Viral Video: ಅಪಘಾತದ ಬಳಿಕ ಓಪನ್ ಆಗದ ಎಲೆಕ್ಟ್ರಿಕ್ ಕಾರಿನ ಡೋರ್; ಚಾಲಕ ಸುಟ್ಟು ಕರಕಲು
ಎಲೆಕ್ಕ್ರಿಕ್ ಕಾರೊಂದು ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದ ನಂತರ ಬೆಂಕಿಗೆ ಆಹುತಿಯಾಗಿದೆ. ಅದರಲ್ಲಿದ್ದ ಚಾಲಕ ಬಾಗಿಲು ತೆರೆಯಲು ಸಾಧ್ಯವಾಗದ ಕಾರಣ ಸುಟ್ಟುಕರಕಲಾಗಿದ್ದಾನೆ. ಹೊತ್ತಿ ಉರಿಯುತ್ತಿರುವ ಕಾರಿನಿಂದ ಚಾಲಕನನ್ನು ಹೊರತೆಗೆಯಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.

-

ಬೀಜಿಂಗ್: ಎಲೆಕ್ಕ್ರಿಕ್ ವಾಹನವೊಂದು (Electric Vehicle) ಅಪಘಾತವಾದ ನಂತರ ವಿದ್ಯುತ್ ವೈಫಲ್ಯದಿಂದ ಚಾಲಕ ಸಾವಿಗೀಡಾಗಿರುವ ಆಘಾತಕಾರಿ ಘಟನೆ ನೈಋತ್ಯ ಚೀನಾದಲ್ಲಿ ನಡೆದಿದೆ. ಬಾಗಿಲು ತೆರೆಯಲು ವಿಫಲವಾದ ಕಾರಣ ಚಾಲಕನಿಗೆ ಕಾರಿನಿಂದ ಹೊರಬರಲು ಸಾಧ್ಯವಾಗಲಿಲ್ಲ. ಈ ಘಟನೆಯೊಂದಿಗೆ ವಿದ್ಯುತ್ ಚಾಲಿತ ವಾಹನಗಳ ಬಾಗಿಲಿನ ತೆರೆಯುವಿಕೆ ಬಗ್ಗೆ ಮತ್ತೆ ಕಳವಳ ವ್ಯಕ್ತವಾಗಿದೆ. ಹಲವುವರದಿಗಳು ಕಾರು Xiaomi Cop ಎಂದು ಸೂಚಿಸಿವೆ. SU7 ಎಲೆಕ್ಟ್ರಿಕ್ ಸೆಡಾನ್ ಕಾರು ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದ ನಂತರ ಕಾರು ಬೆಂಕಿಗೆ ಆಹುತಿಯಾಯಿತು. ಇದರ ವಿಡಿಯೊ ವೈರಲ್ (Viral Video) ಆಗಿದೆ.
ಸೋಮವಾರ ನೈಋತ್ಯ ಚೀನಾದ ಚೆಂಗ್ಡುವಿನಲ್ಲಿ ಅಪಘಾತವೊಂದು ಸಂಭವಿಸಿದ್ದು, ದುರ್ಘಟನೆಯಲ್ಲಿ ಚಾಲಕ ಮೃತಪಟ್ಟಿದ್ದಾನೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ಕಾರು ಚಾಲನೆ ಮಾಡುವಾಗ ಚಾಲಕ ಕುಡಿದ ಅಮಲಿನಲ್ಲಿದ್ದ. ಭೀಕರ ಅಪಘಾತ ಮತ್ತು ಚಾಲಕನನ್ನು ರಕ್ಷಿಸಲು ವಿಫಲವಾದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಇದನ್ನೂ ಓದಿ: Viral Video: ಅವನು ನನ್ನ ಪಕ್ಕದಲ್ಲಿ ಮಲಗಲು ಯತ್ನಿಸುತ್ತಿದ್ದ- ರೈಲಿನಲ್ಲಾದ ಭಯಾನಕ ಅನುಭವ ಬಿಟ್ಟಿಟ್ಟ ಯುವತಿ
ವಿಡಿಯೊ ವೀಕ್ಷಿಸಿ:
