Viral Video: ಆಂಟಿಲಿಯಾ ಮುಂದೆ ಆಟೋ ಡ್ರೈವರ್‌ನಂತೆ ನಿಂತ ಮುಖೇಶ್ ಅಂಬಾನಿ; ಏನಿದು ವೈರಲ್ ವಿಡಿಯೊ
ಎಐ ರಚಿಸಿದ ವಿಡಿಯೊದಲ್ಲಿ ಭಾರತೀಯ ಬಿಲಿಯನೇರ್ ಮುಖೇಶ್ ಅಂಬಾನಿ ಮುಂಬೈನ ತಮ್ಮ ಐಷಾರಾಮಿ ಕಟ್ಟಡದ ಮುಂದೆ ಆಟೋ ಡ್ರೈವರ್‌ನಂತೆ ನಿಂತ ವಿಡಿಯೊವೊಂದು ಸಖತ್ ವೈರಲ್(Viral Video) ಆಗಿದೆ.ದೇಶದ ಆಗರ್ಭ ಶ್ರೀಮಂತ ಅಂಬಾನಿ ಆಟೋ ಡ್ರೈವರ್‌ನಂತೆ ಕಾಣಿಸಿಕೊಂಡ ವಿಡಿಯೊ ನೋಡಿ ನೆಟ್ಟಿಗರು ಕೂಡ ಶಾಕ್ ಆಗಿದ್ದಾರೆ.


ನವದೆಹಲಿ: ಈಗ ಏನಿದ್ದರೂ ಎಐನದ್ದೇ ಜಮಾನ! ಎಐ ರಚಿಸುವ ಘಿಬ್ಲಿ ಇಮೇಜ್, ವಿಡಿಯೊಗಳು ಭಾರೀ ಟ್ರೆಂಡ್ ಆಗುತ್ತಿವೆ. ಹೀಗಿರುವಾಗ ಇತ್ತೀಚೆಗೆ ಎಐ-ರಚಿಸಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರಲ್ಲಿ ಆಶ್ಚರ್ಯವನ್ನುಂಟುಮಾಡಿದೆ. ಎಐ ರಚಿಸಿದ ವಿಡಿಯೊದಲ್ಲಿ ಭಾರತೀಯ ಬಿಲಿಯನೇರ್ ಮುಖೇಶ್ ಅಂಬಾನಿ ಮುಂಬೈನ ತಮ್ಮ ಐಷಾರಾಮಿ ಕಟ್ಟಡದ ಮುಂದೆ ಆಟೋ ಡ್ರೈವರ್‌ನಂತೆ ನಿಂತ ದೃಶ್ಯವೊಂದು ಸಖತ್ ವೈರಲ್(Viral Video) ಆಗಿದೆ. ಅಗರ್ಭ ಶ್ರೀಮಂತ ಅಂಬಾನಿಯನ್ನು ಆಟೋ ರಿಕ್ಷಾ ಡ್ರೈವರ್‌ನಂತೆ ಮಾಡಿದ ಈ ಎಐ ವಿಡಿಯೊ ನೋಡಿ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.
ಬಿಲಿಯನೇರ್ ಅಂಬಾನಿಯನ್ನು ಆಟೋ ಡ್ರೈವರ್ ಆಗಿ ವಿಡಿಯೊದಲ್ಲಿ ತೋರಿಸಲಾಗಿದೆ. ಇದರಲ್ಲಿ ಅಂಬಾನಿ ಮುಂಬೈನ ಬೀದಿಗಳಲ್ಲಿ ನಿಂತು ಒಂದು ಗುಟುಕು ನೀರನ್ನು ಕುಡಿಯುವುದು ಮತ್ತು ಅಂಬಾನಿಯ ಹಿಂದೆ ಎತ್ತರದ ಆಂಟಿಲಿಯಾ ಇರುವುದು ಸೆರೆಯಾಗಿದೆ. ಬೆಂಗಾವಲು ಪಡೆಗಳಿಲ್ಲದೆ ನಿಲ್ಲಿಸಿರುವ ಆಟೋರೀಕ್ಷಾ ಪಕ್ಕದಲ್ಲಿ ಅಂಬಾನಿ ಒಂಟಿಯಾಗಿ ನಿಂತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಅಂಬಾನಿಯ ವಿಡಿಯೊ ಇಲ್ಲಿದೆ ನೋಡಿ...
