ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪತಿಯ ಬೈಗುಳಕ್ಕೂ ಲೆಕ್ಕಿಸದೆ ಹೊಲದಲ್ಲಿ ಇಂಗ್ಲೀಷ್ ಕಲಿಕೆಯ ವಿಡಿಯೋ ಮಾಡಿದ ಮಹಿಳೆ: ಶ್ರಮಕ್ಕೆ ಮನಸೋತ ಪ್ರಿಯಾಂಕಾ ಚೋಪ್ರಾ!

Viral Video: ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಮಹಿಳೆಯೊಬ್ಬರು ಹೊಲದಲ್ಲಿ ಕುಳಿತು ಇಂಗ್ಲೀಷ್ ಕಲಿಕೆಯ ವಿಡಿಯೊ ಮಾಡುತ್ತಿದ್ದಾಗ ಪತಿ ಬೈದರೂ ಲೆಕ್ಕಿಸದೇ ಚಿತ್ರೀಕರಿಸಿ ಪೋಸ್ಟ್ ಮಾಡಿದ್ದಾರೆ. ಈ ಕ್ಲಿಪ್ ಪೋಸ್ಟ್ ಮಾಡಿದ ಕೆಲವೇ ದಿನಗಳಲ್ಲಿ, ಸ್ವತಃ ಪ್ರಿಯಾಂಕಾ ಚೋಪ್ರಾ ಅವರೇ ನೋಡಿ ಮುಕ್ತ ಕಂಠದಿಂದ ಹೊಗಳಿದ್ದಾರೆ.

ಹೊಲದಲ್ಲಿಯೂ ಇಂಗ್ಲೀಷ್ ಪಾಠ: ಗ್ರಾಮೀಣ ಪ್ರತಿಭೆಗೆ ಪ್ರಿಯಾಂಕಾ ಚೋಪ್ರಾ ಫಿದಾ

ಪತಿಯ ಬೈಗುಳಕ್ಕೂ ಲೆಕ್ಕಿಸದೆ ಹೊಲದಲ್ಲಿ ಇಂಗ್ಲೀಷ್ ಕಲಿಕೆಯ ವಿಡಿಯೋ ಮಾಡಿದ ಮಹಿಳೆ -

Profile
Pushpa Kumari Oct 8, 2026 5:17 PM

ಉತ್ತರ ಪ್ರದೇಶ,ಅ. 8: ನಾವು ಬೆಳೆಯುವಾಗ ಅಥವಾ ಯಾವುದೇ ಕೆಲಸ ಶ್ರಮ ಪಟ್ಟು ಮಾಡುವಾಗ ಟೀಕೆಗಳು ಬರುವುದು ಸಹಜ. ಇದನ್ನೆಲ್ಲ ಮೆಟ್ಟಿ ನಿಂತಾಗಲೇ ಯಶಸ್ಸು ಕಾಣೋದಕ್ಕೆ ಸಾಧ್ಯ. ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಮಹಿಳೆಯೊಬ್ಬರು ಹೊಲದಲ್ಲಿ ಕುಳಿತು ಇಂಗ್ಲೀಷ್ ಕಲಿಕೆಯ ವಿಡಿಯೊ ಮಾಡುತ್ತಿದ್ದಾಗ ಪತಿ ಬೈದರೂ ಲೆಕ್ಕಿಸದೇ ಚಿತ್ರೀಕರಿಸಿ ಪೋಸ್ಟ್ ಮಾಡಿದ್ದಾರೆ. ಈ ಕ್ಲಿಪ್ ಪೋಸ್ಟ್ (Viral News) ಮಾಡಿದ ಕೆಲವೇ ದಿನಗಳಲ್ಲಿ, ಸ್ವತಃ ಪ್ರಿಯಾಂಕಾ ಚೋಪ್ರಾ ಅವರೇ ನೋಡಿ ಮುಕ್ತ ಕಂಠದಿಂದ ಹೊಗಳಿದ್ದಾರೆ.

ಉತ್ತರ ಪ್ರದೇಶದ ಯಶೋದಾ ಲೋಧಿ ಎಂಬ ಮಹಿಳೆ ತಮ್ಮ ಹೊಲದಲ್ಲಿ ಇಂಗ್ಲಿಷ್ ಕಲಿಕೆಯ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಆಗ ಅವರು ಪತಿ ವಿಡಿಯೊ ಮಾಡದಂತೆ ಬೈದರೂ ಅವರು ಅದನ್ನು ಲೆಕ್ಕಿಸದೇ ಪೋಸ್ಟ್ ಮಾಡಿದ್ದಾರೆ.

