ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

"ಮಾನವೀಯತೆ ಮರೆಯಾಗಿಲ್ಲ"- ಕ್ಯಾಬ್ ನಲ್ಲೇ ಬಿಟ್ಟು ಹೋದ ಗ್ರಾಹಕನ ಪರ್ಸ್ ತಲುಪಿಸಿದ ಚಾಲಕ!

Viral Post: ಕೇವಲ ಆಧುನಿಕ ಸೌಕರ್ಯಗಳಿಗೆ ಬೆಂಗಳೂರು ಪ್ರಸಿದ್ಧಿಯಾಗಿಲ್ಲ ಮಾನವೀಯತೆಯಲ್ಲೂ ಮುಂದಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಬೆಂಗಳೂರಿನ ಕ್ಯಾಬ್ ಚಾಲಕನೊಬ್ಬರು‌ ಕಳೆದುಹೋದ ಪರ್ಸ್ ನ್ನು ಹಿಂತಿರುಗಿಸಿದ್ದು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವ್ಯಾಲೆಟ್ ಒಳಗೆ ಐಡಿ ಕಾರ್ಡ್ ಮೂಲಕ ಪ್ರಯಾಣಿಕರ ಸಂಪರ್ಕ ವಿವರಗಳನ್ನು ಕಂಡುಕೊಂಡು ಗ್ರಾಹಕರನ್ನು ಸಂಪರ್ಕ ಮಾಡಿದ್ದಾರೆ.

ಗ್ರಾಹಕನ ವ್ಯಾಲೆಟ್ ತಲುಪಿಸಿದ ಚಾಲಕ: ಪ್ರಾಮಾಣಿಕತೆಗೆ ನೆಟ್ಟಿಗರು ಫಿದಾ!

ಗ್ರಾಹಕನ ಪರ್ಸ್ ತಲುಪಿಸಿದ ಚಾಲಕ -

Profile
Pushpa Kumari Mar 12, 2026 1:19 PM

ಬೆಂಗಳೂರು, ಮಾ.12: ರಾಜ್ಯದ ಪ್ರಮುಖ ನಗರ ಕೇಂದ್ರವಾಗಿ ಬೆಂಗಳೂರು (Bengaluru) ಪ್ರಸಿದ್ಧಿ ಪಡೆದಿದೆ. ಸಿಲಿಕಾನ್ ಸಿಟಿ ಎಂದೇ ಖ್ಯಾತಿಯಾಗಿರುವ ಬೆಂಗಳೂರು ಐಟಿ ಕಂಪನಿಗಳು, ಐತಿಹಾಸಿಕ ತಾಣಗಳು, ಉದ್ಯಾನವನಗಳಿಗೆ ಹೆಸರುವಾಸಿಯಾಗಿದೆ. ಇದೀಗ ಕೇವಲ ಆಧುನಿಕ ಸೌಕರ್ಯಗಳಿಗೆ ಬೆಂಗಳೂರು ಪ್ರಸಿದ್ಧಿ ಯಾಗಿಲ್ಲ ಮಾನವೀಯತೆಯಲ್ಲೂ ಮುಂದಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ ಯಾಗಿದೆ. ಬೆಂಗಳೂರಿನ ಕ್ಯಾಬ್ ಚಾಲಕ ನೊಬ್ಬರು‌ ಕಳೆದುಹೋದ ಪರ್ಸ್ ನ್ನು ಹಿಂತಿರುಗಿಸಿದ್ದು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಂದಿನ ಕಾಲದಲ್ಲಿ ಮಾನವೀಯತೆ ಎಂಬುವುದು ಮರೆಯಾಗಿದೆ. ಈ ನಡುವೆ ಕ್ಯಾಬ್ ಚಾಲಕನು ಮರೆತು ಹೊಗಿದ್ದ ಪರ್ಸ್ ಅನ್ನು ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ವ್ಯಾಲೆಟ್ ಒಳಗೆ ಐಡಿ ಕಾರ್ಡ್ ಮೂಲಕ ಪ್ರಯಾಣಿಕರ ಸಂಪರ್ಕ ವಿವರಗಳನ್ನು ಕಂಡುಕೊಂಡು ಗ್ರಾಹಕರನ್ನು ಸಂಪರ್ಕ ಮಾಡಿದ್ದಾರೆ.



