ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಐದು ನಿಮಿಷ ಡೆಲಿವರಿ ನೀಡಲು ಲೇಟಾಗಿದ್ದಕ್ಕೆ ಬ್ಲಿಂಕಿಟ್ ಸಿಬ್ಬಂದಿ ಮೇಲೆ ಹಲ್ಲೆ; ವಿಡಿಯೊ ವೈರಲ್!

Viral Video: ಗ್ರಾಹಕರೊಬ್ಬರು ಬ್ಲಿಂಕಿಟ್ ವಿತರಣಾ ಏಜೆಂಟ್ ಮೇಲೆ ಕ್ರೂರವಾಗಿ ಹಲ್ಲೆಯನ್ನು ನಡೆಸಿದ್ದಾನೆ‌. ಡೆಲಿವರಿ ಸಿಬ್ಬಂದಿಯೂ ಐದು ನಿಮಿಷ ತಡವಾಗಿ ಬಂದಿದ್ದರೂ ಎನ್ನುವ ಕಾರಣಕ್ಕೆ ಕ್ರೂರವಾಗಿ ಹಲ್ಲೆಯನ್ನು ಮಾಡಿ ಬೆದರಿಕೆ ಹಾಕಿದ್ದಾನೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ. ಸದ್ಯ ಈ ದೃಶ್ಯ ಡೆಲಿವರಿ ಏಜೆಂಟ್ ಗಳ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತವಾಗುವಂತೆ ಮಾಡಿದೆ.

ಡೆಲಿವರಿ ಸಿಬ್ಬಂದಿ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಗ್ರಾಹಕ!

ಡೆಲಿವರಿ ಸಿಬ್ಬಂದಿ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಗ್ರಾಹಕ -

Profile
Pushpa Kumari Aug 16, 2026 5:22 PM

ಮೀರತ್,ಆ.16: ಉತ್ತರ ಪ್ರದೇಶದಲ್ಲಿ ಅಘಾತಕಾರಿ ಘಟನೆಯೊಂದು ಕಂಡು ಬಂದಿದೆ.‌ ಗ್ರಾಹಕರೊಬ್ಬರು ಬ್ಲಿಂಕಿಟ್ ವಿತರಣಾ ಏಜೆಂಟ್ ಮೇಲೆ ಕ್ರೂರವಾಗಿ ಹಲ್ಲೆಯನ್ನು ನಡೆಸಿದ್ದಾನೆ‌. ಡೆಲಿವರಿ ಸಿಬ್ಬಂದಿಯೂ ಐದು ನಿಮಿಷ ತಡವಾಗಿ ಬಂದಿದ್ದರೂ ಎನ್ನುವ ಕಾರಣಕ್ಕೆ ಕ್ರೂರವಾಗಿ ಹಲ್ಲೆಯನ್ನು ಮಾಡಿ ಬೆದರಿಕೆ ಹಾಕಿದ್ದಾನೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು (Viral News) ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ. ಸದ್ಯ ಈ ದೃಶ್ಯ ಡೆಲಿವರಿ ಏಜೆಂಟ್ ಗಳ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತವಾಗುವಂತೆ ಮಾಡಿದೆ.

ಗಂಗಾ ಸಾಗರ್ ಕಾಲೋನಿಯ ವಸತಿ ಸಂಘದಲ್ಲಿ ರಾತ್ರಿ 9:30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಅಮಿತ್ ಯಾದವ್ ಎಂಬ ವಿತರಣಾ ಏಜೆಂಟ್, ಆರ್ಡರ್ ನೀಡಲು ಗ್ರಾಹಕ ಯಮನ್ ಕನ್ಸಾಲ್ ಅವರ ನಿವಾಸಕ್ಕೆ ಬಂದಿದ್ದರು. ಆದರೆ ಡೆಲಿವರಿ ನೀಡುವುದು ಐದು ನಿಮಿಷ ಲೇಟಾಗಿದೆ ಎನ್ನುವ ಕಾರಣಕ್ಕೆ ಗ್ರಾಹಕ ಅಸಭ್ಯವಾಗಿ ಮಾತನಾಡಿ ತೀವ್ರ ಹಲ್ಲೆ ನಡೆಸಿದ್ದಾನೆ.

