Viral Video: 2 ಸೆಕೆಂಡ್ ವಿಡಿಯೊ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಂದನ್ ಗರ್ಲ್: ಯಾರೀಕೆ?
ಯುವತಿಯೊಬ್ಬಳು ಆಟೋದಲ್ಲಿ ಪ್ರಯಾಣಿಸುತ್ತಿದ್ದಾಗ ವಿಡಿಯೊ ಮಾಡಿ ಅದನ್ನು ಎಕ್ಸ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಕೇವಲ ಎರಡು ಸೆಕೆಂಡ್ ಕಾಲಮಿತಿಯ ಈ ವಿಡಿಯೊದಲ್ಲಿ ಅವರ ಮೇಕಪ್ ಗಮನ ಸೆಳೆಯುತ್ತಿದೆ. ಆನ್‌ಲೈನ್‌ನಲ್ಲಿ ಈಕೆ ಬಂದನ್ ಗರ್ಲ್ ಎಂದೆ ಫೇಮಸ್ ಆಗಿದ್ದು ಸದ್ಯ ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಬಂದನ್ ಗರ್ಲ್ -
ಮುಂಬೈ: ಇತ್ತೀಚಿನ ದಿನದಲ್ಲಿ ಸೋಶಿಯಲ್ ಮಿಡಿಯಾ ಬಳಸುವವರ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ. ಅದರಲ್ಲೂ ಕಂಟೆಂಟ್ ಕ್ರಿಯೆಟರ್, ವ್ಲಾಗರ್‌ಗಳ ಸಂಖ್ಯೆ ಕೂಡ ಅಧಿಕವಾಗುತ್ತಿದೆ. ಕಾಮಿಡಿ ಕ್ಲಿಪ್ಸ್, ಅಡುಗೆ ಮಾಡುವ ವಿಧಾನ, ಮನೆಯ ಇಂಟಿರಿಯರ್ ಡೆಕೊರೇಟಿವ್ ಐಡಿಯಾಗಳು, ಸಿನಿಮಾ ವಿಮರ್ಶೆ ಹೀಗೆ ಅನೇಕ ವಿಡಿಯೊಗಳನ್ನು ಕಂಟೆಂಟ್ ಕ್ರಿಯೆಟರ್‌ಗಳು ಅಪ್‌ಲೋಡ್ ಮಾಡುತ್ತಲೇ ಇರುತ್ತಾರೆ. ಆದರೆ ಅವುಗಳಲ್ಲಿ ಕೆಲವೊಂದು ಮಾತ್ರ ಮಿಂಚಿನ ವೇಗದಲ್ಲಿ ವೈರಲ್ ಆಗುತ್ತವೆ. ಅಂತೆಯೇ ಕೆಲವೊಂದು ವಿಡಿಯೊದಲ್ಲಿ ಕಂಟೆಂಟ್ ಇಲ್ಲದಿದ್ದರೂ ಕೆಲವೇ ಸೆಂಕೆಡುಗಳಾಗಿದ್ದರೂ ಕೂಡ ಅದು ಜನರ ಗಮನ ಸೆಳೆಯುತ್ತವೆ. ಅಂತೆಯೇ ಯುವತಿಯೊಬ್ಬರು ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದಾಗ ವಿಡಿಯೊ ಮಾಡಿ ಅದನ್ನು ಎಕ್ಸ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಕೇವಲ ಎರಡು ಸೆಕೆಂಡ್ ಕಾಲಮಿತಿಯಲ್ಲಿದ್ದ ಈ ವಿಡಿಯೊದಲ್ಲಿ ಅವರ ಮೇಕಪ್ ಗಮನ ಸೆಳೆಯುತ್ತಿದೆ. ಆನ್‌ಲೈನ್‌ನಲ್ಲಿ ಈಕೆ ಬಂದನ್ ಗರ್ಲ್ ಎಂದೇ ಜನಪ್ರಿಯ. ಸದ್ಯ ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ (Viral Video) ವೈರಲ್ ಆಗುತ್ತಿದೆ.
ರಾತ್ರೋರಾತ್ರಿ ವೈರಲ್ ಆಗಿ ಬಳಿಕ ಯಶಸ್ಸನ್ನು ಕಂಡ ಅನೇಕರಲ್ಲಿ ಈಗ ಈ ಬಂದನ್ ಗರ್ಲ್ ಕೂಡ ಒಬ್ಬರು. ಈ ವಿಡಿಯೊ ಅಪ್‌ಲೋಡ್ ಆದ ಕೆಲವೇ ಗಂಟೆಯಲ್ಲಿ 100 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಸಾವಿರಾರು ಮೀಮ್ಸ್, ಪ್ರತಿಕ್ರಿಯೆಗಳು ಕೂಡ ಪಡೆದಿದೆ. ಈ ವಿಡಿಯೊದಲ್ಲಿ ಇರೋದು ಯಾರು? ಈಕೆಯ ಹೆಸರು ಏನು? ಎಂಬ ಕುತೂಹಲ ನೆಟ್ಟಿಗರಿಗೆ ಮೂಡಿದೆ.
