Viral Video: ನಡುರಸ್ತೆಯಲ್ಲೇ ಪತಿಗೆ ಹಿಗ್ಗಾ-ಮುಗ್ಗಾ ಚಪ್ಪಲಿಯಿಂದ ಥಳಿಸಿದ ಪತ್ನಿ- ವಿಡಿಯೊ ನೋಡಿ
ಪತ್ನಿಯೊಬ್ಬಳು ಬೈಕ್‌ನಲ್ಲಿ ಹೋಗುತ್ತಿದ್ದಾಗ ತನ್ನ ಪತಿಗೆ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಹೊಡೆದಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಉತ್ತರ ಪ್ರದೇಶದ ಲಖನೌದಲ್ಲಿ ಈ ಘಟನೆ ನಡೆದಿದೆ.ನೆಟ್ಟಿಗರು ಈ ವಿಡಿಯೊ ನೋಡಿ ಕಿಡಿಕಾರಿದ್ದಾರೆ.


ಲಖನೌ: ಇತ್ತೀಚೆಗೆ ಮಹಿಳೆಯೊಬ್ಬಳು ತನ್ನ ಪತಿಗೆ ಚಪ್ಪಲಿಯಲ್ಲಿ ಹಿಗ್ಗಾಮುಗ್ಗಾ ಹೊಡೆದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೊದಲ್ಲಿ ಪತ್ನಿಯೊಬ್ಬಳು ತನ್ನ ಪತಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಚಪ್ಪಲಿಯಿಂದ ಪದೇ ಪದೇ ಹೊಡೆದಿರುವುದು ಸೆರೆಯಾಗಿದೆ. ಉತ್ತರಪ್ರದೇಶದ(Uttarpradesh) ಲಖನೌದಲ್ಲಿ ನಡೆದ ಈ ಘಟನೆ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಈ ವೈರಲ್(Viral Video) ವಿಡಿಯೊದಲ್ಲಿ ದಂಪತಿ ಬೈಕ್‌ನಲ್ಲಿ ಪ್ರಯಾಣಿಸುವಾಗ ಅವರ ನಡುವೆ ತೀವ್ರ ವಾಗ್ವಾದ ನಡೆದಂತೆ ತೋರುತ್ತದೆ. ಆಗ ಬೈಕಿನ ಹಿಂದೆ ಕುಳಿತಿದ್ದ ಮಹಿಳೆ, ಪತಿಗೆ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಹೆಂಡತಿ ಅಷ್ಟು ಹೊಡೆಯುತ್ತಿದ್ದರೂ ಗಂಡ ಮಾತ್ರ ಬೈಕ್ ಓಡಿಸುವದರಲ್ಲೇ ಮಗ್ನನಾಗಿದ್ದಾನೆ.
ಈ ಜಗಳದ ನಿಖರವಾದ ಕಾರಣ ಬಹಿರಂಗವಾಗದಿದ್ದರೂ, ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ನೆಟ್ಟಿಗರು ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ಅನೇಕರು ಸಾರ್ವಜನಿಕವಾಗಿ ಹಿಂಸಾಚಾರದ ಪ್ರದರ್ಶನವನ್ನು ಖಂಡಿಸಿದರೆ, ಕೆಲವರು ಅಪಘಾತದ ಸಾಧ್ಯತೆಯ ಬಗ್ಗೆ ಮಾತನಾಡಿದ್ದಾರೆ.
ಪತಿಗೆ ಪತ್ನಿಯಿಂದ ಚಪ್ಪಲಿಯೇಟು ಕೊಟ್ಟ ವಿಡಿಯೊ ಇಲ್ಲಿದೆ ನೋಡಿ...
