ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಹಸೆಮಣೆಯಲ್ಲೇ ವಧುವಿಗೆ ಕಪಾಳಮೋಕ್ಷ ಮಾಡಿದ ಸಬ್ ಇನ್ಸ್‌ಪೆಕ್ಟರ್‌! ವಿಡಿಯೊ ಫುಲ್‌ ವೈರಲ್‌

ಜಿಲ್ಲಾ ಪೊಲೀಸ್ ಪಡೆಯಲ್ಲಿ ನಿಯೋಜಿತರಾಗಿದ್ದ ಸಬ್ ಇನ್ಸ್‌ಪೆಕ್ಟರ್‌ ಮತ್ತು ಮಹಿಳಾ ಕಾನ್‌ಸ್ಟೇಬಲ್‌ ಬಿಹಾರದ ನವಾಡಾದ ಸ್ಥಳೀಯ ದೇವಾಲಯದಲ್ಲಿ ಮದುವೆಯಾಗಿದ್ದಾರೆ. ಆದರೆ ನಂತರ ವರ ವಧುವಿನ ನಡುವೆ ವಿವಾದ ಶುರುವಾಗಿ ವರ ವಧುವಿಗೆ ಕಪಾಳಮೋಕ್ಷ ಮಾಡಿದ್ದಾನೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ವಧುವಿನ ಮೇಲೆ ಹಲ್ಲೆ ಮಾಡಿದ ಕಾರಣ ಆತನನ್ನು ತಕ್ಷಣ ಅಮಾನತುಗೊಳಿಸಲಾಗಿದೆ.

ಮಂಟಪದಲ್ಲಿಯೇ ವಧುವಿಗೆ ಕಪಾಳಮೋಕ್ಷ ಮಾಡಿದ ಸಬ್ ಇನ್ಸ್‌ಪೆಕ್ಟರ್‌

police viral video

Profile pavithra Feb 5, 2025 4:58 PM

ಪಟನಾ: ಸ್ಥಳೀಯ ದೇವಾಲಯದಲ್ಲಿ ಮದುವೆಯಾದ ವರನು ವಧುವಿನ ಮೇಲೆ ಕೈ ಮಾಡಿದ ಅಘಾತಕಾರಿ ಘಟನೆ ಬಿಹಾರದ ನವಾಡಾದಲ್ಲಿ ನಡೆದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜಿಲ್ಲಾ ಪೊಲೀಸ್ ಪಡೆಯಲ್ಲಿ ನಿಯೋಜಿತರಾಗಿದ್ದ ಸಬ್ ಇನ್ಸ್‌ಪೆಕ್ಟರ್‌ ಮತ್ತು ಮಹಿಳಾ ಕಾನ್‌ಸ್ಟೇಬಲ್‌ ದೇವಾಲಯದಲ್ಲಿ ಮದುವೆಯಾಗಿದ್ದಾರೆ. ಇವರಿಬ್ಬರ ನಡುವೆ ಯಾವುದೋ ವಿಷಯಕ್ಕೆ ವಿವಾದ ನಡೆದು ವರನು ವಧುವಿನ ಮೇಲೆ ಕೈ ಮಾಡಿದ್ದಾನೆ(Viral Video). ವಧುವಿನ ಮೇಲೆ ಹಲ್ಲೆ ಮಾಡಿದ ಕಾರಣ ಆತನನ್ನು ತಕ್ಷಣ ಕೆಲಸದಿಂದ ಅಮಾನತುಗೊಳಿಸಲಾಗಿದೆ.

ವೈರಲ್ ಆದ ವಿಡಿಯೊದಲ್ಲಿ ಕುತ್ತಿಗೆಗೆ ಹೂಮಾಲೆ ಧರಿಸಿ ಕುಳಿತ ವರ ಇದ್ದಕ್ಕಿದ್ದಂತೆ ರೆಬೆಲ್‌ ಆಗಿದ್ದಾನೆ. ವರನು ವಧುವಿನ ಜೊತೆ ಕುಳಿತು ಯಾವುದೋ ವಿಷಯದ ಬಗ್ಗೆ ಗಂಭೀರವಾಗಿ ಮಾತನಾಡಿ ನಂತರ ವಧುವಿನ ಮೇಲೆ ಕೈ ಎತ್ತಿದ್ದಾನೆ. ಹಲ್ಲೆಯನ್ನು ತಡೆಯಲು ಇನ್ನೊಬ್ಬ ಮಹಿಳೆ ಮಧ್ಯಪ್ರವೇಶಿಸಿ ವರನಿಂದ ವಧುವನ್ನು ಕಾಪಾಡಿದ್ದಾಳೆ.