ಇದನ್ನು ಎಐ ಆರ್ಟ್ ಇನ್‌ಸ್ಟಾಗ್ರಾಮರ್ ಅನವ್ ನಾಯರ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಈ ಹಿಂದೆ ಆತ ಇನ್ನೊಂದು ವಿಡಿಯೊದಲ್ಲಿ ಮುಕೇಶ್ ಅಂಬಾನಿ, ಗೌತಮ್ ಅದಾನಿ ಮತ್ತು ಆನಂದ್ ಮಹೀಂದ್ರಾ ರಸ್ತೆ ಬದಿಯಲ್ಲಿ ಕಾರ್ಡ್‍ಗಳ ಆಟವನ್ನು ಆಡುತ್ತಿರುವ ವಿಡಿಯೊವನ್ನು ಪೋಸ್ಟ್ ಮಾಡಿದ್ದನು.
ಈ ಎಐ ಆಧಾರಿತ ದೃಶ್ಯಗಳು ವೈರಲ್ ಆಗಿದ್ದು, ಲಕ್ಷಾಂತರ ವ್ಯೂವ್ಸ್ ಗಳಿಸಿದೆ. ನೆಟ್ಟಿಗರು ಮೀಮ್‍ಗಳು ಮತ್ತು ಕಾಮೆಂಟ್‍ಗಳೊಂದಿಗೆ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಒಬ್ಬರು "ಭಾಯ್ ಕಾ ಸೈಡ್ ಬಿಸಿನೆಸ್" ಎಂದು ವ್ಯಂಗ್ಯವಾಡಿದರೆ, ಇನ್ನೊಬ್ಬರು ಇದನ್ನು "ಎಐನ ವಿಪರೀತ ಬಳಕೆ" ಎಂದು ಕರೆದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಸಖತ್ ವೈರಲ್ ಆಯ್ತು ಮೂವರು ಸಹೋದರರ ಈ ಕ್ಯೂಟ್ ಡ್ಯಾನ್ಸ್! ನೆಟ್ಟಿಗರು ಹೇಳಿದ್ದೇನು?
ಎಐ ರಚಿಸುವ ಘಿಬ್ಲಿ ಇಮೇಜ್‍ಗಳಲ್ಲಿ ಎಡವಟ್ಟಾಗಿದ್ದ ಪ್ರಕರಣಗಳು ಈ ಹಿಂದೆ ಹಲವು ಬೆಳಕಿಗೆ ಬಂದಿದ್ದವು. ಈ ಹಿಂದೆ ದಂಪತಿ ಗುಡಿ ಪಾಡ್ವಾವನ್ನು ಆಚರಿಸಿದ ಬಳಿಕ ಆ ಗುಡಿಯ ಮುಂದೆ ನಿಂತು ಪೋಟೊ ತೆಗೆಸಿಕೊಂಡಿದ್ದರು. ಕೊನೆಗೆ ಅದನ್ನು ಘಿಬ್ಲಿ ಇಮೇಜ್‍ಗೆ ಬದಲಾಯಿಸಿದಾಗ ಆ ಫೋಟೊದಲ್ಲಿ ಗುಡಿ ಬದಲು ಮಹಾತ್ಮಾ ಗಾಂಧಿಯ ಫೋಟೊ ಬಂದಿದೆಯಂತೆ. ಘಿಬ್ಲಿ ಇಮೇಜ್‍ಗಳಲ್ಲಿ ಮಹಾತ್ಮ ಗಾಂಧಿ ಇರುವುದು ಸೋಶಿಯಲ್ ಮೀಡಿಯಾ ನೆಟ್ಟಿಗರಲ್ಲಿ ಅಚ್ಚರಿಯನ್ನು ಮೂಡಿಸಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.