿದ್ದಂತೆ ಎದುರಿಗೆ ಬಂದ ವ್ಯಕ್ತಿ ತಲೆಗೆ ಗುದ್ದಿ ಓಡಿಹೋಗಿದ್ದಾನೆ. ಈ ಪ್ರಕರಣದಲ್ಲಿ ನಡೆದ ದೃಶ್ಯ ಮತ್ತು ಆಕೆ ಆರೋಪಿಯನ್ನು ಬಂಧಿಸಲು ಹೆಣಗಾಡಿದ ರೀತಿಯನ್ನು ವಿಡಿಯೊ ಮೂಲಕ ವಿವರಿಸಿದ್ದಾಳೆ. ಇದು ಈಗ ವೈರಲ್(Viral Video) ಆಗಿದೆ.

ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಗೆ ಈ ನೀಚ ಮಾಡಿದ್ದೇನು?

Profile pavithra May 23, 2025 7:04 PM

ವಾಷಿಂಗ್ಟನ್‌: ನ್ಯೂಯಾರ್ಕ್‌ನ ಅಪ್ಪರ್ ಈಸ್ಟ್ ಸೈಡ್‌ನಲ್ಲಿ ಮಹಿಳೆಯೊಬ್ಬಳ ತಲೆಗೆ ಅಪರಿಚಿತನೊಬ್ಬ ಬಲವಾಗಿ ಹೊಡೆದಿದ್ದಾನೆ. 44 ವರ್ಷದ ಕಿಂದ್ರಾ ಹಾಲ್ ನಡೆದುಕೊಂಡು ಹೋಗುವಾಗ ಇದ್ದಕ್ಕಿದ್ದಂತೆ ಎದುರಿಗೆ ಬಂದ ವ್ಯಕ್ತಿ ತಲೆಗೆ ಗುದ್ದಿ ಓಡಿಹೋಗಿದ್ದಾನೆ. ನಡೆದ ಇಡೀ ಘಟನೆಯ ದೃಶ್ಯ ಹಾಗೂ ಅವನನ್ನು ಬಂಧಿಸಲು ಆಕೆ ಹೇಗೆಲ್ಲಾ ಹೆಣಗಾಡಿದಳು ಎಂಬುದರ ಕುರಿತ ವಿಡಿಯೊವನ್ನು ಅವಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಳೆ. ಇದು ಈಗ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

ವೈರಲ್ ಆಗಿರುವ ದೃಶ್ಯಗಳಲ್ಲಿ, ಹಾಲ್‌ನ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಎದುರು ದಿಕ್ಕಿನಿಂದ ಬಂದ ಒಬ್ಬ ವ್ಯಕ್ತಿ ಇದ್ದಕ್ಕಿದ್ದಂತೆ ಆಕೆಯ ಮೇಲೆ ದಾಳಿ ಮಾಡಿ ತಲೆಗೆ ಗುದ್ದಿ ಓಡಿಹೋಗಿದ್ದಾನೆ. ಇದರಿಂದ ಅವಳು ರಸ್ತೆಯ ಬಳಿ ಬಿದ್ದಿದ್ದಾಳೆ. ಇಡೀ ದೃಶ್ಯ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವೈರಲ್‌ ವಿಡಿಯೊ ಇಲ್ಲಿದೆ ನೋಡಿ...

ಘಟನೆಯ ನಂತರ, ಆಕೆ ಓಡಿ ಹೋದ ವ್ಯಕ್ತಿಯ ವಿಡಿಯೊ ಮಾಡಿದ್ದಾಳೆ. ಆ ವೇಳೆ ಆತ ಆಕೆಗೆ ಬೆದರಿಕೆ ಹಾಕುವುದು ರೆಕಾರ್ಡ್ ಆಗಿದೆ. ನಂತರ ಆಕೆ ಪೊಲೀಸರಿಗೆ ಘಟನೆಯ ಕುರಿತು ಮಾಹಿತಿ ನೀಡಿದ್ದಾಳೆ.ಪೊಲೀಸರು ಆತನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಮದ್ವೆ ದಿರಿಸಿನಲ್ಲಿ ವಧುವಿನ ಸಖತ್‌ ಡಾನ್ಸ್‌- ವಿಡಿಯೊ ಫುಲ್‌ ವೈರಲ್‌

ಕಳೆದ ವರ್ಷ ಕೂಡ ಇದೇ ರೀತಿಯ ಘಟನೆ ನ್ಯೂಯಾರ್ಕ್‌ನ ಕೆಲವು ಕಡೆ ನಡೆದಿತ್ತು. ಮಹಿಳೆಯರ ಮುಖಕ್ಕೆ ಅಪರಿಚಿತ ಪುರುಷರು ಗುದ್ದಿದ್ದ ಘಟನೆ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ವಿಡಿಯೊಗಳಲ್ಲಿ, ಮಹಿಳೆಯರು ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಗಲು ಹೊತ್ತಿನಲ್ಲಿ ಅಪರಿಚಿತ ಪುರುಷರು ತಮ್ಮ ಮುಖಕ್ಕೆ ಗುದ್ದಿದ್ದಾರೆ ಎಂದು ಹೇಳಿದ್ದಾರೆ. ಇತ್ತೀಚೆಗೆ ನಡೆದ ಪ್ರಕರಣಗಳಲ್ಲಿ ಒಂದರಲ್ಲಿ ಹಲ್ಲೆ ಆರೋಪ ಹೊರಿಸಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ನ್ಯೂಯಾರ್ಕ್ ಪೊಲೀಸರು ದೃಢಪಡಿಸಿದ್ದರು. ಉಳಿದ ಪ್ರಕರಣಗಳು ತನಿಖೆಯಲ್ಲಿವೆ ಎಂದು ಪೊಲೀಸರು ತಿಳಿಸಿದ್ದರು.