ವಿಡಿಯೋ ನೋಡಿ:



ಆಗಸ್ಟ್ 14 ರಂದು ಈ ಘಟನೆ ಸಂಭವಿಸಿದೆ. ​ಅಮಿತ್ ನೀಡಿರುವ ಮಾಹಿತಿ ಪ್ರಕಾರ, ಡೆಲಿವರಿ ನೀಡಲು ಕೇವಲ 5 ನಿಮಿಷ ತಡವಾಗಿತ್ತು. ಆದರೆ, 15 ನಿಮಿಷ ತಡವಾಗಿದೆ ಎಂದು ಗ್ರಾಹಕ ಗಲಾಟೆ ಆರಂಭಿಸಿದ್ದಾನೆ. ಡೆಲಿವರಿ ಎಜೆಂಟ್ ನ ಮೊಬೈಲ್ ಫೋನ್ ಕಸಿದುಕೊಂಡು ಸರಿಯಾಗಿ ಕಪಾಳಮೋಕ್ಷ ಮಾಡಿ ಕಾಲಿನಿಂದ ಒದ್ದಿದ್ದಾನೆ.

Viral Video: ಪೊಲೀಸ್ ಬೈಕ್‌ನಲ್ಲಿ ರ‍್ಯಾಪಿಡೋ ಸೇವೆ? ಸರ್ಕಾರಿ ವಾಹನ ದುರುಪಯೋಗ ಪಡಿಸಿಕೊಂಡ ಸಬ್ ಇನ್ಸ್‌ಪೆಕ್ಟರ್‌ ವಿರುದ್ಧ ಕ್ರಮ

ಅಷ್ಟೇ ಅಲ್ಲದೆ ತನ್ನ ಪತ್ನಿಯ ಜೊತೆ ಅಸಭ್ಯವಾಗಿ ವರ್ತನೆ ತೋರಿದ್ದಾನೆ ಎಂದು ಸುಳ್ಳು ಲೈಂಗಿಕ ಕಿರುಕುಳ ನೀಡುವುದಾಗಿ ಯಮನ್ ಬೆದರಿಕೆ ಹಾಕಿದ್ದಾನೆ. ಸದ್ಯ ಈ ವಿಡಿಯೊ ವೈರಲ್ ಆಗುತ್ತಿ ದ್ದಂತೆ ಗ್ರಾಹಕ ಯಮನ್ ವಿರುದ್ಧ ಪೊಲೀಸ್ ದೂರು ದಾಖಲಿಸಲಾಗಿದ್ದು ಸಿಸಿಟಿವಿ ವಿಡಿಯೋ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಯಿತು.

ನೆಟ್ಟಿಗರು ಈ ವಿಡಿಯೊಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಬಳಕೆದಾರರೊಬ್ಬರು ಡೆಲಿವರಿ ಕೆಲಸ ಮಾಡುವ ಸಿಬ್ಬಂದಿಯ ಮೇಲೆ ದೌರ್ಜನ್ಯ ಎಸಗುವ ಇಂತಹ ಕಟುಕರನ್ನು ಜೈಲಿಗೆ ಹಾಕಬೇಕು ಅಂದರು. ಮತ್ತೊಬ್ಬರು ಪ್ರತಿಯೊಬ್ಬ ಗಿಗ್ ಕೆಲಸಗಾರನು ಕ್ಯಾಮೆರಾವನ್ನು ಹೊಂದಿರಬೇಕು, ಇದರಿಂದ ಹಲ್ಲೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಬರೆದಿದ್ದಾರೆ.