Horrific! A 31-year-old man in China was burnt alive inside a Xiaomi SU7 EV because the DOORS WOULDN'T OPEN after a crash! Bystanders watched helplessly as flames consumed the car. No family should ever face this horror. Glad that this coffin on wheels is not available in India. pic.twitter.com/fAKmd16hTy
— Tech Bharat (Nitin Agarwal) (@techbharatco) October 15, 2025
ಪ್ರಾಥಮಿಕ ವಿಚಾರಣೆಯ ನಂತರ, ಡೆಂಗ್ ಎಂಬ ಹೆಸರಿನ 31 ವರ್ಷದ ಚಾಲಕ ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿದ್ದರಿಂದ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕಾರು ಬೆಂಕಿಗೆ ಆಹುತಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯುತ್ ವ್ಯತ್ಯಯದಿಂದಾಗಿ ಎಲೆಕ್ಟ್ರಿಕ್ ವಾಹನದ ಬಾಗಿಲು ತೆರೆಯಲು ವಿಫಲವಾದ ಕಾರಣ, ರಕ್ಷಣಾ ತಂಡವು ಡೆಂಗ್ ಅವರನ್ನು ಕಾರಿನಿಂದ ಹೊರಗೆ ತರಲು ಸಾಧ್ಯವಾಗಲಿಲ್ಲ. ಹೀಗಾಗಿ ಚಾಲಕ ಬೆಂಕಿಯಲ್ಲಿ ಸುಟ್ಟು ಕರಕಲಾದ ಎಂದು ತಿಳಿದುಬಂದಿದೆ.
ವಾಹನವು ವಿದ್ಯುತ್ ಕಳೆದುಕೊಂಡ ತಕ್ಷಣ ಡೋರ್ ತೆರೆದುಕೊಂಡಿಲ್ಲ. ಇದು ವ್ಯಾಪಕ ಚರ್ಚೆಗೆ ನಾಂದಿ ಹಾಡಿದೆ. EV ಡೋರ್ ಹ್ಯಾಂಡಲ್‌ಗಳ ಪರೀಕ್ಷೆಯನ್ನು ಮಾಡಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ಇನ್ನು ಚೀನಾದ ಉನ್ನತ ನಿಯಂತ್ರಕರು, ಹ್ಯಾಂಡಲ್ ವಿನ್ಯಾಸಗಳನ್ನು ನಿಷೇಧಿಸುವ ಬಗ್ಗೆ ಯೋಚಿಸುತ್ತಿದ್ದಾರೆ. US ರಾಷ್ಟ್ರೀಯ ಹೆದ್ದಾರಿ ಸಂಚಾರ ಸುರಕ್ಷತಾ ಆಡಳಿತವು, ಸೆಪ್ಟೆಂಬರ್‌ನಲ್ಲಿ ಕೆಲವು ಟೆಸ್ಲಾ ಮಾಡೆಲ್ Y ಹ್ಯಾಂಡಲ್‌ಗಳಲ್ಲಿನ ದೋಷಗಳನ್ನು ಪರಿಶೀಲಿಸಲು ಪ್ರಾರಂಭಿಸಿತು.
ಇದನ್ನೂ ಓದಿ: Viral Video: ಪುರುಷರ ಒಳ ಉಡುಪನ್ನು ತರಕಾರಿ ಚೀಲವಾಗಿ ಪರಿವರ್ತಿಸಿದ ಮಹಿಳೆ; ಪಾಪ ಪತಿ ಎಂದ ನೆಟ್ಟಿಗರು!
ಇನ್ನು ಅಪಘಾತ ಸಂಭವಿಸಿದ ಕಾರಿನ ಕಂಪನಿ Xiaomiಯ ಷೇರುಗಳು ಸೋಮವಾರ ಸುಮಾರು ಶೇ. 8.7ರಷ್ಟು ಕುಸಿದವು. ಇದು ಏಪ್ರಿಲ್ ನಂತರದ ಗರಿಷ್ಠ ಮಟ್ಟವಾಗಿದೆ.