ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮಹಾಕುಂಭಮೇಳ ಗಳಿಕೆಯಿಂದ ಎಸ್‌ಯುವಿ ಕಾರು ಖರೀದಿಸಿದ ಬಾಬಾ; ನೆಟ್ಟಿಗರು ಫುಲ್‌ ಶಾಕ್‌! ವಿಡಿಯೊ ನೋಡಿ

ಮಹಾಕುಂಭಕ್ಕೆ ಹೋದ ಬಾಬಾ ಒಬ್ಬ ತಮ್ಮ ಮಹಾಕುಂಭಮೇಳ ಗಳಿಕೆಯಿಂದ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ (ಎಸ್ ಯುವಿ) ಖರೀದಿಸಿದ್ದಾನೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ನೆಟ್ಟಿಗರು ಇದನ್ನು ಕಂಡು ಶಾಕ್‌ ಆಗಿದ್ದಾರೆ.

ಕುಂಭಮೇಳದಿಂದ ಗಳಿಸಿದ ಹಣದಿಂದ SUV ಖರೀದಿಸಿದ ಬಾಬಾ!

Profile pavithra May 5, 2025 1:00 PM

ಲಖನೌ: ಉತ್ತರಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ಇತ್ತೀಚೆಗೆ ನಡೆದ ಮಹಾಕುಂಭಮೇಳ ಸಾಕಷ್ಟು ವಿಚಾರಕ್ಕೆ ಸುದ್ದಿಯಾಗಿತ್ತು. ಇತ್ತೀಚೆಗೆ ಮಹಾಕುಂಭಕ್ಕೆ ಹೋದ ಬಾಬಾ ಒಬ್ಬ ತಮ್ಮ ಮಹಾ ಕುಂಭ ಗಳಿಕೆಯಿಂದ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ (SUV) ಖರೀದಿಸುತ್ತಿರುವ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ವೈರಲ್ ಆದ ವಿಡಿಯೊದಲ್ಲಿ ಶೋರೂಂನಲ್ಲಿ ಬಾಬಾ ಎಸ್‌ಯುವಿಯನ್ನು ಸ್ವೀಕರಿಸುವುದು ಸೆರೆಯಾಗಿದೆ. ಕಾರಿನ ಕೀಲಿಗಳನ್ನು ಎತ್ತಿಕೊಳ್ಳುವುದರಿಂದ ಹಿಡಿದು ಶೋರೂಂನಿಂದ ಹೊರಗೆ ಓಡಿಸುವವರೆಗೆ ಎಲ್ಲವನ್ನೂ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಬಾಬಾ ಐಷಾರಾಮಿ ಕಾರನ್ನು ಖರೀದಿಸಿದ್ದು ಎಲ್ಲರಿಗೂ ಶಾಕ್‌ ಆಗಿದೆ.

ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದು, ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗಿದೆ.ಈ ವಿಡಿಯೊ ನೋಡಿ ನೆಟ್ಟಿಗರು ಶಾಕ್‌ ಆಗಿ ಕಾಮೆಂಟ್‍ಗಳನ್ನು ಮಾಡಿದ್ದಾರೆ. "ಈ ಬಾಬಾನಲ್ಲಿ ಮೋಹ ಹೆಚ್ಚಿರಬೇಕು” ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಇನ್ನೊಬ್ಬರು ಕಾಮೆಂಟ್ ಮಾಡಿ, " ಬಾಬಾಜಿ ಡ್ರೈವ್ ಮಾಡಬಹುದು!!" ಎಂದಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...



"ನನ್ನ ಏಕೈಕ ಪ್ರಶ್ನೆಯೆಂದರೆ ಅವರು ಗೇರ್‌ಗಳನ್ನು ಹೇಗೆ ಬದಲಾಯಿಸುತ್ತಾರೆ??" ಎಂದು ನೆಟ್ಟಿಗರೊಬ್ಬರು ತಮಾಷೆಯಾಗಿ ಹೇಳಿದ್ದಾರೆ. "ಸನ್ ರೂಫ್ ಮಾಡೆಲ್‍ ಅನ್ನು ಖರೀದಿಸಬೇಕಿತ್ತು. ಕೈಯನ್ನು ನೇರವಾಗಿರಿಸುವುದಕ್ಕೆ ಅನುಕೂಲಕರವಾಗಿತ್ತು" ಎಂದು ಇನ್ನೊಬ್ಬರು ಹೇಳಿದ್ದಾರೆ. ಮತ್ತೊಬ್ಬರು, "ಅವರಿಗೆ ಡಿಎಲ್(ಡ್ರೈವಿಂಗ್ ಲೈಸೆನ್ಸ್) ನೀಡಿದವರು ಯಾರು?" ಎಂದು ಕೇಳಿದ್ದಾರೆ."ಅವನು ಯಾವಾಗ ಡ್ರೈವಿಂಗ್ ಕಲಿತನು? ಒಂದೇ ಕೈಯಲ್ಲಿ ವಾಹನ ಚಲಾಯಿಸುವುದು ಕಾನೂನುಬದ್ಧವೇ?” ಎಂದು ಕೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Viral News: ಅಪ್ಪ ಅಂದ್ರೆ ಸುಮ್ನೇನಾ? ಮಗಳಿಗಾಗಿ ತಿಂಗಳಿಗೆ 2.5 ಲಕ್ಷ ರೂ. ಗಳಿಸುತ್ತಿದ್ದ ಉದ್ಯೋಗಕ್ಕೆ ಗುಡ್ ಬೈ ಹೇಳಿದ ವ್ಯಕ್ತಿ

ಇನ್ನು ಅನೇಕ ನೆಟ್ಟಿಗರು ಬಾಬಾ ಅವರಿಗೆ ಸಪೋರ್ಟ್‌ ಮಾಡಿದ್ದಾರೆ ಮತ್ತು ವಾಹನವನ್ನು ಖರೀದಿಸುವುದರಲ್ಲಿ ಏನು ತಪ್ಪಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊವನ್ನು ಮೇ 1 ರಂದು ಹಂಚಿಕೊಳ್ಳಲಾಗಿದ್ದು, ಇಲ್ಲಿಯವರೆಗೆ ಇದು ನಾಲ್ಕು ಲಕ್ಷಕ್ಕೂ ಹೆಚ್ಚು ವ್ಯೂವ್ಸ್‌ ಗಳಿಸಿದೆ.