ವಿಡಿಯೊ ಇಲ್ಲಿದೆ:
1. 🧵 This is the backstory about how @w0rdgenerator's auto-rickshaw video went viral on X — triggering adoration, backlash, AI clones, and utter chaos. We chatted exclusively with the woman herself to report on what she thinks of the entire hullabaloo.@TulikaBose_ and… https://t.co/LutC6p1B5a pic.twitter.com/y2ZFQydLic
— The Juggernaut (@thejuggernaut) November 18, 2025
ವೈರಲ್ ಆದ ಎರಡು ಸೆಕೆಂಡಿನ ವಿಡಿಯೋದಲ್ಲಿ ಗ್ಲಾಮರಸ್ ಆಗಿ ಮೇಕಪ್ ಮಾಡಿಕೊಂಡಿದ್ದ ಯುವತಿಯನ್ನು ಕಾಣಬಹುದು. ಆಕೆ ಆಟೋ ರಿಕ್ಷಾದೊಳಗೆ ಕುಳಿತಿದ್ದು ಸೆಲ್ಫಿ ಕ್ಯಾಮರಾದಲ್ಲಿ ಮುಖ ನೋಡುತ್ತಾ ಈ ವಿಡಿಯೊ ಮಾಡಿದ್ದಾರೆ. ಆಕೆಯ ಹೇರ್ ಸ್ಟೈಲ್ ಮೇಕಪ್, ಧರಿಸಿದ ಬಟ್ಟೆಗಳು ಸ್ಟೈಲಿಶ್ ಆಗಿ ಕಂಡಿದ್ದು ನೆಟ್ಟಿಗರ ಗಮನ ಸೆಳೆಯುವಂತೆ ಮಾಡಿದೆ. ಇಷ್ಟೆಲ್ಲ ವೈರಲ್ ಆಗಿದ್ದರೂ ಕೂಡ ಆಕೆ ಯಾರು? ಹೆಸರೇನು? ಹಿನ್ನೆಲೆ ಏನು ಎಂಬ ಬಗ್ಗೆ ಇನ್ನು ಮಾಹಿತಿ ತಿಳಿದು ಬಂದಿಲ್ಲ. ಹೀಗಾಗಿ ನೆಟ್ಟಿಗರೇ ಆಕೆಗೆ ಬಂದನ್ ಗರ್ಲ್ ಎಂಬ ನಿಕ್ ನೇಮ್ನಿಂದ ಕರೆಯುತ್ತಿದ್ದಾರೆ.
ಗರ್ಭಿಣಿಗೆ ಈ ಪೊಲೀಸ್ ಮಾಡಿದ್ದೇನು ಗೊತ್ತಾ? ಈ ವಿಡಿಯೊ ನೋಡಿದ್ರೆ ಶಾಕ್ ಆಗುತ್ತೆ!
ಈ ವೈರಲ್ ಕ್ಲಿಪ್ ಈಗ ಆನ್‌ಲೈನ್‌ನಲ್ಲಿ ಟ್ರೆಂಡಿಂಗ್ ಆಗಿದೆ. ಬೆಂಗಳೂರು ಮೂಲದ ಸಂಸ್ಥಾಪಕರೊಬ್ಬರು ಇತ್ತೀಚೆಗೆ ತಮ್ಮ ಕಂಪನಿಯ ಉದ್ಯೋಗವಕಾಶ ನೀಡುವ ಪೋಸ್ಟ್‌ನಲ್ಲಿ ವಿಡಿಯೊವನ್ನು ಬಳಸಿಕೊಂಡಿದ್ದಾರೆ. ಮುಂದಿನ ದಿನದಲ್ಲಿ ಆಕೆ ಯಾರೆಂದು ತಿಳಿದುಬಂದರೆ ಜಾಹೀರಾತಿನಲ್ಲಿ ಮತ್ತು ಸಿನಿಮಾದಲ್ಲಿ ಅವಕಾಶಗಳು ಸಿಗುವ ಸಾಧ್ಯತೆ ಸಹ ಇದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಪ್ರಯೋಗ್‌ರಾಜ್‌ನಲ್ಲಿ ಮೋನಾಲಿಸಾ ವೈರಲ್ ಆದಂತೆ ಈಗ ಈ ಬಂದನ್ ಗರ್ಲ್ ಕೂಡ ಗಮನ ಸೆಳೆದಿದ್ದಾರೆ.