ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

"ಛೇ ನನ್ನ ಮೂಡ್‌ ಹಾಳು ಮಾಡಿದೆ"; ಹನಿಮೂನ್‌ನಲ್ಲಿ ಪೀರಿಯಡ್ಸ್‌ ಆಗಿದ್ದಕ್ಕೆ ಪತ್ನಿ ಮೇಲೆ ಹಲ್ಲೆ ಮಾಡಿದ ಪತಿ

ವಿವಾಹವಾದ ಹೊಸತರಲ್ಲಿ ದಂಪತಿಗಳು ಹೊಸ ಜೀವನದ ಕನಸು ಕಾಣುತ್ತಾರೆ. ಹೊಸ ಜೀವನದ ಆರಂಭದಲ್ಲಿ ಪರಸ್ಪರ ಸಮಯ ಕಳೆಯಲು ಇಚ್ಛಿಸುತ್ತಾರೆ. ಆದರೆ ಈ ನವ ವಿವಾಹಿತೆಗೆ ಹನಿಮೂನ್‌ ದುಸ್ವಪ್ನವಾಗಿ ಕಾಡಿದೆ. ಉತ್ತರ ಪ್ರದೇಶದ ಆಗ್ರಾದಲ್ಲಿ ಅತ್ಯಂತ ಅಮಾನವೀಯ ಮತ್ತು ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಹನಿಮೂನ್ ಸಮಯದಲ್ಲಿ ನವವಧು ಮುಟ್ಟಾದಾಗಿದಕ್ಕೆ ಆಕ್ರೋಶಗೊಂಡ ಪತಿ, ಆಕೆಯ ಮೇಲೆ ಭೀಕರವಾಗಿ ಹಲ್ಲೆ ಮಾಡಲಾಗಿದೆ.

ಹನಿಮೂನ್‌ನಲ್ಲಿ ಪೀರಿಯಡ್ಸ್‌ ಆಗಿದ್ದಕ್ಕೆ ಪತ್ನಿ ಮೇಲೆ ಹಲ್ಲೆ ಮಾಡಿದ ಪತಿ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Aug 17, 2026 3:44 PM

ಲಖನೌ: ವಿವಾಹವಾದ ಹೊಸತರಲ್ಲಿ ದಂಪತಿಗಳು ಹೊಸ ಜೀವನದ ಕನಸು ಕಾಣುತ್ತಾರೆ. ಹೊಸ ಜೀವನದ ಆರಂಭದಲ್ಲಿ ಪರಸ್ಪರ ಸಮಯ ಕಳೆಯಲು ಇಚ್ಛಿಸುತ್ತಾರೆ. ಆದರೆ ಈ ನವ ವಿವಾಹಿತೆಗೆ ಹನಿಮೂನ್‌ (Honeymoon) ದುಸ್ವಪ್ನವಾಗಿ ಕಾಡಿದೆ. ಉತ್ತರ ಪ್ರದೇಶದ ಆಗ್ರಾದಲ್ಲಿ ಅತ್ಯಂತ ಅಮಾನವೀಯ ಮತ್ತು ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಹನಿಮೂನ್ ಸಮಯದಲ್ಲಿ ನವವಧು ಮುಟ್ಟಾದಾಗಿದಕ್ಕೆ (Periods) ಆಕ್ರೋಶಗೊಂಡ ಪತಿ, ಆಕೆಯ ಮೇಲೆ ಭೀಕರವಾಗಿ ಹಲ್ಲೆ ನಡೆಸಿ, ಗಂಟಲು ಹಿಸುಕಿ ಕೊಲೆಗೆ ಯತ್ನಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಸಂತ್ರಸ್ತ ಮಹಿಳೆ ನೀಡಿದ ದೂರಿನ ಪ್ರಕಾರ, ಗೋರ್‌ಖ್‌ಪುರದ ಮಹಿಳೆಯು ದೆಹಲಿಯ ನಿವಾಸಿ ನಿಖಿಲ್ ಮಿಶ್ರಾ ಎಂಬಾತನೊಂದಿಗೆ ವಿವಾಹವಾಗಿದ್ದರು. ದಂಪತಿ ತಮ್ಮ ಹನಿಮೂನ್ ಪ್ರವಾಸಕ್ಕಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಕ್ಕೆ ತೆರಳಿದ್ದರು. ಪ್ರವಾಸದ ವೇಳೆ ಮಹಿಳೆಗೆ ಮುಟ್ಟು ಪ್ರಾರಂಭವಾಗಿದೆ. ಈ ವಿಷಯ ತಿಳಿದ ಪತಿ ನಿಖಿಲ್ ಮಿಶ್ರಾ ಕೋಪದಿಂದ ಆಕೆಯ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿದ್ದಾನೆ. ‘ನನ್ನ ಮೂಡ್ ಹಾಳುಮಾಡಿದೆ, ಮದುವೆಗೂ ಮುನ್ನವೇ ಏಕೆ ನನಗೆ ಹೇಳಲಿಲ್ಲಾ’ ಎಂದು ಕಿರುಚಾಡಲು ಪ್ರಾರಂಭಿಸಿದ್ದಾನೆ.