ಇವರ ಸರಳ ಪ್ರಯತ್ನ ಹಾಗೂ ಶ್ರಮವನ್ನು ಬಾಲಿವುಡ್ ಹಾಗೂ ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡು ಶ್ಲಾಘಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ ಮಾತ್ರವಲ್ಲದೆ ಪ್ರಸಿದ್ಧ ನಟರಾದ ಆರ್. ಮಾಧವನ್, ಅಭಯ್ ಡಿಯೋಲ್ ಹಾಗೂ ಮೃಣಾಲ್ ಠಾಕೂರ್ ಕೂಡ ಫಿದಾ ಆಗಿದ್ದಾರೆ.

ವಿಡಿಯೋ ನೋಡಿ:

"ದೇಹಾತೀ ಮೇಡಂ' ಎಂದೇ ಪ್ರಸಿದ್ಧರಾಗಿರುವ ಯಶೋದಾ, ದಿನವೂ ಹೊಲದಲ್ಲಿ ಕೆಲಸ ಮಾಡುತ್ತಲೇ ಸರಳ ಇಂಗ್ಲಿಷ್ ಕಲಿಸುವ ವಿಡಿಯೋಗಳನ್ನು ಮಾಡುತ್ತಿರುತ್ತಾರೆ. ಇತ್ತೀಚೆಗೆ ವಿಡಿಯೋ ರೆಕಾರ್ಡ್ ಮಾಡುವಾಗ ಪತಿಯಿಂದ ಬೈಗುಳ ಸಿಕ್ಕರೂ ವಿಡಿಯೊ ಮಾಡಿ ಹಾಕಿದ್ದರು. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಪ್ರಿಯಾಂಕಾ ಚೋಪ್ರಾ ಹಾಗೂ ಹಲವು ನಟರ ಗಮನ ಸೆಳೆದಿದೆ.

Viral Video: ಗಾಯಗೊಂಡಂತೆ ನಟಿಸಿ ನೆರವಿಗೆ ಧಾವಿಸಿದ ವ್ಯಕ್ತಿಯಿಂದಲೇ 1 ಲಕ್ಷ ರುಪಾಯಿಯ ಐಫೋನ್‌ ದೋಚಿದ ಖದೀಮರು! ಇದಕ್ಕೆ ಯಾಯೂ ಸಹಾಯಕ್ಕೆ ಬರಲ್ಲ ಎಂದ ನೆಟ್ಟಿಗರು

ಪ್ರಿಯಾಂಕಾ ಚೋಪ್ರಾ ಜೋನಾಸ್ ಮೇಡಂ ನನ್ನ ವಿಡಿಯೋವನ್ನು ತಮ್ಮ ಸ್ಟೋರಿಯಲ್ಲಿ ಹಂಚಿಕೊಳ್ಳುತ್ತಾರೆ ಎಂದು ನನಗೆ ತಿಳಿದಿರಲಿಲ್ಲ. ಹೊಲಕ್ಕೆ ಹೋದಾಗ, ಅಲ್ಲಿ ನಡೆಯುತ್ತಾ ವಿಡಿಯೋ ಮಾಡಲು ಮುಂದಾದೆ.‌"ಆಗ ವಿಡಿಯೋ ಮಾಡಿದಕ್ಕಾಗಿ ನನ್ನ ಪತಿ ನನ್ನನ್ನು ಬೈದರು. ಹೇಗೋ ನಾನು ಅದನ್ನು ನಿಭಾಯಿಸಿ, ವಿಡಿಯೋ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದೆ. ಆನಂತರ ನಿಜಕ್ಕೂ ಅನಿರೀಕ್ಷಿತವಾಗಿ ಎಲ್ಲರೂ ಮೆಚ್ಚಿಕೊಂಡಿದ್ದಾರೆ ಎಂದು ಖುಷಿ ವ್ಯಕ್ತ ಪಡಿಸಿದ್ದಾರೆ.

ಯಶೋದಾ ಅವರು ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಲೋಧನ್ ಕಾ ಪುರ್ವಾ ಗ್ರಾಮದವರು. ಅವರು 12ನೇ ತರಗತಿಯವರೆಗೆ ಶಿಕ್ಷಣ ಪಡೆದಿದ್ದು, ಸರಳವಾಗಿ ಇಂಗ್ಲಿಷ್ ಕಲಿಸುವ ಮೂಲಕ ಆನ್‌ಲೈನ್‌ನಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಡಿಸೆಂಬರ್ 26, 2023 ರಂದು ಪ್ರಾರಂಭವಾದ ಅವರ ಯೂಟ್ಯೂಬ್ ಚಾನೆಲ್ 5.8 ಲಕ್ಷಕ್ಕೂ ಹೆಚ್ಚು ಅಭಿಮಾನಿ ಬಳಗ ಹೊಂದಿದೆ.