ಮಾರುಕಟ್ಟೆ ಹೂಡಿಕೆದಾರ ಹರ್ಷ್ ಗುಪ್ತಾ ಮಧುಸೂದನ್ ಇತ್ತೀಚೆಗೆ ಕ್ಯಾಬ್ ನಲ್ಲಿ ಪರ್ಸ್ ವೊಂದನ್ನು ಬಿಟ್ಟು ಹೋಗಿದ್ದರು. ಆದರೆ ಅತ್ಯಂತ ಆಘಾತಕಾರಿ ವಿಷಯವೆಂದರೆ ಚಾಲಕ ವ್ಯಕ್ತಿಯನ್ನು ಪತ್ತೆಹಚ್ಚಿ ಪರ್ಸ್ ಹಿಂತಿರುಗಿಸಿದಾಗ ಅದು ಕಾಣೆಯಾಗಿದೆ ಎಂದು ಅವರಿಗೆ ಕೂಡ ತಿಳಿದಿರಲಿಲ್ಲ. ಹಿಂದಿನ ಸೀಟಿನಲ್ಲಿ ವ್ಯಾಲೆಟ್ ಅನ್ನು ಗಮನಿಸಿದ ಚಾಲಕ ನಂಬರ್ ಪತ್ತೆ ಹಚ್ಚಿ ಕರೆಮಾಡಿದ್ದಾರೆ

ಆದರೆ ಹರ್ಷ್ ಅವರು ಯಾವುದೇ ಕಾರ್ಯಕ್ರಮದಲ್ಲಿ ಬ್ಯುಸಿ ಇರುವುದರಿಂದ ಅಪರಿಚಿತ ಸಂಖ್ಯೆಯ ಕರೆಗಳನ್ನು ಸ್ವೀಕಾರ ಮಾಡಿಲ್ಲ. ಕೊನೆಗೂ ಚಾಲಕ ಜನನಿಬಿಡ ಸಮ್ಮೇಳನ ಸ್ಥಳದಲ್ಲಿ ಅವರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು.ಈ ಘಟನೆಯನ್ನು ಹರ್ಷ್ ಅವರು ಎಕ್ಸ್ (X) ನಲ್ಲಿ ಹಂಚಿಕೊಂಡಿದ್ದಾರೆ.

Viral News: ದಿನನಿತ್ಯ 3.5 ಕೆಜಿ ಚಿನ್ನ ಧರಿಸುವ ಗೋಲ್ಡ್ ಮ್ಯಾನ್ ಕನ್ಹಯ್ಯಾಲಾಲ್ ಖಾತಿಕ್ ಗೆ ಜೀವ ಬೆದರಿಕೆ!

ಈ ಜಗತ್ತಿನಲ್ಲಿ ನಾವು ಗುರುತಿಸದಷ್ಟು ಒಳ್ಳೆಯತನವಿದೆ. ಭಾರತವು ಆಂತರಿಕವಾಗಿ ಹೆಚ್ಚಿನ ನಂಬಿಕೆಯ ಸಮಾಜವಾಗಿದೆ. ಅತ್ಯಂತ ಸವಾಲಿನ ಆರ್ಥಿಕ ಸ್ಥಿತಿಯನ್ನು ಹೊಂದಿರುವ ಜನರು ಅಂತಹ ಸೌಜನ್ಯ ಮತ್ತು ಘನತೆಯಿಂದ ವರ್ತಿಸುತ್ತಾರೆ ಎಂದು ಬರೆದಿದ್ದಾರೆ. ಹರ್ಷ್ ಅವರು ಚಾಲಕನಿಗೆ ಸಣ್ಣ ಹಣದ ಉಡುಗೊರೆಯನ್ನು ನೀಡಲು ಮುಂದಾಗಿದ್ದು ಆದರೆ ಚಾಲಕ‌ ಅದನ್ನು ಪಡೆಯಲು ಬಹಳ ಹಿಂಜರಿದರು. ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಅನೇಕರು ಚಾಲಕನ‌ ಪ್ರಾಮಾಣಿಕತೆಯನ್ನು ಹೊಗಳಿದ್ದಾರೆ. ಬಳಕೆದಾರರೊಬ್ಬರು ಇಂತಹ ವ್ಯಕ್ತಿಗಳಿಂದಲೇ ಭಾರತ ದೇಶದ ಬಗ್ಗೆ ಹೆಮ್ಮೆ ಇದೆ ಎಂದು ಬರೆದಿದ್ದಾರೆ.