ಹಲ್ಲೆಯ ನಂತರ, ವರನ ಮೇಲೆ ಕೋಪಗೊಂಡ ವಧು ಅವನ ವಿರುದ್ಧ ದೂರು ದಾಖಲಿಸಿದ್ದಾಳೆ. ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ವರನನ್ನು ಅಮಾನತುಗೊಳಿಸಿದ್ದಾರೆ. ಮಾಹಿತಿ ಪ್ರಕಾರ, ವಧು ಮತ್ತು ವರ ಜಿಲ್ಲಾ ಪೊಲೀಸ್ ಪಡೆಯಲ್ಲಿ ನಿಯೋಜಿತರಾಗಿದ್ದ ಸಬ್ ಇನ್ಸ್‌ಪೆಕ್ಟರ್‌ ಮತ್ತು ಮಹಿಳಾ ಕಾನ್‌ಸ್ಟೇಬಲ್ ಎನ್ನಲಾಗಿದೆ. ಮಹಿಳಾ ಕಾನ್‌ಸ್ಟೇಬಲ್‌ ಕಟಿಹಾರ್‌ನ ಕುರ್ಸೆಲಾ ನಿವಾಸಿಯಾಗಿದ್ದು, ಸಬ್ ಇನ್ಸ್‌ಪೆಕ್ಟರ್‌ ಮುಂಗೇರ್ನ ಧಾರ್ಹರಾ ಗ್ರಾಮದ ಸಚಿನ್ ಕುಮಾರ್.

ಈ ಆಘಾತಕಾರಿ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು ಅನೇಕ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬ ನೆಟ್ಟಿಗರು ಕಾಮೆಂಟ್ ಮಾಡಿ, "ವಾವ್. ಈ ಬಾರಿ ನಿಜವಾಗಿಯೂ ನ್ಯಾಯ ದೊರಕಿದೆ” ಎಂದಿದ್ದಾರೆ. ಇನ್ನೊಬ್ಬ ನೆಟ್ಟಿಗರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿ, "ಮದುವೆಯಿಂದ ಅವಸರವಾಗಿ ಹೊರಡಲು ಇದು ಒಂದು ಒಳ್ಳೆ ದಾರಿ. ಹನಿಮೂನ್‍ ವಿಚಾರ ಯಾರ ಮನಸ್ಸಿನಲ್ಲಿಯೂ ಇಲ್ಲ" ಎಂದಿದ್ದಾರೆ

ಈ ಸುದ್ದಿಯನ್ನೂ ಓದಿ: Viral News: ಡಿಪಾರ್ಟ್‌ಮೆಂಟ್‌ನವರ ಕಿರುಕುಳ ಸಹಿಸಲಾಗದೆ ಸಹಾಯವಾಣಿಗೆ ಕರೆ ಮಾಡಿದ ಪೊಲೀಸ್‌ ಅಧಿಕಾರಿ

ಇನ್ನೊಬ್ಬ ನೆಟ್ಟಿಗರು "ಅಮಾನತು ಮಾಡಿದರೆ ಖುಷಿಯಾಗುತ್ತದೆ. ಯಾಕೆಂದರೆ ಇದು 6 ತಿಂಗಳ ಅರ್ಧ ವೇತನ ಸಹಿತ ರಜೆಯಾಗಿದೆ" ಎಂದಿದ್ದಾರೆ "ವಧು-ವರರ ನಡುವಿನ ವಾಗ್ವಾದಕ್ಕೆ ನಿಖರವಾದ ಕಾರಣ ಏನೆಂಬುದು ತಿಳಿದುಬಂದಿಲ್ಲ.