ಅಷ್ಟಕ್ಕೇ ನಿಲ್ಲದೆ, ಆಕೆಯ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ್ದಾನೆ. ಮಹಿಳೆಯ ಮುಖ ಮತ್ತು ದೇಹದ ಭಾಗಗಳಿಗೆ ತೀವ್ರವಾಗಿ ಹೊಡೆದು, ಆಕೆಯ ಗಂಟಲು ಹಿಸುಕಿ ಕೊಲೆ ಮಾಡಲು ಯತ್ನಿನಿಸಿದ್ದಾನೆ. ನವವಧು ಎಷ್ಟೇ ವಿನಂತಿಸಿಕೊಂಡರು ಆತನ ಕೋಪ ಕಡಿಮೆಯಾಗಿರಲಿಲ್ಲ, ಹಲ್ಲೆಯ ನಂತರ ವಧುವಿನ ತಂದೆಗೆ ಕರೆ ಮಾಡಿ, ‘ದೆಹಲಿಗೆ ಬಂದು ನಿಮ್ಮ ಮಗಳನ್ನು ಕರೆದುಕೊಂಡು ಹೋಗಿ ನನಗೆ ಇನ್ನುಮುಂದೆ ಈಕೆಯ ಜೊತೆ ಬದುಕಲು ಇಷ್ಟವಿಲ್ಲ’ ಎಂದು ತಾಕೀತು ಮಾಡಿದ್ದಾನೆ. ಆಕೆಯ ಆಕ್ರಂದನ ಕೇಳಿದ ಹೋಟೆಲ್ ಸಿಬ್ಬಂದಿ ಬಂದು ತಕ್ಷಣ ತನ್ನನ್ನು ರಕ್ಷಿಸಿದರು ಎಂದು ನವವಧು ದೂರಿನಲ್ಲಿ ತಿಳಿಸಿದ್ದಾರೆ.

ಘಟನೆಯ ನಂತರ ಸಂತ್ರಸ್ತೆ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಪೋಷಕರು ಕೂಡಲೇ ಆಗಮಿಸಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ದೂರಿನಲ್ಲಿ ಮಹಿಳೆ ತನಗಾದ ವರದಕ್ಷಿಣೆ ಕಿರುಕುಳ ವಿವರಗಳನ್ನ ಕೂಡಾ ಬಿಚ್ಚಿಟ್ಟಿದ್ದಾರೆ.

Viral News: 35 ವರ್ಷದ ಮಹಿಳೆ ಜೊತೆ ಮದುವೆ; ಹನಿಮೂನ್‌ಗೂ ಮೊದಲೇ ಸಾವನ್ನಪ್ಪಿದ 75ರ ವೃದ್ಧ!

