Viral Video: ಲಿಫ್ಟ್ ಕೇಳಿದ ಯುವಕನನ್ನೇ ಗುದ್ದಿಕೊಂಡು ಹೋದ ಬೈಕ್ ಸವಾರ; ಬೆಚ್ಚಿಬೀಳಿಸುವ ವಿಡಿಯೊ ವೈರಲ್
ಲಿಫ್ಟ್‌ಗಾಗಿ ಕಾಯುತ್ತಿದ್ದ ಯುವಕನಿಗೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‍ನ ನಂದಗ್ರಾಮ್ ಪ್ರದೇಶದ ವಿವಿಐಪಿ ಮಾಲ್ ಹೊರಗೆ ನಡೆದಿದೆ. ಈ ಘಟನೆಯು ಆ ಪ್ರದೇಶದಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದರ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ.
 
                                -
 pavithra
                            
                                Mar 22, 2025 12:25 PM
                                
                                pavithra
                            
                                Mar 22, 2025 12:25 PM
                            ಲಖನೌ: ಇಲ್ಲೊಬ್ಬ ಯುವಕ ಲಿಫ್ಟ್ ಕೇಳಿ ಆತನ ಜೀವಕ್ಕೆ ಅಪಾಯ ತಂದಕೊಂಡ ಘಟನೆಯೊಂದು ನಡೆದಿದೆ. ಲಿಫ್ಟ್‌ಗಾಗಿ ಕಾಯುತ್ತಿದ್ದ ಯುವಕನಿಗೆ ವೇಗವಾಗಿ ಬಂದ ಬೈಕ್‌ವೊಂದು ಡಿಕ್ಕಿ ಹೊಡೆದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‍ನ ನಂದಗ್ರಾಮ್ ಪ್ರದೇಶದ ವಿವಿಐಪಿ ಮಾಲ್ ಹೊರಗೆ ನಡೆದಿದೆ.ಈ ಘಟನೆಯು ಆ ಪ್ರದೇಶದಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಅದರ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡು ವೈರಲ್ (Viral Video)ಆಗಿದೆ. ಈ ಅಪಘಾತದಲ್ಲಿ ಯುವಕನಿಗೆ ಗಂಭೀರ ಗಾಯವಾಗಿದ್ದು ಕಾಲು ಮುರಿದೆಯಂತೆ.
ವೈರಲ್ ಆದ ವಿಡಿಯೊದಲ್ಲಿ, ಯುವಕ ರಸ್ತೆಯಲ್ಲಿ ನಿಂತು ಲಿಫ್ಟ್‌ಗಾಗಿ ರಸ್ತೆಯಲ್ಲಿ ಬರುವ ವಾಹನಗಳನ್ನು ಅಡ್ಡಹಾಕುತ್ತಿದ್ದ. ಆ ವೇಳೆ ವೇಗವಾಗಿ ಬಂದ ಬೈಕ್‍ಯೊಂದು ಅವನಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಅವನು ಗಾಳಿಯಲ್ಲಿ ಹಾರಿ ಬಹಳ ದೂರ ಹೋಗಿ ಬಿದ್ದಿದ್ದಾನೆ. ಬೈಕ್ ಸವಾರ ಮದ್ಯಪಾನ ಮಾಡಿರುವುದಾಗಿ ವರದಿಯಾಗಿದೆ. ಯುವಕ ಲಿಫ್ಟ್ ಕೇಳಲು ಮುಂದೆ ಬಂದು ರಸ್ತೆಗೆ ಅಡ್ಡಲಾಗಿ ನಿಂತಿದ್ದಕ್ಕೆ ಈ ಅಪಘಾತ ನಡೆದಿದೆ ಎಂದು ಕೆಲವು ವರದಿಗಳು ತಿಳಿಸಿವೆ.
ಅಪಘಾತದ ವಿಡಿಯೊ ಇಲ್ಲಿದೆ ನೋಡಿ
#Ghaziabad के VVIP मॉल के बाहर रात के समय सवारी के इंतजार में कड़े युवक को बाइक सवार लड़कों ने जबरजस्त टक्कर मार दी, उसके सिर फट गया और पैर की हड्डी भी टूट गई, वीडियो वायरल है। @ghaziabadpolice pic.twitter.com/q0B2OfPQDr
— Lokesh Rai (@lokeshRlive) March 20, 2025
ಘಟನೆಯ ನಂತರ ಯುವಕನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ವರದಿಗಳ ಪ್ರಕಾರ, ಅವನ ತಲೆಗೆ ಗಂಭೀರ ಗಾಯಗಳಾಗಿವೆಯಂತೆ. ಇನ್ನು ಈ ಅಪಘಾತದ ವಿಡಿಯೊ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಅತಿಯಾದ ವೇಗದಿಂದ ಅಪಘಾತ ನಡೆದಿರುವಂತಹ ಹಲವಾರು ಘಟನೆಗಳು ಬೆಳಕಿಗೆ ಬಂದಿವೆ. ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ವೇಗವಾಗಿ ಬರುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಪೊಲೀಸ್ ಕಾನ್‌ಸ್ಟೇಬಲ್ ಸಾವನ್ನಪ್ಪಿದ್ದಾರೆ. ಘಟನೆಯ ಸಮಯದಲ್ಲಿ, ಇಬ್ಬರೂ ಕಾನ್‌ಸ್ಟೇಬಲ್‌ಗಳು ಗಸ್ತು ತಿರುಗುತ್ತಿದ್ದರು ಎನ್ನಲಾಗಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೃತನನ್ನು ರವಿಕುಮಾರ್ ಎಂದು ಗುರುತಿಸಲಾಗಿದೆ.
ಈ ಸುದ್ದಿಯನ್ನೂ ಓದಿ:Viral Video: ಕಾಲ್ ಸೆಂಟರ್ ಮೇಲೆ ರೇಡ್... ಬೆನ್ನಲ್ಲೇ ಜನರಿಂದ ಲೂಟಿ; ಏನಿದು ಘಟನೆ? ವಿಡಿಯೊ ಫುಲ್ ವೈರಲ್
ಕಳೆದ ವರ್ಷ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ರಾತ್ರಿ ಬೈಕ್ ಅತಿವೇಗವಾಗಿ ಚಲಿಸಿ ಫ್ಲೈಓವರ್‌ನ ಪ್ಯಾರಾಪೆಟ್ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಈ ಭೀಕರ ಅಪಘಾತವು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಆತಂಕಕಾರಿ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.ಭೀಕರ ಅಪಘಾತದ ಪರಿಣಾಮ ಬೈಕಿನಲ್ಲಿದ್ದ ಇಬ್ಬರು ಫ್ಲೈಓವರ್‌ನಿಂದ ಕೆಳಗಿರುವ ರಸ್ತೆಯ ಮೇಲೆ ಬಿದ್ದು ಸಾವನಪ್ಪಿದ್ದರು. ಅಪಘಾತದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಗಾಯಾಳುಗಳನ್ನು ಕಿಂಗ್ ಜಾರ್ಜ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಅವರಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿಸಲಾಯಿತು ಮತ್ತು ಬದುಕುಳಿದವನಿಗೆ ಗಾಯಗಳಾಗಿದ್ದು, ಅದಕ್ಕೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