Kalesh b/w Husband and wife on running bike, Wife started beating her husband over some mutual dispute In Lucknow UP pic.twitter.com/7Nay1x9tgi
— Ghar Ke Kalesh (@gharkekalesh) May 20, 2025
"ಕೆಲವರ ವೈವಾಹಿಕ ಜೀವನ ಭಯಾನಕವಾಗಿವೆ" ಎಂದು ಒಬ್ಬ ನೆಟ್ಟಿಗರು ಹೇಳಿದ್ದಾರೆ. “ನಿಮ್ಮ ಹೆಂಡತಿಗೆ ಮೋಸ ಮಾಡುತ್ತಿದ್ದರೆ ಸಿಕ್ಕಿಬೀಳಬೇಡಿ” ಎಂದು ಒಬ್ಬ ವ್ಯಕ್ತಿ ಹಾಸ್ಯಮಯವಾಗಿ ಬರೆದಿದ್ದಾರೆ. ಸುರಕ್ಷತಾ ಕಾಳಜಿಯನ್ನು ಎತ್ತುತ್ತಾ, ಒಬ್ಬ ನೆಟ್ಟಿಗರು, "ದೈಹಿಕ ಕಿರುಕುಳದ ಜೊತೆಗೆ, ಈ ಮಹಿಳೆ ತಮ್ಮ ಮತ್ತು ರಸ್ತೆಯಲ್ಲಿರುವ ಇತರರ ಜೀವಗಳಿಗೆ ಅಪಾಯವನ್ನುಂಟುಮಾಡುತ್ತಿದ್ದಾಳೆ. ಅವಳ ವಿರುದ್ಧ ಪ್ರಕರಣ ದಾಖಲಿಸಬೇಕು. ಆ ಬಡ ವ್ಯಕ್ತಿ ಶೀಘ್ರದಲ್ಲೇ ಅವಳಿಂದ ಮುಕ್ತನಾಗುತ್ತಾನೆ ಎಂದು ನಾನು ಭಾವಿಸುತ್ತೇನೆ" ಎಂದು ಪೋಸ್ಟ್ ಮಾಡಿದ್ದಾರೆ.
ಮತ್ತೊಬ್ಬರು, ಹೆಲ್ಮೆಟ್‌ನ ಮಹತ್ವವನ್ನು ಇಲ್ಲಿ ಅರ್ಥಮಾಡಿಕೊಳ್ಳಬಹುದು ಎಂದಿದ್ದಾರೆ. ಮದುವೆಯಾಗದಿರಲು ಇನ್ನೊಂದು ಕಾರಣ ಸಿಕ್ಕಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಪ್ರೀತಿ ಎಂದರೆ ಇದು: ಪತ್ನಿಗಾಗಿ ಇಡ್ಲಿ ತಯಾರಿಸಿದ ಇಂಗ್ಲೆಂಡ್ ಪತಿ; ಇವರಿಬ್ಬರ ಲವ್ ನೋಡಿ ನೆಟ್ಟಿಗರು ಹೇಳಿದ್ದೇನು?
ಇತ್ತೀಚೆಗೆ ಮಧ್ಯಪ್ರದೇಶದ ಖರ್ಗೋನ್ ಜಿಲ್ಲೆಯಲ್ಲಿ 45 ವರ್ಷದ ವ್ಯಕ್ತಿಯೊಬ್ಬ ತನ್ನ 40 ವರ್ಷದ ಪತ್ನಿಯನ್ನು ಕೊಂದು ತಮ್ಮ ಮನೆಯಲ್ಲೇ ಗುಂಡಿ ತೆಗೆದು ಹೂತುಹಾಕಿದ ಘಟನೆ ನಡೆದಿದೆ. ನಂತರ ಶವದ ಕೈ ಗುಂಡಿಯಿಂದ ಹೊರಗೆ ಕಂಡುಬಂದಿದ್ದು, ಭಯಗೊಂಡ ಆರೋಪಿಯು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯ ಭಯದಿಂದ ಲಕ್ಷ್ಮಣನು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ರಾಠೋರ್ ತಿಳಿಸಿದ್ದಾರೆ. ಆತನೇ ಗುಂಡಿಯನ್ನು ತೋಡಿ ತನ್ನ ಪತ್ನಿಯನ್ನು ಹೂತಾಕಿದ್ದ, ಆದರೆ ಶವವನ್ನು ಸರಿಯಾಗಿ ಮುಚ್ಚದ ಕಾರಣ ಕೈ ಗೋಚರಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.