2023 ರ ಮೇ 30 ರಂದು ದೆಹಲಿಯಲ್ಲಿ ಇವರಿಬ್ಬರಿಗೂ ಮದುವೆಯಾಗಿತ್ತು. ಮುದುವೆಗೂ ಮುನ್ನವೇ ವಧುವಿನ ಕುಟುಂಬದವರು ನೀಡುವ ಪ್ರತಿಯೊಂದು ವಸ್ತು ಹಾಗೂ ಗೃಹಬಳಕೆ ಸಾಮಗ್ರಿಗಳು ಬ್ರಾಂಡೆಡ್ ಆಗಿರಬೇಕು ಎಂದು ಅತ್ತೆ ಮನೆಯವರು ಷರತ್ತು ಹಾಕಿದ್ದರು. ಅವರ ಡಿಮ್ಯಾಂಡ್‌ಗೆ ತಕ್ಕಂತೆ ವಧುವಿನ ತಂದೆ 20 ಲಕ್ಷ ನಗದು ಹಣ, ಒಂದು ಐಷಾರಾಮಿ ಕಾರು, ಮತ್ತು ಸುಮಾರು 40 ಲಕ್ಷ ಮೌಲ್ಯದ ವಸ್ತುಗಳನ್ನು ನೀಡಿದ್ದರೂ. ಮದುವೆಯಾದ ಮರುದಿನದಿಂದಲೇ ವರದಕ್ಷಿಣೆಗಾಗಿ ಮತ್ತೆ ನನಗೆ ಕಿರುಕುಳ ನೀಡಲಾಗಿತ್ತು. ಎಂದು ಮಹಿಳೆ ಆರೋಪಿಸಿದ್ದಾರೆ.

ಅತ್ತೆ-ನಾದಿನಿಯಿಂದ ಮಾನಸಿಕ ಕಿರುಕುಳ

ಸಂತ್ರಸ್ತೆ ದೆಹಲಿಗೆ ತಲುಪಿದ ನಂತರ ತನಗಾದ ಹಿಂಸೆಯನ್ನು ತನ್ನ ಅತ್ತೆ ಹಾಗೂ ನಾದಿನಿಯ ಬಳಿ ಹೇಳಿಕೊಂಡಿದ್ದಾಳೆ. ಆದರೆ ಅವರು ಆಕೆಗೆ ಸಾಂತ್ವನ ಹೇಳುವ ಬದಲು ಆಕೆಗೆ ಮಾನಸಿಕ ಕಿರಕುಳ ನೀಡಿದ್ದಾರೆ. ಮದುವೆಯಾದ ಕೇವಲ 45 ದಿನಗಳಲ್ಲಿ ಮಹಿಳೆಯನ್ನು ಗಂಡನ ಮನೆಯಿಂದ ಹೊರಗೆ ಹಾಕಿದ್ದಾರೆ. ಈ ವಿಚಾರದ ಕುರಿತು ಸಂಧಾನಕ್ಕೆ ತೆರಳಿದ್ದ ವಧುವಿನ ತಂದೆಗೂ ಅವಮಾನ ಮಾಡಿದ್ದಾರೆ. ಎಂದು ವಧು ತಿಳಿಸಿದ್ದಾರೆ. ಸದ್ಯ ದೂರಿನ ಆದರದ ಮೇಲೆ ಗೋರಖ್‌ಪುರ ಪೊಲೀಸ್ ಠಾಣೆಯಲ್ಲಿ ಪತಿ ನಿಖಿಲ್ ಮಿಶ್ರಾ, ಅತ್ತೆ ಹಾಗೂ ನಾದಿನಿ ವಿರುದ್ಧ ಪೊಲೀಸರು ವರದಕ್ಷಿಣೆ ಕಿರುಕುಳ ಹಾಗೂ ವಿವಿಧ ಕಾಯ್ದೆಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮದುವೆಗೂ ಮುನ್ನ ವಧುವಿನ ಕುಟುಂಬ ನೀಡಿದ್ದ ವರದಕ್ಷಿಣೆ ಹಿಂದಿರುಗಿಸುವಂತೆ ದೂರಿನಲ್ಲಿ ಹೇಳಲಾಗಿದೆ.