ಝೊಮೆಟೊದಲ್ಲಿ ಆರ್ಡರ್ ಮಾಡಿದ ಬಿರಿಯಾನಿಯಲ್ಲಿ ನಾಯಿಯ ಕಾಲು ಪತ್ತೆ! ಬೆಚ್ಚಿಬಿದ್ದ ಗ್ರಾಹಕ
Viral Video: ಝೊಮೆಟೊ, ಸ್ವಿಗ್ಗಿ ಮುಂತಾದ ಆಹಾರ ವಿತರಿಸುವ ಆನ್‌ಲೈನ್ ಆ್ಯಪ್‌ಗಳ ಜನಪ್ರಿಯತೆ ಹೆಚ್ಚುತ್ತಿದೆ. ಉತ್ತರ ಪ್ರದೇಶದ ಕಾನ್ಪುರದ ವ್ಯಕ್ತಿಯೊಬ್ಬರು ಝೊಮೆಟೊದಲ್ಲಿ ಆರ್ಡರ್ ಮಾಡಿದ ಬಿರಿಯಾನಿಯಲ್ಲಿ ನಾಯಿಯ ಕಾಲು ಕಂಡು ಕಂಡುಬಂದಿದ್ದು, ಬೆಚ್ಚಿ ಬಿದ್ದಿದ್ದಾನೆ. ಈ ಘಟನೆಯ ವಿಡಿಯೊ ವೈರಲ್ ಆಗಿದೆ.
ಬಿರಿಯಾನಿ -
ನವದೆಹಲಿ, ಮಾ. 13: ಇತ್ತೀಚೆಗೆ ಆಹಾರವನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವುದು ಸಾಮಾನ್ಯ ಎಂಬಂತಾಗಿದೆ. ಇದಕ್ಕೆಂದೇ ಇರುವ ಝೊಮೆಟೋ, ಸ್ವಿಗ್ಗಿ ಮುಂತಾದ ಆನ್‌ಲೈನ್ ಆ್ಯಪ್‌ಗಳ ಮೂಲಕ ಆರ್ಡರ್ ಮಾಡಿದ ತಕ್ಷಣ ಆಹಾರ ನೀವಿರುವ ಸ್ಥಳಕ್ಕೆ ಬಂದು ತಲುಪುತ್ತದೆ. ಈ ಮಧ್ಯೆ ಉತ್ತರ ಪರದೇಶದ ಕಾನ್ಪುರದ (Kanpur) ವ್ಯಕ್ತಿಯೊಬ್ಬರು ಝೊಮೆಟೊದಲ್ಲಿ ಬಿರಿಯಾನಿ ಆರ್ಡರ್ ಮಾಡಿದ್ದು, ಇದರಲ್ಲಿ ಸಿಕ್ಕ ಮಾಂಸದ ತುಂಡೊಂದು ಅವರನ್ನು ಬೆಚ್ಚಿ ಬೀಳಿಸಿದೆ. ಝೊಮೆಟೊದಲ್ಲಿ ಬಂದ ಬಿರಿಯಾನಿಯಲ್ಲಿ ನಾಯಿಯ ಕಾಲು ಸಿಕ್ಕಿದೆ ಎಂದು ಅವರು ಆರೋಪಿಸಿದ್ದಾರೆ.
ಅವರು ಅನ್ನದ ನಡುವೆ ಇರುವ ಅನುಮಾನಾಸ್ಪದ ಮಾಂಸದ ತುಂಡನ್ನು ಜೂಮ್ ಮಾಡಿ ತೋರಿಸಿದ್ದಾರೆ. ಮಾಂಸದ ತುಂಡು ಕೋಳಿ ಮಾಂಸದಂತೆ ಇರದೆ ನಾಯಿಯ ಪಂಜವನ್ನು ಹೋಲುತ್ತದೆ ಎಂದಿದ್ದಾರೆ. ಸದ್ಯ ಅವರ ಈ ವಿಡಿಯೊ ವೈರಲ್ ಆಗಿದೆ.
ವಿಡಿಯೊ ನೋಡಿ:
Zomato Meat order turns
— Ghar Ke Kalesh (@gharkekalesh) March 12, 2026
SHOCKING 'DOG LEG' CLAIM GOES VIRAL I KANPUR
pic.twitter.com/ilr4445miz
ಕಾನ್ಪುರದ ವ್ಯಕ್ತಿಯೊಬ್ಬರು ಊಟಕ್ಕಾಗಿ ಝೊಮೆಟೊದಲ್ಲಿ ಬಿರಿಯಾನಿ ಆರ್ಡರ್ ಮಾಡಿದ್ದರು. ಬಿರಿಯಾನಿ ಬಾಕ್ಸ್ ತೆರೆದಾಗ ವಿಚಿತ್ರ ಮಾಂಸದ ತುಂಡೊಂದು ಕಂಡು ಬಂದಿದೆ. ಅದನ್ನು ಗಮನಿಸಿದಾಗ ಕೋಳಿ ಅಥವಾ ಮಟನ್ ಪೀಸ್‌ನಂತೆ ಇರದೇ ನಾಯಿಯ ಕಾಲನ್ನು ಹೋಲುವಂತಿದೆ ಎಂದು ಆರೋಪಿಸಿದ್ದಾರೆ. ಝೊಮೆಟೊ ಅಥವಾ ಸ್ಥಳೀಯ ಅಧಿಕಾರಿಗಳು ಈ ವಿಡಿಯೊಗೆ ಪ್ರತಿಕ್ರಿಯಿಸಿಲ್ಲ. ಅದೇ ರೀತಿ ಆಹಾರ ವಿತರಣೆಯಾದ ರೆಸ್ಟೋರೆಂಟ್‌ನ ಗುರುತನ್ನು ಸಹ ದೃಢೀಕರಿಸಲಾಗಿಲ್ಲ.
282 ಅಡಿ ಎತ್ತರದ ಟವರ್ ಮೇಲೆ ಅಪಾಯಕಾರಿ ಸ್ಟಂಟ್
ಪೋಸ್ಟ್ ಮಾಡಲಾದ ಈ ವಿಡಿಯೊ ಹಲವು ವೀಕ್ಷಣೆಗಳನ್ನು ಗಳಿಸಿದ್ದು, ಆನ್‌ಲೈನ್‌ನಲ್ಲಿ ಮಿಶ್ರ ಪ್ರತಿಕ್ರಿಯೆಗಳ ಹುಟ್ಟುಹಾಕಿದೆ. ಬಳಕೆದಾರರೊಬ್ಬರು ಇದು ಕುತ್ತಾ ಬಿರಿಯಾನಿ. ಅದನ್ನೇ ಹೋಲುವಂತಿದೆ ಎಂದು ಕಮೆಂಟ್ ಮಾಡಿದ್ದಾರೆ. ಹೆಚ್ಚಿನವರು ಈ ವಿಡಿಯೊಗೆ ಆಕ್ರೋಶ ಹೊರಹಾಕಿದ್ದಾರೆ.