ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Infosys Recruitment: ಇನ್ಫೋಸಿಸ್‌ನಿಂದ ಗುಡ್ ನ್ಯೂಸ್; ಶೀಘ್ರದಲ್ಲೇ ನಡೆಯಲಿದೆ 20,000 ನೇಮಕಾತಿ

ಇನ್ಫೋಸಿಸ್ 2027ನೇ ಹಣಕಾಸು ವರ್ಷದಲ್ಲಿ ವಿಶೇಷ ನೇಮಕಾತಿ ಡ್ರೈವ್ ಮೂಲಕ 20,000 ಹೊಸ ಪದವೀಧರರನ್ನು ಉದ್ಯೋಗಕ್ಕೆ ಸೇರಿಸಿಕೊಳ್ಳುವುದಾಗಿ ಸಿಇಒ ಸಲೀಲ್ ಪರೇಖ್ ಘೋಷಿಸಿದ್ದಾರೆ. ಸ್ವಿಟ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ಫೋಸಿಸ್‌ನಿಂದ ಗುಡ್ ನ್ಯೂಸ್; ಶೀಘ್ರದಲ್ಲೇ ಭಾರೀ ನೇಮಕಾತಿ

ಇನ್ಫೋಸಿಸ್ -

Profile
Sushmitha Jain Jan 23, 2026 9:54 PM

ಬೆಂಗಳೂರು, ಜ. 23: ಭಾರತದ ಐಟಿ ದಿಗ್ಗಜ ಸಂಸ್ಥೆ ಇನ್ಫೋಸಿಸ್ (Infosys) ಉದ್ಯೋಗಾಕಾಂಕ್ಷಿಗಳಿಗೆ (Job Seekers) ಸಿಹಿ ಸುದ್ದಿಯೊಂದನ್ನು (Good News) ನೀಡಿದೆ. 2027ನೇ ಹಣಕಾಸು ವರ್ಷದಲ್ಲಿ 20 ಸಾವಿರ ಹೊಸ ಪದವೀಧರರನ್ನು ನೇಮಕ(Job Alert) ಮಾಡಿಕೊಳ್ಳುವುದಾಗಿ ಸಿಇಒ ಸಲೀಲ್ ಪರೇಖ್ ತಿಳಿಸಿದ್ದಾರೆ.

ಸ್ವಿಟ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಸಲೀಲ್ ಪಾರೇಖ್, "2026 ಏಪ್ರಿಲ್ 1ರಿಂದ 2027 ಮಾರ್ಚ್ 31ರವರೆಗಿನ ಇನ್‌ಫೋಸಿಸ್‌ ವಿಶೇಷ ಡ್ರೈವ್ ನಡೆಸುವ ಮೂಲಕ 20,000 ಹೊಸಬರನ್ನು ನೇಮಿಸಿಕೊಳ್ಳಲಿದೆ" ಎಂದು ಘೋಷಿಸಿದ್ದಾರೆ. ಇನ್ಫೋಸಿಸ್ ಪ್ರಸಕ್ತ ಸಾಲಿನ ಮೊದಲ ಮೂರು ತ್ರೈಮಾಸಿಕಗಳಲ್ಲಿ 18,000 ಪದವೀಧರರನ್ನು ನೇಮಿಸಿಕೊಂಡಿದೆ. ಕಳೆದ ತ್ರೈಮಾಸಿಕದಲ್ಲಿ ಒಟ್ಟು ಉದ್ಯೋಗಿಗಳ ಸಂಖ್ಯೆಯಲ್ಲಿ 5,000ಕ್ಕೂ ಹೆಚ್ಚು ಹೆಚ್ಚಳವಾಗಿದೆ. ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಒಟ್ಟು 20,000 ನೇಮಕಾತಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.

ಆರ್‌ಬಿಐಯಲ್ಲಿದೆ ಬರೋಬ್ಬರಿ 572 ಹುದ್ದೆ; ಎಸ್‌ಎಸ್‌ಎಲ್‌ಸಿ ಪಾಸಾಗಿದ್ದರೆ ಅಪ್ಲೈ ಮಾಡಿ

ಎಐಯಿಂದಲೇ ಉದ್ಯೋಗ ಸೃಷ್ಟಿ

ಕೃತಕ ಬುದ್ಧಿಮತ್ತೆ ಅಥವಾ ಎಐ ತಂತ್ರಜ್ಞಾನದಿಂದ ಸಾಂಪ್ರದಾಯಿಕ ಉದ್ಯೋಗಗಳಿಗೆ ಸ್ವಲ್ಪಮಟ್ಟಿನ ಹಿನ್ನಡೆಯಾಗುತ್ತಿದ್ದರೂ, ಅದೇ ವಿಫುಲ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಪರೇಖ್ ಅಭಿಪ್ರಾಯಪಟ್ಟಿದ್ದಾರೆ. "ಕೆಲವು ಸಾಂಪ್ರದಾಯಿಕ ಕೆಲಸಗಳಲ್ಲಿ ಒತ್ತಡವಿದ್ದರೂ, ಎಐ ಕ್ಷೇತ್ರದಲ್ಲಿ ನಾವು ಹೆಚ್ಚಿನ ಬೆಳವಣಿಗೆಯನ್ನು ಕಾಣುತ್ತಿದ್ದೇವೆ. ಸಾಫ್ಟ್‌ವೇರ್ ಅಭಿವೃದ್ಧಿ, ಗ್ರಾಹಕ ಸೇವೆ ಮತ್ತು ಹಳೆಯ ಅಪ್ಲಿಕೇಶನ್‌ಗಳ ಆಧುನೀಕರಣದಲ್ಲಿ 'ಎಐ ಏಜೆಂಟ್'ಗಳ ಬಳಕೆ ಹೆಚ್ಚಾಗುತ್ತಿದ್ದು, ಇದು ಹೊಸ ರೀತಿಯ ಉದ್ಯೋಗಗಳಿಗೆ ಬೇಡಿಕೆ ಸೃಷ್ಟಿಸಿದೆ" ಎಂದು ಅವರು ಹೇಳಿದ್ದಾರೆ.

ಇದುವರೆಗೂ ಎಐ ತಂತ್ರಜ್ಞಾನವು ಕೇವಲ ಪರೀಕ್ಷಾರ್ಥ ಹಂತದಲ್ಲಿತ್ತು. ಆದರೆ ಈಗ ಅದು ಪೂರ್ಣ ಪ್ರಮಾಣದ ಪ್ರಾಜೆಕ್ಟ್‌ಗಳಲ್ಲಿ ಬಳಕೆಯಾಗುತ್ತಿದೆ. "ಹಣಕಾಸು ವಲಯದಲ್ಲಿ ನಮ್ಮ ಟಾಪ್ 25 ಗ್ರಾಹಕರ ಪೈಕಿ 15 ಗ್ರಾಹಕರಿಗೆ ನಾವೇ ಎಐ ಪಾಲುದಾರರಾಗಿದ್ದೇವೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಈ ಯೋಜನೆಗಳು ದೊಡ್ಡ ಮಟ್ಟದಲ್ಲಿ ಜಾರಿಯಾಗುತ್ತಿವೆ" ಎಂದು ಪರೇಖ್ ವಿವರಿಸಿದ್ದಾರೆ.

ಭಾರಿ ವೇತನ

ಎಐ ಕೌಶಲ್ಯ ಹೊಂದಿರುವ ಪ್ರತಿಭಾವಂತರನ್ನು ಸೆಳೆಯಲು ಇನ್ಫೋಸಿಸ್ ಈಗಾಗಲೇ ಆರಂಭಿಕ ವೇತನವನ್ನು ಹೆಚ್ಚಿಸಿದೆ. ವಿಶೇಷ ಕೌಶಲ್ಯ ಬೇಡುವ ಹುದ್ದೆಗಳಿಗೆ ವಾರ್ಷಿಕ 21 ಲಕ್ಷ ರುಪಾಯಿವರೆಗೂ ಪ್ಯಾಕೇಜ್ ನೀಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಇಷ್ಟೇ ಅಲ್ಲದೆ ಅಮೆರಿಕದ ಜಿಡಿಪಿ ಬೆಳವಣಿಗೆ ಉತ್ತಮವಾಗಿರುವುದರಿಂದ ದೊಡ್ಡ ಕಂಪನಿಗಳು ತಂತ್ರಜ್ಞಾನದ ಮೇಲೆ ಹೂಡಿಕೆ ಮಾಡಲು ಮುಂದೆ ಬರುತ್ತಿವೆ ಎಂದು ಪಾರೇಖ್ ತಿಳಿಸಿದ್ದಾರೆ.

ಇತ್ತೀಚೆಗೆ ಎಐ ಮತ್ತು ಮಾನವ ಸಂಪನ್ಮೂಲವನ್ನು ಒಗ್ಗೂಡಿಸಿ ಹೊಸ ದರ ನಿಗದಿ ಮಾದರಿಗಳನ್ನು ರೂಪಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಐಟಿ ವಲಯದ ದಿಕ್ಕನ್ನೇ ಬದಲಿಸುವ ಸಾಧ್ಯತೆ ಇದೆ ಎಂದು ತಜ್ಞರು ಊಹಿಸಿದ್ದಾರೆ.